Asianet Suvarna News Asianet Suvarna News

ಮದುವೆ ಎಂದರೇನು ? ಎಕ್ಸಾಂನಲ್ಲಿ ಹುಡುಗಿ ಕೊಟ್ಟ ಉತ್ತರ ಎಷ್ಟು ಮಜವಾಗಿದೆ ನೋಡಿ !

ಮದ್ವೆ ಅಂದ್ರೇನು ? ಹೀಗೊಂದು ಪ್ರಶ್ನೆ ಕೇಳಿದರೆ ನೀವು ಏನೆಂದು ಉತ್ತರಿಸಬಹುದು. ಗಂಡು-ಹೆಣ್ಣಿನ ನಡುವಿನ ಪವಿತ್ರ ಬಂಧನ. ಇಬ್ಬರೂ ಜೀವನದುದ್ದಕ್ಕೂ ಜೊತೆಯಾಗಿ ಸಾಗುವ ವಾಗ್ದಾನ ನೀಡುವ ಸಂಪ್ರದಾಯ ಎಂದೆಲ್ಲಾ ಹೇಳಬಹುದು. ಆದ್ರೆ ಇಲ್ಲೊಬ್ಬ ಹುಡುಗಿ ಮದುವೆ ಬಗ್ಗೆ ಎಕ್ಸಾಂನಲ್ಲಿ ಕೇಳಿರುವ ಪ್ರಶ್ನೆಗೆ ಎಷ್ಟು ವಿಚಿತ್ರವಾಗಿ ಉತ್ತರಿಸಿದ್ದಾಳೆಂದರೆ ಈಕೆಗೆ ಪ್ರಾಧ್ಯಾಪಕರು 10ರಲ್ಲಿ 1 ಅಂಕವನ್ನು ನೀಡಿದ್ದಾರೆ.

Student Wrote The Definition Of Marriage, After Reading The Teachers Senses Vin
Author
First Published Oct 14, 2022, 11:07 AM IST

ಮದುವೆಯೆಂಬುದು ಗಂಡು-ಹೆಣ್ಣಿನ ನಡುವಿನ ಪವಿತ್ರವಾದ ಬಂಧನ. ಶುಭ ಮಹೂರ್ತದಲ್ಲಿ ಇಬ್ಬರು ಶಾಸ್ತ್ರಬದ್ಧವಾಗಿ ಜೀವನದುದ್ದಕ್ಕೂ ಜೊತೆಯಾಗಿ ಸಾಗುವ ವಚನವನ್ನು ನೀಡುತ್ತಾರೆ. ಈ ಶುಭಸಮಾರಂಭದಲ್ಲಿ ಗುರು-ಹಿರಿಯರು, ಸಂಬಂಧಿಕರು, ಸ್ನೇಹಿತರೆಲ್ಲಾ ಭಾಗಿಯಾಗಿರ್ತಾರೆ. ನಾವೆಲ್ಲರೂ ನೋಡಿದಂತೆ ಮದುವೆಯೆಂದರೆ ಇದು. ಹಾಗೆಂದು ನಿರ್ಇಷ್ಟವಾಗಿ ಮದುವೆ ಎಂದರೇನು ಎಂದು ಕೇಳಿದರೆ ಉತ್ತರಿಸುವುದು ಕಷ್ಟ. ಇಲ್ಲೊಬ್ಬ ವಿದ್ಯಾರ್ಥಿನಿಗೂ ಹಾಗೆಯೇ ಆಗಿದೆ. ಸಮಾಜ ಅಧ್ಯಯನ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ಈ ವಿದ್ಯಾರ್ಥಿನಿ ಉತ್ತರವನ್ನೇನೋ ಬರೆದಳು. ಆದರೆ ಶಿಕ್ಷಕರು ಈಕೆಗೆ ಸೊನ್ನೆ ಅಂಕ ಕೊಟ್ಟಿದ್ದಾರೆ.

ಸಮಾಜ ಅಧ್ಯಯನ ಪರೀಕ್ಷಯಲ್ಲಿ ಮದುವೆ ಎಂದರೇನು ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಹತ್ತು ಅಂಕಗಳನ್ನು ಸಹ ನಿಗದಿಪಡಿಸಲಾಗಿತ್ತು. ಕೇಳಿರುವ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರ ಬರೆಯಬೇಕು. ಎಲ್ಲ ವಿದ್ಯಾರ್ಥಿಗಳು ಅವರವರ ತಿಳಿವಳಿಕೆಗೆ ಅನುಸಾರ ಉತ್ತರ ಬರೆದರು. ತಕ್ಕಮಟ್ಟಿಗೆ ಉತ್ತರಗಳಿಗೆ ಅಂಕಗಳನ್ನೂ ಪಡೆದುಕೊಂಡರು. ಆದರೆ ಒಬ್ಬ ವಿದ್ಯಾರ್ಥಿನಿ ಮಾತ್ರ ಹತ್ತು ಅಂಕಕ್ಕೆ ಸೊನ್ನೆ ಗಳಿಸಿದಳು. ಆ ಉತ್ತರ ಪತ್ರಿಕೆ ಇದೀಗ ವೈರಲ್ ಆಗುತ್ತಿದೆ. ನೆಟ್ಟಿಗರೆಲ್ಲ ಬಿದ್ದುಬಿದ್ದು ನಗುತ್ತಿದ್ದಾರೆ. ಅಷ್ಟಕ್ಕೂ ಆ ಉತ್ತರಪತ್ರಿಕೆಯಲ್ಲೇನಿದೆ ತಿಳಿಯೋಣ. 

Inter Caste Marraige: ಅಂತರ್ಜಾತಿ ವಿವಾಹವಾಗ್ಬೇಕಾ? ಮೊದ್ಲು ಪಾಲಕರ ಮನವೊಲಿಸಿ

'ನೀನೀಗ ದೊಡ್ಡ ಹೆಣ್ಣುಮಗಳು, ನಿನ್ನನ್ನು ಪೋಷಿಸಲು ನಮಗೆ ಆಗದು, ಹಾಗಾಗಿ ನೀನೇ ನಿನ್ನ ಹುಡುಗನನ್ನು ಹುಡುಕಿಕೋ ಎಂದು ಹುಡುಗಿಯ ಅಪ್ಪಅಮ್ಮ ಹೇಳುತ್ತಾರೆ. ನೀನೀಗ ದೊಡ್ಡವನಾಗಿದ್ದೀಯಾ ಹೋಗು ಮದುವೆಯಾಗು ಎಂದು ತಮ್ಮ ಮಗನ ಮೇಲೆ ಕೂಗಾಡುತ್ತಿರುವ ತಂದೆತಾಯಿಗಳ ಬಳಿ ಆಕೆ ಹೋಗುತ್ತಾಳೆ. ಹುಡುಗ ಮತ್ತು ಹುಡುಗಿ ಪರಸ್ಪರ ಖುಷಿಯಿಂದ ಒಪ್ಪಿಕೊಂಡು ಒಟ್ಟಿಗೆ ಬಾಳಲು ತೀರ್ಮಾನಿಸುತ್ತಾರೆ. ಇದೇ ಮದುವೆ.' ಎಂದು ಹುಡುಗಿ ಪ್ರಶ್ನೆ ಪತ್ರಿಕೆಯಲ್ಲಿ ಉತ್ತರಿಸಿದ್ದಾನೆ.

ಇದು ಮದುವೆಯ ಬಗ್ಗೆ ವಿದ್ಯಾರ್ಥಿನಿ ವ್ಯಾಖ್ಯಾನಿಸಿದುದರ ಸಾರಾಂಶ. ಓದಿದಾಗ ನಗು ಬರುವುದು ಸಹಜ. ಆದರೆ ಮದುವೆಯಂತಹ ಸಂಕೀರ್ಣ ವಿಷಯವನ್ನು ಗ್ರಹಿಸುವುದು, ವಿವರಿಸುವುದು ನಿಜಕ್ಕೂ ಇಂದಿನ ಕಾಲಮಾನದಲ್ಲಿ ಸುಲಭವಲ್ಲ. ಅದರಲ್ಲೂ ವಿದ್ಯಾರ್ಥಿಗಳಿಗೆ ಈ ಬಗ್ಗೆ ಗೊತ್ತೇ ಇಲ್ಲ ಎಂಬುದು ಈ ಉತ್ತರದಿಂದ ತಿಳಿದುಬರುತ್ತದೆ. 

ಮದ್ವೆಗೆ ರೆಡಿಯಾಗಿದ್ದೀರಾ? ಐಡಿಯಲ್ ಪಾರ್ಟ್ನೆರ್ನಲ್ಲಿ ಏನೆಲ್ಲಾ ಗುಣಗಳಿರಬೇಕು?

ಈ ಉತ್ತರದಲ್ಲಿ ಪ್ರಕ್ಷುಬ್ಧತೆ ಇದೆ. ಆಕೆ ಹೀಗೆ ಉತ್ತರ ಬರೆದಿದ್ದೂ ತಪ್ಪಲ್ಲ. ಪಠ್ಯದಲ್ಲಿರುವ ಸಾಮಾನ್ಯ ಗ್ರಹಿಕೆಯ ಸ್ವಂತ ವ್ಯಾಖ್ಯಾನವನ್ನು ನಿರೀಕ್ಷಿಸಿದ್ದೂ ಶಿಕ್ಷಕರ ತಪ್ಪಲ್ಲ. ಆದರೆ ಓದಿ ನಕ್ಕಿದ್ದು ಮಾತ್ರ ತಪ್ಪು. ಇದು ಗಂಭೀರ ಮತ್ತು ಸೂಕ್ಷ್ಮ ವಿಷಯ ಅಲ್ಲವೇ? ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಯಾವ ತಿಳಿವಳಿಕೆಗಳನ್ನು ಹೇಗೆ ನೀಡಬೇಕು ಎನ್ನುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ. ಇಲ್ಲವಾದಲ್ಲಿ ಕಂಡದ್ದೆ ಸತ್ಯ, ಗ್ರಹಿಸಿದ್ದೇ ತಿಳಿವಳಿಕೆ. ವೈರಲ್ ಆಗಿರುವ ಪೋಸ್ಟ್‌ಗೆ ನೆಟ್ಟಿಗರು ಹಲವಾರು ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ಅನ್ನೋದು ಹೀಗೆ ಕೂಡಾ ನಡೆಯುತ್ತದೆ. ಹಾಗಾಗಿ ಇದನ್ನು ಸುಳ್ಳು ಎಂದು ಹೇಳುವಂತಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಮದುವೆಯ ಅತ್ಯಂತ ಸರಿಯಾದ ವ್ಯಾಖ್ಯಾನವಿದು ಇನ್ನೊಬ್ಬರು ಕಮೆಂಟಿಸಿದ್ದಾರೆ.

ಐಡಿಯಲ್ ಪಾರ್ಟ್‌ನರ್‌ನಲ್ಲಿ ಏನೆಲ್ಲಾ ಗುಣಗಳಿರಬೇಕು?
ನೀವು ಜೀವನದಲ್ಲಿ ಐಡಿಯಲ್ ಪಾರ್ಟ್ನರ್(Ideal partner) ಕಂಡುಕೊಂಡರೆ, ನಿಮ್ಮ ಜೀವನವು ತುಂಬಾನೆ ಸುಂದರವಾಗಿರುತ್ತೆ. ನಾವು ಯಾರನ್ನಾದರೂ ಮೊದಲ ಬಾರಿಗೆ ಭೇಟಿಯಾದಾಗ, ಅವರ ಬಹಳಷ್ಟು ಗುಣಗಳ ಬಗ್ಗೆ ನಮಗೆ ತಿಳಿಯೋದಿಲ್ಲ, ನಾವು ಯಾರೊಂದಿಗೆ ಡೇಟಿಂಗ್ ಮಾಡುತ್ತೇವೊ, ಅವರನ್ನು ತಿಳಿದುಕೊಳ್ಳಲು ಶುರುಮಾಡುತ್ತೇವೆ,ಅವರ ಕೆಲವು ಗುಣಲಕ್ಷಣಗಳನ್ನು ನಾವು ತಿಳಿದುಕೊಳ್ಳುತ್ತೇವೆ. 

ಇದೆಂಥಾ ಸಂಪ್ರದಾಯ … Virginity testಲ್ಲಿ ಫೇಲ್ ಆದ್ರೆ ವಧುವಿಗೆ ಅಗ್ನಿ ಪರೀಕ್ಷೆ!

ನಿಮ್ಮ ಐಡಿಯಲ್ ಪಾರ್ಟ್ನರ್ ಗೆ ಮೆಚ್ಯುರಿಟಿ ಜೀವನದಲ್ಲಿ ಬಹಳ ಮುಖ್ಯ. ಮೆಚ್ಯುರಿಟಿ ಎಂದರೆ ನಿಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ದೂರ ಮಾಡಿ, ನಿಮ್ಮ ಒಳ್ಳೆಯತನವನ್ನು ಗುರುತಿಸೋದು. ಪ್ರತಿಯೊಂದು ಸನ್ನಿವೇಶವನ್ನು ದೃಢವಾಗಿ ಎದುರಿಸುವುದರಲ್ಲಿ ನಂಬಿಕೆ ಇಡುತ್ತಾರೆ. ಅವರು ಈ ಗುಣವನ್ನು ತಮ್ಮಲ್ಲಿ ಬೆಳೆಸಿಕೊಂಡಂತೆ, ಅವರು ಪ್ರಬುದ್ಧರು ಎಂದು ಅರ್ಥ. ನಿಮ್ಮ ಸಂಗಾತಿಯ ಮುಕ್ತ ಮನಸ್ಸು ನಿಮ್ಮ ಸಂಬಂಧಕ್ಕೆ ಬಹಳ ಮುಖ್ಯ. ನೆನಪಿಡಿ, ಯಾವ ಮನುಷ್ಯನೂ ಪರ್ಫೆಕ್ಟ್ ಆಗಿರೋದಿಲ್ಲ, ಆದ್ದರಿಂದ ನಿಮ್ಮ ಜೀವನದಲ್ಲಿ ಪ್ರತಿಯೊಂದು ಸನ್ನಿವೇಶವನ್ನು ಸ್ವೀಕರಿಸುವ ಮತ್ತು ಅದಕ್ಕೆ ತಕ್ಕಂತೆ ಬದುಕುವ ವ್ಯಕ್ತಿ ಸಿಕ್ಕರೆ ಅದಕ್ಕಿಂತ ದೊಡ್ಡದು ಇನ್ನೇನಿದೆ. ಒಬ್ಬ ವ್ಯಕ್ತಿಯು ಮುಕ್ತ ಮನಸ್ಸಿನವನಾಗಿದ್ದಾಗ, ಅವನು ತನ್ನ ಭಾವನೆ, ಆಲೋಚನೆ, ಕನಸು ಮತ್ತು ಬಯಕೆಗಳನ್ನು ವ್ಯಕ್ತಪಡಿಸುತ್ತಾನೆ. ಇದರಿಂದ ಸಂಬಂಧ ಗಟ್ಟಿಯಾಗುತ್ತೆ.

Follow Us:
Download App:
  • android
  • ios