ಬೇಬಿ ರಥಿ ಆಗಮನದ ನಿರೀಕ್ಷೆಯಲ್ಲಿ ಧ್ರುವ ರಥಿ, ಮೋದಿ ಟೀಕಿಸಲು ಮತ್ತೊಬ್ಬ ಬರುತ್ತಿದ್ದಾನೆಂದ ಸೋಶಿಯಲ್ ಮೀಡಿಯಾ?
ಯೂಟ್ಯೂಬರ್ ಧ್ರುವ ರಥಿ, ಸೋಶಿಯಲ್ ಮೀಡಿಯಾ ಲೋಕದ ಹೊಸ ಸೆನ್ಸೇಷನ್. ಲೋಕಸಭೆ ಚುನಾವಣೆ ಸಂದರ್ಭದ ಈತನ ವಿಡಿಯೋಗಳು ಈತನನ್ನು ಜನಪ್ರಿಯತೆಯ ತುದಿಗೆ ಒಯ್ದವು. ಈತ ಇದೀಗ ಇನ್ನೊಂದು ಹೊಸ ಜೀವದ ನಿರೀಕ್ಷೆಯಲ್ಲಿದ್ದಾನೆ. ಯಾವುದದು?
ಖ್ಯಾತ ಯುಟ್ಯೂಬರ್ ಧ್ರುವ ರಥಿ ಮತ್ತು ಆತನ ಪತ್ನಿ ಜೂಲಿ ಎಲ್ಬಿಆರ್ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನವರು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿಕೊಂಡಿದ್ದಾರೆ. ಇಬ್ಬರೂ ಒಂದು ಸುಂದರವಾದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರಥೀ ಪತ್ನಿ ಜೂಲಿ ತಮ್ಮ ಬೇಬಿ ಬಂಪ್ ಪ್ರದರ್ಶಿಸುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ "ಸೆಪ್ಟೆಂಬರ್‌ನಲ್ಲಿ ಬೇಬಿ ರಥೀ ಆಗಮನದ ನಿರೀಕ್ಷೆ" ಎಂದು ಬರೆದಿದ್ದಾರೆ. ಮೂರೂ ಫೋಟೋಗಳಿವೆ. ಮೊದಲ ಚಿತ್ರವು ತನ್ನ ಹೊಟ್ಟೆಯ ಸುತ್ತ ತನ್ನ ಕೈಗಳನ್ನು ಹೊಂದಿರುವ Lbr ಅನ್ನು ತೋರಿಸುತ್ತದೆ. ಸುಂದರವಾದ ಬಾಡಿಕಾನ್ ಡ್ರೆಸ್ ಧರಿಸಿದ್ದಾಳೆ. ಇನ್ನೊಂದು ಚಿತ್ರದಲ್ಲಿ, ರಥೀ ಅವಳೊಂದಿಗೆ ಸೇರಿಕೊಂಡಿದ್ದಾನೆ. ಮೂರನೇ ಫೋಟೋ Lbr ಒಂದು ಸುಂದರವಾದ ನಗುವಿನೊಂದಿಗೆ ಕ್ಯಾಮರಾವನ್ನು ನೋಡುತ್ತಿರುವುದನ್ನು ತೋರಿಸುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಮಂದಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. “ಒಳ್ಳೆಯ ಸುದ್ದಿ, ಧ್ರುವ. ನಿಮಗೆ ಅಭಿನಂದನೆಗಳು" ಎಂದು ಕೆಲವರು ಬರೆದಿದ್ದಾರೆ. ಇನ್ನು ಕೆಲವರು "ಮೋದಿಯವರನ್ನು ಟೀಕಿಸಲು ಇನ್ನೊಬ್ಬ ಬರುತ್ತಿದ್ದಾನೆ" ಎಂದು ಬರೆದಿದ್ದಾರೆ. ಇದಕ್ಕೆ ಕಾರಣ- ಮೋದಿ ಅವರನ್ನು ಧ್ರುವ ರಥೀ ತಮ್ಮ ವಿಡಿಯೋಗಳಲ್ಲಿ ಖಂಡಾತುಂಡವಾಗಿ ಟೀಕಿಸುತ್ತಾರೆ ಎಂಬುದು. ಧ್ರುವ ರಥಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಭಾರತದಲ್ಲಿನ ಸಾಮಾಜಿಕ-ರಾಜಕೀಯ ವಿಷಯಗಳ ಕುರಿತು ತಮ್ಮ ಟೀಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಚಾನಲ್ ಜೊತೆಗೆ, ಆತ YouTubeನಲ್ಲಿ ಪ್ರಯಾಣ ವ್ಲಾಗ್ ಅನ್ನು ಹೊಂದಿದ್ದಾನೆ. ಅಲ್ಲಿ ಆತ ತನ್ನ ಪ್ರಯಾಣದ ಸಾಹಸಗಳನ್ನು ಹಂಚಿಕೊಳ್ಳುತ್ತಾನೆ.
2021ರಲ್ಲಿ, ಧ್ರುವ ತನ್ನ ಪ್ರಯಾಣದ ವ್ಲಾಗ್‌ನಲ್ಲಿ ತನ್ನ ಮದುವೆಯ ವೀಡಿಯೊವನ್ನು ಹಂಚಿಕೊಂಡಿದ್ದ. ಆತ ತನ್ನ ಏಳು ವರ್ಷಗಳ ಕಾಲದ ಜತೆಗಾತಿ, ತನ್ನ ಜರ್ಮನ್ ಗೆಳತಿ ಜೂಲಿ ಎಲ್ಬಿಆರ್ ಜೊತೆ ಆಸ್ಟ್ರಿಯಾದ ವಿಯೆನ್ನಾದಲ್ಲಿ 2021ರಲ್ಲಿ ವಿವಾಹವಾಗಿದ್ದ. ಇದು ಅವರ ಕುಟುಂಬ ಮತ್ತು ಸ್ನೇಹಿತರು ಭಾಗವಹಿಸಿದ ಸಮಾರಂಭವಾಗಿತ್ತು. ಈ ಜೋಡಿ, 2022ರಲ್ಲಿ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ಮತ್ತೆ ಸಪ್ತಪದಿ ತುಳಿದಿದೆ. ಈತ ವಾಸ ಮಾಡುವುದು ಜರ್ಮನಿಯಲ್ಲಿ. ಅಂದ ಹಾಗೆ ಇವರಿಬ್ಬರ ಪ್ರೇಮ ಪ್ರಕರಣವೂ ಸೊಗಸಾಗಿದೆ.
ಜರ್ಮನಿಯ ಟ್ರ್ಯಾಮ್‌ನಲ್ಲಿ ಇಂಟರ್ನ್‌ಶಿಪ್‌ಗೆ ಹೋಗುವಾಗ ಜೂಲಿ ಅಲ್ಲಿ ಸ್ಕೂಲಿಗೆ ಹೋಗುತ್ತಿದ್ದಳಂತೆ. ಅಲ್ಲಿಯೇ ಇವರ ಮೊದಲ ಭೇಟಿಯಾಗಿ, ಸ್ನೇಹಿತರಾಗಿ ಮುಂದುವರಿದರು. ಏಳು ವರ್ಷಗಳ ನಂತರ ಮದುವೆಯಾದರು. ಕೊರೋನಾ ಕಾಲದಲ್ಲಿ ಧ್ರುವ ಮದುವೆಯಾಗಿದ್ದರಿಂದ ಬರೀ 22 ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಹಾಜರಿದ್ದರಂತೆ. ಮದ್ವೆಯಾದ್ಮೇಲೆ ಜೂಲಿ ಜೊತೆಯಾಗಿರೋ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲು ಪರ್ಮಿಷನ್ ಕೊಟ್ಟಿದ್ದಂತೆ. ಮದ್ವೆಯಾದ ಮೇಲೆ ಈ ಜೋಡಿ ಜರ್ಮನಿಯ ಬರ್ಲಿನ್‌ನಲ್ಲಿ ವಾಸಿಸುತ್ತಿದ್ದು, ಅವರ ಜೀವನದ ತುಣುಕುಗಳನ್ನೂ ಆಗಾಗ ಯೂಟ್ಯೂಬಿನಲ್ಲಿ ಶೇರ್ ಮಾಡಿಕೊಳ್ಳುವುದುಂಟು. ಚೆನ್ನಾಗಿಯೇ ಜರ್ಮನ್ ಮಾತನಾಡುವ ಧ್ರುವ್ ಹೆಂಡತಿಯೂ ಹಿಂದಿ ಕಲಿಯುತ್ತಿದ್ದಾರಂತೆ. ಎಲ್ಲಿಯೋ ಭಾರತಕ್ಕೆ ಅಪರೂಪಕ್ಕೊಮ್ಮೆ ಬರುವುದರಿಂದ ಹಿಂದಿ ಕಲಿಯಲು ಜೂಲಿಗೆ ಅವಕಾಶವೇ ಸಿಕ್ಕಿಲ್ಲವಂತೆ.
ಮಿಲಿಯನ್‌ಗಟ್ಟಲೆ ಸಬ್‌ಸ್ಕ್ರೈಬರ್ಸ್ ಇರೋ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಕೋಟ್ಯಾಂತರ ವ್ಯೂಸ್ ಗಿಟ್ಟಿಸಿಕೊಳ್ಳುವಂತೆ ವೀಡಿಯೋ ಮಾಡುವ ಧ್ರುವ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಸುಮಾರು 4 ದಶಲಕ್ಷ ಅಮೆರಿಕನ್ ಡಾಲರ್ ಅಂದ್ರೆ 33 ಕೋಟಿ ಎನ್ನಲಾಗುತ್ತಿದೆ. ಮೂಲತಃ ಯೂಟ್ಯೂಬ್‌ನಿಂದಲೇ ಆದಾಯ ಗಳಿಸೋ ಇವರಿಗೆ ಹಲವು ಬ್ರ್ಯಾಂಡ್‌ಗಳ ಸಹಯೋಗದಿಂದಲೂ ಬಹಳಷ್ಟು ಹಣ ಗಳಿಸುತ್ತಾರಂತೆ.
ಮೋಧಿ ವಿರೋಧಿಸಿ, ಕಾಂಗ್ರೆಸ್ ಗೆಲುವಿಗೆ ಸಹಕರಿಸಿದ ಯೂಟ್ಯೂಬರ್ ಧ್ರುವ್ ರಾಥಿ ಲವ್ ಲೈಫ್, ನೆಟ್ ವರ್ಥ್ ಇದು!
ಮೋದಿ ಮೊದಲ ಸಲ ಗುಜರಾತ್‌ನಲ್ಲಿ ಸಿಎಂ ಆಗಿ ಅಧಿಕಾರಕ್ಕೆ ಬಂದಾಗ ಆಗ ತಾನೇ ಎಂಜಿನೀಯರಿಂಗ್ ಮಾಡಲು ಜರ್ಮನಿಗೆ ಹೋದಾತ ಧ್ರುವ್ ರತಿ. ಆಗಲೇ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು. ಐಫೋನ್5Sನಲ್ಲಿ ರೆಕಾರ್ಡ್ ಮಾಡಿದ ಟ್ರಾವೆಲ್ ವ್ಲಾಗ್ ಇವರ ಮೊದಲ ವೀಡಿಯೋ. ಅದನ್ನು ಎಡಿಟ್ ಮಾಡಲು 2 ತಿಂಗಳು ತೆಗೆದುಕೊಂಡಿದ್ದರಂತೆ. ಆದರೆ, ಆ ಮೂಲಕ ಬಾಲ್ಯದ ಕನಸು ಈಡೇರಿಸಿಕೊಂಡಿದ್ದರಂತೆ. 2014ರಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೇರಿದಾಗ ರತಿಗೂ ಹುಮ್ಮಸ್ಸು ಇತ್ತು. ಭಾರತದಲ್ಲಿ ತಾಂಡವ ಆಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತೆ ಎನ್ನುವ ವಿಶ್ವಾಸವಿತ್ತು. ಆದರೆ, ದಿಲ್ಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಾಗ ಆಪ್ 2015ರಲ್ಲಿ ಯಾವಾಗ ಆ್ಯಂಟಿ ಕರಪ್ಷನ್ ಹೆಲ್ಪ್‌ಲೈನ್ ಮಾಡಿತ್ತೋ, ಅದನ್ನು ಕೇಂದ್ರ ಸರಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸಿತ್ತೋ ಆಗ ರತಿಗೆ ಹಲವು ಅನುಮಾನಗಳನ್ನು ಕಾಡಲು ಶುರುವಾಯ್ತಂತೆ. ಆಗ ಮೋದಿ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದು ರತಿ.
ನಂತರ ಈತನ ವಿಡಿಯೋಗಳು ಲಕ್ಷಾಂತರ ವ್ಯೂವರ್‌ಶಿಪ್ ಗಳಿಸಿದ್ದವು. ಮೋದಿ ಈ ಸಲ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ರಥೀ ಹೇಳಿದ್ದ. ಅದು ನಿಜವಾಗಿದೆ.
ಯುಟ್ಯೂಬರ್ ಧೃವ್ ರಾಠೀ ವಿರುದ್ಧ ಗುಡುಗಿದ ಸ್ವಾತಿ ಮಲಿವಾಲ