Asianet Suvarna News Asianet Suvarna News

ಈ ರಾಜ್ಯದಲ್ಲಿ ಇನ್ಮುಂದೆ ಲಿವ್ ಇನ್ ಸಂಬಂಧ ನೋಂದಣಿ ಕಡ್ಡಾಯ, ಇಲ್ಲದಿದ್ರೆ ಜೈಲು ಗ್ಯಾರಂಟಿ!

ಉತ್ತರಾಖಂಡದಲ್ಲಿಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಿವ್-ಇನ್ ಸಂಬಂಧ ಕಷ್ಟವಾಗಲಿದೆ. ಲಿವ್‌ ಇನ್‌ನಲ್ಲಿರುವ ಜೋಡಿ ಅಥವಾ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿರಲು ಪ್ಲಾನ್ ಮಾಡುತ್ತಿರುವವರು, ಜಿಲ್ಲಾಧಿಕಾರಿಗಳಲ್ಲಿ ತಮ್ಮ ಸಂಬಂಧವನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ರೆ ಜೈಲು ಗ್ಯಾರಂಟಿ.

Uttarakhand UCC live in rules, Parental consent must, provisions also include jail, fine Vin
Author
First Published Feb 7, 2024, 10:46 AM IST

ಉತ್ತರಾಖಂಡ ಲಿವ್‌-ಇನ್ ರಿಲೇಶನ್‌ ಶಿಪ್‌ ಬಗ್ಗೆ ಕಠಿಣ ನಿಯಮವನ್ನು ಜಾರಿಗೆ ತಂದಿದೆ. ಈ ರಾಜ್ಯದಲ್ಲಿ ಇನ್ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಲಿವ್-ಇನ್ ಸಂಬಂಧದಲ್ಲಿ ಇರಬೇಕಾದರೆ ಜಿಲ್ಲಾಧಿಕಾರಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ನಿಯಮಗಳನ್ನು ಪಾಲಿಸಲು ವಿಫಲರಾದವರಿಗೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಮತ್ತು ರೂ 25,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಯುಸಿಸಿಯ ಮಸೂದೆ, ಎಲ್ಲಾ ನಾಗರಿಕರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಏಕರೂಪದ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಉತ್ತರಾಧಿಕಾರ ಕಾನೂನುಗಳನ್ನು ಪ್ರಸ್ತಾಪಿಸುತ್ತದೆ. ಉತ್ತರಾಖಂಡ ವಿಧಾನಸಭೆಯಲ್ಲಿ ಜೈ ಶ್ರೀ ರಾಮ್ ಮತ್ತು ವಂದೇ ಮಾತರಂ ಘೋಷಣೆಗಳ ನಡುವೆ ಹೊಸ ನಿಯಮವನ್ನು ಮಂಡಿಸಲಾಯಿತು. ಪ್ರಸ್ತಾವಿತ ಕಾನೂನಿನ ಪ್ರಕಾರ, 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧದಲ್ಲಿರಲು ಪೋಷಕರ ಒಪ್ಪಿಗೆ ಅಗತ್ಯವಿದೆ. ಅವರು ಉತ್ತರಾಖಂಡದ ನಿವಾಸಿಗಳು ಅಥವಾ ಇಲ್ಲವೇ ಎಂಬುದನ್ನು ತಿಳಿಸುವ ಹೇಳಿಕೆಯನ್ನು ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು.

ಭಾರತದಂಥ ಸುಸಂಸ್ಕೃತ ದೇಶದಲ್ಲೂ Live In Relationships ಶುರುವಾಗಿದ್ದು ಹೇಗೆ?

ಲಿವ್-ಇನ್ ಸಂಬಂಧಗಳಿಗೆ ನೋಂದಾಯಿಸುವುದು ಹೇಗೆ?
ಲಿವ್-ಇನ್ ಸಂಬಂಧದಲ್ಲಿ ಇರಲು ಬಯಸುವ ವ್ಯಕ್ತಿಗಳು ತಮ್ಮ ಮಾಹಿತಿಯನ್ನು ಹತ್ತಿರದ ರಿಜಿಸ್ಟ್ರಾರ್‌ಗೆ ಸಲ್ಲಿಸಬೇಕು. ಅಲ್ಲಿನ ಅಧಿಕಾರಿಗಳು ಮಾಹಿತಿಯನ್ನು ಪರಿಶೀಲಿಸುತ್ತಾರೆ. ಆ ಬಗ್ಗೆ ವಿಚಾರಣೆಯನ್ನು ನಡೆಸುತ್ತಾರೆ. ವಿಚಾರಣೆಯ ಸಮಯದಲ್ಲಿ, ರಿಜಿಸ್ಟ್ರಾರ್ ಪರಿಶೀಲನೆಗಾಗಿ ಪೋಷಕರನ್ನು ಕರೆಸಬಹುದು.ಪರಿಶೀಲನೆಯ ನಂತರ, ರಿಜಿಸ್ಟ್ರಾರ್, ಹೇಳಿಕೆಯನ್ನು ಸಲ್ಲಿಸಿದ 30 ದಿನಗಳಲ್ಲಿ, ನೋಂದಣಿ ಪ್ರಮಾಣಪತ್ರವನ್ನು ನೀಡಬಹುದು. ಕೆಲವೊಮ್ಮೆ ಮಾಹಿತಿಗಳು ತಪ್ಪಿದ್ದಲ್ಲಿ ಇದನ್ನು ನಿರಾಕರಿಸಬಹುದು. ನಿರಾಕರಣೆಯ ಸಂದರ್ಭದಲ್ಲಿ, ಅಧಿಕಾರಿಗಳು ಪಾಲುದಾರರಿಗೆ ಲಿಖಿತವಾಗಿ ಕಾರಣಗಳನ್ನು ತಿಳಿಸುತ್ತಾರೆ

ಲೈವ್-ಇನ್ ಪಾಲುದಾರರ ಹೇಳಿಕೆಗಳನ್ನು ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ರವಾನಿಸಲಾಗುತ್ತದೆ. ಹೇಳಿಕೆಯಲ್ಲಿ ನೀಡಿರುವ ವಿವರಗಳು ತಪ್ಪಾಗಿದ್ದರೆ ಅಧಿಕಾರಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತಾರೆ. ಉತ್ತರಾಖಂಡದ ಯುಸಿಸಿ ಪ್ರಕಾರ, ಲಿವ್-ಇನ್ ಸಂಬಂಧದಲ್ಲಿ ತೊರೆದ ಮಹಿಳೆಯು ನ್ಯಾಯಾಲಯವನ್ನು ಸಂಪರ್ಕಿಸಬಹುದು ಮತ್ತು ಜೀವನಾಂಶವನ್ನು ಪಡೆಯಲು ಅರ್ಹರಾಗಿರುತ್ತಾರೆ. ಲಿವ್-ಇನ್ ಸಂಬಂಧದಲ್ಲಿರುವ ಮಗುವನ್ನು ಯುಸಿಸಿ ನಿಬಂಧನೆಗಳ ಅಡಿಯಲ್ಲಿ ದಂಪತಿಗಳ ಕಾನೂನುಬದ್ಧ ಮಗು ಎಂದು ಘೋಷಿಸಲಾಗುತ್ತದೆ.

ಮದ್ವೆ ಗಿದ್ವೆ ಬೇಡ, ಲಿವ್‌ ಇನ್‌ ಸಂಬಂಧವೇ ಬೆಸ್ಟ್‌ ಅನ್ನೋ ರಾಶಿ ಪೈಕಿ ನೀವೂ ಇದೀರಾ?

ಲಿವ್‌-ಇನ್ ಸಂಬಂಧ ಯಾವಾಗ ನೋಂದಾಯಿಸಲಾಗುವುದಿಲ್ಲ?
ಸಾರ್ವಜನಿಕ ನೈತಿಕತೆಗೆ ವಿರುದ್ಧವಾಗಿ ಇಬ್ಬರು ವ್ಯಕ್ತಿಗಳು ಸಂಬಂಧವನ್ನು ಇಟ್ಟುಕೊಳ್ಳಲು ಬಯಸಿದಾಗ ಸಂಬಂಧವನ್ನು ನೋಂದಾಯಿಸಲಾಗುವುದಿಲ್ಲ. ಜೋಡಿಯಲ್ಲಿ ಒಬ್ಬರು ಮೊದಲೇ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ ಸಂಬಂಧ ನೋಂದಣಿ ಮಾಡುವುದು ಅಸಾಧ್ಯ. ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದರೆ, ಅಥವಾ ಒಬ್ಬರ ಒಪ್ಪಿಗೆಯನ್ನು 'ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ' ಶಿಕ್ಷಾರ್ಹ ಅಪರಾಧಗಳಾಗುತ್ತವೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಸರ್ಕಾರ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ಯುಸಿಸಿ ಮಸೂದೆಯನ್ನು ಮಂಡಿಸಿತು. 2022ರಲ್ಲಿ ಯುಸಿಸಿಗಾಗಿ ಕರಡು ಸಿದ್ಧಪಡಿಸಲು ರಾಜ್ಯ ಸರ್ಕಾರವು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಸಮಿತಿಯನ್ನು ರಚಿಸಿತ್ತು. UCC ಉತ್ತರಾಖಂಡ್ 2024 ಮಸೂದೆಯು ಬಹುಪತ್ನಿತ್ವ ಮತ್ತು ಬಾಲ್ಯವಿವಾಹದ ಸಂಪೂರ್ಣ ನಿಷೇಧದಂತಹ ಶಿಫಾರಸುಗಳನ್ನು ಒಳಗೊಂಡಿದೆ.

Follow Us:
Download App:
  • android
  • ios