32 ವರ್ಷದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಪ್ರೀತಿಯ ಬಲೆಗೆ ಬಿದ್ದ 66 ವರ್ಷದ ಕೋಟ್ಯಧಿಪತಿ ತನ್ನ ಪತ್ನಿಯಿಂದ ವಿಚ್ಛೇದನ ಕೇಳಿದ್ದಾರೆ. ವಿಚ್ಛೇದನಕ್ಕಾಗಿ ಪತ್ನಿ ಬೇಡಿಕೆ ಇಟ್ಟ ಹಣ ಎಷ್ಟು ಗೊತ್ತಾ ಬರೋಬ್ಬರಿ 100 ಕೋಟಿ ರೂಪಾಯಿ!

ನವದೆಹಲಿ (ಅ.29): ಅಮೆರಿಕದ 66 ವರ್ಷದ ಕೋಟ್ಯಧಿಪತಿ ಹಾಗೂ 32 ವರ್ಷದ ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ನಡುವಿನ ಸಂಬಂಧವೀಗ ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಸುತ್ತಾಟ ನಡೆಸುತ್ತಿದ್ದ ಈ ಜೋಡಿ ತಾವೀಗ ಪರಸ್ಪರ ಪ್ರೀತಿ ಮಾಡುತ್ತಿದ್ದು, ಮದುವೆಯಾಗುವ ಇಚ್ಛೆಯಲ್ಲಿರುವುದಾಗು ಹೇಳಿದ್ದಾರೆ. ಇನ್ನು 66 ವರ್ಷದ ಕೋಟ್ಯಧಿಪತಿಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿವೆ. ವಿಚ್ಛೇದನದ ಬಳಿಕ ಹೊಸ ಗರ್ಲ್‌ಫ್ರೆಂಡ್‌ ಜೊತೆ ಶಿಫ್ಟ್‌ ಆಗುವ ಬಗ್ಗೆ ಯೋಚನೆ ಮಾಡಿದ್ದಾರೆ. ಈ ಕೋಟ್ಯಧಿಪತಿಯ ಹೆಸರು ಜಾನ್‌ ಪೌಲ್ಸನ್‌. ಅಮೆರಿಕ ಮೂಲದ ಜಾನ್‌ ಪೌಲ್ಸನ್‌ ಸಾಮಾನ್ಯ ಆಸಾಮಿಯಲ್ಲ. ಫೋರ್ಬ್ಸ್‌ ವರದಿಯ ಪ್ರಕಾರ 250 ಶತಕೋಟಿ ರೂಪಾಯಿ (2.6 ಬಿಲಿಯನ್‌ ಪೌಂಡ್‌) ಆದಾಯದ ಮಾಲೀಕರಾಗಿದ್ದಾರೆ. ಇನ್ನು ಪೇಜ್‌ ಸಿಕ್ಸ್‌ ಪತ್ರಿಕೆಯ ವರದಿಯ ಪ್ರಕಾರ, ಹೆಲ್ತ್‌ ಇನ್‌ಫ್ಲುಯೆನ್ಸರ್‌ 32 ವರ್ಷದ ಅಲೀನಾ ಡಿ ಅಲ್ಮೇಡಾ ಜೊತೆ ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇನ್ನೊಂದೆಡೆ, ಅವರ ವಿಚ್ಛೇದನ ಪ್ರಕ್ರಿಯೆಗಳು ನಡೆಯುತ್ತಿರುವ 32 ವರ್ಷದ ಹುಡುಗಿಗಾಗಿ ಜಾನ್‌ ಪೌಲ್ಸನ್‌ 20 ವರ್ಷ ತನ್ನೊಂದಿಗೆ ಬಾಳ್ವೆ ನಡೆಸಿದ್ದ ಪತ್ನಿಗೆ ವಿಚ್ಛೇದನ ನೀಡುತ್ತಿದ್ದಾರೆ.

 ಹೆಲ್ತ್‌ ಇನ್‌ಫ್ಲುಯೆನ್ಸರ್‌ ಆಗಿರುವ ಅಲೀನಾ ಡಿ ಅಲ್ಮೇಡಾ ಕೂಡ ತನ್ನದೇ ಆದ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಜನರಿಗೆ ಡಯಟ್‌ ಪ್ಲ್ಯಾನ್‌ಗಳನ್ನು ಹೇಳುವ ಮೂಲಕ ಹಾಗೂ ಅದನ್ನು ನಿರ್ವಹಣೆ ಮಾಡುವ ಮೂಲಕ ಹಣ ಗಳಿಸುತ್ತಾರೆ. ಪೇಜ್‌ ಸಿಕ್ಸ್‌ ವರದಿಯ ಪ್ರಕಾರ ಜಾನ್‌ ಪೌಲ್ಸನ್‌, ಅಲೀನಾ ಜೊತೆ ಮಗುವನ್ನು ಹೊಂದಬೇಕು ಎನ್ನುವ ಬಹಳ ಆಸೆ ಹೊಂದಿದ್ದಾರೆ. ಹಾಗಾಗಿ ಜಾನ್‌ ಪೌಲ್ಸನ್‌ ಮತತ್ತು ಅಲೀನಾ ಶೀಘ್ರದಲ್ಲಿಯೇ ಮದುವೆಯಾಗಬಹುದು ಎಂದು ವರದಿಯಾಗಿದೆ. ಈ ವಾರದ ಆರಂಭದಲ್ಲಿ ಮೇಲ್‌ ಆನ್‌ಲೈನ್‌ನ ವರದಿಯಲ್ಲಿ, ಈ ಜೋಡಿ, ನ್ಯೂಯಾರ್ಕ್‌ ಸಿಟಿ ಮೇಯರ್‌ ಎರಿಕ್‌ ಆಡಮ್ಸ್‌ ಜೊತೆ ಹ್ಯಾಂಗ್‌ ಔಟ್‌ ಮಾಡುತ್ತಿರುವ ಚಿತ್ರಗಳನ್ನು ಪ್ರಕಟಿಸಿದ್ದವು.

SEX EDUCATION: ಸಕಾಲಿಕ ಲೈಂಗಿಕ ಶಿಕ್ಷಣ ಹದಿಹರೆಯದವರಿಗೆ ಅಗತ್ಯ ಅನ್ನೋದ್ಯಾಕೆ?

ಆದರೆ, ಜಾನ್ ಪ್ರಣಯಕ್ಕೆ ಆತನ ಪತ್ನಿ ಬ್ರೇಕ್ ಹಾಕಿದ್ದಾಳೆ ಎಂದು ನಂಬಲಾಗಿದೆ. ಜಾನ್‌ ಪೌಲ್ಸನ್‌ಗೆ ಖಂಡಿತವಾಗಿ ವಿಚ್ಛೇದನ ನೀಡುತ್ತೇನೆ ಅದಕ್ಕೆ ಬದಲಾಗಿ ಕೋಟ್ಯಂತರ ರೂಪಾಯಿ ಪರಿಹಾರಕ್ಕೆ ಪತ್ನಿ ಬೇಡಿಕೆ ಇಟ್ಟಿದ್ದಾಳೆ. ವರದಿಗಳ ಪ್ರಕಾರ, 34 ವರ್ಷದ ಅಲೀನಾ ಜೊತೆ ತನ್ನ ಗಂಡನ ಸಂಬಂಧದ ಸುದ್ದಿಯನ್ನು ನೋಡಿದ ಪತ್ನಿ ಆಶ್ಚರ್ಯಪಟ್ಟಿದ್ದಾರೆ.

Relationship Tips : ಜಗಳದ ನಂತ್ರ ಮತ್ತೆ ಒಂದಾಗೋದು ಹೀಗೆ…

ಪೇಜ್ ಸಿಕ್ಸ್‌ ಪತ್ರಿಕೆಯ ಜೊತೆಗಿನ ಮಾತುಕತೆಯಲ್ಲಿ ಜಾನ್ ಅವರ ವಕೀಲ ಬಿಲ್ ಜಾಬೆಲ್, ಜನರು ಜಾನ್ ಅವರ ಔದಾರ್ಯದಿಂದ ಆಶ್ಚರ್ಯಚಕಿತರಾಗಿರಬೇಕು. ಏಕೆಂದರೆ ವಿಚ್ಛೇದನಕ್ಕಾಗಿ ಹೆಂಡತಿಗೆ ಕಾನೂನು ಪರಿಹಾರಕ್ಕಿಂತ ಹೆಚ್ಚಿನದನ್ನು ನೀಡಲು ಅವರು ಸಿದ್ಧರಾಗಿದ್ದರು. ಆದರೆ ಅವರ (ಜಾನ್‌ನ ಹೆಂಡತಿ) ದುರಾಸೆಯು ಈ ಪರಿಹಾರಕ್ಕೆ ಅಡ್ಡಿಯನ್ನು ತಂದಿತು ಎಂದಿದ್ದಾರೆ. ವಿಚ್ಛೇದನಕ್ಕಾಗಿ ಜಾನ್‌ನ ಪತ್ನಿ ಸುಮಾರು 82 ಬಿಲಿಯನ್ ರೂಪಾಯಿಗಳನ್ನು ($1 ಬಿಲಿಯನ್-100 ಕೋಟಿ ರೂಪಾಯಿ) ಕೇಳಿದ್ದಾಳೆ. ಜಾನ್ ಅವರ ಪತ್ನಿಯ ವಕೀಲ ರಾಬರ್ಟ್ ಕೋಹೆನ್, ಮದುವೆಯ ನಂತರ ಸಂಪತ್ತನ್ನು ನಿರ್ಮಿಸುವ ಜನರು ಹೆಂಡತಿಗೆ ಅಗತ್ಯವಾದ ಭತ್ಯೆಯನ್ನು ನೀಡುವುದಿಲ್ಲ. ಅವರು (ಜಾನ್) ಇತ್ಯರ್ಥಕ್ಕಾಗಿ ತನ್ನ ಹೆಂಡತಿಯ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾನೆ ಮತ್ತು ಅದು ಸಂಪೂರ್ಣವಾಗಿ ತಪ್ಪು ಎಂದಿದ್ದಾರೆ.

24 ಸಾವಿರ ಕೋಟಿಯ ಸಂಪತ್ತು: ಕೆಲವು ವರದಿಗಳ ಪ್ರಕಾರ ಜಾನ್ ಪೌಲ್ಸನ್‌ 24 ಸಾವಿರ ಕೋಟಿಯ ಸಂಪತ್ತು ಹೊಂದಿದ್ದಾರೆ. ಇವರ ಪತ್ನಿ ಜೆನ್ನಿ ಪೌಲ್ಸನ್‌ಗೆ 50 ವರ್ಷ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೇವಲ ಮಾಧ್ಯಮಗಳ ಮೂಲಕ ಮಾತ್ರವೇ ಗಂಡನ ಸಂಬಂಧದ ಬಗ್ಗೆ ಆಕೆಗೆ ಗೊತ್ತಾಗಿದೆ.