ಸಮಂತಾಗೆ 'ಹಾಟಿ' ಎಂದ ಅನುಷ್ಕಾ, ಆದ್ರೆ, ಕೊಹ್ಲಿ ಕಾಲೆಳೆದ ನೆಟ್ಟಿಗರು!

ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ತಮ್ಮ ಹಾಟ್ ಫೋಟೋವೊಂದನ್ನು ಇನ್ಸ್ ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಬಹುತೇಕ ಎಲ್ಲಾ ನಟಿ ಮಣಿಯರು ಚಂದನೆಯ ಕಾಮೆಂಟ್ ಗಳನ್ನು ಮಾಡಿದ್ದರು. ಇದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೂಡ ಹೊರತಾಗಿರಲಿಲ್ಲ. ಆದರೆ, ಅನುಷ್ಕಾ ಶರ್ಮ ಕಾಮೆಂಟ್ ಬಿದ್ದಿದ್ದೇ ತಡ, ಅವರ ಕಾಮೆಂಟ್ ಗೆ ಅಂದಾಜು 1400 ಪ್ರತಿಕ್ರಿಯೆಗಳು ಬಂದಿವೆ.

Samantha Ruth Prabhu uploaded her hot picture Virat Kohli trolled on social media after Anushkas comment san

ಬೆಂಗಳೂರು (ಜೂನ್ 9): ಇನ್ಸ್ ಟಾಗ್ರಾಮ್ ನಲ್ಲಿ (Instagram) ಸಿನಿಮಾ ತಾರೆಯರು ತಮ್ಮ ಚಂದನೆಯ ಫೋಟೋಗಳು, ಪ್ರವಾಸಕ್ಕೆ ಹೋದ ವೈಯಕ್ತಿಕ ಚಿತ್ರಗಳು, ಫೋಟೋಶೂಟ್ ಗಳ ಚಿತ್ರವನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ, ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ (samantha ruth prabhu) ಹಾಟ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಸಮಂತಾ ಪೋಸ್ಟ್ ಮಾಡಿದ ಈ ಚಿತಕ್ಕೆ ಈಗಾಗಲೇ 2.4 ಮಿಲಿಯನ್ ಲೈಕ್ ಗಳು ಬಂದಿದ್ದರೆ, ಅಂದಾಜು 22 ಸಾವಿರ ಕಾಮೆಂಟ್ ಗಳು ಬಂದಿವೆ.

ಆದರೆ, ವಿಚಾರ ಏನೆಂದರೆ ಸಮಂತಾ (Samantha) ಪೋಸ್ಟ್ ಮಾಡಿದ ಚಿತ್ರಕ್ಕೆ ಬಾಲಿವುಡ್ ನಟಿ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Team India Player Virat Kohli) ಪತ್ನಿ ಅನುಷ್ಕಾ ಶರ್ಮ (Anushka Sharma) "ಹಾಟಿ" ಎಂದು ಕಾಮೆಂಟ್ ಮಾಡಿದ್ದರು. ಅನುಷ್ಕಾ ಶರ್ಮ ಕಾಮೆಂಟ್ ಬಂದಿದ್ದೇ ತಡ, ನೆಟಿಜನ್ಸ್ ಗಳು ವಿರಾಟ್ ಕೊಹ್ಲಿಯ ಕಾಲೆಳೆಯಲು ಆರಂಭಿಸಿದ್ದಾರೆ.

ಸಾಮಾನ್ಯ ಹೊಗಳಿಕೆ ಎನ್ನುವ ರೀತಿಯಲ್ಲಿ ಅನುಷ್ಕಾ ಶರ್ಮ ಹಾಟಿ ಎಂದು ಬರೆದಿದ್ದರು.  ಆದರೆ, ಇದನ್ನು ಫನ್ನಿಯಾಗಿ ತೆಗೆದುಕೊಂಡ ನೆಟಿಜನ್ಸ್ ಗಳು ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಲ್ಲದೆ, ಹೆಂಡತಿ ಅಕೌಂಟ್ ನಿಂದ ಕಾಮೆಂಟ್ ಮಾಡಬೇಡಿ ಕೊಹ್ಲಿ ನಿಮ್  ರಿಯಲ್ ಅಕೌಂಟ್ ನಿಂದ ಬಂದು ಕಾಮೆಂಟ್ ಮಾಡಿ  (ರಿಯಲ್ ಐಡಿ ಸೇ ಆವೋ ವಿರಾಟ್ ಕೊಹ್ಲಿ) ಎಂದು ಕಾಲೆಳೆದಿದ್ದಾರೆ. 
 


ಸಮಂತಾ ರುತ್ ಪ್ರಭು ಭಾರತೀಯ ನಟಿ ಮತ್ತು ಅವರು ದಕ್ಷಿಣ ಚಲನಚಿತ್ರೋದ್ಯಮದಿಂದ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದವರು. ಫ್ಯಾಮಿಲಿ ಮ್ಯಾನ್ 2 ವೆಬ್ ಸರಣಿಯ ನಂತರ, ದೇಶಾದ್ಯಂತ ಜನರು ಸಮಂತಾರನ್ನು ಸೋಷಿಯಲ್ ಮೀಡಿಯಾದಲ್ಲಿ ಫಾಲೋ ಮಾಡಲು ಆರಂಭಿಸಿದ್ದರು.

"ನೀವು ಅನುಷ್ಕಾ ಶರ್ಮಾ ಅವರ ಐಡಿಗಿಂತ ನಿಮ್ಮ ಐಡಿ ಇಂದ ಪೋಸ್ಟ್ ಮಾಡಿದರೆ, ಒಳ್ಳೆಯದಿತ್ತು ವಿರಾಟ್ ಕೊಹ್ಲಿ' ಎಂದು ವಿವೇಕ್ ಯಾದವ್ ಎನ್ನುವ ವ್ಯಕ್ತಿ ಕಾಮೆಂಟ್ ನಲ್ಲಿ ಬರೆದಿದ್ದಾರೆ. "ಹಾಯ್ ವಿರಾಟ್ ಕೊಹ್ಲಿ, ಇದು ನೀನು ಎಂದು ನಮಗೆ ಗೊತ್ತಾಗಿದೆ' ಎಂದು ಸಮರ್ಥ್ ಎನ್ನುವ ವ್ಯಕ್ತಿ ಬರೆದಿದ್ದಾನೆ.

ಕೊಹ್ಲಿ ಈಗ ನಮಗೆ ನಿಜ ಗೊತ್ತಾಗಬೇಕು, ಈ ಕಾಮೆಂಟ್ ಮಾಡಿರೋದು ನೀವು ತಾನೆ? ಎಂದು ರೋಹಿತ್ ಎನ್ನುವ ವ್ಯಕ್ತಿ ಪ್ರತಿಕ್ರಿಯೆ ನೀಡಿದ್ದಾನೆ. 'ವಿರಾಟ್ ಕೊಹ್ಲಿ ನಾಟಿ ಅಂತಾ ಈಗ ಗೊತ್ತಾಗಿದೆ. ಅನುಷ್ಕಾ ಶರ್ಮ ಒಮ್ಮೆ ಅವರನ್ನು ವಿಚಾರಿಸಿಕೊಳ್ಳಿ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮಗಳನ್ನು ಬಿಟ್ಟು ಹಾಲಿಡೇಗೆ ಹೊರಟ Virushka ದಂಪತಿಗಳು? ಟ್ರೋಲ್‌ಗೆ ಗುರಿ

ಸಮಂತಾ ರುತ್ ಪ್ರಭು 2 ದಿನಗಳ ಹಿಂದೆ ತಮ್ಮ ಇನ್ಸ್ ಟಾಗ್ರಾಮ್ ನಲ್ಲಿ ತುಂಬಾ ಬೋಲ್ಡ್ ಮತ್ತು ಗ್ಲಾಮರಸ್ ಚಿತ್ರವನ್ನು ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ, ನಟಿ ಕಪ್ಪು ಬಿಕಿನಿ ಟಾಪ್ ಜೊತೆಗೆ ಹಳದಿ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿ ಟಾಪ್‌ನಲ್ಲಿ ಸಮಂತಾ ರುತ್ ಪ್ರಭು ಆಕರ್ಷಕವಾಗಿ ಕಂಡಿದ್ದಾರೆ. ಸೌತ್ ಚಿತ್ರರಂಗದ ತಾರೆಯರಿಂದ ಹಿಡಿದು ಬಾಲಿವುಡ್ ತಾರೆಯರವರೆಗೂ ಇವರ ಪೋಸ್ಟ್ ಮೇಲೆ ಅಪಾರ ಕಾಮೆಂಟ್ ಗಳ ಸುರಿಮಳೆಯಾಗಿದೆ.

200 ಮಿಲಿಯನ್‌ ಇನ್‌ಸ್ಟಾಗ್ರಾಂ ಫ್ಯಾನ್ಸ್‌ ಕ್ಲಬ್ ಸೇರಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ..!

ಇತ್ತೀಚೆಗೆ ಪುಷ್ಪಾ ಚಿತ್ರದಲ್ಲಿ "ಊ ಅಂಟಾವಾ..." ಹಾಡಿಗೆ ಸಮಂತಾ ರುತ್ ಮಾದಕವಾಗಿ ಹೆಜ್ಜೆ ಹಾಕಿದ್ದರು. ಈ ಹಾಡು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಿತ್ತು. ಇನ್ನೊಂದೆಡೆ ವಿರಾಟ್ ಕೊಹ್ಲಿ, ಆರ್ ಸಿಬಿ ತಂಡ ಹೊಸದಾಗಿ ಮದುವೆಯಾದ ಗ್ಲೆನ್ ಮ್ಯಾಕ್ಸ್ ವೆಲ್ ಗೆ ನೀಡಿದ ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಇದರ ವಿಡಿಯೋವನ್ನು ತಮ್ಮ ಸ್ಟೋರಿಯಲ್ಲಿ ಹಾಕಿಕೊಂಡಿದ್ದ ಸಮಂತಾ, ಕೊಹ್ಲಿ ಹಾಗೂ ಅನುಷ್ಕಾ ಅವರನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿದ್ದರು. ಅದಕ್ಕೂ ಮುನ್ನ ಅನುಷ್ಕಾ ಶರ್ಮ ಕೂಡ ಆ ಸಮಾರಂಭದಲ್ಲಿ ಕೆಲವೊಂದು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 

Latest Videos
Follow Us:
Download App:
  • android
  • ios