Asianet Suvarna News Asianet Suvarna News

ಬದುಕಿಗೆ ಬೇರೊಂದು ಅರ್ಥ ನೀಡುವ ಮಕ್ಕಳ ಕಾಯಿಲೆಗಳು- Satya Nadella ಹೇಳಿದ್ದೇನು?

ಮೈಕ್ರೋಸಾಫ್ಟ್‌ನಂಥ ಕಂಪನಿಯ ಸಿಇಒ ಆಗಿ ಪವರ್‌ಫುಲ್ ಪೊಸಿಷನ್‌ನಲ್ಲಿ ಇದ್ರೂ ಮಗುವಿನ ಕಾಯಿಲೆ ವಿಚಾರಕ್ಕೆ ಬಂದಾಗ ಅವರು ನಮ್ಮನಿಮ್ಮೆಲ್ಲರ ಹಾಗೆ ಸಾಮಾನ್ಯ ತಂದೆಯೇ.
 

Satya Nadella opens up about how his childrens disabilities taught him empathy
Author
Bengaluru, First Published Mar 1, 2022, 4:17 PM IST

ಮೈಕ್ರೋಸಾಫ್ಟ್ (Microsoft) ಸಿಇಒ ಸತ್ಯಾ ನಾಡೆಲ್ಲಾ (Satya Nadella) ಅವರು ತಮ್ಮ ಮಗ ಝೈನ್ (Zain) ಅನ್ನು ಕಳೆದುಕೊಂಡಿದ್ದಾರೆ. ಮಗನಿಗೆ 26 ವರ್ಷ ವಯಸ್ಸಾಗಿತ್ತು. ಆದರೆ ದೇಹಕ್ಕೆ ತಕ್ಕಂತೆ ಮೆದುಳು (Brain) ಬೆಳೆದಿರಲಿಲ್ಲ. ಹುಟ್ಟುತ್ತಲೇ ಮೆದುಳಿಗೆ ಲಕ್ವ ಬಡಿದಿತ್ತು; ಸೆರೆಬ್ರಲ್ ಪಾಲ್ಸಿ (Cerebral Palsi) ಎಂದು ಇದನ್ನು ಕರೆಯುತ್ತಾರೆ. ಈ ಕಾಯಿಲೆ ಇರುವ ವ್ಯಕ್ತಿಗಳು ದೀರ್ಘಕಾಲ ಬದುಕುಳಿಯೋ ಸಾಧ್ಯತೆಗಳು ಕಡಿಮೆ. 
1996ರಲ್ಲಿ ಝೈನ್ ಜನಿಸಿದ್ದು. ಆಗ ಸತ್ಯಾಗೆ 29 ವರ್ಷ, ಮಡದಿ ಅನುಗೆ 25 ವರ್ಷ. ಹೊಸ ಬದುಕು ಆರಂಭಿಸುವ ಉತ್ಸಾಹದಲ್ಲಿದ್ದ ಅವರಿಗೆ ಮಗುವಿನ ಜನನದ ಜೊತೆಗೇ ಸಂಕಷ್ಟ ಎದುರಾಗಿತ್ತು. ಹೊಕ್ಕಳು ಬಳ್ಳಿ ಗರ್ಭದಲ್ಲಿರುವಾಗಲೇ ಕೊರಳಿಗೆ ಸುತ್ತು ಹಾಕಿಕೊಂಡು, ಉಸಿರುಗಟ್ಟಿ, ಮೆದುಳಿನ ಸಂಜ್ಞೆಗಳು ದೇಹಕ್ಕೆ ದೊರೆಯದೆ ಸೆರೆಬ್ರಲ್ ಪಾಲ್ಸಿ ಉಂಟಾಗಿತ್ತು. ಜನಿಸಿದ ನಂತರ ಎಲ್ಲದಕ್ಕೂ ಝೈನ್ ಹೆತ್ತವರನ್ನೇ ಅವಲಂಬಿಸಬೇಕಾಯಿತು. ಆತ ಹುಟ್ಟಿನಿಂದಲೇ ವ್ಹೀಲ್‌ಚೇರ್‌ನಲ್ಲಿದ್ದ, ಕಣ್ಣು ಕಾಣುತ್ತಲೇ ಇರಲಿಲ್ಲ. 

Zain Nadella Passes Away: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾಗೆ ಪುತ್ರ ವಿಯೋಗ!

ಮಗನ ಹುಟ್ಟು ಅವರ ಬದುಕನ್ನೇ ಬದಲಿಸಿತು. ಮುಂದೆ ಮೈಕ್ರೋಸಾಫ್ಟ್‌ನ ಸಿಇಒ (CEO) ಆದ ಸತ್ಯಾ, ದೃಷ್ಟಿ ಮತ್ತು ಶ್ರವಣ ದೋಷ (Speech and hearing problem) ಇರುವವರಿಗೆ, ಅಂಗವಿಕಲರಿಗೆ ಪೂರಕವಾದ ತಂತ್ರಜ್ಞಾನದ (Technology) ನಿರ್ಮಾಣದಲ್ಲಿ ಕೈಜೋಡಿಸಿದರು. ಮಗುವಿನ ಕಾಯಿಲೆ ತಮ್ಮನ್ನು ಇನ್ನಷ್ಟು ಜವಾಬ್ದಾರಿಯುತ, ಕೇರಿಂಗ್ ಮನುಷ್ಯನನ್ನಾಗಿ ಮಾಡಿತು ಎಂದು ಹೇಳುತ್ತಾರೆ ಸತ್ಯ. ಯಾಕೆ ನನಗೇ ಈ ಕಷ್ಟ ಎಂದು ನಾವು ಎಂದೂ ಕೇಳಿಕೊಳ್ಳಲಿಲ್ಲ. ಆದರೆ ಅವನನ್ನು ಖುಷಿಯಾಗಿಡಲು ಬೇಕಿದ್ದೆಲ್ಲಾ ಮಾಡಿದೆವು ಎನ್ನುತ್ತಾರೆ ಅವರು. ಮೆದುಳಿನ ಸಮಸ್ಯೆಗಳು ಇರುವವರ ಚಿಕಿತ್ಸೆಗಾಗಿ ಇರುವ ಎನ್‌ಜಿಒಗಳಿಗೂ ಅವರು ಒಂದಲ್ಲ ಒಂದು ರೀತಿಯಲ್ಲಿ ನೆರವಾದರು.

ಎಷ್ಟೇ ಪವರ್‌ಫುಲ್ ಆಗಿರಲಿ, ಎಂಥದೇ ದೊಡ್ಡ ಪೊಸಿಷನ್‌ನಲ್ಲಿ ಇರಲಿ, ಸಂಸಾರದ ದುಃಖಗಳು, ಕಷ್ಟಕೋಟಲೆಗಳು, ಕಾಯಿಲೆ ಕಸಾಲೆಗಳು ಮನುಷ್ಯನನ್ನು ಹೈರಾಣು ಮಾಡುತ್ತವೆ. ಕೆಲವೊಮ್ಮೆ ಅವು ಮನುಷ್ಯನನ್ನು ಗಟ್ಟಿಯಾಗಿಸುತ್ತವೆ ಕೂಡ. ಸತ್ಯ ವಿಚಾರದಲ್ಲಿ ಅವರು ಅನುವಿನಂಥ ಡೆಡಿಕೇಟೆಡ್ ಪತ್ನಿ ಇದ್ದುದರಿಂದ ವೃತ್ತಿಯಲ್ಲಿ ಇನ್ನಷ್ಟು ಮುಂದುವರಿಯಲು ಸಾಧ್ಯವಾಯಿತು. ಅನು ಮಗನ ಆರೈಕೆಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಅದಕ್ಕೂ ಮುನ್ನ ಅವರು ವೃತ್ತಿಪರ ಆರ್ಕಿಟೆಕ್ಟ್ ಆಗಿದ್ದರು. ಮಕ್ಕಳ ಸಣ್ಣಪುಟ್ಟ ಕಾಯಿಲೆಗಳೇ ಹೆತ್ತವರನ್ನು ಕಂಗಾಲು ಮಾಡುತ್ತವೆ. ಇನ್ನು ಗುಣಪಡಿಸಲಾಗಿದ ಕಾಯಿಲೆಗಳು, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು, ಮೆದುಳಿನ ಪ್ರಾಬ್ಲೆಮ್‌ಗಳು ಅಪ್ಪ ಅಮ್ಮನನ್ನೂ ಹಣಿದು ಹಾಕುತ್ತವೆ. 

ನಮ್ಮಲ್ಲಿ ಲೇಖಕ, ಪತ್ರಕರ್ತ, ಮಾಜಿ ಕೇಂದ್ರ ಸಚಿವ ಅರುಣ್ ಶೌರಿ (Arun Shourie) ಕೂಡ ಇಂಥದೇ ಸನ್ನಿವೇಶ ಎದುರಿಸಿದ್ದರು. ಅವರ ಪುತ್ರ ಆದಿತ್ಯ ಶೌರಿ ಕೂಡ ಸೆರೆಬ್ರಲ್ ಪಾಲ್ಸಿಯ ಜೊತೆಗೇ ಹುಟ್ಟಿದವನು. ಆತನಿಗೆ ಈಗ 45 ವರ್ಷ. ಆದಿತ್ಯನಿಗೂ ಇದೇ ಸ್ಥಿತಿ. ಏಳಲಾರ, ನಡೆಯಲಾರ. ಬಲಗೈ ಬಿಟ್ಟು ದೇಹದ ಇನ್ಯಾವ ಅಂಗವನ್ನೂ ಅಲುಗಾಡಿಸಲಾರ. ಅವರ ಪತ್ನಿಗೆ ಈಗ ಮರೆವಿನ ಕಾಯಿಲೆ ಆವರಿಸಿದೆ. ಬಲು ದೀರ್ಘ ಕಾಲ ಇಂಥ ಕಾಯಿಲೆಯುಕ್ತ ಸಂಸಾರವನ್ನು ಕಂಡಿರುವ ಅರುಣ್ ಶೌರಿ ಅವರು, ಸಾಹಿತ್ಯದಲ್ಲೂ ರಾಜಕೀಯದಲ್ಲೂ ದೇಶ ನೆನಪಿಸಿಕೊಳ್ಳುವಂಥ ಕೆಲವು ಸಾಧನೆಗಳನ್ನೂ ಮಾಡಿದ್ದಾರೆ. ಹೀಗೆ ಹೃದಯ ಹಿಂಡುವಂಥ ಸಮಸ್ಯೆಗಳನ್ನು ಹೊಂದಿದವರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಕಂಡರೆ ಹೃದಯ ತುಂಬಿ ಬರುತ್ತದೆ.

Parenting Tips: ಪೋಷಕರು ಮಕ್ಕಳ ಜೊತೆ ಹೇಗಿರಬೇಕು ?

ಫುಟ್ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್‌ (David beckham) ಹಾಗೂ ಫ್ಯಾಶನ್ ಐಕಾನ್ ವಿಕ್ಟೋರಿಯಾ ಬೆಕ್‌ಹ್ಯಾಮ್‌ (Victoria Beckham) ಅವರ ಮಗ ರೋಮಿಯೋ, ಅಪಸ್ಮಾರದಿಂದ (Epilesy) ನರಳುತ್ತಿರುವವನು. ಎಷ್ಟೆಂದರೆ, ಅವನಿಗೆ ಕ್ಯಾಮೆರಾದ ಫ್ಲಾಶ್‌ಲೈಟ್ ಕಂಡರೂ ಫಿಟ್ಸ್ (Fits) ಬರುವಂತಾಗುತ್ತದೆ. ಫ್ಲಾಶ್ ಹಾಕಿ ತಮ್ಮ ಫೋಟೋ ತೆಗೆಯಬೇಡಿ ಎಂದು ವಿಕ್ಟೋರಿಯಾ, ಪಾಪರಾಜಿಗಳ ಮೇಲೆ ಕೂಗಾಡಿದ್ದುಂಟು.

Russia-Ukraine War: ಬಾಂಬ್‌ ಶೆಲ್ಟರ್‌ನಲ್ಲಿ ಮಗು ಜನನ, ಉಕ್ರೇನಿಯನ್ ಅಧ್ಯಕ್ಷರ ಪತ್ನಿಯ ಭಾವನಾತ್ಮಕ ಮಾತು

ಇಂಥವರು ಸೆಲೆಬ್ರಿಟಿಗಳೇ (Celebrities) ಆಗಿದ್ದರೂ, ಮಕ್ಕಳು ಸಂಕಷ್ಟಮಯ ಸ್ಥಿತಿಯಲ್ಲಿ ಇದ್ದಾಗ ಅವರನ್ನು ಯಾವ ಸಂಪತ್ತೂ ಕೈ ಹಿಡಿಯುವುದಿಲ್ಲ. ಆಗ ಮನುಷ್ಯ- ಮನುಷ್ಯರ ನಡುವಿನ ಸಹಕಾರ, ಸಾಂತ್ವನಗಳೇ ನಮ್ಮನ್ನು ಕೈಹಿಡಿದು ಮುನ್ನಡೆಸುತ್ತವೆ. ಇಂಥ ಕಾಯಿಲೆ ಹೊಂದಿದವರಿಗೆ ಪ್ರೀತಿ, ದೀರ್ಘಕಾಲಿಕ ಆರೈಕೆ, ಅಪಾರ ತಾಳ್ಮೆಯ ನಿಗಾ ಬೇಕು. ಅವರ ಜೊತೆಗೆ ಇರುವವರು ಹೊಸದೇ ಮನುಷ್ಯರಾಗುವ ಸಾಧ್ಯತೆಗಳೇ ಹೆಚ್ಚು- ಸತ್ಯಾ ಹೇಳಿದಂತೆ. 


        

Follow Us:
Download App:
  • android
  • ios