- Home
- Life
- Relationship
- ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ: ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ
ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ: ಗಂಡ ಹೆಂಡತಿ ಮಧ್ಯೆ ವಯಸ್ಸಿಗಿಂತ ಮನಸ್ಸಿನ ಅಂತರ ಕಡಿಮೆ ಮಾಡಿಕೊಳ್ಳೋದು ಹೇಗೆ
ಪ್ರೀತಿಗೆ ವಯಸ್ಸಿನ ಹಂಗಿಲ್ಲವಾದರೂ, ದಂಪತಿಗಳ ನಡುವಿನ ದೊಡ್ಡ ವಯಸ್ಸಿನ ಅಂತರವು ಸಂಬಂಧದಲ್ಲಿ ಹಲವು ಸವಾಲುಗಳನ್ನು ತರಬಹುದು. ಸಂಶೋಧನೆಗಳ ಪ್ರಕಾರ ಆದರ್ಶ ವಯಸ್ಸಿನ ಅಂತರ ಯಾವುದು ಮತ್ತು ವಯಸ್ಸಿನ ವ್ಯತ್ಯಾಸವಿದ್ದರೂ ಸಂಬಂಧವನ್ನು ಗಟ್ಟಿಗೊಳಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ

ಪ್ರೀತಿಗೆ ವಯಸ್ಸಿನ ಹಂಗಿಲ್ಲ
ಪ್ರೀತಿಗೆ ವಯಸ್ಸಿನ ಹಂಗಿಲ್ಲ, ಅನೇಕರು ವಯಸ್ಸನ್ನು ಗಣನೆಗೆ ತೆಗೆದುಕೊಳ್ಳದೇ ತಮ್ಮ ಜೀವನ ಸಂಗಾತಿಗಳನ್ನು ಆರಿಸಿಕೊಂಡು ಸುಖವಾಗಿ ಬದುಕುತ್ತಿದ್ದಾರೆ. ಇಬ್ಬರ ವಯಸ್ಸಿನ ನಡುವೆ ಬಹಳ ಅಂತರವಿದ್ದರೆ ಚೆನ್ನಾಗಿರಲ್ಲ, ಒಬ್ಬರು ಒಂದು ದಶಕಕ್ಕೇ ಸೇರಿದ್ದರೆ ಇನ್ನೊಬ್ಬರು ಇನ್ನೊಂದು ದಶಕದಲ್ಲಿ ಜನಿಸಿದ್ದರೆ ಅವರ ನಡುವೆ ಹಲವು ವಿಚಾರಗಳಲ್ಲಿ ವ್ಯತ್ಯಾಸಗಳಿರುತ್ತವೆ. ಆದರೂ ಅನೇಕ ಜೋಡಿ ತಮ್ಮ ನಡುವಿನ ವಯಸ್ಸಿನ ಅಂತರವನ್ನು ಮೀರಿ ಬದುಕುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಮಿಲಿಂದ್ ಸೋಮನ್ ಹಾಗೂ ಅಂಕಿತಾ ಕನ್ವರ್, ಇವರ ನಡುವಿನ ವಯಸ್ಸಿನ ಅಂತರ ಬರೋಬ್ಬರಿ 26 ವರ್ಷಗಳು ಆದರೂ ಈ ಜೋಡಿ ಬಹಳ ಖುಷಿ ಖುಷಿಯಿಂದ ಜೀವನ ಎಂಜಾಯ್ ಮಾಡ್ತಿದ್ದಾರೆ.
ಆದರೂ ಕೆಲವು ದಂಪತಿಗಳು ಕಾಲಾಂತರದಲ್ಲಿ ದೊಡ್ಡ ವಯಸ್ಸಿನ ವ್ಯತ್ಯಾಸವು ಅವರ ಸಂಬಂಧದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. ಹಾಗೆಯೇ ಕೆಲವರು ತಮ್ಮ ಮೇಲೆ ವಯಸ್ಸಿನ ಅಂತರ ಯಾವುದೇ ಪರಿಣಾಮ ಬೀರಿಲ್ಲ ಎಂದು ಹೇಳಿಕೊಂಡವರಿದ್ದಾರೆ. ನಿಮ್ಮ ಸಂಬಂಧದಲ್ಲಿ ನೀವು ಖುಷಿಯಾಗಿದ್ದರೂ ಕೂಡ ಸಮಾಜದ ವಿಮರ್ಶೆಯಿಂದಾಗಿ ನೀವು ಕೆಲವೊಮ್ಮೆ ಸವಾಲುಗಳನ್ನು ಎದುರಿಸಬಹುದು. ವಯಸ್ಸಿನ ಅಂತರ ಅಷ್ಟಿರಬಾರದು ಇಷ್ಟಿರಬಾರದು ಎಂದು ಅನೇಕರು ಹೇಳುವುದನ್ನು ನೀವು ಕೇಳಿರುತ್ತೀರಿ. ಹಾಗಿದ್ದರೆ ಜೋಡಿಯ ನಡುವೆ ಇರಬೇಕಾದ ಐಡಿಯಲ್ ಏಜ್ ಗ್ಯಾಪ್ ಎಷ್ಟು? ವಯಸ್ಸಿನ ಅಂತರದಿಂದ ಸಮಸ್ಯೆ ಆಗುತ್ತಾ ಈ ಬಗ್ಗೆ ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ..
ವಯಸ್ಸಿನ ಅಂತರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಾ?
ವಯಸ್ಸಿನ ಅಂತರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಾ? ನಿಮ್ಮ ಸಂಬಂಧದಲ್ಲಿ ದೊಡ್ಡ ವಯಸ್ಸಿನ ವ್ಯತ್ಯಾಸವಿದ್ದರೆ, ಅದು ನಿಮ್ಮ ಸಂಬಂಧದ ಮೇಲೆ ನಿರ್ದಿಷ್ಟ ರೀತಿಯಲ್ಲಿ ಪರಿಣಾಮ ಬೀರಬಹುದು. ದೊಡ್ಡ ಭಾವನಾತ್ಮಕ ಅಂತರವಿರುವ ಸಂಬಂಧಗಳಲ್ಲಿ, ಹೆಚ್ಚು ಪ್ರಬುದ್ಧ ಸಂಗಾತಿಯು ಸಂಬಂಧದಲ್ಲಿ ಹೆಚ್ಚಿನ ಭಾವನಾತ್ಮಕ ಹೊರೆಯನ್ನು ಹೊರುವ ಸಾಧ್ಯತೆಯಿದೆ. ಭಾವನೆಗಳು ಎರಡು ಕಡೆಯಿಂದ ಬಂದರೆ ಚೆಂದ ಬರೀ ಒಬ್ಬರೇ ಭಾವನಾತ್ಮಕವಾಗಿದ್ದು, ಮತ್ತೊಬ್ಬರು ಪ್ರಾಯೋಗಿಕವಾಗಿದ್ದರೆ ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು.
ವಯಸ್ಸಾದ ಮಾತ್ರಕ್ಕೆ ಪ್ರಬುದ್ಧತೆ ಬರಬೇಕು ಎಂದೇನಿಲ್ಲ?
ವಯಸ್ಸಾದ ಮಾತ್ರಕ್ಕೆ ಜನರು ಪ್ರಬುದ್ಧರಾಗಿರುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ, ಜನರು ಕೆಲವೊಮ್ಮೆ ವಯಸ್ಸನ್ನು ಭಾವನಾತ್ಮಕ ಪ್ರಬುದ್ಧತೆಯೊಂದಿಗೆ ಹೋಲಿಸುತ್ತಾರೆ. ದಂಪತಿಗಳ ನಡುವಿನ ಅಂತರ ಹೆಚ್ಚಾದಷ್ಟೂ, ಸಂಬಂಧವು ಜೀವನದ ಹಲವು ಹಂತಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲವು ಸಾಮಾನ್ಯ ಸವಾಲುಗಳಲ್ಲಿ ಪರಸ್ಪರರ ಶಕ್ತಿಯ ಮಟ್ಟಗಳು, ಜೀವನದ ಆದ್ಯತೆಗಳು ಮತ್ತು ಮಕ್ಕಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ವ್ಯತ್ಯಾಸವಿರಬಹುದು.
ವಯಸ್ಸಿನ ವ್ಯತ್ಯಾಸ ಎಷ್ಟು ಒಳ್ಳೆಯದು?
ವಯಸ್ಸಿನ ವ್ಯತ್ಯಾಸ ಎಷ್ಟು ಒಳ್ಳೆಯದು?
ಹಲವು ಸಂಸ್ಕೃತಿಗಳಲ್ಲಿ, ಸಂಬಂಧಗಳಲ್ಲಿ ಪುರುಷನು ಮಹಿಳೆಗಿಂತ ಎರಡರಿಂದ ಮೂರು ವರ್ಷ ದೊಡ್ಡವನಾಗಿರಬೇಕು. ಆದರೆ ಇದು ಉತ್ತಮ ವಯಸ್ಸಿನ ಅಂತರವನ್ನು ಉಂಟುಮಾಡುತ್ತದೆಯೇ? 2017 ರ ಆಸ್ಟ್ರೇಲಿಯಾದ ಅಧ್ಯಯನವೊಂದರ ಪ್ರಕಾರ, ಅದೇ ವಯಸ್ಸಿನ ದಂಪತಿಗಳಿಗಿಂತ ದೊಡ್ಡ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು ತಮ್ಮ ಮೊದಲ 6 ರಿಂದ 10 ವರ್ಷಗಳಲ್ಲಿ ಸಂಬಂಧದ ತೃಪ್ತಿಯಲ್ಲಿ ವೇಗವಾಗಿ ಕುಸಿತವನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದೆ.
ವಯಸ್ಸಿನ ಅಂತರ ಮತ್ತು ಖಿನ್ನತೆ
2015 ರ ಕೊರಿಯನ್ ಅಧ್ಯಯನವು ಒಂದೇ ವಯಸ್ಸಿನ ದಂಪತಿಗಳು ಕಡಿಮೆ ಖಿನ್ನತೆಯ ದರಗಳನ್ನು ಹೊಂದಿದ್ದರೆ, ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಂತರವನ್ನು ಹೊಂದಿರುವ ದಂಪತಿಗಳು ಸ್ವಲ್ಪ ಹೆಚ್ಚಿನ ಖಿನ್ನತೆಯ ದರಗಳನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದೆ.
ಅಂಕಿಅಂಶಗಳ ಪ್ರಕಾರ ಆದರ್ಶ ವಯಸ್ಸಿನ ಅಂತರ
ಒಟ್ಟಾರೆಯಾಗಿ, ಹೆಚ್ಚಿನ ಸಂಸ್ಕೃತಿಗಳಲ್ಲಿ ಒಂದರಿಂದ ಮೂರು ವರ್ಷಗಳ ವಯಸ್ಸಿನ ಮಿತಿಯನ್ನು ಸೂಕ್ತವೆಂದು ಪರಿಗಣಿಸಲಾಗಿದೆ ಎಂದು ಸಂಶೋಧನೆ ಸೂಚಿಸುತ್ತದೆ. ಆದರೆ ಕೆಲವು ಸಂಶೋಧಕರು 10 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಅಂತರವು ಸಹ ಹೆಚ್ಚಿನ ತೃಪ್ತಿಯನ್ನು ತರುತ್ತದೆ ಎಂದು ಸೂಚಿಸುತ್ತಾರೆ.
ಆದರೂ, ವಯಸ್ಸಿನ ಸಂಖ್ಯೆಗಳು ಪ್ರೀತಿಯ ಬಗ್ಗೆ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ದೊಡ್ಡ ವಯಸ್ಸಿನ ವ್ಯತ್ಯಾಸವನ್ನು ಹೊಂದಿದ್ದರು ಇಬ್ಬರು ಚೆನ್ನಾಗಿರಲು ಖುಷಿಯಾಗಿರಲು ಸಾಧ್ಯವಿದೆ. ಆದರೂ ದೊಡ್ಡ ವಯಸ್ಸಿನ ವ್ಯತ್ಯಾಸವಿರುವ ಕೆಲವು ದಂಪತಿಗಳು ಸಂಬಂಧದಲ್ಲಿನ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
ವಯಸ್ಸಿನ ಅಂತರಕ್ಕಿಂತ ಮನಸ್ಸಿನ ಅಂತರವನ್ನು ಕಡಿಮೆ ಮಾಡುವುದು ಹೇಗೆ?
ಸಣ್ಣ ವಯಸ್ಸಿನ ಅಂತರಗಳು ಹೆಚ್ಚು ಸಾಮಾನ್ಯವಾಗಿರುವ ಸಂಸ್ಕೃತಿಗಳಲ್ಲಿ, ಇತರರು ದೊಡ್ಡ ವಯಸ್ಸಿನ ಅಂತರವಿರುವ ದಂಪತಿಗಳನ್ನು ವಿಚಿತ್ರವಾಗಿ ನೋಡಬಹುದು. ಸ್ನೇಹಿತರು ಅಥವಾ ಕುಟುಂಬದವರು ನಿಮ್ಮ ಸಂಬಂಧದ ಬಗ್ಗೆ ಸಂಶಯ ವ್ಯಕ್ತಪಡಿಸಿದಾಗ ಇದು ವಿಶೇಷವಾಗಿ ನೋವುಂಟುಮಾಡಬಹುದು. ಜೊತೆಗೆ ದೊಡ್ಡ ವಯಸ್ಸಿನ ವ್ಯತ್ಯಾಸವು ಸಮಾನತೆಯ ಬದಲು ಒಬ್ಬರ ಮೇಲೆ ಮತ್ತೊಬ್ಬರು ಹಚ್ಚಿನ ಅಧಿಕಾರ ಚಲಾಯಿಸುವುದಕ್ಕೆ ಪ್ರೇರೇಪಿಸಬಹುದು. ಒಬ್ಬ ಸಂಗಾತಿ ತನ್ನ ಪಾಲುದಾರನ ಆರ್ಥಿಕ ಅವಲಂಬನೆಯನ್ನು ಅವರನ್ನು ನಿಯಂತ್ರಿಸುವ ಮಾರ್ಗವಾಗಿ ಬಳಸಬಹುದು.
ಬಹುಶಃ ನಿಮ್ಮ ಹಾಗೂ ನಿಮ್ಮವರ ನಡುವಿನ ವಯಸ್ಸಿನ ಅಂತರವೂ ಕುಟುಂಬದವರು ನೆಂಟರು ಸೇರಿದಂತೆ ನಾಲ್ಕು ಜನರ ಬಾಯಿಗೆ ಆಹಾರವಾಗುತ್ತಿದ್ದರೆ ನಿಮ್ಮ ಸಂಬಂಧದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು. ಇಂತಹ ಟೀಕಿಸುವ ಆತ್ಮೀಯರಿಗೆ ನೀವು ಮಿತಿಯನ್ನು ಹೇರಬೇಕಾಗಬಹುದು. ಇದು ಅವರು ನಿಮ್ಮ ಸಂಬಂಧವನ್ನು ಅರ್ಥ ಮಾಡಿಕೊಳ್ಳದೇ ಹೋದರೂ ಕೂಡ ಗೌರವಿಸಬೇಕು ಎಂಬುದನ್ನು ಸೂಚಿಸುತ್ತದೆ.
ಇಬ್ಬರು ಜೊತೆಯಾಗಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸಿ
ಇಬ್ಬರು ಜೊತೆಯಾಗಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸಿ. ಈ ಮಾತಕತೆಯ ವೇಳೆ ನಿಮ್ಮ ಮಾತುಗಳು ಪ್ರಾಮಾಣಿಕವಾಗಿರಲಿ. ವಯಸ್ಸಿನಲ್ಲಿ ನೀವು ತುಂಬಾ ಅಂತರ ಹೊಂದಿರುವಾಗ ನಿಮ್ಮ ಸಂಗಾತಿಯ ನಿರೀಕ್ಷೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ, ಯಾವುದೇ ತಪ್ಪು ಸಂವಹನವನ್ನು ತಪ್ಪಿಸಲು ನಿಮ್ಮ ನಿರೀಕ್ಷೆಗಳನ್ನು ಮುಕ್ತವಾಗಿ ಮತ್ತು ಪ್ರಾಮಾಣಿಕವಾಗಿ ಹಂಚಿಕೊಳ್ಳಿ. ನಿಮ್ಮ ಆಸಕ್ತಿಗಳಿಂದ ನಿಮ್ಮ ದೃಷ್ಟಿಕೋನಗಳವರೆಗೆ, ನಿಮ್ಮ ಸಂಗಾತಿಯೊಂದಿಗೆ ನೀವು ಅನೇಕ ವ್ಯತ್ಯಾಸಗಳನ್ನು ಎದುರಿಸುವ ಸಾಧ್ಯತೆಗಳಿವೆ. ಆದ್ದರಿಂದ ನಿಮ್ಮ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಅವರನ್ನು ಒತ್ತಾಯಿಸುವ ಬದಲು, ಅವರನ್ನು ಅವರಂತೆ ಬದುಕಲು ಬಿಡಿ.
ವಯಸ್ಸಿನ ಅಂತರವನ್ನು ಅರ್ಥ ಮಾಡಿಕೊಳ್ಳಿ
ನಿಮ್ಮ ಪರಸ್ಪರ ಆಸಕ್ತಿಗಳ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ವಯಸ್ಸಿನ ಅಂತರವನ್ನು ಅರ್ಥ ಮಾಡಿಕೊಳ್ಳಿ. ನೀವಿಬ್ಬರೂ ಇಷ್ಟಪಡುವ ಕೆಲಸಗಳನ್ನು ಮಾಡಲು ಸಮಯ ಕಳೆಯಿರಿ ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸುವ ಮೂಲಕ ಪರಸ್ಪರರ ಆಸಕ್ತಿಯನ್ನು ತಿಳಿದುಕೊಳ್ಳಿ. ನಿಮ್ಮ ವಯಸ್ಸಿನ ಅಂತರವೇ ನಿಮ್ಮ ಕೋಣೆಯಲ್ಲಿ ದೊಡ್ಡದಾಗಲು ಬಿಡಬೇಡಿ. ಯಾವುದೇ ಸಮಸ್ಯೆಗಳಿದ್ದರೆ, ಪರಸ್ಪರ ಸ್ವೀಕಾರಾರ್ಹ ಪರಿಹಾರಗಳನ್ನು ಕಂಡುಹಿಡಿಯಲು ಕೆಲಸ ಮಾಡಿ.
ನೀವು ಹಿರಿಯರಾಗಿದ್ದರೆ ನಿಮ್ಮ ಆತ್ಮೀಯರನ್ನು ಪೂರ್ಣವಾಗಿ ಬೆಳೆದ ವಯಸ್ಕರಂತೆ ನೋಡಬೇಕು. ಮತ್ತು ನೀವು ಕಿರಿಯರಾಗಿದ್ದರೆ, ನಿಮ್ಮ ಸಂಗಾತಿಯನ್ನು ಶಿಲಾಯುಗದವರು ಎಂದು ಉಲ್ಲೇಖಿಸುವುದನ್ನು ತಪ್ಪಿಸಿ ವಯಸ್ಸು ಮಾತ್ರ ಪ್ರಬುದ್ಧತೆಯ ಏಕೈಕ ಮಾಪಕವಲ್ಲ. ವಯಸ್ಸಾದ ಸಂಗಾತಿಗೆ ಇನ್ನೊಬ್ಬರಿಗಿಂತ ಬೇಗ ದೀರ್ಘಾವಧಿಯ ಆರೋಗ್ಯ ರಕ್ಷಣೆ ಬೇಕಾಗಬಹುದು. ನೀವು ಕಿರಿಯ ಸಂಗಾತಿಯಾಗಿದ್ದರೆ, ಪ್ರಾಮಾಣಿಕರಾಗಿರಿ ಮತ್ತು ನೀವು ಆರೈಕೆದಾರರಾಗಲು ಸಿದ್ಧರಿದ್ದೀರಾ ಎಂದು ನಿಮ್ಮನ್ನು ಕೇಳಿಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

