ಮದುವೆಯಾಗಿ 20 ವರ್ಷಗಳ ನಂತರ, ಯೆಮನ್‌ನ ಮಹಿಳೆಯೊಬ್ಬಳು ತನ್ನ ಸ್ನೇಹಿತೆ ನೀಡಿದ್ದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರಲು ಹೋದಾಗ ಆಘಾತಕಾರಿ ಸತ್ಯವೊಂದು ಬಯಲಾಗಿದೆ. ಆ ಸೊಂಟದ ಪಟ್ಟಿಯನ್ನು ಕತ್ತರಿಸಿ ಜ್ಯುವೆಲ್ಲರಿ ಶಾಪ್ ಮಾಲೀಕರೇ ಆಘಾತಗೊಂಡಿದ್ದರು ಹಾಗಿದ್ದರೆ ಒಳಗಿದ್ದಿದ್ದು ಏನು?
ಮದುವೆ ದಿನ ಗೆಳತಿ ನೀಡಿದ ಗಿಫ್ಟ್ ಮಾರಲು ಹೊರಟವಳಿಗೆ ಆಘಾತ
ಕೆಲವು ವಿಚಾರಗಳು ವಿಜ್ಞಾನದ ಅರಿವಿಗೆ ನಿಲುಕದೇ ಹೋದರು ಮೂಢನಂಬಿಕೆ ಎಂದು ಹೀಗಳೆದರೂ ನಂಬದೇ ಇರೋಕೆ ಸಾಧ್ಯವಿಲ್ಲ, ಊಹೆಗೂ ನಿಲುಕದ ಕಣ್ಮುಂದೆ ನಡೆಯುವಂತಹ ಕೆಲವು ಘಟನೆಗಳನ್ನು ನೀವೇಷ್ಟೇ ವೈಜ್ಞಾನಿಕವಾಗಿ ಯೋಚಿಸಿದರು ನಂಬಲೇಬೇಕಾಗುತ್ತದೆ. ಮಾಟ ಮಂತ್ರಗಳನ್ನು ವೈಚಾರಿಕ ಹಿನ್ನೆಲೆಯುಳ್ಳವರು ನಂಬದೇ ಹೋದರೂ ಕೂಡ ಅದು ಈಗಿನಿಂದಲ್ಲ, ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಶತ್ರುಗಳ ಸಂಹಾರಕ್ಕಾಗಿ ಈ ದುಷ್ಟಶಕ್ತಿಯನ್ನು ಬಳಸಿಕೊಂಡವರಿದ್ದರೆ ಹಾಗೂ ಅದು ಈಗಲೂ ಇದೆ ಮುಂದೆಯೂ ಇರುತ್ತದೆ. ಭಾರತದಲ್ಲಿ ಮಾಟ ಮಂತ್ರವನ್ನು ನಂಬುವಷ್ಟು ಕೆಲವರು ದೇವರನ್ನೂ ನಂಬುವುದಿಲ್ಲ, ದಾರಿಯಲ್ಲಿ ನಿಂಬೆಹುಳಿ ಕಂಡರೆ ಜನ ದಿಕ್ಕೇ ಬದಲಾಯಿಸುತ್ತಾರೆ.
ಹಾಗೆಯೇ ಇಲ್ಲೊಂದು ಕಡೆ ಮಹಿಳೆಯೊಬ್ಬರಿಗೆ ಭಯಾನಕವಾದ ಅನುಭವವಾಗಿದೆ. ತನ್ನ ಆತ್ಮೀಯ ಸ್ನೇಹಿತೆಯೊಬ್ಬಳು ತನ್ನ ಮದುವೆಯ ಸಮಯದಲ್ಲಿ ನೀಡಿದ್ದ ಉಡುಗೊರೆಯಾದ ಬೆಳ್ಳಿಯ ಸೊಂಟದ ಪಟ್ಟಿಯನ್ನು ಮಾರುವುದಕ್ಕೆಂದು ಅಂಗಡಿಗೆ ತೆಗೆದುಕೊಂಡು ಹೋದಾಗ ಅಲ್ಲಿ ಆಕೆಗೆ ಆಘಾತ ಕಾದಿತ್ತು. ಆ ಬೆಳ್ಳಿಯ ಸೊಂಟದ ಪಟ್ಟಿಯ ಒಳಗೆ ಇದ್ದಿದ್ದನ್ನು ನೋಡಿ ಆ ಆಭರಣ ಅಂಗಡಿಯ ಮಾಲೀಕನೂ ಅಚ್ಚರಿ ಪಟ್ಟಿದ್ದ. ಹೌದು ಮಾಟ ಮಂತ್ರಕ್ಕೆ ಸಂಬಂಧಿಸಿದ ವಸ್ತು ಇರುವುದು ಕಂಡು ಬಂದಿತ್ತು. ಬರೀ ಅಷ್ಟೇ ಅಲ್ಲ ಅದು ಆಕೆ ಗರ್ಭಿಣಿ ಆಗುವುದಕ್ಕೆ ಅಡ್ಡಿಯಾಗಿತ್ತು. ಅಂದರೆ ಅದು ಬಂಜೆತನಕ್ಕೆ ಕಾರಣವಾಗಿತ್ತು. ಮದುವೆಯಾದ ಬರೋಬ್ಬರಿ 20 ವರ್ಷದ ನಂತರ ಆಕೆ ಆ ಸೊಂಟ ಪಟ್ಟಿಯನ್ನು ಮಾರುವುದಕ್ಕೆಂದು ಹೊರಟಾಗ ಘಟನೆ ಬೆಳಕಿಗೆ ಬಂದಿದೆ ಎಂಬ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಆಂಬುಲೆನ್ಸ್ ಡೋರ್ ಒಳಭಾಗದಿಂದ ಜಾಮ್ ಆಗಿ ತೀವ್ರ ಅನಾರೋಗ್ಯ ಸ್ಥಿತಿಯಲ್ಲಿದ್ದ ರೋಗಿ ಸಾವು
ಯೆಮನ್‌ನ ಮಹಿಳೆಯೊಬ್ಬರಿಗೆ ಈ ಘಟನೆ ನಡೆದಿದ್ದು, ಆ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಗೆ ಕಾರಣವಾಗಿದೆ. ಅನೇಕರು ಆಕೆ ಗರ್ಭಿಣಿ ಆಗುವುದನ್ನು ಅದು ತಡೆಯುವುದಕ್ಕೆ ಹೇಗೆ ಸಾಧ್ಯ? ಆಕೆ ಅದನ್ನು ದಿನವೂ ಧರಿಸುತ್ತಿದ್ದಳೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಇದೊಂದು ರೀತಿ ಬ್ಲ್ಯಾಕ್ ಮ್ಯಾಜಿಕ್(ಮಾಟ ಮಂತ್ರ) ಅದು ಮನೆಯಲ್ಲಿದ್ದರೂ ಸಾಕು ಹಾನಿಯಾಗುತ್ತದೆ. ಆದರೆ ಈಗ ಆಕೆ ಕೊನೆಗೂ ಅದರಿಂದ ಬಿಡುಗಡೆ ಹೊಂದಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಅವುಗಳನ್ನು ನಂಬುವ ಅಗತ್ಯವಿಲ್ಲ ಆದರೆ ಅವುಗಳ ಬಗ್ಗೆ ನಿಮಗೆ ತಿಳಿದಿರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಹಾಗೆಯೇ ಒಬ್ಬರು ಇದರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಕ್ಕಳನ್ನು ಬಯಸದ ವಿವಾಹಿತ ದಂಪತಿಗಳು ತಮ್ಮ ಮೇಲೆಯೇ ಈ ರೀತಿ ಮಾಟಮಂತ್ರ ಮಾಡಿಕೊಳ್ಳಬಹುದಲ್ಲ,, ವರ್ಷಗಳ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ನಂತರವೂ ಅಭಿವೃದ್ಧಿಪಡಿಸಿದ ಸಂಕೀರ್ಣವಾದ 99% ವಷ್ಟೇ ಖಚಿತವಾದ ವೈದ್ಯಕೀಯ ವಿಧಾನಗಳ ಮೂಲಕ ಏಕೆ ಹೋಗಬೇಕು ಎಂದು ವ್ಯಂಗ್ಯವಾಡಿದ್ದಾರೆ. ಅವಳು ಹಣಕ್ಕಾಗಿ ಆ ಬೆಲ್ಟ್‌ನ್ನು ಮಾರುವ ಪರಿಸ್ಥಿತಿ ಬಂದಿದೆ ಎಂದರೆ ಅದು ಕೆಲಸ ಮಾಡಿದೆ ಎಂದರ್ಥ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಅನೇಕರು ಈ ಮಾಟಮಂತ್ರಗಳೆಲ್ಲಾ ಕೆಲಸ ಮಾಡುತ್ತದೆಯೇ ಎಂದು ಪ್ರಶ್ನಿಸಿದ್ದಕ್ಕೆ ನಿಮ್ಮ ಗ್ರಹಚಾರ ಕೆಟ್ಟಿದ್ದರೆ ಅದು ಖಂಡಿತ ಕೆಲಸ ಮಾಡುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಸದನದಲ್ಲಿ ಮೇಷ್ಟ್ರಂತೆ ಹಾಜರಿ ಕರೆದ ಸ್ಪೀಕರ್ ಖಾದರ್: ಹಲವು ಸಚಿವರ ಗೈರು ಮಕ್ಕಳಂತೆ ಬೊಬ್ಬೆ ಹೊಡೆದವರಾರು?: ವೀಡಿಯೋ
ದುರಾದೃಷ್ಟವಶಾತ್ ಇದು ಕೆಲಸ ಮಾಡುತ್ತದೆ ಎಂಬುದನ್ನು ನಂಬಲೇಬೇಕು ನಾನು ಇದನ್ನು ಕಣ್ಣಾರೆ ಕಂಡಿದ್ದೇನೆ. ಮಹಿಳೆಯೊಬ್ಬಳು ತನ್ನ ಸ್ವಂತ ಸೋದರನ ಕುಟುಂಬವನ್ನೇ ಆಸ್ತಿಗಾಗಿ ನಾಶ ಮಾಡಿದಳು. ಬಹಳ ಹತ್ತಿರದವರೇ ಈ ರೀತಿ ಹಾನಿ ಮಾಡುತ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ನಂಬುವಿರೋ ಇಲ್ಲವೋ ಆದರೆ ನಮ್ಮ ದೇಶದಲ್ಲಿ ಇದು ಸಾಮಾನ್ಯವಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕರು ಆಕೆಗೆ ಮಾಟಮಂತ್ರ ಮಾಡಿದ ಸ್ನೇಹಿತೆ ಎಂಥವಳಿರಬೇಕು. ಬಹುಶಃ ಆಕೆ ಶತ್ರುವಿಗಿಂತಲೂ ಕೆಟ್ಟವಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಆ ಬೆಳ್ಳಿಯ ಸೊಂಟದ ಬೆಲ್ಟ್ ಅನ್ನು ಕತ್ತರಿಸಿದ ಅಂಗಡಿಯವರಿಗೆ ಅದರ ಒಳಗೆ ಪ್ಲಾಸ್ಟಿಕ್ಒಳಗೆ ದಾರದಿಂದ ಸುತ್ತಿದ್ದ ಸಣ್ಣ ವಸ್ತುವೊಂದು ಪತ್ತೆಯಾಗಿದ್ದು, ಅವರು ಅದನ್ನು ತೆಗೆಯುವುದನ್ನು ಕಾಣಬಹುದಾಗಿದೆ. ಒಟ್ಟಿನಲ್ಲಿ ಅನೇಕರು ಆತ್ಮೀಯ ಗೆಳತಿಯೇ ಹೀಗೆ ಮಾಡಿರುವುದಕ್ಕೆ ಅಚ್ಚರಿ ಪಟ್ಟಿದ್ದಾರೆ.


