ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ನಡುವಿನ ವಿವಾಹ ಮುರಿದು ಬಿದ್ದ ನಂತರ ಗಾಯಕ ಪಲಾಶ್ ಮುಚ್ಚಲ್ ಗ್ರಹಚಾರ ಸಂಪೂರ್ಣ ಕೆಟ್ಟಂತೆ ಕಾಣುತ್ತಿದೆ. ಪಲಾಶ್ ಮುಚ್ಚಲ್ ವಾಕಿಂಗ್ ಸ್ಟೈಲ್ ಕೂಡ ಇತ್ತೀಚೆಗೆ ನೆಟ್ಟಿಗರಿಂದ ಸಖತ್ ಟ್ರೋಲ್ ಆಗ್ತಿದ್ದು, ಅವರು ಏನ್ ಕಾಮೆಂಟ್ ಮಾಡಿದ್ದಾರೆ ನೋಡಿ..
ಪಲಾಶ್‌ಗೆ ನಡೆಯಲಾಗದಂತೆ ಬಾರಿಸಿದ್ರಾ ಮಹಿಳಾ ಕ್ರಿಕೆಟರ್ಸ್
ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ನಡುವಿನ ವಿವಾಹ ಮುರಿದು ಬಿದ್ದ ನಂತರ ಗಾಯಕ ಪಲಾಶ್ ಮುಚ್ಚಲ್ ಗ್ರಹಚಾರ ಸಂಪೂರ್ಣ ಕೆಟ್ಟಂತೆ ಕಾಣುತ್ತಿದೆ. ಪಲಾಶ್ ಮುಚ್ಚಲ್ ವಾಕಿಂಗ್ ಸ್ಟೈಲ್ ಕೂಡ ಇತ್ತೀಚೆಗೆ ನೆಟ್ಟಿಗರಿಂದ ಸಖತ್ ಟ್ರೋಲ್ ಆಗ್ತಿದ್ದು, ಸ್ಮೃತಿ ಮಂಧಾನಗೆ ಮೋಸ ಮಾಡಿದ ಪಲಾಶ್‌ಗೆ ಸರಿಯಾಗಿ ನಡೆಯುವುದಕ್ಕೂ ಆಗದಂತೆ ಮಹಿಳಾ ಕ್ರಿಕೆಟರ್ಸ್‌ಗಳು ಪಲಾಶ್‌ಗೆ ಬಾರಿಸಿದ್ರಾ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಪಲಾಶ್ ಮುಚ್ಚಲ್ ವಿರುದ್ಧ ಸ್ಮೃತಿ ಮಂಧಾನ ಬಾಲ್ಯ ಸ್ನೇಹಿತ ವಿದ್ನ್ಯಾನ್ ಮಾನೆ 40 ಲಕ್ಷ ಹಣದ ವಂಚನೆಯ ಆರೋಪ ಮಾಡಿ ಕೇಸ್ ದಾಖಲಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸಮರ ಎದುರಿಸುತ್ತಿರುವ ಪಲಾಶ್ ಮುಚ್ಚಲ್ ಕೋರ್ಟ್‌ಗೆ ಆಗಮಿಸಿದ ವೇಳೆ ಪಪಾರಾಜಿಗಳು ಅವರ ಹಿಂದೆ ಬಿದ್ದು, ಅವರ ವೀಡಿಯೋವನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಆದರೆ ನೆಟ್ಟಿಗರು ಈ ವೀಡಿಯೋದಲ್ಲಿ ಪಲಾಶ್ ಮುಚ್ಚಲ್ ನಡೆಯುತ್ತಿರುವ ರೀತಿಗೆ ವ್ಯಂಗ್ಯ ಮಾಡಿದ್ದಾರೆ. ಇವನಂತವನಿಗೆ ಸ್ಮೃತಿ ಹೇಗೆ ಸಿಕ್ಕಿದರು ಸದ್ಯ ಸ್ಮೃತಿ ಜಸ್ಟ್ ಮಿಸ್ ಆಗಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಸ್ಮೃತಿ ಮಂಧಾನ ಬಾಲ್ಯ ಸ್ನೇಹಿತ ವಿದ್ನ್ಯಾನ್ ಮಾನೆ ಅವರು ಪಲಾಶ್ ಮಚ್ಚಲ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ಅದರ ಜೊತೆಗೆ ಅವರು ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ ಮದುವೆ ಮುರಿದು ಬಿದ್ದ ದಿನ ಏನಾಯ್ತು ಎಂಬ ಹಲವು ಕುತೂಹಲಕಾರಿ ವಿಚಾರವನ್ನು ಹೇಳಿದ್ದರು. ಸ್ಮೃತಿ ಮಂಧಾನ ಮದುವೆಗಾಗಿ ಆಗಮಿಸಿದ ಭಾರತೀಯ ಮಹಿಳಾ ತಂಡದ ಕ್ರಿಕೆಟರ್‌ಗಳು, ಮದುವೆ ದಿನವೇ ಬೇರೆ ಮಹಿಳೆಯೊಂದಿಗೆ ಬೆಡ್‌ನಲ್ಲಿ ಪಲಾಶ್ ಮುಚ್ಚಲ್‌ನನ್ನು ನೋಡಿ ಅವರೇ ಆತನಿಗೆ ಸರಿಯಾಗಿ ಬಾರಿಸಿದ್ದರು ಎಂದು ವಿದ್ನ್ಯಾನ್ ಮಾನೆ ಹೇಳಿದ್ದರು. ಇದೇ ಕಾರಣಕ್ಕೆ ಈಗ ನೆಟ್ಟಿಗರು ಪಲಾಶ್ ಮುಚ್ಚಲ್ ನಡಿಗೆ ನೋಡಿ ಮಹಿಳಾ ಕ್ರಿಕೆಟರ್‌ಗಳು ಸರಿಯಾಗಿ ನಡೆಯಲಾಗದಂತೆ ಥಳಿಸಿದ್ದಾರಾ ಎಂದು ಕೇಳ್ತಿದ್ದಾರೆ.
ಇದನ್ನೂ ಓದಿ: ಮೃತ ಸೋದರನ ಮೂವರು ಸ್ನೇಹಿತರಿಂದಲೇ 6 ವರ್ಷದ ಬಾಲಕಿಯ ಗ್ಯಾಂಗ್*ರೇಪ್: ಆರೋಪಿಗಳೆಲ್ಲರೂ 10ರಿಂದ 14 ವರ್ಷದೊಳಗಿನವರು
ಇತ್ತ ಪಲಾಶ್, ತನ್ನ ಹಾಗೂ ಸ್ಮೃತಿ ಮಂಧಾನ ಮದುವೆ ಮುರಿದು ಬೀಳುವುದಕ್ಕೆ ಕಾರಣವಾದ ಸನ್ಸೇಷನಲ್ ವಿಚಾರವನ್ನು ಹೇಳಿದ ವಿದ್ನ್ಯಾನ್ ಮಾನೆ ವಿರುದ್ಧ ನಂತರ ಪಲಾಶ್ ಮುಚ್ಚಲ್ 10 ಕೋಟಿ ಮೌಲ್ಯದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಘೋಷಣೆ ಮಾಡಿದ್ದರು. ಸ್ಮೃತಿ ಮಂಧಾನ ಅವರ ಬಾಲ್ಯದ ಗೆಳೆಯ ನಟ ನಿರ್ಮಾಪಕ ವಿದ್ನ್ಯಾನ್ ಮಾನೆ ನನ್ನ ಪ್ರತಿಷ್ಠೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು, ಅತಿರೇಕದ ಮತ್ತು ಅತ್ಯಂತ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ. ಹೀಗಾಗಿ ಸಾಂಗ್ಲಿ ಮೂಲದ ವಿದ್ಯಾನ್ ಮಾನೆ ಅವರಿಗೆ ನನ್ನ ವಕೀಲ ಶ್ರೇಯಂಶ್ ಮಿಥಾರೆ ಅವರು ₹10 ಕೋಟಿ ಮಾನನಷ್ಟದ ಕಾನೂನು ನೋಟಿಸ್ ಕಳುಹಿಸಿದ್ದಾರೆ ಎಂದು ಪಲಾಶ್ ಮುಚ್ಛಲ್ ತಮ್ಮ ವೈ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಘೋಷಿಸಿದ್ದರು.
ಇದನ್ನೂ ಓದಿ: ಮದುವೆ ದಿನ ಬೆಸ್ಟ್ ಫ್ರೆಂಡ್ ಕೊಟ್ಟಿದ್ದ ಬೆಳ್ಳಿಯ ಗಿಫ್ಟ್ ಮಾರಲು ಹೋದವಳಿಗೆ ಆಘಾತ: ಸೊಂಟ ಪಟ್ಟಿಯ ಒಳಗೆ ಇದ್ದಿದ್ದೇನು?
ಇವರು ಮಾನನಷ್ಟ ಮೊಕದ್ದಮೆ ಹೂಡಿದ ವಿಚಾರಕ್ಕೂ ನೆಟ್ಟಿಗರು ಕಾಲೆಳೆದಿದ್ದರು. ಪಲಾಶ್ ಭ್ರಮೆಯಲ್ಲಿದ್ದಂತೆ ಕಾಣಿಸುತ್ತಿದೆ ಅವರಿಗೆ ಏನು ಖ್ಯಾತಿ ಇತ್ತು ಸ್ಮೃತಿ ಮಂಧಾನ ಅವರಿಂದಲೇ ನನಗೆ ಇಂತಹವನೋರ್ವ ಇದ್ದಾನೆ ಎಂಬುದು ತಿಳಿಯಿತು ಎಂದೆಲ್ಲಾ ಕಾಮೆಂಟ್ ಮಾಡಿದ್ದರು.
ಸ್ಮೃತಿ ಮಂಧಾನ ಹಾಗೂ ಪಾಲಾಶ್ ಮುಚ್ಚಲ್ ಅವರ ಮದುವೆ ಕಳೆದ ಡಿಸೆಂಬರ್‌ನಲ್ಲಿ ಕೊನೆಕ್ಷಣದಲ್ಲಿ ರದ್ದಾಗಿತ್ತು. ಮದುವೆಗೆ ಕೆಲ ಕ್ಷಣಗಳಿರುವಾಗ ಬೇರೆ ಮಹಿಳೆಯ ಜೊತೆ ಪಲಾಶ್ ಮುಚ್ಚಲ್‌ನ ಪಲ್ಲಂಗದಾಟವನ್ನು ನೋಡಿದ ಸ್ಮೃತಿ ಮಂಧಾನ ಸ್ನೇಹಿತರಾದ, ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರರೇ ಸ್ವತಃ ಪಾಲಾಶ್ ಮುಚ್ಚಲ್‌ಗೆ ಥಳಿಸಿದ್ದರು ಎಂದು ವಿದ್ನ್ಯಾನ್ ಮಾನೆ ಹೇಳಿದ್ದರು.


