Asianet Suvarna News Asianet Suvarna News

ಅಬ್ಬಬ್ಬಾ..88ನೇ ಬಾರಿ ಮದ್ವೆಯಾಗ್ತಿರೋ ವ್ಯಕ್ತಿ, ವಧು ಮತ್ಯಾರೂ ಅಲ್ಲ ಮಾಜಿ ಪತ್ನಿ!

ಮದ್ವೆ ಅನ್ನೋದು ಒಂದು ಪವಿತ್ರವಾದ ಸಂಬಂಧ..ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಸುಂದರವಾದ ಸಂಬಂಧ ಅರ್ಥ ಕಳೆದುಕೊಳ್ಳುತ್ತಿದೆ. ಸಣ್ಣ ಪುಟ್ಟ ವಿಚಾರಕ್ಕೆ ದಂಪತಿ ಡಿವೋರ್ಸ್ ತೆಗೆದುಕೊಂಡು ಮರು ಮದ್ವೆಯಾಗೋದು ಸಾಮಾನ್ಯವಾಗಿದೆ. ಈ ಮಧ್ಯೆ ಇಂಡೋನೇಷ್ಯಾದಲ್ಲೊಬ್ಬ ವ್ಯಕ್ತಿ ಈಗಾಗ್ಲೇ 87 ಬಾರಿ ಮದ್ವೆಯಾಗಿದ್ದು,  88ನೇ ಬಾರಿ ತನ್ನ ಮಾಜಿ ಪತ್ನಿಯನ್ನೇ ಮದುವೆಯಾಗ್ತಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

This Man Marrying For 88th Time, Bride Is Ex Wife Vin
Author
First Published Nov 3, 2022, 8:37 AM IST

ಇಂಡೋನೇಷ್ಯಾ: ಇಲ್ಲಿನ ಪಶ್ಚಿಮ ಜಾವಾದ ಮಜಲೆಂಗ್ಕಾದ 61 ವರ್ಷದ ವ್ಯಕ್ತಿಯೊಬ್ಬರು 88ನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಕಾನ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬುರು ಜೀವನದುದ್ದಕ್ಕೂ 87 ಬಾರಿ ಮದುವೆಯಾದ ನಂತರ ಕೊನೆಗೆ ತಮ್ಮ ಮಾಜಿ ಪತ್ನಿಯನ್ನೇ ಮರು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಅನೇಕ ಬಾರಿ ಮದುವೆಯಾಗಿದ್ದಕ್ಕಾಗಿ ಈ ವ್ಯಕ್ತಿಗೆ 'ಪ್ಲೇಬಾಯ್ ಕಿಂಗ್' ಎಂದು ಅಡ್ಡಹೆಸರು ನೀಡಲಾಗಿದೆ. 61 ವರ್ಷದ ವ್ಯಕ್ತಿ ರೈತನಾಗಿದ್ದು, ತನ್ನ 88 ಮದುವೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ಬಾರಿ ಮದುವೆಯಾದ ನಂತರ ನನ್ನ ಮಾಜಿ ಪತ್ನಿಯೇ ಅತಿ ಉತ್ತಮಳೆಂಬ ತೀರ್ಮಾನಕ್ಕೆ ಬಂದೆ ಎಂದಿದ್ದಾರೆ.

ಮದ್ವೆಯಾಗಿ ಒಂದು ತಿಂಗಳು ಜೊತೆಗಿದ್ದರೂ ಮಾಜಿ ಪತ್ನಿ ತುಂಬಾ ಪ್ರೀತಿಸ್ತಾಳೆ
ನಾವು ಬೇರ್ಪಟ್ಟು ಬಹಳ ದಿನಗಳಾದರೂ ನಮ್ಮ ನಡುವಿನ ಪ್ರೀತಿ (Love) ಇನ್ನೂ ಗಟ್ಟಿಯಾಗಿದೆ ಎಂದು ವ್ಯಕ್ತಿ ತಿಳಿಸಿದ್ದಾರೆ. ನಾವು ಮದುವೆ (Marriage)ಯಾಗಿ ಕೇವಲ ಒಂದು ತಿಂಗಳ ಕಾಲ ಜೊತೆಗಿದ್ದರೂ ನನ್ನ ಮಾಜಿ ಪತ್ನಿ (Ex-wife) ನನ್ನನ್ನು ತುಂಬಾ ಪ್ರೀತಿಸುತ್ತಾಳೆ. ಹೀಗಾಗಿ ಆಕೆಯನ್ನು ಮರು ಮದುವೆಯಾಗುವ ನಿರ್ಧಾರಕ್ಕೆ ಬಂದೆ ಎಂದು ಮಜಲೆಂಗ್ಕಾದ 61 ವರ್ಷದ ವ್ಯಕ್ತಿ ಕಾನ್ ಹೇಳಿದ್ದಾರೆ.

ಒಂದು ಡೈವೋರ್ಸ್‌ಗೆ 66 ವರ್ಷದ ಪತಿಯಿಂದ 100 ಕೋಟಿ ಬೇಡಿಕೆ ಇಟ್ಟ ಪತ್ನಿ!

ಕಾನ್ ಅವರು ಕೇವಲ 14 ವರ್ಷದವರಾಗಿದ್ದಾಗ ಮೊದಲ ಬಾರಿಗೆ ವಿವಾಹವಾದರು. ಅವರ ಮೊದಲ ಹೆಂಡತಿ ಅವರಿಗಿಂತ ಎರಡು ವರ್ಷ ಹಿರಿಯರಾಗಿದ್ದರು. ನನ್ನ ಕಳಪೆ ವರ್ತನೆಯಿಂದಾಗಿ, ಮದುವೆಯಾದ ಎರಡು ವರ್ಷಗಳ ನಂತರ ನನ್ನ ಹೆಂಡತಿ ವಿಚ್ಛೇದನ (Divorce)ವನ್ನು ಕೇಳಿದಳು ಎಂದು ಕಾನ್ ತಿಳಿಸಿದ್ದಾರೆ. ಘಟನೆಯ ಕಾರಣ, ಕಾನ್ ಅವರು ಕೋಪಗೊಂಡಿದ್ದಾರೆ ಎಂದು ಒಪ್ಪಿಕೊಂಡರು, ಆದ್ದರಿಂದ ಅವರು ಅನೇಕ ಮಹಿಳೆಯರನ್ನು ಪ್ರೀತಿಸುವಂತೆ ಮಾಡಲು 'ಆಧ್ಯಾತ್ಮಿಕ' ಜ್ಞಾನವನ್ನು ಹುಡುಕಿದರು. ಆದರೆ ಮಹಿಳೆಯರಿಗೆ ಒಳ್ಳೆಯದಲ್ಲದ ಕೆಲಸಗಳನ್ನು ಮಾಡಲು ನಾನು ಬಯಸುವುದಿಲ್ಲ, ಅವರ ಭಾವನೆ (Feelings)ಗಳೊಂದಿಗೆ ಆಟವಾಡಲು ನಾನು ನಿರಾಕರಿಸುತ್ತೇನೆ ಎಂದು ಅವರು ಹೇಳಿದರು. ಅನೈತಿಕತೆ ಮಾಡುವ ಬದಲು ನಾನು ಮದುವೆಯಾಗುವುದು ಒಳ್ಳೆಯದು ಎಂದು ಅವರು ಹೇಳಿದರು.

ಕಾನ್ ಅವರ 87 ಮದುವೆಗಳಲ್ಲಿ ಎಷ್ಟು ಮಕ್ಕಳಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಸದ್ಯ ಕಾನ್ ಮತ್ತೆ ಮರು ಮದುವೆಯಾಗಲು ನಿರ್ಧರಿಸಿ ತನ್ನ ಮಾಜಿ ಪತ್ನಿಯನ್ನೇ ಮದುವೆಯಾಗುತ್ತಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿರೋದಂತೂ ನಿಜ. 

19ರ ಹದಿಹರೆಯದ ಹುಡುಗ ಮತ್ತು 56 ವರ್ಷದ ಮಹಿಳೆಯ ಪ್ರೀತಿ
ಪ್ರೀತಿಗೆ ವಯಸ್ಸಿನ ಅಂತರ ಅಡ್ಡಿಯಾಗುವುದಿಲ್ಲ. ಏಜ್ ಗ್ಯಾಪ್ ಇದ್ದರೂ ಪ್ರೀತಿ ಹುಟ್ಟುವುದು, ಮದ್ವೆಯಾಗುವುದು, ಸಹಬಾಳ್ವೆಯಿಂದ ಜೀವನ ನಡೆಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅದೆಲ್ಲಾ ಒಂದೆರಡು ವರ್ಷವಾದರೆ ಸರಿ. ಆದರೆ ಅದಕ್ಕಿಂತ ಹೆಚ್ಚು ವಯಸ್ಸಿನ ಅಂತರವಿದ್ದರೆ ದಾಂಪತ್ಯ ಸರಿಯಾಗಿ ನಡೆಯಬಹುದಾ ಅನ್ನೋ ಬಗ್ಗೆ ಹಲವರಿಗೆ ಗೊಂದಲ ಎದುರಾಗುತ್ತೆ. ಆದ್ರೆ ಇಲ್ಲೊಂದು ಜೋಡಿ ಇಬ್ಬರ ನಡುವೆ ಬರೋಬ್ಬರಿ 37 ವರ್ಷದ ಅಂತರವಿದ್ದರೂ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ಮದುವೆ ಎಂದರೇನು ? ಎಕ್ಸಾಂನಲ್ಲಿ ಹುಡುಗಿ ಕೊಟ್ಟ ಉತ್ತರ ಎಷ್ಟು ಮಜವಾಗಿದೆ ನೋಡಿ !

ಥೈಲ್ಯಾಂಡ್​ನ ಈ 19ರ ಹದಿಹರೆಯದ ಹುಡುಗ (Boy) ಮತ್ತು 56 ವರ್ಷದ ಈ ಮಹಿಳೆ (Woman) ನಿಶ್ಚಿತಾರ್ಥ (Enagemnet) ಮಾಡಿಕೊಂಡು ಮದುವೆಯ ನಿರ್ಧಾರಕ್ಕೆ ಬರುತ್ತಿದ್ದಂತೆ ಎಲ್ಲೆಡೆ ಈ ವಿಚಾರ ವೈರಲ್ ಆಗಿದೆ. ಪ್ರೀತಿ ಹುಟ್ಟೋಕೆ ಯಾವ ಕಾರಣವೂ ಬೇಕಿಲ್ಲ, ವಯಸ್ಸಿನ ಅಂತರವೂ ಪ್ರೀತಿಗೆ (Love) ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಉದಾಹರಣೆ ಎಂಬಂತೆ ಇವರಿಬ್ಬರೂ ಈಗ ಸುದ್ದಿಯಲ್ಲಿದ್ದಾರೆ. ಹದಿಹರೆಯದ ಹುಡುಗ ಮತ್ತು ಈ ವಯಸ್ಸಾದ ಮಹಿಳೆಯ ಮಧ್ಯೆ ಇರುವ ಪ್ರೀತಿಗೆ ಎಲ್ಲರೂ ನಿಬ್ಬೆರಗಾಗಿದ್ದಾರೆ. ಆಕೆ ಪರಿಶ್ರಮವುಳ್ಳಾಕೆ, ಪ್ರಾಮಾಣಿಕಳು ಮತ್ತು ಆಕೆಗೆ ಮೂರು ಮಕ್ಕಳಿದ್ದಾರೆ. ಆದರೂ ಅವಳೆಂದರೆ ನನಗಿಷ್ಟ. ಆಕೆಯ ಮನೆಯನ್ನು ಸುವ್ಯವಸ್ಥಿತಗೊಳಿಸಬೇಕು, ಆಕೆ ಆರಾಮದಿಂದ ಬದುಕುವಂತಾಗಬೇಕು. ಅದಕ್ಕಾಗಿ ಏನನ್ನಾದರೂ ಮಾಡಲು ಸಿದ್ಧ' ಎಂದು 19 ವರ್ಷದ ಯುವಕ ಹೇಳಿದ್ದಾನೆ. 

Follow Us:
Download App:
  • android
  • ios