ಉಪೇಂದ್ರ ಮೈಸೂರು ಮೃಗಾಲಯದ ಆಫ್ರಿಕನ್ ಆನೆ ದತ್ತು ಪಡೆದಿದ್ದಾರೆ. ದರ್ಶನ್ ಅವರ ಮನವಿಗೆ ಸ್ಪಂದಿಸಿ, ಪ್ರಾಣಿ ರಕ್ಷಣೆಯಲ್ಲಿ ಕೈ ಜೋಡಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

‘ಪ್ರಾಣಿಗಳೇ ಗುಣದಲಿ ಮೇಲು. ದರ್ಶನ್ ಅವರ ಕರೆಯಂತೆ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆಯನ್ನು ದತ್ತು ಪಡೆದಿದ್ದೇನೆ. ಈ ಮೂಲಕ ದರ್ಶನ್ ಅವರ ಮಹತ್ಕಾರ್ಯಕ್ಕೆ ಕೈ ಜೋಡಿಸಿದ್ದೇನೆ’ ಎಂದಿದ್ದಾರೆ ಉಪೇಂದ್ರ.

ಉಪ್ಪಿ ಆನೆ ದತ್ತು ಪಡೆದಿರುವುದರಿಂದ ಸ್ಫೂರ್ತಿ ಪಡೆದು ಅವರ ಕೆಲವು ಅಭಿಮಾನಿಗಳು ಮೃಗಾಲಯಕ್ಕೆ ದೇಣಿಗೆ ನೀಡಲು ಮುಂದೆ ಬಂದಿದ್ದಾರೆ. ದರ್ಶನ್ ಹೇಳಿರುವಂತೆ ಆನೆಯನ್ನು ದತ್ತು ಪಡೆಯಲು ಸುಮಾರು 1.70 ಲಕ್ಷ ರು. ಶುಲ್ಕವಿದೆ. ಉಪೇಂದ್ರ ಈ ಶುಲ್ಕ ಪಾವತಿಸಿ ಆನೆ ದತ್ತು ಪಡೆದಿದ್ದಾರೆ. ಉಪೇಂದ್ರ ಅವರ ಈ ಕಾರ್ಯಕ್ಕೆ ದರ್ಶನ್ ಕೃತಜ್ಞತೆ ಸೂಚಿಸಿದ್ದಾರೆ.

ಕರ್ನಾಟಕದ Zooನಲ್ಲಿ ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್ ಮನವಿ! 

ದರ್ಶನ್ ಅವರ ಪ್ರಾಣಿ ದತ್ತು ಕರೆಗೆ ಈಗಾಗಲೇ ರಾಜ್ಯಾದ್ಯಂತ ಸಾಕಷ್ಟು ಸ್ಪಂದನೆ ಹರಿದು ಬಂದಿದ್ದು ಕೇವಲ ಒಂದು ವಾರದಲ್ಲಿ ಒಂದು ಕೋಟಿ ರು.ಗಳಷ್ಟು ದೇಣಿಗೆ ಸಂಗ್ರಹವಾಗಿದೆ. ಕರ್ನಾಟಕ ಮೃಗಾಲಯ ಪ್ರಾಧಿಕಾರ ಈ ವಿಚಾರವನ್ನು ಅಧಿಕೃತವಾಗಿ ಟ್ವೀಟ್ ಮಾಡಿದೆ.

View post on Instagram