Asianet Suvarna News Asianet Suvarna News

'ಆ' ವಿಷಯದಲ್ಲಿ ಸುಖವೇ ಇಲ್ಲ ಅನ್ನೋರಿಗೆ ಕಿವಿ ಮಾತು!

ಸೆಕ್ಸ್ ಗೆ ಬಟ್ಟೆ ಕೂಡ ಮಹತ್ವ ಪಡೆಯುತ್ತದೆ. ಸಂಗಾತಿ ಮುಂದೆ ಆಕರ್ಷಕವಾಗಿ ಕಾಣ್ಬೇಕು, ಸದಾ ನಿಮ್ಮ ಹಿಂದೆ ಸುಳಿಯುತ್ತಿರಬೇಕೆಂದ್ರೆ ಕೆಲವೊಂದು ಟಿಪ್ಸ್ ಫಾಲೋ ಮಾಡಬೇಕು. ಸ್ಯಾಟಿನ್ ಬಟ್ಟೆ ಕೂಡ ನಿಮ್ಮ ಸೆಕ್ಸ್ ಸುಖವನ್ನು ದುಪ್ಪಟ್ಟು ಮಾಡುತ್ತದೆ. 
 

Spice Up Sex Life With Satin Fabric make relationship beautiful
Author
First Published Sep 21, 2022, 10:52 AM IST

ಸೆಕ್ಸ್ ಲೈಫ್ ಬೂಸ್ಟ್ ಮಾಡೋದು ಬಹಳ ಮುಖ್ಯ. ಒಂದೇ ರೀತಿಯ ಜೀವನ ಶೈಲಿ ಬೋರ್ ಆದಂತೆ ಸೆಕ್ಸ್ ಲೈಫ್ ಕೂಡ ಬೋರ್ ಆಗುತ್ತೆ. ಸೆಕ್ಸ್ ನಲ್ಲಿ ಸ್ವಲ್ಪ ಮಸಾಲೆ ಬೆರೆಸೋದು ಬಹಳ ಮುಖ್ಯ. ದಾಂಪತ್ಯದ ಆರಂಭದಲ್ಲಿ ಎಲ್ಲವೂ ಖುಷಿಯಾಗಿರುತ್ತದೆ. ದಿನ ಕಳೆದಂತೆ ಜವಾಬ್ದಾರಿ ಹೆಚ್ಚಾಗುತ್ತದೆ. ಕೆಲಸ, ಒತ್ತಡದ ಜೀವನದಲ್ಲಿ ಲೈಂಗಿಕ ಸುಖ ಮಸುಕಾಗಲು ಶುರುವಾಗುತ್ತದೆ. ಅನೇಕ ಬಾರಿ ದೈಹಿಕ ಸುಖ ಕಡಿಮೆಯಾದಂತೆ ದಂಪತಿ ಮಧ್ಯೆ ಗಲಾಟೆ, ಜಗಳ, ಭಿನ್ನಾಭಿಪ್ರಾಯ ಕಾಣಿಸಿಕೊಳ್ಳುತ್ತದೆ. ಲೈಂಗಿಕ ಜೀವನದಲ್ಲಿ ಬಟ್ಟೆ ಕೂಡ ಮಹತ್ವ ಪಡೆಯುತ್ತದೆ. ಸ್ಯಾನಿಟ್ ಬಟ್ಟೆ ಬಳಸುವ ಮೂಲಕ ನೀವು ಸೆಕ್ಸ್ ಜೀವನದಲ್ಲಿ ಖುಷಿ ಹೆಚ್ಚಿಸಬಹುದು. ಇಂದು ನಾವು ಸಂಭೋಗ ಸುಖ ಹೆಚ್ಚಿಸಲು ಯಾವ ಬಟ್ಟೆ ಬಳಸ್ಬೇಕು ಎಂಬುದನ್ನು ಹೇಳ್ತೇವೆ.

ಸ್ಯಾಟಿನ್ ಒಳ ಉಡುಪು (Satin Lingerie) : ಒಳ ಉಡುಪು ಕಾಣೋದಿಲ್ಲ ಎಂದು ಅನೇಕರು ಅದಕ್ಕೆ ಮಹತ್ವ ನೀಡೋದಿಲ್ಲ. ಆದ್ರೆ ಸೆಕ್ಸ್ ಲೈಫ್ ನಲ್ಲಿ ಒಳ ಉಡುಪು ಕೂಡ ಮಹತ್ವ ಪಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ  ಐಷಾರಾಮಿ (luxury) ಬ್ರಾಂಡ್‌ ನ ಸ್ಯಾಟಿನ್ ಮತ್ತು ವೆಲ್ವೆಟ್‌ನ ಒಳ ಉಡುಪುಗಳು ಲಭ್ಯವಿದೆ. ಅವು ತುಂಬಾ ಹಿತವಾದ ಅನುಭವ ನೀಡುತ್ತವೆ. ಹಗುರವಾಗಿರುವ ಜೊತೆಗೆ ಮೃದುವಾಗಿರುತ್ತವೆ. ಮಹಿಳೆಯರು ಈ ಒಳ ಉಡುಪನ್ನು (Inner Wear) ಧರಿಸಬೇಕು. ಸಂಭೋಗದ ಸಮಯದಲ್ಲಿ ನಿಮ್ಮನ್ನು ಸೆಕ್ಸಿಗೊಳಿಸುವ ಜೊತೆಗೆ ಸಂಗಾತಿ ಮನಸ್ಸನ್ನು ಇದು ಆಕರ್ಷಿಸುತ್ತದೆ. 

Relationship Tips: ಮುಂಗೋಪಿ ಸಂಗಾತಿಯ ಹ್ಯಾಂಡಲ್ ಮಾಡೋದು ಹೇಗೆ?

ಸಂಭೋಗದ ಸುಖ ಹೆಚ್ಚಾಗ್ಬೇಕೆಂದ್ರೆ ಸ್ಯಾಟಿನ್ ಬೆಡ್ಶೀಟ್ (Bed Sheet ) ಬಳಸಿ : ಸ್ಯಾಟಿನ್ ಬಟ್ಟೆಯಿಂದ ಮಾಡಿದ ಬೆಡ್‌ಶೀಟ್‌ಗಳು (Bed Spread) ಆಕರ್ಷಕವಾಗಿರುತ್ತವೆ. ಇದು ಹಾಸಿಗೆಗೆ ರಾಯಲ್ ಲುಕ್ (Royal Look) ನೀಡುತ್ತವೆ. ಸೆಕ್ಸ್ ಲೈಫನ್ನು ಇದು ಆಸಕ್ತಿದಾಯಕಗೊಳಿಸುತ್ತದೆ.  ಸ್ಯಾಟಿನ್ ಬೆಡ್‌ಶೀಟ್ ಗಾಢ ಬಣ್ಣದ್ದಾದ್ರೆ ಒಳ್ಳೆಯದು. ಸೆಕ್ಸ್ ಕಲ್ಪನೆ ಹೆಚ್ಚಿಸುವ ಜೊತೆಗೆ ಸಿನಿಮಾಗಳನ್ನು ನೆನಪಿಸುತ್ತದೆ. 

ಸ್ಯಾಟಿನ್ ವ್ರ್ಯಾಪ್ (Wrap) : ಸ್ಯಾಟಿನ್ ಒಳ ಉಡುಪು ಹಾಗೂ ಬೆಡ್ ಶೀಟ್ ಬಳಸಲು ಇಷ್ಟವಿಲ್ಲ ಎನ್ನುವವರು ಸ್ಯಾಟಿನ್ ರ್ಯಾಪ್ ಬಳಸಬಹುದು. ಇದು ಕಡಿಮೆ ಖರ್ಚಿನಲ್ಲಿ ಆಗುವಂತಹದ್ದು. ಹಾಗೆಯೇ ಸೆಕ್ಸ್ ಸುಖವನ್ನು ಇಮ್ಮಡಿಗೊಳಿಸುತ್ತದೆ. ನೀವು 2 ಮೀಟರ್ ಸ್ಯಾಟಿನ್ ರ್ಯಾಪ್ ತೆಗೆದುಕೊಳ್ಳಿ. ಬಟ್ಟೆಯನ್ನು ತೆಗೆದು ನಂತ್ರ ಸ್ಯಾಟಿನ್ ರ್ಯಾಪನ್ನು ಮೈಗೆ ಸುತ್ತಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂಗಾತಿ ನಿಮ್ಮ ಸೌಂದರ್ಯಕ್ಕೆ ಹುಚ್ಚರಾಗೋದ್ರಲ್ಲಿ ಎರಡು ಮಾತಿಲ್ಲ. ನಿಮ್ಮ ಬೋರಿಂಗ್ ಸೆಕ್ಸ್ ಲೈಫ್ ಗೆ ಇದು ಹೊಸ ತಿರುವು ನೀಡುತ್ತದೆ. 

ಸ್ಯಾಟಿನ್ ಟೈ (Tie) : ಸ್ಯಾಟಿನ್ ಟೈಯನ್ನು ಕೂಡ ನೀವು ಲೈಂಗಿಕ ಕ್ರಿಯೆಯಲ್ಲಿ ಬಳಸಬಹುದು. ಅದನ್ನು ಕೈಕೋಳದಂತೆ ಬಳಸಬಹುದು.  ನಿಮ್ಮ ಸಂಗಾತಿಯ ಕೈಗೆ ಸ್ಯಾಟಿನ್ ಟೈ ಕಟ್ಟಿ. ಸ್ಯಾಟಿನ್ ಬಟ್ಟೆಯ ತಂಪು ನಿಮ್ಮ ಸಂಗಾತಿಯನ್ನು ಉತ್ತೇಜನಗೊಳಿಸುತ್ತದೆ. ಸ್ಯಾಟಿನ್ ಮೃದುವಾಗಿರುತ್ತದೆ. ಹಾಗೆಯೇ ತಂಪಾದ ಅನುಭವ ನೀಡುತ್ತದೆ. 

'ನಾನು ಚೆನ್ನಾಗಿಯೇ ಇದ್ದೇನೆ, ಆದರೂ ಗಂಡ ಬೇರೆ ಹೆಣ್ಣನ್ನೇ ಗುರಾಯಿಸುತ್ತಾನೆ!'

ಸ್ಯಾಟಿನ್ ಪರದೆ : ಸಂಗಾತಿ ಬಳಿಯಿಲ್ಲದ ಸಂದರ್ಭದಲ್ಲಿ ಅವರನ್ನು ಉತ್ತೇಜಿಸಬೇಕು ಎಂದಾದ್ರೆ ಅಥವಾ ಫೋನ್ ಸೆಕ್ಸ್ ಮಾಡ್ತಿದ್ದರೆ ನೀವು ಸ್ಯಾಟಿನ್ ಪರದೆ ಬಳಸಬಹುದು. ಸ್ಯಾಟಿನ್ ಪರದೆ ಮುಂದೆ ಕುಳಿತು ನೀವು ಸೆಕ್ಸಿ ಫೋಟೋಗಳನ್ನು ಸಂಗಾತಿಗೆ ಕಳುಹಿಸಬಹುದು. ಇದು ಸಂಗಾತಿ ಉತ್ಸಾಹವನ್ನು ಹೆಚ್ಚಿಸುತ್ತದೆ. ನೀವು ಸ್ಯಾಟಿನ್ ಪರದೆ ಬಳಿ ಕುಳಿತು ವಿಡಿಯೋ ಚಾಟ್ ಕೂಡ ಮಾಡಬಹುದು. ಸ್ಯಾಟಿನ್ ಬಟ್ಟೆಗಳು ಆಕರ್ಷಕವಾಗಿರುತ್ತವೆ. ಎಲ್ಲರ ಗಮನ ಸೆಳೆಯುತ್ತದೆ.

ಈ ಎಲ್ಲ ಸಲಹೆಗಳು ದಂಪತಿಯ ಲೈಂಗಿಕ ಜೀವನ, ಉತ್ಸಾಹ, ಜೀವನಶೈಲಿಗೆ ಅವಲಂಬಿಸಿರುತ್ತದೆ. ಎಲ್ಲವುಕ್ಕಿಂತ ಮಾನಸಿಕವಾಗಿ ಒಬ್ಬರಿಗೊಬ್ಬರು ಹತ್ತಿರವಾಗುವುದು ಮುಖ್ಯ. ಆಗ ಎಂಥದ್ದೇ ಸಮಸ್ಯೆಗಳಿದ್ದರೂ ಸುಲಭವಾಗಿ ಪರಿಹಾರ ಸಿಗುತ್ತದೆ. ದಾಂಪತ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಸೆಕ್ಸ್ ಸುಖ ತಾನಾಗಿಯೇ ಸಿಗುತ್ತದೆ ಎಂಬುವುದು ನೆನಪಿರಲಿ. 
 

Follow Us:
Download App:
  • android
  • ios