ಮೋಧಿ ವಿರೋಧಿಸಿ, ಕಾಂಗ್ರೆಸ್ ಗೆಲುವಿಗೆ ಸಹಕರಿಸಿದ ಯೂಟ್ಯೂಬರ್ ಧ್ರುವ್ ರಾಥಿ ಲವ್ ಲೈಫ್, ನೆಟ್ ವರ್ಥ್ ಇದು!
Is India becoming a dictatorship? ಎಂಬ ಪ್ರಶ್ನೆಯೊಂದಿಗೆ ತಮ್ಮ ಬಹುತೇಕ ವೀಡಿಯೋಗಳನ್ನು ಮಾಡುವ ಧ್ರವ್ ರತಿ ಎಂಬ ಯೂಟ್ಯೂಬರ್ ಖ್ಯಾತಿ ಉತ್ತುಂಗಕ್ಕೇರಿದ್ದು ಇತ್ತೀಚೆಗೆ. ಮೋದಿ ವಿರೋಧಿ ವೀಡಿಯೋಗಳನ್ನು ಮಾಡುತ್ತಲೇ ಇಂಡಿ ಒಕ್ಕೂಟಕ್ಕೆ ತೀವ್ರ ಬೆಂಬಲ ತುಂಬಿದವರಲ್ಲಿ ಸುಮಾರು 18 ದಶಲಕ್ಷ ಫಾಲೋಯರ್ಸ್ ಇರೋ ಧ್ರುವ್ ಕೊಡುಗೆ ಅಪಾರ. ಶಾಲೆಗೆ ಹೋಗುತ್ತಿರುವಾಗಲೇ ಪ್ರೀತಿಸಿದ ಧ್ರುವ್ ರತ್ ಜರ್ಮನ್ ಪತ್ನಿ ಹಾಗೂ ಇವರ ಆಸ್ತಿ ಬಗ್ಗೆ ಇಲ್ಲಿದೆ ಇನ್ಫಾರ್ಮೇಷನ್.
ಸುಮಾರು 20-30 ನಿಮಿಷದ ವೀಡಿಯೋ, ಚೆಂದ ಮ್ಯೂಸಿಕ್. ಅದ್ಭುತವಾದ ಆ್ಯನಿಮೇಷನ್ ಮೂಲಕ ಯಾವುದೋ ಒಂದು ವಿಷಯದ ಬಗ್ಗೆ ಧ್ರವ್ ಎಕ್ಸ್‌ಪ್ಲೈನ್ ಮಾಡ್ದಿದ್ದಾರೆಂದರೆ ಎಂಥವರಾದರೂ ಕನ್ವೀನ್ಸ್ ಆಗಲೇ ಬೇಕು. ಹಾಗಿರುತ್ತೆ. ಪ್ರೀ ಎಲೆಕ್ಷನ್ ಎಕ್ಸಿಟ್ ಪೋಲ್ ಇರಲಿ, 7ನೇ ಹಂತದ ಚುನಾವಣೆ ಮುಗಿದ ನಂತರ ಜೂ.1ರಂದು ಚುನಾವಣೋತ್ತರ ಎಕ್ಸಿಟ್ ಪೋಲ್ ಇರಲಿ, ಎಲ್ಲವೂ ಭಾರತದಲ್ಲಿ ಮೋದಿ ಅಲೆ ಪ್ರಬಲವಾಗಿವೆ ಎಂದೇ ಹೇಳಿದ್ದವು. ಶ್ರೀ ಸಾಮಾನ್ಯನೂ ಹೌದೆಂದು ನಂಬಿದ್ದ.
- ಆಗಿದ್ದೇ ಉಲ್ಟಾ. ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಗೆದ್ದು ಏಕೈಕ ಪಕ್ಷವಾಗಿ ಹೊರಹೊಮ್ಮಿದರೂ ಸ್ವಂತ ಬಲದಿಂದ ಸರಕಾರ ರಚಿಸಲು ಹಿಂದಿನ ಎರಡು ಟರ್ಮಿನಂತೆ ಈ ಸಲ ಸೋತಿದ್ದು ಸುಳ್ಳಲ್ಲ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಏನೇ ಇರಲಿ ಈ ಬಗ್ಗೆ ಧ್ರುವ್ ರತಿ ಮಾತ್ರ ಸ್ಪಷ್ಟವಾಗಿ ವೀಡಿಯೋಗಳು ಮೂಲಕ ಜನರಿಗೆ ಹೇಳುತ್ತಲೇ ಇದ್ದರು. ಮೋದಿ ಜನಪ್ರಿಯತೆ, ಭಾರತದ ಆಡಳಿತದಲ್ಲಿ ನಿರಂಕುಶವಾದ ಎಂಬ ಬಗ್ಗೆ ಹಲವು ವೀಡಿಯೋಗಳನ್ನು ಮಾಡಿದ್ದರು. ಅದು ಕೋಟ್ಯಾಂತರ ಜನರನ್ನು ಬಹುಬೇಗ ತಲುಪುತ್ತಿತ್ತು.
ಯುಟ್ಯೂಬರ್ ಧೃವ್ ರಾಠೀ ವಿರುದ್ಧ ಗುಡುಗಿದ ಸ್ವಾತಿ ಮಲಿವಾಲ
- ಮೋದಿ ಮೊದಲ ಸಲ ಗುಜರಾತ್‌ನಲ್ಲಿ ಸಿಎಂ ಆಗಿ ಅಧಿಕಾರಕ್ಕೆ ಬಂದಾಗ ಆಗ ತಾನೇ ಎಂಜಿನೀಯರಿಂಗ್ ಮಾಡಲು ಜರ್ಮನಿಗೆ ಹೋದವರು ಧ್ರುವ್ ರತಿ. ಆಗಲೇ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು ಇವರು. ಐಫೋನ್5Sನಲ್ಲಿ ರೆಕಾರ್ಡ್ ಮಾಡಿದ ಟ್ರಾವೆಲ್ ವ್ಲಾಗ್ ಇವರ ಮೊದಲ ವೀಡಿಯೋ. ಅದನ್ನು ಎಡಿಟ್ ಮಾಡಲು 2 ತಿಂಗಳು ತೆಗೆದುಕೊಂಡಿದ್ದರಂತೆ. ಆದರೆ, ಆ ಮೂಲಕ ಬಾಲ್ಯದ ಕನಸು ಈಡೇರಿಸಿಕೊಂಡಿದ್ದರಂತೆ.
- 2014ರಲ್ಲಿ ಮೋದಿ ದೇಶದ ಪ್ರಧಾನಿಯಾಗಿ ಅಧಿಕಾರಕ್ಕೇರಿದಾಗ ರತಿಗೂ ಹುಮ್ಮಸ್ಸು ಇತ್ತು. ಭಾರತದಲ್ಲಿ ತಾಂಡವ ಆಡುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಬೀರುತ್ತೆ ಎನ್ನುವ ವಿಶ್ವಾಸವಿತ್ತು. ಆದರೆ, ದಿಲ್ಲಿಯಲ್ಲಿ ಆಡಳಿತದ ಚುಕ್ಕಾಣಿ ಹಿಡಿದಾಗ ಆಪ್ 2015ರಲ್ಲಿ ಯಾವಾಗ ಆ್ಯಂಟಿ ಕರಪ್ಷನ್ ಹೆಲ್ಪ್‌ಲೈನ್ ಮಾಡಿತ್ತೋ, ಅದನ್ನು ಕೇಂದ್ರ ಸರಕಾರ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯತ್ನಿಸಿತ್ತೋ ಆಗ ರತಿಗೆ ಹಲವು ಅನುಮಾನಗಳನ್ನು ಕಾಡಲು ಶುರುವಾಯ್ತಂತೆ. ಆಗ ಮೋದಿ ವಿರುದ್ಧ ಧ್ವನಿ ಎತ್ತಲು ಆರಂಭಿಸಿದ್ದು ರತಿ.
- ಇಂಥ ಧ್ರವ್ ರತಿ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ಎಲ್ಲಿಲ್ಲದ ಕುತೂಹಲ ಇದ್ದೇ ಇದೆ. ಅದರಲ್ಲೂ ಇವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಜರ್ಮನ್ ಯುವತಿಯನ್ನು ಮದ್ವೆಯಾದ ಧ್ರುವ್ ಮದುವೆ, ಆಸ್ತಿ ಎಷ್ಟಿದೆ.
- ಟ್ರ್ಯಾಮ್‌ನಲ್ಲಿ ಇಂಟರ್ನ್‌ಶಿಪ್‌ಗೆ ಹೋಗುವಾಗಿ ಅವರ ಜರ್ಮನ್ ಪತ್ನಿ ಸ್ಕೂಲಿಗೆ ಹೋಗುತ್ತಿದ್ದರಂತೆ. ಅಲ್ಲಿಯೇ ಇವರ ಮೊದಲ ಭೇಟಿಯಾಗಿ, ಸ್ನೇಹಿತರಾಗಿ ಮುಂದುವರಿದು, ದಾಂಪತ್ಯಕ್ಕೆ ಕಾಲಿಟ್ಟಿದ್ದಂತೆ.
- ಜೂಲಿ ಲಿಬರ್ ಎಂಬ ಜರ್ಮನ್ ಯುವತಿಯನ್ನು ವರಿಸಿದ ಧ್ರುವ್, ತಮ್ಮ ಕನಸಿನಂತೆ ಆಸ್ಟ್ರೀಯಾದ ವಿಯೆನ್ನಾದ ಬೆಲ್ವೆಂಡೆರೆ ಪ್ಯಾಲೇಸ್‌ನಲ್ಲಿ 2021ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೊದಲು ವಿದೇಶದಲ್ಲಿ ಮದುವೆಯಾದ ಈ ಜೋಡಿ, 2022ರಲ್ಲಿ ಭಾರತಕ್ಕೆ ಬಂದು ಹಿಂದೂ ಸಂಪ್ರದಾಯದಂತೆ ಮತ್ತೆ ಸಪ್ತಪದಿ ತುಳಿದಿದೆ.
- ಕೊರೋನಾ ಕಾಲದಲ್ಲಿ ಧ್ರುವ್ ಮದುವೆಯಾಗಿದ್ದರಿಂದ ಬರೀ 22 ಮಂದಿ ಮಾತ್ರ ಕಾರ್ಯಕ್ರಮದಲ್ಲಿ ಹಾಜರಿದ್ದರಂತೆ. ಮದ್ವೆಯಾದ್ಮೇಲೆ ಜೂಲಿ ಜೊತೆಯಾಗಿರೋ ಫೋಟೋವನನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲು ಪರ್ಮಿಷನ್ ಕೊಟ್ಟಿದ್ದಂತೆ.
ಮದ್ವೆಯಾದ ಮೇಲೆ ಈ ಜೋಡಿ ಜರ್ಮನಿಯ ಬರ್ಲಿನ್‌ನಲ್ಲಿ ವಾಸಿಸುತ್ತಿದ್ದು, ಅವರ ಜೀವನದ ತುಣುಕುಗಳನ್ನೂ ಆಗಾಗ ಯೂಟ್ಯೂಬಿನಲ್ಲಿ ಶೇರ್ ಮಾಡಿಕೊಳ್ಳುವುದುಂಟು. ಚೆನ್ನಾಗಿಯೇ ಜರ್ಮನ್ ಮಾತನಾಡುವ ಧ್ರುವ್ ಹೆಂಡತಿಯೂ ಹಿಂದಿ ಕಲಿಯುತ್ತಿದ್ದಾರಂತೆ. ಎಲ್ಲಿಯೋ ಭಾರತಕ್ಕೆ ಅಪರೂಪಕ್ಕೊಮ್ಮೆ ಬರುವುದರಿಂದ ಹಿಂದಿ ಕಲಿಯಲು ಜೂಲಿಗೆ ಅವಕಾಶವೇ ಸಿಕ್ಕಿಲ್ಲವಂತೆ.
ಧ್ರುವ್ ರಾಥಿ ವಿಡಿಯೋ ಹಂಚಿ ತಪ್ಪುಮಾಡಿದ್ದೇನೆ, ಸುಪ್ರೀಂ ಕೋರ್ಟ್‌ನಲ್ಲಿ ಕೇಜ್ರಿವಾಲ್ ತಪ್ಪೊಪ್ಪಿಗೆ!
- ಅಷ್ಟಕ್ಕೂ ಮಿಲಿಯನ್‌ಗಟ್ಟಲೆ ಸಬ್‌ಸ್ಕ್ರೈಬರ್ಸ್ ಇರೋ ಯೂಟ್ಯೂಬ್ ಚಾನೆಲ್ ಹೊಂದಿದ್ದು, ಕೋಟ್ಯಾಂತರ ವ್ಯೂಸ್ ಗಿಟ್ಟಿಸಿಕೊಳ್ಳುವಂತೆ ವೀಡಿಯೋ ಮಾಡುವ ಧ್ರುವ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಸುಮಾರು 4 ದಶಲಕ್ಷ ಅಮೆರಿಕನ್ ಡಾಲರ್ ಅಂದ್ರೆ 33 ಕೋಟಿ ಎನ್ನಲಾಗುತ್ತಿದೆ. ಮೂಲತಃ ಯೂಟ್ಯೂಬ್‌ನಿಂದಲೇ ಆದಾಯ ಗಳಿಸೋ ಇವರಿಗೆ ಹಲವು ಬ್ರ್ಯಾಂಡ್‌ಗಳ ಸಹಯೋಗದಿಂದಲೂ ಬಹಳಷ್ಟು ಹಣ ಗಳಿಸುತ್ತಾರಂತೆ.
- ಒಳ್ಳೇ ಫೇರಿ ಟೇಲ್ ಅಂತಿರೋ ಇವರ ಲವ್ ಸ್ಟೋರಿ ಬಗ್ಗೆ ಒಂದು ಸಿನಿಮಾ ಮಾಡಿದರೂ ಚೆನ್ನಾಗಿರುತ್ತೆ ಅನ್ಸುತ್ತೆ. ಒಟ್ಟಿನಲ್ಲಿ ಧ್ರುವ್ ವೈಯಕ್ತಿಕ ಹಾಗೂ ಔದ್ಯೋಗಿಕ ಕಾರಣಗಳಿಂದ ಸುದ್ದಿಯಲ್ಲಿ ಇರೋದಂತೂ ಸುಳ್ಳಲ್ಲ.