Asianet Suvarna News

ದಾಸನ ಮಾತಿಗೆ ಜೈ ಅಂದ್ರು ಅಮೂಲ್‌ ಬೇಬಿ, ಈಕೆ ದತ್ತು ಪಡೆದ ಪ್ರಾಣಿ ಯಾವ್ದು ಗೊತ್ತಾ!

ಅಮೂಲ್ಯ ಮೈಸೂರು ಮೃಗಾಲಯದಿಂದ ಅಪರೂಪದ ಪ್ರಾಣಿಯೊಂದನ್ನು ದತ್ತು ಪಡೆದಿದ್ದಾರೆ. ಆ ಅಪರೂಪದ ಪ್ರಾಣಿ ಯಾವುದು ಗೊತ್ತಾ!

 

Kannada Actress Amulya and her new friend in Karnataka zoo
Author
Bengaluru, First Published Jun 16, 2021, 6:39 PM IST
  • Facebook
  • Twitter
  • Whatsapp

ಅಮೂಲ್ಯಾ ಜಗದೀಶ್‌ ಅಂತನಾದ್ರೂ ಕರೀರಿ, ಅಮೂಲ್ಯ ಅಂತಾನಾದ್ರೂ ಕರೀರಿ, ಇಲ್ಲಾ ಅಮೂಲ್ ಬೇಬಿ ಅಂತಾನಾದ್ರೂ ಅನ್ನಿ, ಮೂಡ್ ಚೆನ್ನಾಗಿದ್ರೆ ಈ ಹುಡುಗಿ ಬೇಜಾರು ಮಾಡ್ಕೊಳ್ಳೋದಿಲ್ಲ. ಮೂಡ್ ಖರಾಬಾಗಿದ್ರೆ ನೀವು ಯಾವ ಹೆಸ್ರಿಂದ ಕರೆದರೂ ಹುಂ ಅಥವಾ ಊಹೂಂ ಅಂತಷ್ಟೇ ಉತ್ತರ ಕೊಡಬಹುದು. ಈಕೆ ಡಿ ಬಾಸ್ ಅಭಿಮಾನಿಯೂ ಹೌದು, ಈಗ ಅವರ ಪ್ರಾಣಿ ದತ್ತು ಪಡೆಯಿರಿ ಅನ್ನೋ ಕರೆಗೆ ಓಗೊಟ್ಟು ಒಂದು ಅಪರೂಪದ ಪ್ರಾಣಿಯನ್ನು ದತ್ತು ಪಡೆದಿದ್ದಾರೆ. ಮೈಸೂರಿನ ಜಯ ಚಾಮರಾಜೇಂದ್ರ ಮೃಗಾಲಯದಿಂದ ಯುನಿಕ್ ಫೀಚರ್‌ಗಳಿರುವ ಒಂದು ಪ್ರಾಣಿಯನ್ನು ದತ್ತು ಪಡೆದುಕೊಂಡಿದ್ದಾರೆ. ಈ ಸಂಗತಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ ಡೇಟ್ ಮಾಡಿದ್ದಾರೆ. 

 

 ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಮೊದಲಿಂದಲೂ ಪ್ರಾಣಿಪ್ರಿಯರು. ವೈಲ್ಡ್‌ ಲೈಫ್‌ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದವರು. ಹೆಚ್ಚಿನ ಸ್ಟಾರ್‌ಗಳು ವೆಕೇಶನ್‌ನಲ್ಲಿ ವಿದೇಶಕ್ಕೆ ಪ್ರಯಾಣ ಮಾಡಿದರೆ ಇವರು ಕಾಡುಗಳಲ್ಲಿ ಸುತ್ತುತ್ತ ಪ್ರಾಣಿ ವೀಕ್ಷಣೆ ಮಾಡುತ್ತಾ, ವೈಲ್ಡ್‌ ಲೈಫ್‌ ಫೋಟೋಗ್ರಫಿ ಮಾಡುತ್ತಾ ಸಮಯ ಕಳೆಯುತ್ತಾರೆ. ಈ ಹಿಂದೆ ವೈಲ್ಡ್‌ ಲೈಫ್‌ ಫೊಟೋಗ್ರಫಿಗಾಗಿ ಲೀಲಾ ಅಪ್ಪಾಜಿ ಅವರಂಥಾ ವೈಲ್ಡ್‌ ಲೈಫ್‌ ಫೋಟೋಗ್ರಾಫರ್‌ ಜೊತೆಗೆ ಹಿಮಾಲಯದ ಕಾಡುಗಳಲ್ಲಿ ಸುತ್ತಿ ಫೊಟೋಗ್ರಫಿ ಮಾಡಿದ್ದರು. ಅವರು ಇತ್ತೀಚೆಗೆ ಪರಿಸರ ದಿನಾಚರಣೆಯಂದು ಮೈಸೂರು ಮೃಗಾಲಯಕ್ಕೆ ಭೇಟಿಕೊಟ್ಟು ಗಿಡ ನೆಟ್ಟಿದ್ದರು. ಅವರು ಹಿಂದೆ  ಮೈಸೂರು ಝೂ ಯೂತ್‌ ಕ್ಲಬ್‌ನಲ್ಲಿದ್ದವರು. ಜೊತೆಗೆ ಇಲ್ಲಿನ ಪ್ರಾಣಿಗಳನ್ನು ದತ್ತು ಪಡೆದು ಸಹಾಯ ಹಸ್ತ ಚಾಚುತ್ತಿದ್ದರು. ಈ ಬಾರಿ ಮೃಗಾಲಯಕ್ಕೆ ವಿಸಿಟ್‌ ಮಾಡಿದಾಗ ಇಲ್ಲಿನ ದುಃಸ್ಥಿತಿಯ ಅರಿವಾಗಿದೆ. ಮೊದಲೆಲ್ಲ ಪ್ರವಾಸಿಗರು ನೀಡುತ್ತಿದ್ದ ಹಣದಲ್ಲಿ ಮೃಗಾಲಯದ ಮೈಂಟೇನೆನ್ಸ್ ನಡೆಯುತ್ತಿತ್ತು.

ಸಂಚಾರಿ ವಿಜಯ್ ಭರವಸೆ ಇಟ್ಟಿದ್ದ ಸಿನಿಮಾಗಳು! ...

ಆದರೆ ಕಳೆದೆರಡು ವರ್ಷಗಳಿಂದ ಮೃಗಾಲಯಗಳು ಆದಾಯವಿಲ್ಲದೇ ದುಃಸ್ಥಿತಿಯಲ್ಲಿವೆ. ಇಡೀ ಮೃಗಾಲಯದ ನಿರ್ವಹಣೆಗೆ ವರ್ಷಕ್ಕೆ ೬೦ ಕೋಟಿ ರು.ಗಳಷ್ಟು ಹಣ ಬೇಕು. ಆದರೆ ಪ್ರವಾಸಿಗರಿಲ್ಲದೇ ಅಷ್ಟೂ ಹಣವನ್ನೂ ಮೃಗಾಲಯ ಪ್ರಾಧಿಕಾರವೇ ಭರಿಸಬೇಕು. ಇದು ದೊಡ್ಡ ಹೊರೆ. ಈ ವಿಚಾರವನ್ನು ದರ್ಶನ್‌ ಅವರ ಬಳಿ ಮೃಗಾಲಯದವರು ಹೇಳಿದ್ದಾರೆ. ಪ್ರಾಣಿ ಪ್ರಿಯ ದರ್ಶನ್ ಕೂಡಲೇ ಪ್ರಾಣಿಗಳ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ತಮ್ಮೆಲ್ಲ ಅಭಿಮಾನಿಗಳಿಗೂ ಪ್ರಾಣಿಗಳನ್ನು ದತ್ತು ಪಡೆಯಲು ವಿನಂತಿ ಮಾಡಿದ್ದಾರೆ. ದರ್ಶನ್‌ ಅವರು ಹೀಗೆ ವಿನಂತಿಸಿದ ಬಳಿಕ ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆಯಲು ಜನ ಮುಗಿ ಬೀಳುತ್ತಿದ್ದಾರೆ. ಸಿನಿಮಾದವರೂ ದರ್ಶನ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಉಪೇಂದ್ರ ಆಫ್ರಿಕನ್ ಆನೆಯನ್ನೇ ದತ್ತು ಪಡೆದಿದ್ದಾರೆ. ಒಂದಿಷ್ಟು ಜನ ಸಿನಿ ತಾರೆಯರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇದರಿಂದ ರಾಜ್ಯದ ವಿವಿಧ ಮೃಗಾಲಯಗಳಿಗೆ ಕೋಟ್ಯಂತರ ರು. ಹರಿದು ಬಂದಿದೆ. 
 ಈಗ ಅಮೂಲ್ಯ ಜಗದೀಶ್‌ ಸರದಿ. ಅವರು ಮೈಸೂರು ಮೃಗಾಲಯದಿಂದ ಒಂದು ಜಾಗ್ವಾರ್‌ದತ್ತು ಪಡೆದಿದ್ದಾರೆ. ಹುಲಿ, ಸಿಂಹಗಳ ಬಳಿಕ ಅತಿ ಉದ್ದದ ಪ್ರಾಣಿ ಇದು. ತನ್ನ ಅಪರಿಮಿತ ವೇಗಕ್ಕೆ ಹೆಸರುವಾಸಿಯಾದ ಈ ಪ್ರಾಣಿಯ ಹೆಸರನ್ನು ಲ್ಯಾಂಡ್‌ ರೋವರ್‌ನಂಥಾ ಕಂಪೆನಿ ತನ್ನ ವೇಗದ ಕಾರುಗಳಿಗೆ ಇಟ್ಟಿದೆ. ಇವು ಕೆಲವೊಮ್ಮೆ ಚಿರತೆಗಳಂತೆ ಕಂಡರೂ ಇವುಗಳ ಮೈ ಮೇಲಿನ ಕಪ್ಪು ರೌಂಡ್ ಅದರೊಳಗಿನ ಚುಕ್ಕೆಗಳಿಂದ ಜಾಗ್ವಾರ್‌ ಅಂಥ ಗುರುತಿಸಬಹುದು. 

ವೈರಲ್ ವಿಡಿಯೋ: ಫಾರ್ಮ್‌ಹೌಸ್‌ ಮಾವಿನ ಮರ ಹತ್ತಿದ ನಟಿ ಅಮೂಲ್ಯ ! ...

ಅಮೂಲ್ಯಾ ಇತ್ತೀಚೆಗೆ ಮಾವಿನ ಮರ ಹತ್ತಿ ಸರ್ಕಸ್‌ ಮಾಡಿದ್ದರು. ಮಾವಿನ ಹಣ್ಣು ಕೀಳಲು ಮರವನ್ನೇ ಹತ್ತಿದ ಅಮೂಲ್‌ ಬೇಬಿಯ ಶೌರ್ಯ, ಸಾಹಸಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನ ಕಾಲೆಳೆದಿದ್ದಾರೆ. ಆದರೆ ಅದಕ್ಕೆಲ್ಲ ತಲೆಕೆಡಿಸಿಕೊಳ್ಳದ ಈಗ ಈಗ ಉದಾರ ಮನಸ್ಸಿಂದ ಜಾಗ್ವಾರ್ ದತ್ತು ಪಡೆದು ಪ್ರಾಣಿ ಪ್ರೀತಿ ಮೆರೆದಿದ್ದಾರೆ. ವರ್ಷಕ್ಕೆ ೩೫,೦೦೦ ರು.ನಷ್ಟು ಮೊತ್ತ ಪಾವತಿಸಿದರೆ ನೀವೂ ಅಮೂಲ್ಯ ಅವರಂತೆ ಜಾಗ್ವಾರ್‌ಅನ್ನು ದತ್ತು ಪಡೆಯಬಹುದು. ಇದಕ್ಕೆಂದೇ ಮೃಗಾಲಯ ಪ್ರಾಧಿಕಾರ ಆಪ್‌ ಬಿಡುಗಡೆ ಮಾಡಿದೆ. ಅದರ ಮೂಲಕ ನಿಮ್ಮಿಷ್ಟದ ಪ್ರಾಣಿಗಳನ್ನು ದತ್ತು ಪಡೆದು ಮೃಗಾಲಯಕ್ಕೆ ಸಹಾಯ ಮಾಡಬಹುದು. 

ಗೋಲ್ಡನ್ ಕ್ವೀನ್ ಅಮೂಲ್ಯಗೆ 23ನೇ ಹುಟ್ಟುಹಬ್ಬದ ಸಂಭ್ರಮ ...
 

Follow Us:
Download App:
  • android
  • ios