'ನಾನು ಚೆನ್ನಾಗಿಯೇ ಇದ್ದೇನೆ, ಆದರೂ ಗಂಡ ಬೇರೆ ಹೆಣ್ಣನ್ನೇ ಗುರಾಯಿಸುತ್ತಾನೆ!'

ಪಕ್ಕದಲ್ಲಿ ಪತ್ನಿ ಇದ್ರೂ ಬೇರೆ ಮಹಿಳೆಯರನ್ನು ನೋಡೋದು ಪುರುಷರ ಹುಟ್ಟು ಗುಣ. ಸೌಂದರ್ಯ ಇರೋದು ಸವಿಯೋಕೆ ಅಂತಾ ಸಬೂಬು ಹೇಳಿ, ಹುಡುಗಿಯರನ್ನು ನೋಡ್ತಾರೆ ಪುರುಷರು. ಆದ್ರೆ ಅದು ಮಿತಿಯಲ್ಲಿದ್ರೆ ಚೆಂದ. ಅತಿರೇಕಕ್ಕೆ ಹೋದ್ರೆ ಪತ್ನಿಯರ ತಲೆಕೆಡೋದು ಸಾಮಾನ್ಯ. 
 

Husband Staring At Other Women All The Time woman worried

ಸುಂದರವಾದ ಪತ್ನಿ ಮನೆಯಲ್ಲಿದ್ರೂ ಕದ್ದು ಬೇರೆ ಮಹಿಳೆಯರನ್ನು ನೋಡುವ ಹವ್ಯಾಸ ಅನೇಕ ಪುರುಷರಿಗಿರುತ್ತದೆ. ಪತಿಯ ಈ ಹವ್ಯಾಸ ಪತ್ನಿಗೆ ಇಷ್ಟವಾಗೋದಿಲ್ಲ. ಪತಿ ಸದಾ ನನ್ನನ್ನು ಮಾತ್ರ ನೋಡ್ಬೇಕು, ನನಗೆ ಮಾತ್ರ ಆಕರ್ಷಿತವಾಗ್ಬೇಕು ಎಂದುಕೊಳ್ತಾರೆ. ಸೌಂದರ್ಯ ಇರೋದೇ ನೋಡೋಕೆ, ನೋಡಿದ್ರೆ ಏನು ತಪ್ಪು ಎಂಬುದು ಪುರುಷರ ಪ್ರಶ್ನೆ. ಒಟ್ಟಿನಲ್ಲಿ ಬೇರೆ ಮಹಿಳೆಯರನ್ನು ಪತಿ ಗುರಾಯಿಸ್ತಿದ್ದರೆ ಪತ್ನಿ ಮನಸ್ಸು ಮುರಿಯೋದಂತೂ ಸತ್ಯ. ಇಲ್ಲೊಬ್ಬ ಮಹಿಳೆ ತನ್ನ ಗಂಡನ ಸ್ವಭಾವಕ್ಕೆ ಬೇಸತ್ತಿದ್ದಾಳೆ. ನಾನೆಷ್ಟು ಸುಂದರವಾಗಿದ್ರೂ ಪತಿ ಬೇರೆ ಮಹಿಳೆಯರನ್ನು ನೋಡ್ತಾನೆ ಎಂದಿದ್ದಾಳೆ.

ಆಕೆಗೆ ಮದುವೆ (Marriage) ಯಾಗಿ ಕೆಲವೇ ವರ್ಷ ಕಳೆದಿದೆ. ಅವರದ್ದು ಲವ್ ಮ್ಯಾರೇಜ್ (Love Marriage). ಇಬ್ಬರೂ ಶಾಲೆಯಿಂದಲೇ ಒಟ್ಟಿಗೆ ಓದಿದವರು. ಕಾಲೇಜ್ ಮುಗಿಯುತ್ತಿದ್ದಂತೆ ಸ್ನೇಹ ಪ್ರೀತಿಗೆ ತಿರುಗಿತ್ತಂತೆ. ಒಳ್ಳೆ ಸ್ನೇಹಿತ (Friend) ನನ್ನು ಮದುವೆಯಾದ್ರೆ ಬಾಳು ಸುಂದರವಾಗಿರುತ್ತದೆ ಎನ್ನುವ ಕಾರಣಕ್ಕೆ ಮಹಿಳೆ ಸಂಬಂಧ ಮುಂದುವರೆಸಿದ್ದಳಂತೆ. ಪತಿಯನ್ನು ಹೆಚ್ಚು ಪ್ರೀತಿ ಮಾಡ್ತೇನೆ ಎನ್ನುವ ಮಹಿಳೆಗೆ ಪತಿಯ ಒಂದು ಚಟ ಬೇಸರ ತರಿಸಿದೆ. ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುವ ಮಹಿಳೆ ತನ್ನ ಗಂಡ ಸದಾ ನನ್ನನ್ನು ಮಾತ್ರ ನೋಡ್ಬೇಕು ಎಂದು ಬಯಸ್ತಾಳೆ. ಇದೇ ಕಾರಣಕ್ಕೆ ಆಕೆ ಜಿಮ್ ಗೆ ಹೋಗಿ ಫಿಟ್ನೆಸ್ (Fitness) ಮೆಂಟೇನ್ ಮಾಡಿದ್ದಾಳೆ. ನೋಡಲು ತುಂಬಾ ಸುಂದರವಾಗಿರುವ ಪತ್ನಿ ಜೊತೆಗಿದ್ರೂ ಪತಿ ಕಣ್ಣು ಮಾತ್ರ ಬೇರೆ ಹುಡುಗಿಯರನ್ನು ನೋಡುತ್ತದೆಯಂತೆ. ಪತ್ನಿ ಜೊತೆಯಲ್ಲಿರುವಾಗ್ಲೂ ಪತಿ ಬೇರೆ ಮಹಿಳೆಯರನ್ನು ನೋಡ್ತಾನಂತೆ. ನಾನು ಬೇರೆ ಪುರುಷರಿಗೆ ಎಂದೂ ಆಕರ್ಷಿತಳಾಗಿಲ್ಲ. ಹಾಗಾಗಿ ನನಗೆ ಪತಿಯ ಈ ಸ್ವಭಾವ ಉಸಿರುಗಟ್ಟಿಸಿದಂತೆ ಆಗುತ್ತದೆ ಎನ್ನುತ್ತಾಳೆ ಪತ್ನಿ. ಇದ್ರಿಂದ ಅಸುರಕ್ಷತೆ ನನ್ನನ್ನು ಕಾಡ್ತಿದೆ ಎನ್ನುವ ಮಹಿಳೆ, ಈ ಬಗ್ಗೆ ನಾನು ಪತಿ ಜೊತೆ ಮಾತನಾಡಿದ್ದೇನೆ ಎಂದಿದ್ದಾಳೆ. ನಾನು ಈ ವಿಷ್ಯ ಹೇಳಿದ್ರೆ ಪತಿ ಅದನ್ನು ತಮಾಷೆಯಾಗಿ ಸ್ವೀಕಾರ ಮಾಡ್ತಾನೆ. ನನಗೆ ನನ್ನ ದಾಂಪತ್ಯ ಮುರಿದು ಬಿದ್ರೆ ಎಂಬ ಭಯ ಶುರುವಾಗಿದೆ. ಏನು ಮಾಡಲಿ ಎಂದು ಮಹಿಳೆ ಪ್ರಶ್ನೆ ಕೇಳಿದ್ದಾಳೆ.

ಮದ್ವೆಯಾಗಿ ವರ್ಷವಾಯಿತಾ? ಆಗದಿದ್ದರೆ ಈ ಕೆಲ್ಸಕ್ಕೆ ಕೈ ಹಾಕಬೇಡಿ!

ತಜ್ಞರ ಸಲಹೆ : ಪತಿ ಮೇಲೆ ವಿಶ್ವಾಸವಿಲ್ಲದಿರುವುದು ನಿಮ್ಮ ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ತಜ್ಞರು. ಪತಿ ಬೇರೆ ಹುಡುಗಿಯರನ್ನು ನೋಡ್ತಿದ್ದಂತೆ ನೀವು ಅವರ ಜೊತೆ ಜಗಳಕ್ಕೆ ಇಳಿಯುತ್ತೀರಿ. ಜಗಳ ಮಾಡುವ ಬದಲು, ಪತಿ ಬೇರೆ ಮಹಿಳೆಯರನ್ನು ನೋಡಿದ್ರೆ ನಿಮಗೆ ಎಷ್ಟು ಬೇಸರವಾಗುತ್ತದೆ ಎಂಬುದನ್ನು ಅವರಿಗೆ ಹೇಳಿ ಎನ್ನುತ್ತಾರೆ ತಜ್ಞರು. ಅಗತ್ಯಕ್ಕಿಂತ ಹೆಚ್ಚು ಅಧಿಕಾರ ಚಲಾಯಿಸುವ ಬದಲು ಪರಸ್ಪರ ಅರಿತುಕೊಳ್ಳಲು ಪ್ರಯತ್ನಿಸಿ, ಹಾಗೆಯೇ ಇಬ್ಬರ ಮಧ್ಯೆ ಗೌರವ, ವಿಶ್ವಾಸವಿರಲಿ ಎನ್ನುತ್ತಾರೆ ತಜ್ಞರು. 

ಪತಿ ವರ್ತನೆಯಿಂದ ಅಸುರಕ್ಷತೆ ಅನುಭವಿಸುವ ಬದಲು ನೀವು ಪತಿ ಜೊತೆ ಮನಸ್ಸು ಬಿಚ್ಚಿ ಮಾತನಾಡಬೇಕಿದೆ. ಮಾತು, ಚರ್ಚೆಯಿಂದ ಅನೇಕ ವಿಷ್ಯಗಳು ಬಗೆಹರಿಯುತ್ತವೆ. ಮಾತನಾಡುವ ಬದಲು ಅನುಮಾನಪಡುವುದು, ಜಗಳವಾಡುವುದು ಮಾಡಿದ್ರೆ ಇಬ್ಬರ ಸಂಬಂಧ ಹಾಳಾಗುತ್ತದೆ. ನಿಮ್ಮ ಮನಸ್ಸು ಮತ್ತಷ್ಟು ಹದಗೆಡುತ್ತದೆ ಎನ್ನುತ್ತಾರೆ ತಜ್ಞರು. 

ಗಂಡಸ್ರು ಮಾಡೋ ಈ ಕೆಲಸ ವಿಶ್ವದ ಯಾವ ಹೆಂಡ್ತಿಗೂ ಇಷ್ಟವಾಗೋಲ್ಲ ಬಿಡಿ!

ನಿಮ್ಮ ಸಾಮರ್ಥ್ಯ (Ability) ಮತ್ತು ದೌರ್ಬಲ್ಯಗಳನ್ನು (Weakness) ಗುರುತಿಸಬೇಕು. ನಿಮ್ಮ ಕಾಲ ಮೇಲೆ ನೀವು ನಿಲ್ಲಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು (Confidence) ಹೆಚ್ಚಿಸುತ್ತದೆ. ಅಭದ್ರತೆ (Insecurity) ಕೂಡ ದೂರವಾಗುತ್ತದೆ. ಪುರುಷನಾದವನು ಬೇರೆ ಮಹಿಳೆಯರನ್ನು ನೋಡುವುದು ಸಾಮಾನ್ಯ ಸಂಗತಿ. ಅದಕ್ಕೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಪತಿ ನಿಮ್ಮನ್ನು ಪ್ರೀತಿಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸುತ್ತಮುತ್ತಲಿನ ವಸ್ತು, ವ್ಯಕ್ತಿಗಳನ್ನು ನೋಡುವ  ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಂದ್ವೇಳೆ ಪತಿ ವರ್ತನೆಯಲ್ಲೂ ಬದಲಾವಣೆಯಾಗಿದ್ದರೆ ಆತನ ಮೇಲೆ ಕಣ್ಣಿಡಿ. ವರ್ತನೆ ಹಿಂದಿನಂತೆ ಇದೆ ಅಂದ್ರೆ ಚಿಂತಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. 
 

Latest Videos
Follow Us:
Download App:
  • android
  • ios