- Home
- Entertainment
- Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್: ಯಾರೀ ಆನಂದ್? ಮಾಡ್ತಿರೋದು ಏನು?
Vijay Devarakonda ಮದುವೆ ಬಳಿಕ ತಮ್ಮನಿಗೆ ಭರ್ಜರಿ ಡಿಮಾಂಡ್: ಯಾರೀ ಆನಂದ್? ಮಾಡ್ತಿರೋದು ಏನು?
ವಿಜಯ್ ದೇವರಕೊಂಡ ಅವರ ಸಹೋದರ ಆನಂದ್ ದೇವರಕೊಂಡ ಕೂಡ ಒಬ್ಬ ನಟ. ಅಮೆರಿಕದಲ್ಲಿನ ಉನ್ನತ ಉದ್ಯೋಗವನ್ನು ತ್ಯಜಿಸಿ ನಟನೆಗೆ ಬಂದರೂ, ಅಣ್ಣನಷ್ಟು ಖ್ಯಾತಿ ಗಳಿಸಲಿಲ್ಲ. ಇತ್ತೀಚೆಗೆ ಅತ್ತಿಗೆ ರಶ್ಮಿಕಾ ಮಂದಣ್ಣ ಕುರಿತ ಪೋಸ್ಟ್‌ನಿಂದಾಗಿ ಇವರು ಮತ್ತೆ ಸುದ್ದಿಯಲ್ಲಿದ್ದಾರೆ.

ವಿಜಯ ದೇವರಕೊಂಡ ಸಹೋದರ
ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಮದುವೆಯ ಬಳಿಕ ಇದೀಗ ಮುನ್ನೆಲೆಗೆ ಬಂದಿದ್ದು, ವಿಜಯ್ ದೇವರಕೊಂಡ ಅವರ ತಮ್ಮ ಆನಂದ್ ದೇವರಕೊಂಡ. ಕೆಲವೊಮ್ಮೆ ಜೀವದಲ್ಲಿ ಹಾಗೆಯೇ ಆಗುತ್ತದೆ. ಒಂದೇ ಮನೆಯಲ್ಲಿ ಹುಟ್ಟಿ, ಒಂದೇ ಕ್ಷೇತ್ರದಲ್ಲಿ ದುಡಿದರೂ, ಒಂದೇ ರೀತಿ ಶ್ರಮ ವಹಿಸಿದರೂ ಒಬ್ಬರು ದಿಢೀರ್ ಎಂದು ಮೇಲೇರಿ ಹೋದರೆ, ಮತ್ತೊಬ್ಬರು ಕಾಣಿಸಿಕೊಳ್ಳುವುದೇ ಇಲ್ಲ, ಅವರಿಗೆ ಅವಕಾಶಗಳೂ ಸಿಗುವುದಿಲ್ಲ, ಅವರು ಯಾರೆಂದು ಹೆಚ್ಚಿನವರಿಗೆ ತಿಳಿಯುವುದೇ ಇಲ್ಲ. ಅದೇ ರೀತಿ ದೇವರಕೊಂಡ ಫ್ಯಾಮಿಲಿಯ ಸ್ಟೋರಿ ಕೂಡ.
ಇವರೂ ನಟನೇ
ವಿಜಯ ದೇವರಕೊಂಡ ಅವರ ಖ್ಯಾತಿ ಎಷ್ಟು ಎಂದು ಎಲ್ಲರಿಗೂ ತಿಳಿದದ್ದೇ. ಆದರೆ ಅವರ ಸಹೋದರ ಆನಂದ್ ದೇವರಕೊಂಡ ಅವರು ಕೂಡ ನಟನೇ. ಆದರೆ ಅಣ್ಣನಷ್ಟು ಫೇಮಸ್ ಅಲ್ಲ. ಅವರು ಮುನ್ನೆಲೆಗೆ ಬಂದಿದ್ದು, ಮದುವೆಯ ದಿನ ಅತ್ತಿಗೆ ರಶ್ಮಿಕಾ ಮಂದಣ್ಣ ಬಗ್ಗೆ ಪೋಸ್ಟ್ ಹಾಕಿದ್ದಾರೆ.
ಅತ್ತಿಗೆ ಬಗ್ಗೆ ಮಾತು
ಇಂದು ನನ್ನ ಸಹೋದರ ಮದುವೆಯಾಗಿದ್ದಾನೆ. ನನ್ನ ಅತ್ತಿಗೆ ಅತ್ಯಂತ ಸಹಾನುಭೂತಿ ಮತ್ತು ಒಳ್ಳೆಯ ಗುಣಗಳನ್ನು ಹೊಂದಿದವರು. ಇವರಿಬ್ಬರೂ ಜೀವನಪೂರ್ತಿ ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದರು. ಆಗಿಂದ ಇವರ ಬಗ್ಗೆ ವಿಜಯ್ ಫ್ಯಾನ್ಸ್ ಹುಡುಕಾಟ ಮಾಡುತ್ತಿದ್ದಾರೆ.
ಚಿತ್ರಗಳಲ್ಲಿ ನಟನೆ
ಅಂದಹಾಗೆ, ಆನಂದ್ ಅವರಿಗೆ ಈಗ 30 ವರ್ಷ ವಯಸ್ಸು. ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಹುಟ್ಟಿದವರು. ಇವರು ಬೇಬಿ (2023), ತಕ್ಷಕುಡು ಮತ್ತು ದೊರಸಾನಿ (2019) ಚಿತ್ರಗಳಿಂದ ಫೇಮಸ್ ಆದವರು. ಆದರೆ ಅಣ್ಣನಷ್ಟು ಖ್ಯಾತಿ ಇವರಿಗೆ ಬರಲಿಲ್ಲ.
ಅಮೆರಿಕ ಬಿಟ್ಟು ಭಾರತಕ್ಕೆ
ಈ ಹಿಂದೆ ಅಮೆರಿಕದ ಡೆಲಾಯ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ನಟನೆಯನ್ನು ಮುಂದುವರಿಸಲು ಭಾರತಕ್ಕೆ ಮರಳಿದರು. ಇವರ ಹಿನ್ನೆಲೆ ಹೇಳುವುದಾದರೆ, ಪುಟ್ಟಪರ್ತಿಯ ಶ್ರೀ ಸತ್ಯ ಸಾಯಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಇಲಿನಾಯ್ಸ್ ವಿಶ್ವವಿದ್ಯಾಲಯದಿಂದ ತಂತ್ರಜ್ಞಾನ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು.
2019ರಲ್ಲಿ ಚಿತ್ರರಂಗಕ್ಕೆ ಎಂಟ್ರಿ
ಇವರು ಚಿತ್ರ ಆರಂಭಿಸಿದ್ದು 2019ರಲ್ಲಿ ದೋರಸಾನಿ ಚಿತ್ರದ ಮೂಲಕ. OTT ಬಿಡುಗಡೆಯಾದ ಮಿಡಲ್ ಕ್ಲಾಸ್ ಮೆಲೋಡೀಸ್ (2020) ನೊಂದಿಗೆ ಗಮನಾರ್ಹ ಮನ್ನಣೆ ಗಳಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

