- Home
- Entertainment
- Sandalwood
- ರಶ್ಮಿಕಾ ಕರೆದಿಲ್ಲ, ಶೆಟ್ಟರ ಗ್ಯಾಂಗ್ ಹೋಗಿಲ್ಲ.. ಮುಗಿದಿಲ್ವಾ ಮುನಿಸು? ಕಿರಿಕ್ ಕಂಟಿನ್ಯೂ ಆಯ್ತಾ..!
ರಶ್ಮಿಕಾ ಕರೆದಿಲ್ಲ, ಶೆಟ್ಟರ ಗ್ಯಾಂಗ್ ಹೋಗಿಲ್ಲ.. ಮುಗಿದಿಲ್ವಾ ಮುನಿಸು? ಕಿರಿಕ್ ಕಂಟಿನ್ಯೂ ಆಯ್ತಾ..!
ರಶ್ಮಿಕಾ ಮಂದಣ್ಣ ಮದುವೆಗೆ ಕೊನೆಗೂ ಶೆಟ್ಟಿ ಗ್ಯಾಂಗ್ನವರು ಹೋಗಲೇ ಇಲ್ಲ. ತನ್ನನ್ನ ಬಣ್ಣದ ದುನಿಯಾಗೆ ಪರಿಚಯಿಸಿದವರಿಗೆ ರಶ್ಮಿಕಾ ಮದುವೆ ಆಹ್ವಾನ ಕೊಡಲಿಲ್ಲ. ಇತ್ತ ಶೆಟ್ರು ಕೂಡ ರಶ್ಮಿಕಾನ ಕ್ಷಮಿಸಲಿಲ್ಲ. ಒಟ್ನಲ್ಲಿ ಮದುವೆ ಜೊತೆಗೆ ಮುಗಿದು ಹೋಗಬಹುದಾಗಿದ್ದ ಕಿರಿಕ್ ಮುಂದುವರೆದಿದೆ ಎನ್ನಬಹುದೇ?

ರಶ್ಮಿಕಾ ಮಂದಣ್ಣ ಮದುವೆಗೆ ಕೊನೆಗೂ ಶೆಟ್ಟಿ ಗ್ಯಾಂಗ್ನವರು ಹೋಗಲೇ ಇಲ್ಲ. ತನ್ನನ್ನ ಬಣ್ಣದ ದುನಿಯಾಗೆ ಪರಿಚಯಿಸಿದವರಿಗೆ ರಶ್ಮಿಕಾ ಮದುವೆ ಆಹ್ವಾನ ಕೊಡಲಿಲ್ಲ. ಇತ್ತ ಶೆಟ್ರು ಕೂಡ ರಶ್ಮಿಕಾನ ಕ್ಷಮಿಸಲಿಲ್ಲ. ಒಟ್ನಲ್ಲಿ ಮದುವೆ ಜೊತೆಗೆ ಮುಗಿದು ಹೋಗಬೇಕಿದ್ದ ಕಿರಿಕ್ ಮುಂದುವರೆದಿದೆ.
ಸಿನಿಲೋಕಕ್ಕೆ ಪರಿಚಯಿಸಿದ ಶೆಟ್ಟಿ ಗ್ಯಾಂಗ್ ಮರೆತ ರಶ್ಮಿಕಾ..!
ಅವರು ಕರೀಲಿಲ್ಲ.. ಇವರು ಕ್ಷಮಿಸಲಿಲ್ಲ.. ಕಿರಿಕ್ ಕಂಟಿನ್ಯೂ
ಯೆಸ್ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ವಿವಾಹ ಅದ್ಧೂರಿಯಾಗಿ ನೆರವೇರಿದೆ. ರಶ್ಮಿಕಾ ಇನ್ಮುಂದೆ ಮಿಸೆಸ್ ದೇವರಕೊಂಡ ಆಗಿದ್ದಾರೆ. ಉದಯಪುರದ ರೆಸಾರ್ಟ್ನಲ್ಲಿ ನಡೆದ ರಶ್ಮಿಕಾ-ವಿಜಯ್ ಕಲ್ಯಾಣದಲ್ಲಿ ಕನ್ನಡ ಚಿತ್ರರಂಗದಿಂದ ಭಾಗಿಯಾಗಿದ್ದು ಆಶಿಕಾ ರಂಗನಾಥ್ ಮಾತ್ರ.
ಆಶಿಕಾ ಹಾಗೂ ರಶ್ಮಿಕಾ ಸಿನಿಮಾರಂಗಕ್ಕೆ ಬರುವ ಮೊದಲಿಂದಲೂ ಗೆಳತಿಯರು. ಆಶಿಕಾನ ಹೊರತು ಪಡಿಸಿ ಕನ್ನಡ ಚಿತ್ರರಂಗದ ಅನೇಕರಿಗೆ ರಶ್ಮಿಕಾ ಆಹ್ವಾನ ಕೊಟ್ಟಿದ್ರು. ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್, ಅಶ್ವಿನಿ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಧ್ರುವ ಸರ್ಜಾ, ಗಣೇಶ್ ನಿರ್ದೇಶಕರಾದ ಎ.ಹರ್ಷ, ನಂದ ಕಿಶೋರ್, ಸಿಂಪಲ್ ಸುನಿ ಸೇರಿದಂತೆ ತನ್ನ ಜೊತೆ ಕೆಲಸ ಮಾಡಿದ ಅನೇಕ ತಾರೆಯರಿಗೆ ಮತ್ತು ಸ್ಯಾಂಡಲ್‌ವುಡ್ ಹಿರಿಯರಿಗೆ ರಶ್ಮಿಕಾ ಆಮಂತ್ರಣ ಕೊಟ್ಟಿದ್ರು. ಆದ್ರೆ ಆಶಿಕಾ ಬಿಟ್ಟು ಇನ್ಯಾರೂ ಮದುವೆಗೆ ಹೋಗಿಲ್ಲ. ಬಹುಶಃ ಮಾರ್ಚ್ 4 ರಂದು ನಡೆಯೋ ರಿಸೆಪ್ಷನ್‌ಗೆ ಹೋಗೋ ಸಾಧ್ಯತೆ ಇದೆ.
ರಶ್ಮಿಕಾ ಮೇಲೆ ಶೆಟ್ಟರ ಗ್ಯಾಂಗ್ ಮುನಿಸು ಮುಗಿಯಲಿಲ್ಲ..!
ಹಸೆಮಣೆ ಏರಿದ ಕಿರಿಕ್ ಬ್ಯೂಟಿಗೆ ಯಾರೂ ಹರಸಲಿಲ್ಲ..!
ಅಸಲಿಗೆ ರಶ್ಮಿಕಾ ಮಂದಣ್ಣ ಅನ್ನೋ ಕಾಲೇಜು ಕನ್ಯೆಯನ್ನ ಕರೆದುಕೊಂಡು ಬಣ್ಣ ಹಚ್ಚಿ, ಕ್ಯಾಮೆರಾ ಎದುರು ನಿಲ್ಲಿಸಿ ನಟನೆ ಮಾಡಿಸಿದ್ದೇ ಶೆಟ್ಟರ ಗ್ಯಾಂಗ್. ರಕ್ಷಿತ್ ಶೆಟ್ಟಿ ನಟನೆಯ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಬಂದಾಕೆ ರಶ್ಮಿಕಾ ಮಂದಣ್ಣ.
ಕಿರಿಕ್ ಪಾರ್ಟಿಯ ಯಶಸ್ಸಿನ ನಂತರ ರಶ್ಮಿಕಾ ಆಕಾಶದೆತ್ತರಕ್ಕೆ ಬೆಳೆದರು. ಇವತ್ತು ರಶ್ಮಿಕಾ ಏನೇ ಆಗಿದ್ರೂ ಅವರ ಯಶಸ್ಸಿನಲ್ಲಿ ರಿಷಬ್, ರಕ್ಷಿತ್ ಸೇರಿದಂತೆ ಇಡೀ ಕಿರಿಕ್ ಪಾರ್ಟಿ ತಂಡದ ಪಾಲು ಇದೆ. ಆದ್ರೆ ತನ್ನ ಮೊದಲ ಚಿತ್ರಕ್ಕೆ ಕೆಲಸ ಮಾಡಿದ ಯಾರೊಬ್ರಿಗೂ ರಶ್ಮಿಕಾ ಮದುವೆ ಆಹ್ವಾನ ಕೊಡಲಿಲ್ಲ.
ರಕ್ಷಿತ್ ಜೊತೆಗೆ ನಿಶ್ಚಿತಾರ್ಥ ಮುರಿದುಬಿದ್ದ ಮೇಲೆ ರಶ್ಮಿಕಾ, ಶೆಟ್ಟಿ ಗ್ಯಾಂಗ್ನಿಂದ ಅಂತರ ಕಾಯ್ದುಕೊಂಡ್ರು. ಅಂತರ ಕಾಯ್ದುಕೊಳ್ಳೋದೇನೋ ಓಕೆ ಆದ್ರೆ ಸಂದರ್ಶನವೊಂದರಲ್ಲಿ ತನ್ನನ್ನ ಪರಿಚಯಿಸಿ ನಿರ್ಮಾಣ ಸಂಸ್ಥೆಯ ಹೆಸರನ್ನ ಹೇಳೊದಕ್ಕೂ ರಶ್ಮಿಕಾ ಹಿಂದೇಟು ಹಾಕಿದ್ರು. ಇದು ರಿಷಬ್ಗೆ ಕೋಪ ತರಿಸಿತ್ತು. ಸಂದರ್ಶನವೊಂದರಲ್ಲಿ ನೇರವಾಗೇ ರಶ್ಮಿಕಾಗೆ ಕೌಂಟರ್ ಕೊಟ್ಟಿದ್ರು.
ಮೊನ್ನೆ ಮಂತ್ರಾಲಯದಲ್ಲಿ ರಶ್ಮಿಕಾ ಮದುವೆ ಬಗ್ಗೆ ಕೇಳಿದ್ದೇ ತಡ ರಿಷಬ್ ಶೆಟ್ರು ನಮಸ್ಕಾರ ಅಂತ ಹೇಳಿ ಹೊರಟೇ ಬಿಟ್ರು. ಅಷ್ಟರ ಮಟ್ಟಿಗೆ ಅವರ ನಡುವೆ ಅಸಮಾಧಾನ ಬೇಸರ ಮಡುಗಟ್ಟಿದೆ.
ಕೊನೆ ಮಾತು: ಈ ಬೇಸರ ಏನೇ ಇದ್ದರೂ ರಶ್ಮಿಕಾ ಮದುವೆ ಸಮಯದಲ್ಲಿ ಆಹ್ವಾನ ಕೊಟ್ಟು ಹಳೆಯ ಮುನಿಸಿಗೆ ಫುಲ್ ಸ್ಟಾಪ್ ಹಾಡಬಹುದಿತ್ತು. ಆದ್ರೆ ಆಕೆ ಕರೀಲಿಲ್ಲ.. ಇವರು ಹೋಗಲಿಲ್ಲ. ಸೋ ಕಿರಿಕ್ ಮುಂದುವರೆದಿದೆ. ಇಬ್ಬರ ಫ್ಯಾನ್ಸ್ ನಡುವೆ ಕೂಡ ತಿಕ್ಕಾಟ ಮುಂದುವರೆದಿದೆ.
ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

