Relationship Tips: ಮುಂಗೋಪಿ ಸಂಗಾತಿಯ ಹ್ಯಾಂಡಲ್ ಮಾಡೋದು ಹೇಗೆ?
ಕೋಪ ಪ್ರತಿಯೊಬ್ಬರಿಗೂ ಬರುತ್ತೆ. ಆದ್ರೆ ಸಣ್ಣ ಸಣ್ಣ ವಿಷ್ಯಕ್ಕೂ ಸಂಗಾತಿ ಕೋಪ ಮಾಡಿಕೊಳ್ತಿದ್ದರೆ ಅವರ ಜೊತೆ ಜೀವನ ಕಷ್ಟವಾಗುತ್ತದೆ. ಸಂಗಾತಿ ಕೋಪ ಸಂಬಂಧದ ಮೇಲೆ ಪ್ರಭಾವ ಬೀರಬಾರದು ಅಂದ್ರೆ ಕೆಲ ಟಿಪ್ಸ್ ಫಾಲೋ ಮಾಡಿ.
ಮುಂಗೋಪಿ ಸ್ವಭಾವನನ್ನು ಕೆಲವರು ಹೊಂದಿರುತ್ತಾರೆ. ಸಣ್ಣ ಸಣ್ಣ ವಿಷ್ಯಕ್ಕೂ ಅವರು ಕೋಪಗೊಳ್ತಾರೆ. ಅವರ ಮುಂದೆ ಮಾತನಾಡಿದ್ರೂ ಕಷ್ಟ, ಸುಮ್ಮನಿದ್ರೂ ಕಷ್ಟ. ಕೋಪಿಷ್ಟ ಸಂಗಾತಿಯನ್ನು ಸಂಭಾಳಿಸುವುದು ಸುಲಭವಲ್ಲ. ಇದ್ರಿಂದ ಇನ್ನೊಬ್ಬ ಸಂಗಾತಿ ಸದಾ ದುಃಖ ಅನುಭವಿಸಬೇಕಾಗುತ್ತದೆ. ಕೋಪಗೊಳ್ಳುವ ಸಂಗಾತಿ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. ನಿಮ್ಮ ಸಂಗಾತಿಯೂ ಅತಿಯಾಗಿ ಕೋಪಗೊಳ್ತಿದ್ದರೆ ಅವರನ್ನು ನಿಭಾಯಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಸುಲಭ ವಿಧಾನದ ಮೂಲಕ ಅವರ ಕೋಪವನ್ನು ನೀವು ಕಡಿಮೆ ಮಾಡಬಹುದು.
ಕೋಪಿಷ್ಟ (Angry) ಸಂಗಾತಿ (Spouse) ಯನ್ನು ಹೀಗೆ ನಿಭಾಯಿಸಿ :
ಮೊದಲು ಕೋಪಕ್ಕೆ (Anger) ಕಾರಣವೇನು ಎಂಬುದನ್ನು ಪತ್ತೆ ಮಾಡಿ : ನಿಮ್ಮ ಸಂಗಾತಿಗೆ ಪದೇ ಪದೇ ಕೋಪ ಬರ್ತಿದ್ದರೆ ಮೊದಲು ಅವರ ಕೋಪಕ್ಕೆ ಕಾರಣವೇನು ಎಂಬುದನ್ನು ತಿಳಿಯಿರಿ. ಸುಕಾಸುಮ್ಮನೆ ಕೋಪ ಯಾರಿಗೂ ಬರುವುದಿಲ್ಲ. ನಿಮ್ಮ ಸಂಗಾತಿ ಯಾವ ವಿಷ್ಯಕ್ಕೆ ಕೋಪಗೊಳ್ತಾರೆ ಎಂಬುದು ಗೊತ್ತಾದ್ರೆ ಅವನ್ನು ಸಂಭಾಳಿಸುವುದು ಸುಲಭ. ಅವರು ಯಾವಾಗ ಕೋಪಗೊಳ್ತಾರೆ ಎಂಬುದು ನಿಮಗೆ ಮೊದಲೇ ಗೊತ್ತಿರುವ ಕಾರಣ ನೀವು ಎಚ್ಚರಿಕೆ ಹೆಜೆ ಇಡಬಹುದು.
ಗಂಡ ಹೆಂಡತಿ ವಯಸ್ಸಿನ ಅಂತರ ಎಷ್ಟಿದ್ದರೆ ಚೆಂದ?
ಸಂಗಾತಿ (Life Partner) ಇಷ್ಟದ ಬಗ್ಗೆ ತಿಳಿದಿರಲಿ : ಸಂಗಾತಿಗೆ ಯಾವುದು ಇಷ್ಟ, ಯಾವುದು ಕಷ್ಟ ಎಂಬುದನ್ನು ನೀವು ಅವಶ್ಯವಾಗಿ ತಿಳಿದಿರಬೇಕು. ಸಂಗಾತಿ ಕೋಪವನ್ನು ಇದ್ರಿಂದ ನೀವು ಕಡಿಮೆ ಮಾಡಬಹುದು. ಯಾಕೆಂದ್ರೆ ಅವರಿಗೆ ಇಷ್ಟವಾಗದ ಅಭ್ಯಾಸ, ಕೆಲಸವನ್ನು ನೀವು ಅವರ ಮುಂದೆ ಮಾಡದೆ ಹೋದ್ರೆ ಅವರು ನಿಮ್ಮ ಮೇಲೆ ಕೋಪಗೊಳ್ಳುವುದಿಲ್ಲ.
ಕೋಪಕ್ಕೆ ಕೋಪ ಉತ್ತರವಲ್ಲ : ಸಂಗಾತಿ ಕೋಪ ಸ್ವಭಾವದವರು ಎಂಬುದು ನಿಮಗೆ ತಿಳಿದ್ಮೇಲೆ ಅವರನ್ನು ಕೆರಳಿಸುವ ಪ್ರಯತ್ನಕ್ಕೆ ನೀವು ಹೋಗ್ಬಾರದು. ಸಂಗಾತಿ ಕೋಪಗೊಂಡು ನಿಮ್ಮ ಮೇಲೆ ಕಿರುಚಾಡಿದಾಗ ನೀವು ಸುಮ್ಮನಿರುವುದು ಒಳ್ಳೆಯದು. ಕೋಪದಲ್ಲಿ ಆಡಿದ ಮಾತಿಗೆ ಹೆಚ್ಚು ಮಹತ್ವ ನೀಡಬಾರದು. ಸಂಗಾತಿ ಕೋಪದಲ್ಲಿ ತಪ್ಪು ಮಾತನಾಡಬಹುದು. ನಂತ್ರ ತಪ್ಪಿನ ಅರಿವಾಗಿ ಪಶ್ಚಾತಾಪ ಪಡ್ತಾರೆ. ನೀವು ಅವರು ಕಿರುಚಾಡ್ತಾರೆ ಎನ್ನುವ ಕಾರಣಕ್ಕೆ ನೀವೂ ಅವರ ಮುಂದೆ ಕಿರುಚಾಡಿದ್ರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆ ಉಲ್ಬಣಿಸುತ್ತದೆ. ಇದ್ರಿಂದ ಸಂಬಂಧ ಹಾಳಾಗುತ್ತದೆ. ಹಾಗಾಗಿ ಸಂಗಾತಿ ಕೋಪದಲ್ಲಿದ್ದಾಗ ನೀವು ಉತ್ತರಿಸದೆ ಮೌನವಾಗಿರುವುದು ಒಳ್ಳೆಯದು.
ಸಂಗಾತಿ ಜೊತೆ ಚರ್ಚೆ : ಸಂಗಾತಿ ಕೋಪ ತಣ್ಣಗಾದ್ಮೇಲೆ ನೀವು ಅವರ ಜೊತೆ ಮಾತನಾಡಿ. ಸಂಗಾತಿ ಕೋಪ ನಿಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಅವರಿಗೆ ವಿವರಿಸಿ. ಸಂಗಾತಿ ಜೊತೆ ಶಾಂತವಾಗಿ ಮಾತನಾಡುವ ಮೂಲಕ ಅವರಿಗೆ ಎಲ್ಲವನ್ನೂ ವಿವರಿಸಲು ಪ್ರಯತ್ನಿಸಿ.
ಹುಡುಗೀರು ಸುಮ್ ಸುಮ್ನೆ ಬೀಳೋಲ್ಲ, ವ್ಯಕ್ತಿತ್ವ ಚೆನ್ನಾಗಿರೋ ಹಾಗೆ ನೋಡ್ಕಳ್ಳಿ ಸಾಕು!
ಸಂಗಾತಿ ಕೋಪವನ್ನು ಗಂಭೀರವಾಗಿ ಪರಿಗಣಿಸ್ಬೇಡಿ : ಸಂಗಾತಿ ಪದೇ ಪದೇ ಕೋಪಗೊಳ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಲು ಹೋಗ್ಬೇಡಿ. ಇದ್ರಿಂದ ನಿಮ್ಮ ಮನಸ್ಸು ಘಾಸಿಗೊಳ್ಳುತ್ತದೆ. ಇದ್ರಿಂದ ಸಂಬಂಧದಲ್ಲಿ ಪ್ರೀತಿ (love) ಕಡಿಮೆಯಾಗುತ್ತದೆ. ವಿನಃ ಕಾರಣ ಮನಸ್ತಾಪವಾಗುತ್ತದೆ. ನಿಮ್ಮ ಸಂಗಾತಿ ಕೋಪದ ಸ್ವಭಾವದವರು ಎಂಬುದು ನಿಮ್ಮ ಅರಿವಿಗೆ ಬಂದ್ರೆ ಅವರನ್ನು ಅವರಂತೆ ಸ್ವೀಕರಿಸಿ. ನಿಧಾನವಾಗಿ ಅವರ ಸ್ವಭಾವದಲ್ಲಿ (Nature) ಬದಲಾವಣೆ ತರಲು ಪ್ರಯತ್ನಿಸಿ. ಯಾವುದೇ ಕಾರಣಕ್ಕೂ ಅವರನ್ನು ತಪ್ಪು ತಿಳಿದುಕೊಂಡು ನಿಮ್ಮ ಸಂಬಂಧವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ.
ನಿಮ್ಮನ್ನು ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿ : ಈಗಿನ ಕಾಲದಲ್ಲಿ ಸಣ್ಣ ವಿಷ್ಯಕ್ಕೂ ಅನುಮಾನ, ಕೋಪ ಬರುವುದು ಸಾಮಾನ್ಯವಾಗಿದೆ. ಫೋನ್ ಬ್ಯುಸಿ ಬಂದ್ರೆ, ಮನೆಯಿಂದ ಹೊರಗೆ ಹೋದ್ರೆ ಅಥವಾ ಸರಿಯಾದ ಸಮಯಕ್ಕೆ ಸಂಗಾತಿ ಕೆಲಸ ಮುಗಿಸದೆ ಹೋದ್ರೂ ತಪ್ಪು ತಿಳಿದುಕೊಂಡು ಕೋಪ ಮಾಡಿಕೊಳ್ಳುವವರಿದ್ದಾರೆ. ನಿಮ್ಮ ಸಂಗಾತಿಯೂ ಇವರಲ್ಲಿ ಒಬ್ಬರಾಗಿದ್ದರೆ ಸಂಗಾತಿಗೆ ನಿಮ್ಮನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಿ. ಸಂಗಾತಿ ಕೋಪ ತಣ್ಣಗಾದ್ಮೇಲೆ ನೀವು ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿ.