Asianet Suvarna News Asianet Suvarna News

ಯುಟ್ಯೂಬರ್ ಧೃವ್ ರಾಠೀ ವಿರುದ್ಧ ಗುಡುಗಿದ ಸ್ವಾತಿ ಮಲಿವಾಲ

ಧೃವ್ ರಾಠಿ ವಿಡಿಯೋ ಬಳಿಕ ತಮಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು (Life and Rape Threats) ಬರುತ್ತಿವೆ ಎಂದು ಸ್ವಾತಿ ಮಲಿವಾಲ್ ಭಾನುವಾರ ಹೇಳಿಕೊಂಡಿದ್ದಾರೆ.

Rajya sabha MP Swati malival says Youtuber Dhruv Rathee Acting Like AAP spoke person mrq
Author
First Published May 26, 2024, 6:26 PM IST

ನವದೆಹಲಿ: ತನ್ನದೇ ಆಮ್ ಆದ್ಮಿ ಪಕ್ಷದ (Aam Admi Party) ವಿರುದ್ಧ ಗಂಭೀರ ಆರೋಪ ಮಾಡಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Rajya Sabha Member Swati Malival) ಇದೀಗ ಯುಟ್ಯೂಬರ್ ಧೃವ್ ರಾಠಿ (YouTuber Dhruv Rathee) ವಿರುದ್ಧ ಹರಿಹಾಯ್ದಿದ್ದಾರೆ. ಧೃವ ರಾಠಿ ವಿಡಿಯೋ ಬಳಿಕ ತಮಗೆ ಜೀವ ಬೆದರಿಕೆ ಮತ್ತು ಅತ್ಯಾಚಾರ ಬೆದರಿಕೆಗಳು (Life and Rape Threats) ಬರುತ್ತಿವೆ ಎಂದು ಸ್ವಾತಿ ಮಲಿವಾಲ್ ಭಾನುವಾರ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ತಮಗೆ ಬಂದಿರುವ ಬೆದರಿಕೆ ಸಂದೇಶಗಳ (Threat Messages) ಸ್ಕ್ರೀನ್‌ಶಾಟ್ ಫೋಟೋಗಳನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಯುಟ್ಯೂಬರ್ ಧೃವ ರಾಠಿ ಒನ್‌ಸೈಡ್ ವಿಡಿಯೋ ಮಾಡಿರುವ ಕಾರಣ ಬೆದರಿಕೆಗಳ ಸಂಖ್ಯೆ ಹೆಚ್ಚಾಗಿದೆ. ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂತ್ರಸ್ತೆಯನ್ನೇ ಅವಮಾನಿಸುವ ಕೆಲಸ ಮಾಡಲಾಗುತ್ತಿದ್ದು, ನನ್ನ ಭಾವನೆ ಮತ್ತು ಗೌರವಕ್ಕೆ ಧಕ್ಕೆಯನ್ನುಂಟು ಮಾಡುವ ಕೆಲಸ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇದರ ಜೊತೆಲ್ಲೀಯ ಧೃವ ರಾಠಿಯ ಎರಡು ನಿಮಿಷದ ವಿಡಿಯೋ ಬೆದರಿಕೆ ಅಂತಹ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಸ್ವಾತಿ ಮಲಿವಾಲ ಆರೋಪಿಸಿದ್ದಾರೆ. 

ನನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ

ಇದೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ವಿರುದ್ಧ ಸಲ್ಲಿಸಿರುವ ದೂರು ಹಿಂಪಡೆಯುವಂತೆ ನನ್ಮೇಲೆ ಒತ್ತಡ ಮತ್ತು ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಸ್ವಾತಿ ಹೇಳಿಕೊಂಡಿದ್ದಾರೆ. ಧೃವ್ ರಾಠಿ ವಿಡಿಯೋಗೆ ಅಸಮಾಧಾನ ಹೊರಹಾಕಿರುವ ಸ್ವಾತಿ ಮಲಿವಾಲ, ತಾವು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದ್ರೆ ಧೃವ್ ರಾಠಿ ನನ್ನ ಕರೆಗಳನ್ನು ಸ್ವೀಕರಿಸಿಲ್ಲ ಮತ್ತು ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಎಂದಿದ್ದಾರೆ.

ಸುರಾನಾ ಜ್ಯುವೆಲ್ಲರಿ ಶಾಪ್ ಮೇಲೆ ಐಟಿ ದಾಳಿ: ಅಟ್ಟಿ ಅಟ್ಟಿಯಾಗಿ ಇಟ್ಟಿದ 116 ಕೋಟಿಯ ನಗದು ವಶಕ್ಕೆ

ಧೃವ್ ರಾಠಿಗೆ ಸ್ವಾತಿ ಪ್ರಶ್ನೆ

ಯುಟ್ಯೂಬರ್ ಧೃವ್ ರಾಠಿ ವಿರುದ್ಧ ಬೇಸರ ಹೊರಹಾಕಿರುವ ದೃವ್ ರಾಠಿ, ನಾನು ಎರಡೂವರೆ ನಿಮಿಷದ ವಿಡಿಯೋವನ್ನು ನಿರ್ಲಕ್ಷ್ಯ ಮಾಡುತ್ತೇನೆ. ಹಲ್ಲೆ ನಡೆದಿದೆ ಅಂತ ಒಪ್ಪಿಕೊಂಡ ಬಳಿಕ ಎಎಪಿ ಯುಟರ್ನ್ ತೆಗೆದುಕೊಂಡಿದ್ದರ ಬಗ್ಗೆ ಯಾಕೆ ವಿಡಿಯೋದಲ್ಲಿ ಮಾತನಾಡಿಲ್ಲ. ಹಲ್ಲೆಯ ಬಗ್ಗೆ ವೈದ್ಯಕೀಯ ಇಲಾಖೆ ದೃಢಪಡಿಸಿದ ದಾಖಲೆಗಳನ್ನು ತೋರಿಸಬಹುದಿತ್ತು ಅಲ್ಲವಾ ಎಂದು ಸ್ವಾತಿ ಮಲಿವಾಲ ಪ್ರಶ್ನೆ ಮಾಡಿದ್ದಾರೆ.

ಸೆ.30ರ ಒಳಗಾಗಿ ಜಮ್ಮು ಕಾಶ್ಮೀರಕ್ಕೆ ವಿಧಾನಸಭೆ ಚುನಾವಣೆ: ಅಮಿತ್‌ ಶಾ ಘೋಷಣೆ

ತಮ್ಮನ್ನು ಸ್ವತಂತ್ರ ಪತ್ರಕರ್ತ ಎಂದು ಹೇಳಿಕೊಳ್ಳುವ ದೃವ್ ರಾಠಿ ಒಂದು ಕಡೆಯ ಘಟನೆಯನ್ನು ಮಾತ್ರ ವಿವರಿಸಿದ್ದಾರೆ. ಆಪ್‌ ಪಕ್ಷದ ವಕ್ತಾರರಂತೆ ಧೃವ್ ರಾಠಿ ವರ್ತಿಸಿದ್ದಾರೆ. ಘಟನೆಯ ಬಗ್ಗೆ ತಿಳಿ ಹೇಳಲು ನಾನು ಪ್ರಯತ್ನಿಸಿದೇ ಆದ್ರೆ ಧೃವ್ ರಾಠಿ ಸಂಪರ್ಕ ಸಾಧ್ಯವಾಗಿಲ್ಲ ಎಂದು ಸ್ವಾತಿ ಮಲಿವಾಲ ಹೇಳಿಕೊಂಡಿದ್ದಾರೆ.

Latest Videos
Follow Us:
Download App:
  • android
  • ios