Weird news in Kannada: ಕಂಕುಳ ಕೂದಲನ್ನು ಶೇವ್ ಮಾಡದಿದ್ದರೆ ಅಸಹ್ಯ ಎಂಬ ಅಭಿಪ್ರಾಯವಿದೆ, ಆದರೆ ಇಲ್ಲೊಂದು ಮಾಡೆಲ್, ಈ ಕಂಕುಳ ಕೂದಲ ಫೋಟೊಗಳಿಂದಲೇ ಕೋಟ್ಯಂತರ ರೂಪಾಯಿ ದುಡಿಯುತ್ತಿದ್ದಾಳೆ. ಈ ರೀತಿಯ ವಿಚಿತ್ರ ಸುದ್ದಿಗಳು ಆಗಾಗ ಕೇಳಿ ಬರುತ್ತದೆ ಮತ್ತು ಆಕೆ ಈ ವರ್ತನೆಗೆ ಕೊಟ್ಟ ಕಾರಣ ಶಾಕಿಂಗ್ ಆಗಿದೆ.
ಕಂಕಳ ಕೂದಲನ್ನು ಸಾಮಾನ್ಯವಾಗಿ ಮಾಡೆಲ್‌ಗಳು ಕ್ಲೀನ್ ಶೇವ್ ಮಾಡಿರುತ್ತಾರೆ. ಮತ್ತು ಕಂಕಳ ಕೂದಲು ಅಸಹ್ಯ ಎಂಬ ರೀತಿಯ ನಂಬಿಕೆಯೂ ಹೆಚ್ಚಿನ ಜನರಲ್ಲಿದೆ. ಆದರೆ ಅಸಹ್ಯ ಅನಿಸುವ ಫೋಟೊಗಳನ್ನೇ ಹಾಕಿ ಇಲ್ಲೊಬ್ಬಳು ಮಾಡೆಲ್ ಬರೋಬ್ಬರಿ ಎರಡೂವರೆ ಕೋಟಿ ಹಣಗಳಿಸಿದ್ದಾಳೆ. ಕಳೆದ ಎರಡು ವರ್ಷಗಳಲ್ಲಿ ಕೂದಲಿರುವ ಆರ್ಮ್ ಪಿಟ್ ಫೋಟೊ ಇಂದ ಮಾಡೆಲ್ ಫೆನೆಲ್ಲಾ ಫಾಕ್ಸ್ ಇಷ್ಟು ಹಣ ಗಳಿಸಿದ್ದಾಳೆ ಅಂದರೆ ಅದು ಅಚ್ಚರಿಯ ವಿಚಾರವೇ.
ಇಂಗ್ಲೆಂಡಿನ ವೊರ್ಸೆಸ್ಟರ್ ಮೂಲದ ಫೆನೆಲ್ಲಾ ಫಾಕ್ಸ್ 28 ವಯಸ್ಸಿನ ಮಾಡೆಲ್. ಆಕೆ ಕೇವಲ ತನ್ನ ಅಭಿಮಾನಿಗಳಿಗಾಗಿ ಮಾತ್ರ ಫೋಟೊ ಹಂಚಿಕೊಳ್ಳುತ್ತಾಳೆ. ಅವಳ ಮೇಲೆ ಅಭಿಮಾನಿಗಳಲ್ಲಿ ಯಾವ ಮಟ್ಟದ ಕ್ರೇಜ್ ಇದೆ ಅಂದರೆ ಹೇರಿ ಆರ್ಮ್ ಪಿಟ್ ಫೋಟೊ ಇಂದಲೇ ಆಕೆ ಕೋಟಿ ಗಳಿಸಲು ಸಾಧ್ಯವಾಗಿದೆ. 2014ರಲ್ಲಿ ಮಾಡೆಲಿಂಗ್ ವೃತ್ತಿ ಆರಂಭಿಸಿದ ಫಿನೆಲ್ಲಾ, ಮೊದಲು
"ಗಂಡಸರು ನೋಡಬಹುದು ಆದರೆ ಮುಟ್ಟುವಂತಿಲ್ಲ" ಎಂಬ ಕಾನ್ಸೆಪ್ಟ್ ಒಂದಕ್ಕೆ ಕೆಲಸ ಮಾಡಿದ್ದಳು. ಅದಾದ ನಂತರ ಆಕೆ ಅಡಲ್ಟ್ ಸಿನೆಮಾ ಇಂಡಸ್ಟ್ರಿ ಸೇರಿದಳು ಎನ್ನಲಾಗಿದೆ.
ವಿಚಿತ್ರವಾದ ಹೇಳಿಕೆ ಕೊಟ್ಟ ಆಕೆ, 2017ರಿಂದ ತಮ್ಮ ಜೀವನದಲ್ಲಿ ಲೈಂಗಿಕ ಕ್ರಿಯೆ ಕೇವಲ ಎರಡು ಬಾರಿ ಮಾತ್ರ ಆಗಿದೆ. ನಾನು ಕಂಕಳ ಕೂದಲು ತೆಗೆಯದೇ ಇರುವುದು ಅದಕ್ಕೊಂದು ಕಾರಣ. ಆದರೆ ನಾನು ಸದ್ಯ ಕೂದಲು ಶೇವ್ ಮಾಡುವ ಯಾವುದೇ ಇರಾದೆ ಹೊಂದಿಲ್ಲ ಎಂದು ಹೇಳಿದ್ದಾರೆ. ಫೆನೆಲ್ಲಾಗಿ ಆಕೆಯ ಮೈಮೇಲಿನ ಕೂದಲುಗಳೆಂದರೆ ಪಂಚಪ್ರಾಣವಂತೆ. ಅದಕ್ಕಾಗಿಯೇ ಶೇವಿಂಗ್ ಮಾಡುವುದಿಲ್ಲ ಎನ್ನುತ್ತಾಳೆ. ಇದು ವಿಚಿತ್ರವಾಗಿದ್ದರೂ ಸತ್ಯ.
ಇದನ್ನೂ ಓದಿ: ಹುಡುಗಿಯನ್ನು ಹೊಗಳಿ ಮೆಚ್ಚಿಸುವ ಪ್ರಯತ್ನ ನಿಮ್ಮದಾಗಿದ್ದರೆ ಇವಿಷ್ಟು ವಿಚಾರ ಗೊತ್ತಿರಲಿ
"ಗಂಡು ಮಕ್ಕಳಿಗೆ ಶೇವಿಂಗ್ ಮಾಡಿಕೊಳ್ಳಿ ಎಂದು ಯಾರೂ ಒತ್ತಡ ಹೇರುವುದಿಲ್ಲ, ಆದರೆ ಹೆಣ್ಮಕ್ಕಳಿಗೆ ಕಡ್ಡಾಯ ಅನ್ನುತ್ತಾರೆ. ಇದನ್ನು ನಾನು ವಿರೋಧಿಸುತ್ತೇನೆ," ಎನ್ನುತ್ತಾಳೆ ಫೆನೆಲ್ಲಾ. ಫೆನೆಲ್ಲಾಗೆ ಟಿಕ್‌ಟಾಕ್‌ನಲ್ಲಿ 1,60,000 ಫಾಲೋವರ್ಸ್ ಇದ್ದಾರೆ. ಶೇವಿಂಗ್ ಮಾಡದೇ ಫೋಟೊ ಹಾಕೋದಕ್ಕೆ ಕೆಲವರು ಬೆದರಿಕೆ ಹಾಕುತ್ತಾರೆ, ಕೆಲವರು ನಾನು ಗಲೀಜು - ಹೊಲಸು ಎಂದೆಲ್ಲಾ ಕಮೆಂಟ್ ಮಾಡುತ್ತಾರೆ. ಆದರೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾಳೆ ಫೆನೆಲ್ಲಾ.
"ಶೇವಿಂಗ್ ಮಾಡದಂತೆ ನಿರ್ಧರಿಸುವುದು ನನಗೆ ಸಾಕಷ್ಟು ಸಂತಸ ತಂದಿರುವ ವಿಚಾರ. ನನ್ನ ಜೀವನದಲ್ಲಿ ಇದರಿಂದ ಸಾಕಷ್ಟು ಉತ್ತಮ ಬೆಳವಣಿಗೆಗಳಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಹೆಂಗಸರು ನನ್ನ ಪಾಲಿಸಿಯನ್ನು ಪಾಲಿಸಬೇಕು," ಎಂದು ಫೆನೆಲ್ಲಾ ಕರೆ ಕೊಟ್ಟಿದ್ದಾರೆ. "ಎಷ್ಟೋ ಹುಡುಗರು ಜೀವನದಲ್ಲಿ ಶೇವಿಂಗ್ ಮಾಡದಿದ್ದರೆ ನಿನಗೆ ಹುಡುಗನೇ ಸಿಗುವುದಿಲ್ಲ. ಒಬ್ಬಂಟಿಯಾಗೇ ಜೀವನ ನಡೆಸಬೇಕು," ಎಂದೆಲ್ಲಾ ಮೆಸೇಜ್ ಕಳಿಸುತ್ತಾರಂತೆ ಎಂದು ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಹೆಂಡ್ತಿಗೆ ಮ್ಯಾಗಿ ಬಿಟ್ಟು ಮತ್ತೇನ್ ಮಾಡೋಕೆ ಬರಲ್ಲ, ಮೂರು ಹೊತ್ತು ತಿಂದು ಬೇಸತ್ತು ಡಿವೋರ್ಸ್ ನೀಡಿದ ಪತಿ !
ಫೆನೆಲ್ಲಾ ಅವರ ಪೋಷಕರು ಕೂಡ ಸಪೋರ್ಟಿವ್ ಆಗಿದ್ದಾರಂತೆ. ಮಗಳು ಏನು ಮಾಡಿದರೂ ಸಪೋರ್ಟ್ ಮಾಡೋ ತಂದೆ ತಾಯಿಯೇ ಈಕೆಗೆ ಸ್ಪೂರ್ತಿಯಂತೆ. ಓನ್ಲಿ ಫ್ಯಾನ್ಸ್ ಕೆಲಸದಿಂದ ನನಗೆ ಸಾಕಷ್ಟು ಖುಷಿಯಿದೆ. ಉತ್ತಮ ಹಣ ಮತ್ತು ಹೆಸರು ಎರಡೂ ಪ್ರಾಪ್ತಿಯಾಗಿದೆ ಎನ್ನುವ ಫೆನೆಲ್ಲಾ ಓನ್ಲ್ ಫ್ಯಾನ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳಿಗಾಗಿ ಬೆತ್ತಲಾಗೋದು ಖುಷಿಯಂತೆ. "ನಾನು ಕೂದಲು ಶೇವ್ ಮಾಡಲು ನಿಲ್ಲಿಸಲು ಮುಖ್ಯ ಕಾರಣವೆಂದರೆ, ಗಂಡಸರು ಹುಡುಗಿಯರು ಶೇವ್ ಮಾಡಿರಬೇಕು ಎಂಬ ಡಿಮ್ಯಾಂಡ್‌ನಿಂದ. ನನಗದು ಇಷ್ಟ ಆಗುವುದಿಲ್ಲ. ನನ್ನ ಜೀವನದಲ್ಲಿ ಏನು ಮಾಡಬೇಕು ಎಂದು ಗಂಡಸರು ಹೇಳುವುದನ್ನು ನಾನು ಧಿಕ್ಕರಿಸುತ್ತೇನೆ," ಎನ್ನುತ್ತಾಳೆ ಮಾಡೆಲ್.
