ಯಾಕೆ ಹೀಗಾಯ್ತು ಎಂಬ ಪ್ರಶ್ನೆಗೆ ಅಲ್ಲಿದ್ದ ಅನೇಕರು ಹೇಳಿದ್ದು, ಈ ಚಿತ್ರಗಳ ಕುರಿತೂ ಪತ್ರಿಕೆಗಳಲ್ಲಿ ತಾವೇನೂ ಓದಿರಲಿಲ್ಲ ಎಂದು. ಅವುಗಳ ಕುರಿತು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವೆಬ್‌ಸೈಟುಗಳಲ್ಲಿ ನೂರಾರು ಮಾಹಿತಿಗಳು ಬಂದಿದ್ದವು.
ಇತ್ತೀಚೆಗೆ ಒಂದು ಸಭೆಯಲ್ಲಿ ಹಿರಿಯ ನಿರ್ದೇಶಕರೊಬ್ಬರು, ಈ ವಾರ ಹತ್ತು ಸಿನಿಮಾ ಬಿಡುಗಡೆಯಾಗಿದೆ. ಯಾರಾದರೂ ಯಾವ ಯಾವ ಸಿನಿಮಾ ಎಂದು ಹೇಳುತ್ತೀರಾ ಎಂದು ಕೇಳಿದರು. ಆ ಸಭೆಗೆ ಬಂದಿದ್ದವರು ಸಿನಿಮಾ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಆಗಿದ್ದರಿಂದ ಈ ಪ್ರಶ್ನೆ ಸಮಯೋಚಿತವೂ ಆಗಿತ್ತು. ಆದರೆ ದುರದೃಷ್ಟವೆಂದರೆ ಅಲ್ಲಿದ್ದ ಯಾರಿಗೂ ಒಂದೇ ಒಂದು ಸಿನಿಮಾದ ಹೆಸರು ಕೂಡ ಗೊತ್ತಿರಲಿಲ್ಲ. ಕೆಲವರು ಒಂದೆರಡು ವಾರದ ಹಿಂದೆ ಬಂದ ಸಿನಿಮಾದ ಹೆಸರನ್ನೂ ಕೆಲವರು ಇನ್ನೂ ಬಿಡುಗಡೆ ಆಗದ ಸಿನಿಮಾಗಳ ಹೆಸರನ್ನೂ ಹೇಳಿದರೇ ಹೊರತು, ಆ ನಿರ್ದೇಶಕರ ಪ್ರಶ್ನೆಗೆ ಸರಿಯಾದ ಉತ್ತರ ಸಿಗಲಿಲ್ಲ.
ಯಾಕೆ ಹೀಗಾಯ್ತು ಎಂಬ ಪ್ರಶ್ನೆಗೆ ಅಲ್ಲಿದ್ದ ಅನೇಕರು ಹೇಳಿದ್ದು, ಈ ಚಿತ್ರಗಳ ಕುರಿತೂ ಪತ್ರಿಕೆಗಳಲ್ಲಿ ತಾವೇನೂ ಓದಿರಲಿಲ್ಲ ಎಂದು. ಅವುಗಳ ಕುರಿತು ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್, ವೆಬ್‌ಸೈಟುಗಳಲ್ಲಿ ನೂರಾರು ಮಾಹಿತಿಗಳು ಬಂದಿದ್ದವು. ಆದರೂ ಅದು ಯಾವಾಗ ಬಿಡುಗಡೆ ಆಗುತ್ತದೆ ಅನ್ನುವುದು ಯಾರಿಗೂ ಗೊತ್ತಿರಲಿಲ್ಲ. ಅಲ್ಲಿಗೆ ಬಂದಿದ್ದವರೆಲ್ಲ ಆ ಚಿತ್ರಗಳ ಕುರಿತು ಒಂದಷ್ಟುಮಾಹಿತಿ ತಿಳಿದುಕೊಂಡಿದ್ದೇವೆ. ನಾವೂ ಕೆಲವೊಂದು ಚಿತ್ರಿಕೆಗಳನ್ನು ನೋಡಿದ್ದೇವೆ ಎಂದು ಹೇಳಿದರು.
ಸಮಂತಾಗೆ 'ಹಾಟಿ' ಎಂದ ಅನುಷ್ಕಾ, ಆದ್ರೆ, ಕೊಹ್ಲಿ ಕಾಲೆಳೆದ ನೆಟ್ಟಿಗರು!
ಪತ್ರಿಕೆಯೇ ಚಿತ್ರಗಳ ಪ್ರಚಾರಕ್ಕೆ ಇವತ್ತಿಗೂ ಅತ್ಯುತ್ತಮ ಅನ್ನುವುದನ್ನು ಈ ಪ್ರಸಂಗ ತೋರಿಸಿದೆ. ಬೇರೆ ಮಾಧ್ಯಮಗಳ ಮೂಲಕ ಸುದ್ದಿಯೇನೂ ನಮಗೆ ತಲುಪುತ್ತದೆ. ಆದರೆ ಡೇಟ್‌ಬೌಂಡ್ ಆಗಿರುವ ಸುದ್ದಿಗಳನ್ನು ಪತ್ರಿಕೆಯಲ್ಲಿ ಓದಿದಾಗಲೇ ಅದು ಓದುಗರ ಮನಸ್ಸಿನಲ್ಲಿ ಉಳಿಯುವುದು. ಬೆಳಗ್ಗೆ ಪತ್ರಿಕೆಯ ಕೈಯಲ್ಲಿ ಹಿಡಿದುಕೊಂಡು ಓದುವಾಗ, ಇಂಥಾ ಚಿತ್ರ ಇಂದು ತೆರೆಗೆ ಅಂತ ಓದಿದಾಗ, ಆವತ್ತು ಆ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವುದನ್ನು ಮನಸ್ಸು ದಾಖಲಿಸಿಕೊಳ್ಳುತ್ತದೆ. ಹೀಗಾಗಿ ಪತ್ರಿಕೆಯೇ ಸಿನಿಮಾದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನೀವು ಯಾರಿಗಾದರೂ ವಾಟ್ಸ್ಯಾಪಿನಲ್ಲಿ ಆಹ್ವಾನ ಪತ್ರಿಕೆ ಕಳಿಸಿದರೆ, ಅದರ ಕೊನೆಯಲ್ಲಿ ಆ ಕಾರ್ಯಕ್ರಮದ ದಿನಾಂಕ ಹಾಕಿದ್ದರೆ, ನೂರಕ್ಕೆ ತೊಂಬತ್ತು ಮಂದಿ ಆ ಆಹ್ವಾನ ಪತ್ರಿಕೆಯ ಕೊನೆಯ ತನಕ ಓದುವುದೇ ಇಲ್ಲ. ಸಿನಿಮಾದ ಟ್ರೇಲರುಗಳ ಲಿಂಕ್ ಕಳಿಸಿದರೆ ಹೆಚ್ಚಿನವರು ಅದನ್ನು ತೆರೆದು ನೋಡುವುದಿಲ್ಲ. ಒಂದು ವೇಳೆ ನೋಡಿದರೂ ಕೂಡ ಅದರ ವೇಗಕ್ಕೆ ಬಿಡುಗಡೆಯ ದಿನಾಂಕ ಮನಸ್ಸಿನಲ್ಲಿ ಅಚ್ಚೊತ್ತುವುದಿಲ್ಲ.
ಕಿಚ್ಚನ ಎಕ್ಕ ಸಕ್ಕ ಕಿಕ್ಕು ಹೆಚ್ಚಿಸಿದ್ರು ಸ್ಯಾಂಡಲ್ವುಡ್ ಸ್ಟಾರ್ಸ್.!
ಅದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಒಂದರ ಹಿಂದೊಂದರಂತೆ ಬಂದು ಬೀಳುತ್ತಿರುತ್ತವೆ. ನಮಗೆ ಬೇಕಾದ, ಬೇಡದ, ನೋಡುವಂಥ, ನೋಡಬಾರದ ಎಲ್ಲಾ ಸಿವಿಮಾಗಳ ಮಾಹಿತಿಯೂ ಬರುತ್ತಲೇ ಇರುತ್ತದೆ. ಸಾಮಾನ್ಯವಾಗಿ ನೆಟ್ಟಿಗರಾದ ನಮ್ಮ ಮನಸ್ಸು ರೋಚಕವಾದ ಶೀರ್ಷಿಕೆಯನ್ನು ಆರಿಸಿಕೊಳ್ಳುತ್ತದೆ. ಮತ್ತೊಬ್ಬರಿಗೆ ಲಾಭದಾಯಕವಾದ ಸುದ್ದಿಗಳ ಕಡೆಗೆ ಬೇಗ ಗಮನ ಹೋಗುವುದಿಲ್ಲ. ಇದು ಕೂಡ ಸಾಮಾಜಿಕ ಜಾಲತಾಣಗಳು ನೀಡುವ ಮಾಹಿತಿ ಮಹಾಪೂರದಲ್ಲಿ ಯಾವುದೂ ಕೂಡ ಸ್ಪಷ್ಟವಾಗಿ ನೆನಪಲ್ಲಿ ಉಳಿಯದೇ ಇರುವುದಕ್ಕೆ ಕಾರಣ.
ಬದಲಾಗದ ಪ್ರಚಾರ ಕ್ರಮ:
ಡಿಜಿಟಲ್ ಮಾಧ್ಯಮವೇ ಪ್ರಚಾರದ ಬಹುಮುಖ್ಯ ಅಂಗ ಎಂದು ಭಾವಿಸುವ ಮಂದಿ ಕೂಡ ಅಲ್ಲಿ ನೀಡುವ ಸುದ್ದಿ ಹೇಗಿರಬೇಕು ಅನ್ನುವ ಬಗ್ಗೆ ಗಮನ ಹರಿಸುವುದಿಲ್ಲ. ಇವತ್ತಿಗೂ ಟೀಸರ್, ಟ್ರೇಲರ್ ಬಿಟ್ಟರೆ ಸುದೀರ್ಘ ಮಾತುಕತೆಗಳೂ, ಹಾಡುಗಳೂ ಅಲ್ಲಿ ಸಿಗುತ್ತವೆಯೇ ಹೊರತು, ಯಾರ ಅಭಿಪ್ರಾಯ ನಮಗೆ ಮುಖ್ಯವಾಗುತ್ತದೋ ಅಂಥವರ ಅನಿಸಿಕೆಗಳು ಲಭ್ಯವಿರುವುದಿಲ್ಲ. ಕೆಜಿಎಫ್2 ಚಿತ್ರದ ವ್ಯಾಪಕತೆಗೆ ಕಾರಣವಾದದ್ದು ಅವರು ಬಳಸಿರುವ ಪ್ರಚಾರ ತಂತ್ರ. ಅವರು ಮುಖ್ಯಮಂತ್ರಿಗಳಿಗೋ ಮಿಕ್ಕ ಸಚಿವರಿಗೋ ಸಿನಿಮಾ ತೋರಿಸಲು ಹೋಗಲಿಲ್ಲ. ಸೆಲೆಬ್ರಿಟಿ ಷೋ ಮಾಡಲಿಲ್ಲ. ಆದರೆ ಸಿನಿಮಾ ಕುರಿತು ಯಾರ ಮಾತನ್ನು ಪ್ರೇಕ್ಷಕರು ನಂಬುತ್ತಾರೋ, ಅವರ ಮಾತುಗಳಿಗೆ ಬೆಲೆ ಕೊಟ್ಟರು. ಆಯಾ ರಾಜ್ಯಗಳ ಅತ್ಯುತ್ತಮ ವಿಮರ್ಶಕರಿಂದ ಸಂದರ್ಶನ ಮಾಡಿಸಿದರು. ಸಂದರ್ಶನವನ್ನು ಚಿತ್ರ ಹೊಗಳಿಕೆಗೋಸ್ಕರ ಮೀಸಲಿಡಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಲರ್ಜಿಯಾಗುವಷ್ಟುಡಿಜಿಟಲ್ ಮಾಧ್ಯಮದಲ್ಲಿ ಪ್ರಚಾರ ಮಾಡಲಿಲ್ಲ. ಪ್ರಚಾರ ತಾನಾಗಿಯೇ ಆಗುವಂತೆ ನೋಡಿಕೊಂಡರು.
![]()
ವಿಕ್ರಾಂತ್ ರೋಣ ಮಾದರಿ
ವಿಕ್ರಾಂತ್ ರೋಣ ಕೂಡ ಪ್ರಚಾರದಲ್ಲಿ ತನ್ನದೇ ವಿಶಿಷ್ಟಮಾದರಿಯನ್ನು ನಂಬಿಕೊಂಡಿದೆ. ಬುಜ್‌ರ್ ಖಲೀಫಾದಲ್ಲಿ ಟೈಟಲ್ ಲಾಂಚ್ ಮಾಡಿದ ನಂತರ, ಒಂದೊಂದಾಗಿ ಚಿತ್ರದ ಕೌತುಕಗಳನ್ನು ತೆರೆದಿಡುತ್ತಾ ಬಂದ ಚಿತ್ರತಂಡ, ಅದಕ್ಕಾಗಿ ಸಿದ್ಧ ಮಾದರಿಗಳನ್ನು ಬಳಸಲಿಲ್ಲ. ಮಕ್ಕಳೇ ಚಿತ್ರದ ಬಗ್ಗೆ ಹೇಳುವುದು, ಡಬ್ಬಿಂಗ್ ಮಾಡಿದ ದೃಶ್ಯದ ತುಣುಕು, ಈಗ ರಕ್ಕಮ್ಮಾ ಹಾಡಿನ ರೀಲ್ಸ್ ವೈರಲ್ ಆಗಿರುವುದು- ಇವೆಲ್ಲ ಆಸಕ್ತಿಪೂರ್ಣ ಪ್ರಚಾರ ತಂತ್ರಗಳು.
ಕಂಕಳು ಕೂದಲ ಫೋಟೊ ಮೂಲಕವೇ 2.5 ಕೋಟಿ ಗಳಿಕೆ ಮಾಡ್ತಾಳೆ ಈ ಮಾಡೆಲ್!
ನಾವು ವಿಕ್ರಮ್ ಚಿತ್ರದ ಶೈಲಿಯನ್ನೂ ನೋಡಬಹುದು. ಅದರ ಟ್ರೇಲರ್ ಬಂದಾಗ ಸಿನಿಮಾ ಅಷ್ಟೊಂದು ಚೆನ್ನಾಗಿರಬಹುದು ಎಂಬ ಕಲ್ಪನೆಯೂ ಮೂಡುವಂತಿರಲಿಲ್ಲ. ಅಂದರೆ ಟ್ರೇಲರ್ ಅನ್ನು ಅಂಡರ್‌ಪ್ಲೇ ಮಾಡುವುದು ಕೂಡ ಪ್ರೇಕ್ಷಕರ ಕುತೂಹಲ ಉಳಿಸಿಕೊಳ್ಳುವ ಒಂದು ತಂತ್ರ ಎನ್ನುವುದನ್ನು ಅರ್ಥಮಾಡಿಕೊಂಡವರಂತೆ ಲೋಕೇಶ್ ಕನಗರಾಜ್ ವರ್ತಿಸಿದರು. ಒಂದು ವೇಳೆ ಟ್ರೇಲರ್ ಚಿತ್ರಕ್ಕಿಂತ ರಂಜನೀಯವಾಗಿದ್ದು ಭಾರೀ ಕುತೂಹಲ ಕೆರಳಿಸಿದ್ದರೆ ಚಿತ್ರ ಬಿದ್ದುಹೋಗುತ್ತಿತ್ತೇನೋ?
777 ಚಾರ್ಲಿಯ ದಾರಿ
ಕಂಟೆಂಟ್ ಗಟ್ಟಿಯಾಗಿದೆ ಅನ್ನುವ ನಂಬಿಕೆಯಿಂದ 777 ಚಾರ್ಲಿ ಬಿಡುಗಡೆಗೂ ಮೊದಲೇ 100 ಪ್ರೀಮಿಯರ್ ಷೋ ಮಾಡುವ ಮೂಲಕ ಪ್ರೇಕ್ಷಕರ ಅಭಿಪ್ರಾಯವನ್ನೇ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳಲು ಮುಂದಾಗಿದೆ. ಇದು ಬಹುಶಃ ಅತ್ಯಂತ ಹೊಸ ವಿಧಾನ. ಇಲ್ಲಿಯ ತನಕ ಕೇವಲ ಸೆಲೆಬ್ರಿಟಿ ಮತ್ತು ಮಾಧ್ಯಮದ ಮಂದಿ ಪ್ರೀಮಿಯರ್ ಷೋ ನೋಡುವ ಭಾಗ್ಯವಂತರಾಗಿದ್ದರು. ಈಗ ನಾಡಿಗೆ ನಾಡೇ ಪ್ರೀಮಿಯರ್ ಷೋ ನೋಡುವಂತೆ ಚಾರ್ಲಿ ತಂಡ ಮಾಡಿದೆ. ಈ ತಂತ್ರ ಗೆದ್ದರೆ, ಮುಂಬರುವ ಚಿತ್ರಗಳು ಇದನ್ನೂ ಬಳಸಬಹುದು.
