ಕೆಲವು ದಿನಗಳ ಹಿಂದೆ ದರ್ಶನ್ ತೂಗುದೀಪ್ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಮನವಿ ಮಾಡಿದಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇತ್ತ ಸ್ಯಾಂಡಲ್‌ವುಡ್ ಚಿಗರೆಯರಾದ ಸೋನಲ್, ಕಾರುಣ್ಯ, ಅಮೂಲ್ಯ ಮತ್ತಿತರರೂ ದಾಸನ ಪ್ರಾಣಿ ದತ್ತು ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. 

ಜಾಗ್ವಾರ್ ದತ್ತು ಪಡೆದ ಅಮೂಲ್ಯ

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಜಾಗ್ವಾರ್‌ಅನ್ನು ದತ್ತು ಪಡೆದಿದ್ದಾರೆ ನಟಿ ಅಮೂಲ್ಯ. ‘ಜಾಗ್ವಾರ್‌ಅನ್ನು ಖರೀದಿಸುವ ಮೂಲಕ ನಮ್ಮ ಕಡೆಯಿಂದ ಅಳಿಲು ಸೇವೆ ಸಲ್ಲಿಸಿರುವ ಖುಷಿ ಸಿಕ್ಕಿದೆ’ ಎಂದು ಅಮೂಲ್ಯ ಟ್ವೀಟ್ ಮಾಡಿದ್ದಾರೆ.

ದಾಸನ ಮಾತಿಗೆ ಜೈ ಅಂದ್ರು ಅಮೂಲ್‌ ಬೇಬಿ, ಈಕೆ ದತ್ತು ಪಡೆದ ಪ್ರಾಣಿ ಯಾವ್ದು ಗೊತ್ತಾ! 

View post on Instagram

ಪ್ರಿಯಾಂಕಾ ತಿಮ್ಮೇಶ್‌ರಿಂದ ಕೃಷ್ಣ ಮೃಗ ದತ್ತು

ಪ್ರಿಯಾಂಕಾ ತಿಮ್ಮೇಶ್ ಮೈಸೂರಿನ ಝೂನಿಂದ ಕೃಷ್ಣ ಮೃಗವನ್ನು ದತ್ತು ಪಡೆದಿದ್ದಾರೆ. ‘ನಿಮ್ಮ ಆರ್ಥಿಕ ಸ್ಥಿತಿಗತಿಗೆ ಅನುಸಾರವಾಗಿ ಪ್ರಾಣಿಗಳನ್ನು ದತ್ತು ಪಡೆಯಿರಿ. ನಮ್ಮ ಮೃಗಾಲಯಗಳನ್ನು ಬೆಂಬಲಿಸೋಣ’ ಎಂದಿದ್ದಾರೆ.

ಆರ್ಥಿಕ ಸಂಕಷ್ಟದಲ್ಲಿದ್ದ Zooಗಳಿಗೆ ಬೆನ್ನೆಲುಬಾಗಿ ನಿಂತ ದರ್ಶನ್! 

View post on Instagram

ಇಂಡಿಯನ್ ಲೆಪರ್ಡ್ ದತ್ತು ಪಡೆದ ಕಾರುಣ್ಯ

ಭಾರತೀಯ ಮೂಲದ ಚಿರತೆಯೊಂದನ್ನು ಕಾರುಣ್ಯ ರಾಮ್ ದತ್ತು ಸ್ವೀಕರಿಸಿದ್ದಾರೆ. ಮೈಸೂರು ಜಯಚಾಮರಾಜೇಂದ್ರ ಮೃಗಾಲಯದಲ್ಲಿರುವ ಈ ಚಿರತೆಯನ್ನು ಅವರು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ‘ಇಂತಹ ಉತ್ತಮ ಕೆಲಸಕ್ಕೆ ಕೈ ಜೋಡಿಸುತ್ತಿರುವುದಕ್ಕೆ ಧನ್ಯತೆ ಇದೆ. ಕೋವಿಡ್ ಕಾರಣಕ್ಕೆ ಪ್ರವಾಸಿಗರಿಲ್ಲದೇ ಮೃಗಾಲಯದ ಆದಾಯ ನಿಂತು ಹೋಗಿದೆ. ನಾವೆಲ್ಲ ಕೈಲಾದ ಧನ ಸಹಾಯ ಮಾಡೋಣ’ ಎಂದು ಕಾರುಣ್ಯ ಹೇಳಿದ್ದಾರೆ.

ದರ್ಶನ್ ಅಭಿಯಾನ: 1 ಕೋಟಿಗೂ ಹೆಚ್ಚು ಸಂಗ್ರಹ ಮಾಡಿದ ಕರ್ನಾಟಕ ಮೃಗಾಲಯ! 

View post on Instagram

ಸೋನಾಲ್ ಮೊಂತೆರೋ ಬಿಳಿ ನವಿಲಿನ ದತ್ತು

ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದ ಮಂಗಳೂರು ಮೂಲದ ನಟಿ ಸೋನಾಲ್ ಮೊಂತೆರೋ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನದ ಭಾರತೀಯ ಮೂಲದ ಬಿಳಿ ನವಿಲನ್ನು ಅವರು ದತ್ತು ಪಡೆದಿದ್ದಾರೆ.

ದರ್ಶನ್ ಮನವಿಗೆ ಸ್ಪಂದಿಸಿ ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ! 

View post on Instagram

ನಕ್ಷತ್ರ ಆಮೆ ದತ್ತು ಸ್ವೀಕರಿಸಿದ ಅಶ್ವಿತಿ

‘ನಾವು ಮಾಡುವ ಕೆಲವೊಂದು ಸಣ್ಣ ಸಣ್ಣ ಕೆಲಸಗಳು ಎಷ್ಟೊಂದು ಖುಷಿ ಕೊಡುತ್ತವೆ ಅಲ್ವಾ.. ಇದೀಗ ಬೆಂಗಳೂರಿನ ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್‌ನಿಂದ ಒಂದು ನಕ್ಷತ್ರ ಆಮೆಯನ್ನು ದತ್ತು ಸ್ವೀಕರಿಸಿರುವೆ. ಸುಂದರವಾದ ಈ ಪ್ರಾಣಿಗಾಗಿ ನೀಡಿದ ಚಿಕ್ಕ ಮೊತ್ತದ ಹಣ ಕೊಟ್ಟ ಸಂತೋಷ ಚಿಕ್ಕದಲ್ಲ. ಮುಂದಿನ ದಿನಗಳಲ್ಲೂ ಇಂಥಾ ಕೆಲಸ ಮಾಡಲು ಸ್ಫೂರ್ತಿ ಬಂದಿದೆ. ಪ್ರಾಣಿಗಳ ದತ್ತು ಸ್ವೀಕಾರದಲ್ಲಿ ಸಣ್ಣ ಪ್ರಾಣಿ, ದೊಡ್ಡದು ಅಂತಿಲ್ಲ. ಸಹಾಯ ಮಾಡೋದು ಮುಖ್ಯ’ ಎಂದು ಅವರು ಹೇಳಿದ್ದಾರೆ.

ಜೀಬ್ರಾ ದತ್ತು ಪಡೆದ ಶ್ರುತಿ ನಾಯ್ಡು; ಬಿಳಿ ನವಿಲು ದತ್ತು ಪಡೆದ ಪ್ರಮೋದ್! 

View post on Instagram

ಇವರ ಜೊತೆಗೆ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರೂ ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಮುಂದೆ ಬಂದಿದ್ದಾರೆ.