ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 6 ವರ್ಷದ ಬಾಲಕಿಯ ಮೇಲೆ ಆಕೆಯ ಮೃತ ಸಹೋದರನ ಅಪ್ರಾಪ್ತ ಸ್ನೇಹಿತರೇ ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ. ಆಹಾರದ ಆಸೆ ತೋರಿಸಿ ಖಾಲಿ ಕಟ್ಟಡಕ್ಕೆ ಕರೆದೊಯ್ದು ಈ ಪೈಶಾಚಿಕ ಕೃತ್ಯ ಎಸಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

6 ವರ್ಷದ ಬಾಲಕಿ ಮೇಲೆ ಗ್ಯಾಂಗ್‌ರೇಪ್:

ನವದೆಹಲಿ: 6 ವರ್ಷದ ಬಾಲಕಿಯನ್ನು ಆಕೆಯ ಮೃತ ಸೋದರನ ಅಪ್ರಾಪ್ತ ಸ್ನೇಹಿತರೇ ಬರ್ಬರವಾಗಿ ಅತ್ಯಾ*ಚಾರವೆಸಗಿದಂತಹ ಭಯಾನಕ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಜನವರಿ 18 ರಂದು ಈ ಪೈಶಾಚಿಕ ಕೃತ್ಯ ನಡೆದಿದೆ. ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂವರು ಹುಡುಗರು ಸಾಮೂಹಿಕ ಅತ್ಯಾ*ಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆಘಾತಕಾರಿ ವಿಚಾರ ಎಂದರೆ ಆರೋಪಿಗಳೆಲ್ಲರೂ 10, 13 ಹಾಗೂ14 ವರ್ಷದೊಳಗಿನವರಾಗಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಹಾಗೂ ಆತನ ಕುಟುಂಬ ಪರಾರಿಯಾಗಿದೆ.

ಅತ್ಯಾ*ಚಾರಕ್ಕೊಳಗಾದ ಆರು ವರ್ಷದ ಬಾಲಕಿ ತನ್ನ ಪೋಷಕರು ಹಾಗೂ ಒಡಹುಟ್ಟಿದವರ ಜೊತೆ ವಾಸಿಸುತ್ತಿದ್ದು, ಆಕೆಯ ಸ್ಥಿತಿ ಸುಧಾರಿಸುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಜನವರಿ 18ರಂದು ಸಂಜೆ 7 ಗಂಟೆ ಸುಮಾರಿಗೆ ಬಾಲಕಿ ತೀವ್ರ ರಕ್ತಸ್ರಾವದೊಂದಿಗೆ ಮನೆಗೆ ಬಂದಿದ್ದಾಳೆ. ಆರಂಭದಲ್ಲಿ ಕೇಳಿದಾಗ ಆಕೆ ತಾನು ಬಿದ್ದಿದ್ದರಿಂದ ರಕ್ತಸ್ರಾವ ಆಗಿದ್ದಾಗಿ ಹೇಳಿದ್ದಾಳೆ. ಆದರೆ ಮನೆಗೆ ಬಂದ ಆಕೆಗೆ ಪ್ರಜ್ಞೆ ತಪ್ಪಿದೆ. ನಂತರ ನಾನು ಆಕೆಯ ಮುಖದ ಮೇಲೆ ನೀರು ಹಾಕಿ ಆಕೆಯನ್ನು ಎಚ್ಚರಗೊಳಿಸಿ ಏನಾಯಿತು ಎಂದು ಕೇಳಿದಾಗ ಆಕೆ ಆಗಲೂ ತನ್ನ ಬಿದ್ದಿದ್ದಾಗಿ ಹೇಳಿದ್ದಾಳೆ. ನಂತರ ನಮ್ಮ ಪಕ್ಕದ ಮನೆಯ ನೆರೆಮನೆಯ 13 ವರ್ಷದ ಹುಡುಗ ಕೂಡ ಅದೇ ಕಥೆ ಹೇಳಿದ್ದಾನೆ.

ಆದರೆ ಕುಟುಂಬದವರು ಪದೇ ಪದೇ ವಿಚಾರಿಸಿ ಪ್ರಶ್ನಿಸಿದಾಗ ಮಗು ಬಾಯ್ಬಿಟ್ಟಿದ್ದು, 13 ವರ್ಷದ ನೆರೆಮನೆಯ ಹುಡುಗ ಮತ್ತು ಕುಟುಂಬಕ್ಕೆ ಪರಿಚಿತರಾಗಿರುವ ಇತರ ಇಬ್ಬರು ಹುಡುಗರು ತನ್ನನ್ನು ಆಹಾರದ ನೀಡುವುದಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ನನ್ನ ಪತಿ ಚಾಕೋಲೇಟ್ ಖರೀದಿಸಿ ಆಕೆಗೆ ನೀಡಿ ನಮ್ಮ ಲೇನ್‌ನ ಪ್ರವೇಶದ್ವಾರದಲ್ಲಿ ಅವಳನ್ನು ಬಿಟ್ಟು ಹೋಗಿದ್ದರು. ಅಲ್ಲಿ ಹುಡುಗರು ಅವಳನ್ನು ಹಿಡಿದು ಚೌಮಿನ್ (ಒಂದು ರೀತಿಯ ನೂಡಲ್ಸ್) ನೀಡುವುದಾಗಿ ಆಕೆಗೆ ಆಸೆ ತೋರಿಸಿ ಅಲ್ಲಿಂದ ಆಕೆಯನ್ನು ಹತ್ತಿರದ ಖಾಲಿ ಇರುವ ಎರಡು ಅಂತಸ್ತಿನ ಕಟ್ಟಡಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವಳ ಕೈಗಳನ್ನು ಹಾಗೂ ಬಾಯಿಯನ್ನು ಕಟ್ಟಿ ಆಕೆಯ ಮೇಲೆ ಕೃತ್ಯವೆಸಗಿದ್ದಾರೆ ಎಂದು ಮಗುವಿನ ತಾಯಿ ಹೇಳಿದ್ದಾರೆ.

ವಿಚಾರಣೆಯ ಸಮಯದಲ್ಲಿ ಮಗು ಈ ವಿವರಗಳನ್ನು ಹಂಚಿಕೊಂಡಿದ್ದಾಳೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದರು. ಕೃತ್ಯವೆಸಗಿದ ನಂತರ ಹುಡುಗರು ಅವಳನ್ನು ಸುಮ್ಮನಿರುವಂತೆ ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತ ವಿಚಾರ ತಿಳಿದ ಕೂಡಲೇ ಆ ಆರು ವರ್ಷದ ಮಗುವಿನ ಕುಟುಂಬದವರು ಕುಟುಂಬದವರು ಜಾಫ್ರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಆ ಮಗುವಿಗೆ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ವೈದ್ಯಕೀಯ ವರದಿಯಲ್ಲಿ ಆಕೆಗೆ ನಡೆಯಲು ಸಾಧ್ಯವಾಗುತ್ತಿಲ್ಲ ಮತ್ತು ತೀವ್ರ ರಕ್ತಸ್ರಾವವಾಗಿದೆ ಎಂಬ ಮಾಹಿತಿ ಇದೆ. ಅಲ್ಲದೇ ಮಗುವಿಗೆ ಎಚ್ಐವಿ ಮತ್ತು ಇತರ ಪರೀಕ್ಷೆಗಳನ್ನು ನಡೆಸುವಂತೆ ಸೂಚಿಸಲಾಗಿದೆ.

ಬಾಲಕಿ ಪ್ರಸ್ತುತ ಹಾಸಿಗೆ ಹಿಡಿದಿದ್ದಾಳೆ. ಕುಳಿತುಕೊಂಡರೆ ನೋವು ಬರುತ್ತದೆ ಮತ್ತು ನಡೆದಾಡಿದರೆ ಅಥವಾ ಆಡಿದರೆ ಆಕೆಗೆ ರಕ್ತಸ್ರಾವವಾಗುತ್ತದೆ ಎಂದು ಆಕೆಯ ತಾಯಿ ಹೇಳಿದ್ದಾರ. ಪೊಲೀಸರು ಪ್ರಕರಣವನ್ನು ಭಜನ್‌ಪುರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು,. ತನಿಖಾಧಿಕಾರಿಗಳು ಘಟನೆ ನಡೆದ ಕಟ್ಟಡಕ್ಕೆ ಭೇಟಿ ನೀಡಿ, ಅಲ್ಲಿ ರಕ್ತ ಇರುವುದನ್ನು ಗಮನಿಸಿದ್ದು, ವಿಧಿ ವಿಜ್ಞಾನ ತಂಡ ಸ್ಥಳದಿಂದ ಸಾಕ್ಷ್ಯ ಸಂಗ್ರಹಿಸಿದೆ.

ಜನವರಿ 19 ರಂದು ಪೊಲೀಸರು 10 ಮತ್ತು 13 ವರ್ಷದ ಆರೋಪಿಗಳನ್ನು ಬಂಧಿಸಿ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿದ್ದಾರೆ. . 14 ವರ್ಷದ ಶಂಕಿತ ಮತ್ತು ಅವನ ಕುಟುಂಬ ಇನ್ನೂ ನಾಪತ್ತೆಯಾಗಿದೆ. ಬಾಲಕಿಯ ತಾಯಿ ಹೇಳುವ ಪ್ರಕಾರ ಆ ಮೂವರು ಹುಡುಗರು ಕಳೆದ ವರ್ಷ ನಿಧನರಾದ ಅವರ 14 ವರ್ಷದ ಮಗನ ಸ್ನೇಹಿತರಾಗಿದ್ದಾರೆ

ರಿಕ್ಷಾ ಚಾಲಕನಾಗಿರುವ ಮಗುವಿನ ತಂದೆ, ಆರೋಪಿಗಳನ್ನು ವಯಸ್ಕರಂತೆ ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿದ್ದರೆ, ಅವರು ಕಠಿಣ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಅವರನ್ನು ಬಿಡುಗಡೆ ಮಾಡಬಾರದು ಎಂದು ಅವರು ಹೇಳಿದರು. ಘಟನೆಯ ಬಳಿ ತನ್ನ ಹೆಣ್ಣುಮಕ್ಕಳ ಸುರಕ್ಷತೆಯ ಭಯದಿಂದಾಗಿ ತಾನು ಕೆಲಸಕ್ಕೆ ಮರಳಿಲ್ಲ ಎಂದು ಆ ಮಗುವಿನ ತಂದೆ ಹೇಳಿದ್ದಾರೆ.

ಈ ಪ್ರಕರಣವು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಸೋಮವಾರ, ಬಲಪಂಥೀಯ ಗುಂಪುಗಳು ಮೂರನೇ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.