Asianet Suvarna News Asianet Suvarna News

ಮದುವೆಗೆ ಆಹ್ವಾನ ನೀಡದ ಸಹೋದರ; ಕಾರಣ ತಿಳಿದು ದಂಗಾದ ಸಹೋದರಿ!

ಸಂಬಂಧಿಕರು ಕಾರಣ ಹೇಳದೆ ದೂರವಾದಾಗ ಅಥವಾ ನಮ್ಮನ್ನು ದೂರವಿಟ್ಟಾಗ ಗೊಂದಲವಾಗೋದು ಸಹಜ. ಕಾರಣ ಏನು ಎಂದು ತಿಳಿಯುವ ಕುತೂಹಲವಿರುತ್ತದೆ. ಕೆಲವೊಮ್ಮೆ ಕಾರಣ ತಿಳಿದ್ರೆ ನೋವು, ದ್ವೇಷ ದುಪ್ಪಟ್ಟಾಗುತ್ತದೆ. ಈ ಮಹಿಳೆ ಕೂಡ ಅದೇ ದಾರಿಯಲ್ಲಿದ್ದಾಳೆ.

Woman Reveals Reason Cousin Not Invite Her To Wedding Brother Sister Relation Facebook roo
Author
First Published Feb 7, 2024, 11:22 AM IST

ಮದುವೆ ಒಂದು ಹಬ್ಬದಂತೆ. ಇಡೀ ಮನೆಯವರು, ಸಂಬಂಧಿಕರು, ಸ್ನೇಹಿತರು ಇದನ್ನು ಸಂಭ್ರಮಿಸುತ್ತಾರೆ. ಮನೆಯಲ್ಲಿ ಯಾರು ಮದುವೆ ಲೀಸ್ಟ್ ನಲ್ಲಿದ್ದಾರೆ ಎಂಬುದನ್ನು ಪಟ್ಟಿ ಮಾಡಿ, ಸಂಗಾತಿ ಫಿಕ್ಸ್ ಆಗೋ ಮುನ್ನವೇ ಮನೆಯವರು ಮದುವೆ ತಯಾರಿ ನಡೆಸಿರ್ತಾರೆ. ತಮ್ಮ ಅಥವಾ ತಂಗಿ ಮದುವೆ ಅಂದ್ರೆ ಮಹಿಳೆಯರಿಗೆ ಅದೇನೋ ಖುಷಿ. ಮದುವೆಗೆ ಆರೇಳು ತಿಂಗಳಿರುವಾಗ್ಲೇ ಎಲ್ಲ ತಯಾರಿ ನಡೆಯುತ್ತದೆ. ಕರೆಯೋಲೆ ಬರುವ ಮೊದಲೇ ಅವರು ತವರಿಗೆ ಹೊರಟು ನಿಂತಿರುತ್ತಾರೆ. ಎಲ್ಲ ಜವಾಬ್ದಾರಿ ಹೊತ್ತು, ಮದುವೆಯಲ್ಲಿ ಎಂಜಾಯ್ ಮಾಡ್ತಾರೆ. ಮದುವೆ ಸಮಯದಲ್ಲಿ ಎಲ್ಲರೂ ಒಟ್ಟಿಗೆ ಸೇರುವ ಕಾರಣ ಸಂತೋಷ ದುಪ್ಪಟ್ಟಾಗುತ್ತದೆ. ಮದುವೆ ಡೇಟ್ ಫಿಕ್ಸ್ ಆದ್ಮೇಲೆ ಮದುವೆಗೆ ಹೋಗಲು ತುದಿಗಾಲಿನಲ್ಲಿ ನಿಂತ ನಿಮಗೆ ಆಹ್ವಾನವೇ ಬಂದಿಲ್ಲ ಅಂದ್ರೆ ಹೇಗಾಗಬೇಡ. ಅದೂ ಸಹೋದರನ ಮದುವೆಗೆ ಆಹ್ವಾನ ಸಿಕ್ಕಿಲ್ಲ ಎಂದಾಗ.. ಬೇಸರವಂತೂ ಸಾಮಾನ್ಯ. ಅದ್ರ ಜೊತೆ ಕಾರಣ ಏನಿರಬಹುದು ಎಂಬ ಕುತೂಹಲ ಬೇರೆ ಇರುತ್ತೆ. ಈ ಮಹಿಳೆ ಜೀವನದಲ್ಲೂ ಇದೇ ಆಗಿದೆ. ಕುಟುಂಬದವರ ಜೊತೆ ಸೇರಿ ಮದುವೆ ಎಂಜಾಯ್ ಮಾಡ್ಬಹುದು ಎಂದುಕೊಂಡಿದ್ದವಳಿಗೆ ಮದುವೆ ಕಾರ್ಡ್ ಬರಲಿಲ್ಲ. ಕಾರಣ ಪತ್ತೆ ಮಾಡಿದಾಗ ಆಕೆ ಬೆಚ್ಚಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಕಾರಣವನ್ನು ಹೇಳಿಕೊಂಡಿದ್ದಾಳೆ. ಆದ್ರೆ ಆಕೆಗೆ ಬೇಸರವಾದ ವಿಷ್ಯ ಇನ್ನೊಬ್ಬರ ಖಾಸಗಿತನಕ್ಕೆ ಅಡ್ಡಿಯುಂಟು ಮಾಡಿದೆ. 

ಸಾಮಾಜಿಕ ಜಾಲತಾಣ (Social Network) ಫೇಸ್ಬುಕ್ ನಲ್ಲಿ ಮಹಿಳೆ ಈ ವಿಷ್ಯವನ್ನು ಹಂಚಿಕೊಂಡಿದ್ದಾಳೆ. ಸಹೋದರ ಸಂಬಂಧಿ ಮದುವೆಗೆ ಎಲ್ಲರಿಗೂ ಆಹ್ವಾನ ಬಂದಿತ್ತು. ಆದ್ರೆ ನನಗೆ ಸಿಕ್ಕಿರಲಿಲ್ಲ. ನನ್ನ ಹಾಗೂ ಸಹೋದರನ ಪತ್ನಿ ಮಧ್ಯೆ ನಡೆದ ಸಣ್ಣ ಗಲಾಟೆ ಇದಕ್ಕೆ ಕಾರಣ. ಮಾತಿನ ಮಧ್ಯೆ, ನಿನ್ನ ಬಗ್ಗೆ ನನಗೆಲ್ಲ ಗೊತ್ತು. ಮನೆಯವರ ಮುಂದೆ ಹೇಳ್ತೇನೆ ಅಂತಾ ನಾನು ಹೇಳಿದ್ದೆ. ಇದೇ ಕಾರಣಕ್ಕೆ ನನಗೆ ಮದುವೆಗೆ ಆಹ್ವಾನ ಸಿಕಿಲ್ಲ ಎಂದಿದ್ದಾಳೆ ಮಹಿಳೆ.

ಈ ರಾಜ್ಯದಲ್ಲಿ ಇನ್ಮುಂದೆ ಲಿವ್ ಇನ್ ಸಂಬಂಧ ನೋಂದಣಿ ಕಡ್ಡಾಯ, ಇಲ್ಲದಿದ್ರೆ ಜೈಲು ಗ್ಯಾರಂಟಿ!

ಆಕೆ ಸಹೋದರನ ಪತ್ನಿ ಚಂದಾದಾರಿಕೆ ಸೈಟ್ ಓನ್ಲಿ ಫ್ಯಾನ್ಸ್‌ (Only Fans) ನಲ್ಲಿ ಖಾತೆಯನ್ನು ಹೊಂದಿದ್ದಳು. ಅಲ್ಲಿ ಕೆಲ ಅಶ್ಲೀಲ ಫೋಟೋ (Photo) ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಳು. ಹೊಸ ಮನೆ ಖರೀದಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿ ಇಂಥ ವಿಡಿಯೋಗಳನ್ನು ನಾನು ಹಾಕ್ತಿದ್ದೆ ಎಂದು ಸಹೋದರನ ಪತ್ನಿ ಹೇಳಿದ್ದಾಳೆ. ಕುಟುಂಬಸ್ಥರಿಗೆ ಈ ವಿಷ್ಯ ಗೊತ್ತಿಲ್ಲ ಎಂದುಕೊಂಡಿದ್ದಳು ಆಕೆ. ಆದ್ರೆ ಅತ್ತಿಗೆ ವಿಡಿಯೋ ನೋಡಿದ್ದಾಳೆ ಎಂಬುದು ಈಕೆಗೆ ಗೊತ್ತಿರಲಿಲ್ಲ. ಇದೇ ವಿಷ್ಯಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತಂತೆ.

ಹೀಗೂ ಆಗುತ್ತಾ? ಮೊದಲ ಭೇಟಿಗೆ 2 ವರ್ಷ ಮೊದಲೇ ಪತ್ನಿ ತೆಗೆದ ಸೆಲ್ಫಿಯಲ್ಲಿ ಸೆರೆಯಾಗಿದ್ದ ಪತಿ

ಫೇಸ್ಬುಕ್ ನಲ್ಲಿ ಈ ವಿಷ್ಯ ಪೋಸ್ಟ್ ಮಾಡಿದ ಮಹಿಳೆ, ನಾನು ಆಕೆ ಖಾತೆಯನ್ನು ಸರಿಯಾಗಿ ನೋಡಿರಲಿಲ್ಲ. ಮತ್ತೆ ಓನ್ಲಿ ಫ್ಯಾನ್ಸ್ ಖಾತೆಗೆ ಹೋಗಿ ಆಕೆ ಖಾತೆ ಚೆಕ್ ಮಾಡಿದ್ದೇನೆ. ಈ ವೇಳೆ ಆಕೆ ಫಾಲೋವರ್ಸ್ ಪಟ್ಟಿಯಲ್ಲಿ ನನ್ನ ಸಹೋದರನ ಹೆಸರು ಕಾಣಿಸಿದೆ. ಸಹೋದರ ತನ್ನ ಪತ್ನಿ ಮಾತು ಕೇಳಿಯೇ ಆಕೆಯನ್ನು ಮದುವೆಗೆ ಕರೆದಿಲ್ಲ ಎಂಬ ಸಂಗತಿ ಕೊನೆಗೆ ಈಕೆಗೆ ಗೊತ್ತಾಗಿದೆ. ಸಹೋದರನ ಸ್ವಭಾವ ತಿಳಿದ ಮಹಿಳೆ, ನಾನು ಈಗ ಸಹೋದರನನ್ನೂ ದ್ವೇಷಿಸುತ್ತೇನೆ ಎಂದಿದ್ದಾಳೆ.

ಆಕೆ ಪೋಸ್ಟ್ ವೈರಲ್ ಆಗಿದೆ. ಸಾವಿರಾರು ಮಂದಿ ಈ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಇದು ತಪ್ಪು ಎಂದ್ರೆ ಮತ್ತೆ ಕೆಲವರು ಮಹಿಳೆ ಮೇಲೆ ಕರುಣೆ ತೋರಿಸಿದ್ದಾರೆ. ತನ್ನ ಖಾಸಗಿ ವಿಷ್ಯವನ್ನು ಬಹಿರಂಗಪಡಿಸಲಾಗಿದೆ ಎಂದು ಸಹೋದರನ ಪತ್ನಿ ಅಭಿಪ್ರಾಯಪಟ್ಟಿದ್ದಾಳೆ. ಹೀಗೆ ಮಾಡುವ ಹಕ್ಕು ಯಾರಿಗೂ ಇಲ್ಲ ಅನ್ನೋದು ಆಕೆ ಅಭಿಪ್ರಾಯ. 

Follow Us:
Download App:
  • android
  • ios