Asianet Suvarna News Asianet Suvarna News

Parenting Tips: ಪೋಷಕರು ಮಕ್ಕಳ ಜೊತೆ ಹೇಗಿರಬೇಕು ?

ಮಕ್ಕಳು (Children) ಬೆಳೀತಾ ಬೆಳೀತಾ ಹಠಮಾರಿತನ, ಅಶಿಸ್ತು ಸೇರಿದಂತೆ ಕೆಟ್ಟ ಗುಣಗಳನ್ನು ರೂಢಿಸಿಕೊಳ್ಳುತ್ತಾರೆ. ಅದೆಷ್ಟು ಬುದ್ಧಿ ಹೇಳಿದರೂ ಬದಲಾಗುವುದಿಲ್ಲ. ಹೀಗಾಗಿ ಪೋಷಕರು (Parents) ಮಕ್ಕಳ ಜೊತೆ ಹೇಗಿರಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ
 

Time To Break These Parenting Rules
Author
Bengaluru, First Published Mar 1, 2022, 11:48 AM IST

ಇವತ್ತಿನ ಕಾಲದ ಮಕ್ಕಳು (Children) ಗೊತ್ತಲ್ಲ. ವಯಸ್ಸಿಗಿಂತ ಹೆಚ್ಚು ಬುದ್ಧಿ, ಚುರುಕುತನ ಇರುತ್ತದೆ. ಮಾತ್ರವಲ್ಲ ಒಳ್ಳೆಯ ಅಭ್ಯಾಸಗಳ ಜತೆಗೆ ಕೆಟ್ಟ ಅಭ್ಯಾಸಗಳೂ ಸೇರಿಕೊಂಡಿರುತ್ತವೆ. ಹೀಗಾಗಿ ಚಿಕ್ಕಂದಿನಲ್ಲೇ ಮಕ್ಕಳಿಗೆ ಒಳ್ಳೆಯ ಗುಣ, ನಡತೆಗಳನ್ನು ಹೇಳಿ ಕೊಡಬೇಕಾದುದು ಮುಖ್ಯ. ಒಳ್ಳೆಯ ವಿಷಯಗಳನ್ನು ಕಲಿಯುವಂತೆ, ಕೆಟ್ಟ ವಿಷಯಗಳನ್ನು ಕಲಿಯದಂತೆ ಹೇಳಿ ಕೊಡಬೇಕು. ಇದಕ್ಕೆ ಪೋಷಕರು ಹೆಚ್ಚು ಸ್ಟ್ರಿಕ್ಟ್ ಕೂಡಾ ಆಗಿರಬಾರದು. ಮಕ್ಕಳ ಜತೆ ಹೆಚ್ಚು ಸಲಿಗೆಯಿಂದಲೂ ಇರಬಾರದು. ಹಾಗಿದ್ರೆ ಪೋಷಕರು (Parents) ಮಕ್ಕಳ ಜೊತೆ ಹೇಗಿರಬೇಕು ? ಹೇಗಿರಬಾರದು ತಿಳಿಯೋಣ.

ಪೋಷಕರು ತಮ್ಮ ಮಗುವಿಗೆ ಯಾವುದು ಒಳ್ಳೆಯದು ಎಂಬುದರ ಆಧಾರದ ಮೇಲೆ ಪಾಲನೆಯ ನಿಯಮ (Rules)ಗಳನ್ನು ಹೊಸದಕ್ಕೆ ಬದಲಾಯಿಸಬೇಕು. ಪರಂಪರೆ-ಪುಷ್ಟೀಕರಿಸಿದ ನಿಯಮಗಳನ್ನು ಅನುಸರಿಸುವ ಬದಲು ಸುತ್ತಮುತ್ತಲಿನ ಹೊಸ ಅಭ್ಯಾಸಗಳು ಮತ್ತು ಶಿಷ್ಟಾಚಾರಗಳನ್ನು ಆರಿಸಿಕೊಳ್ಳಬೇಕು.

Parenting Tips: ಮಕ್ಕಳನ್ನು ಹೇಗೆ ಬೆಳೆಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ

ಟಿವಿ, ಮೊಬೈಲ್ ಉಪಯೋಗಿಸಲು ಸಮಯ ನಿಗದಿಪಡಿಸಿ
ಹಿಂದೆಲ್ಲಾ ಮಕ್ಕಳು ಟಿವಿ (Television), ಮೊಬೈಲ್ (Mobile) ನೋಡುವ ಸಮಯದಲ್ಲಿ ಪೋಷಕರು ಕಿರುಚಾಡುತ್ತಿದ್ದರು. ಟಿವಿ ಆಫ್ ಮಾಡಿ ಓದುವಂತೆ ಒತ್ತಾಯಿಸುತ್ತಿದ್ದರು. ಆದರೆ ಇವತ್ತಿನ ಕಾಲದಲ್ಲಿ ಮಕ್ಕಳನ್ನು ಆ ರೀತಿಯಲ್ಲಿ ವಯಸ್ಸುವಂತಿಲ್ಲ. ಯಾಕೆಂದರೆ ಇವತ್ತಿನ ದಿನಗಳಲ್ಲಿ ಆನ್ಲೈನ್ ಕ್ಲಾಸ್ಗಳನ್ನು ಮೊಬೈಲ್, ಟಿವಿಯಲ್ಲೇ ವೀಕ್ಷಿಸಬೇಕಾಗಿದೆ. ಮಾತ್ರವಲ್ಲ ಸೆಮಿನಾರ್, ಅಸೈನ್ಮೆಂಟ್, ಪ್ರಾಜೆಕ್ಟ್ಗಳಿಗೆ ಬೇಕಾಗುವ ಹಲವಾರು ಉಪಯುಕ್ತ ಮಾಹಿತಿಗಳು ಟಿವಿ, ಮೊಬೈಲ್ನಿಂದ ದೊರಕುತ್ತದೆ.

ಇಂದಿನ ದಿನಗಳಲ್ಲಿ ಶಿಕ್ಷಣ ಸೇರಿದಂತೆ ಎಲ್ಲವೂ ಆನ್‌ಲೈನ್‌ನಲ್ಲಿದೆ. ಹೀಗಾಗಿ ಮಕ್ಕಳು ಮೊಬೈಲ್ ಫೋನ್ ಬಳಸುವುದನ್ನು ನಿರ್ಬಂಧಿಸುವ ಬದಲು ಅವರು ಅದನ್ನು ಸರಿಯಾಗಿ ಬಳಸಿಕೊಳ್ಳಲು ಪೋಷಕರು ಪ್ರೋತ್ಸಾಹಿಸಬೇಕು. ಆದರೆ ದೀರ್ಘಾವಧಿಯ ಟಿವಿ, ಮೊಬೈಲ್ ಬಳಕೆ ಮಗುವಿನ ದೃಷ್ಟಿಗೆ ಅಡ್ಡಿಯುಂಟು ಮಾಡಬಹುದು. ಹೀಗಿದ್ದಾಗ ಅದಕ್ಕಾಗಿ ಇಂತಿಷ್ಟು ಸಮಯವನ್ನು ನಿಗದಿಪಡಿಸುವುದು ಉತ್ತಮ. ಉಳಿದ ಸಮಯದಲ್ಲಿ ಮಕ್ಕಳ ನೆಚ್ಚಿನ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲು ಬಿಡಿ.

Parenting Tips: ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..

ಮಗುವಿಗೆ ಬಲವಂತವಾಗಿ ತಿನ್ನಿಸಬೇಡಿ
ಯಾವತ್ತೂ ಬಲವಂತವಾಗಿ ಮಗುವಿಗೆ ಆಹಾರವನ್ನು ನೀಡಬೇಡಿ. ಮಕ್ಕಳು ಹಸಿವಾದಾಗಲೇ ತಿನ್ನಲಿ. ಹೀಗೆ ಅವರ ಇಷ್ಟಪ್ರಕಾರ ತಿಂದಾಗ ಸರಿಯಾದ ರೀತಿಯಲ್ಲಿ ಊಟ ಮಾಡುತ್ತಾರೆ. ಮಕ್ಕಳು ಊಟ ಮಾಡುವಾಗ ಅದನ್ನು ತಿನ್ನಬೇಡ, ಇದನ್ನೇ ತಿನ್ನು ಎಂದು ಸಲಹೆ ನೀಡಲು ಹೋಗಬೇಡಿ. ಇದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು, ಪ್ರೋಟೀನ್ಗಳು ಲಭಿಸುವುದಿಲ್ಲ. ಮಕ್ಕಳಿಗಿಷ್ಟವಾದ ಎಲ್ಲಾ ರೀತಿಯ ಆಹಾರಗಳನ್ನು ತಿನ್ನಲು ಬಿಡಿ.

ಹವ್ಯಾಸವನ್ನು ಆಯ್ಕೆ ಮಾಡಲು ಅನುಮತಿಸಿ
ಸಮಾಜದಲ್ಲಿ ನಿಮ್ಮ ಪ್ರೆಸ್ಟೀಜ್ ತೋರಿಸಿಕೊಳ್ಳುವ ಭರದಲ್ಲಿ ಡ್ಯಾನ್ಸ್ (Dance), ಕರಾಟೆ, ಡ್ರಾಯಿಂಗ್ ಹೀಗೆ ಇರೋ ಬರೋ ಕ್ಲಾಸಿಗೆಲ್ಲಾ ಮಗುವನ್ನು ಸೇರಿಸಬೇಡಿ. ಇದು ಮಗುವಿನ ಮನಸ್ಸಿನಲ್ಲಿ ಒತ್ತಡಕ್ಕೆ ಕಾರಣವಾಗುತ್ತದೆ ಹೊರತು ಮತ್ತೇನು ಪ್ರಯೋಜನವಿಲ್ಲ. ಇದರ ಬದಲು ಮಗುವಿನ ಇಷ್ಟದ ಹವ್ಯಾಸ (Habit)ವೇನು ಎಂದು ತಿಳಿದುಕೊಂಡು ಅದನ್ನು ಪ್ರೋತ್ಸಾಹಿಸಿ. ಮಗುವಿಗೆ ತನ್ನ ಸ್ವಂತ ಅಭ್ಯಾಸಗಳನ್ನು ಆಯ್ಕೆ ಮಾಡಲು ಅನುಮತಿಸಿ. ಕೆಲ ಮಕ್ಕಳು ಡ್ರಾಯಿಂಗ್ ಮಾಡಲು ಇಷ್ಟಪಡುತ್ತಾರೆ. ಹಲವರು ಅಡುಗೆ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಮಗುವಿಗೆ ಅಭ್ಯಾಸವನ್ನು ಆಯ್ಕೆ ಮಾಡಲು ಅವಕಾಶ ನೀಡುವುದು ಬಹಳ ಅವಶ್ಯಕ ಮತ್ತು ನಂತರ ಪೋಷಕರು ಅದರ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಬಹುದು. ಪೋಷಕರು ತಮ್ಮ ಅಭಿಪ್ರಾಯವನ್ನು ಮಕ್ಕಳ ಮೇಲೆ ಹೇರುವುದು ಮಗುವಿನ ಒಟ್ಟಾರೆ ಬೆಳವಣಿಗೆಗೆ ಕೆಟ್ಟದ್ದು. 

ಮಗು ಸ್ವಂತ ನಿರ್ಧಾರ ತೆಗೆದುಕೊಳ್ಳಲಿ 
ಪ್ರತಿ ಕೆಲಸ ಮಾಡುವಾಗಲೂ ಮಕ್ಕಳು ನಮ್ಮ ಅನುಮತಿ ಕೇಳಬೇಕು ಎಂಬ ಮನೋಭಾವದಿಂದ ಹೊರಬನ್ನಿ. ನಿಮ್ಮ ಅನುಮೋದನೆಯ ಮೇಲೆ ಮಗುವನ್ನು ಅವಲಂಬಿಸಬೇಡಿ. ಮಗು ಸ್ವಂತ ನಿರ್ಧಾರ ತೆಗೆದುಕೊಳ್ಳಲಿ. ಮಕ್ಕಳು ಮಾಡುವುದು ಕೆಟ್ಟ ವಿಷಯವಾಗಿದ್ದರೆ, ಅದನ್ನು ವಿವರಿಸುವ ಮೂಲಕ ಅದನ್ನು ಮಾಡುವುದನ್ನು ತಡೆಯಿರಿ

Follow Us:
Download App:
  • android
  • ios