Russia-Ukraine War: ಬಾಂಬ್ ಶೆಲ್ಟರ್‌ನಲ್ಲಿ ಮಗು ಜನನ, ಉಕ್ರೇನಿಯನ್ ಅಧ್ಯಕ್ಷರ ಪತ್ನಿಯ ಭಾವನಾತ್ಮಕ ಮಾತು
ಉಕ್ರೇನ್ ಸದ್ಯ ಅಕ್ಷರಶಃ ರಣಭೂಮಿಯಾಗಿ ಮಾರ್ಪಟ್ಟಿದೆ. ರಷ್ಯಾ (Russia)ದ ಆಕ್ರಮಣದಿಂದ ತತ್ತರಿಸಿ ಹೋಗಿದೆ. ಯುದ್ಧ ಬಾಧಿತ ಉಕ್ರೇನ್ (Ukraine) ರಾಜಧಾನಿ ಕೀವ್‍ನಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಹೀಗಿರುವಾಗಲೇ ಉಕ್ರೇನಿಯನ್ ಅಧ್ಯಕ್ಷರ ಪತ್ನಿ ಇನ್‍ಸ್ಟಾಗ್ರಾಂ (Instagram)ನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಸಾಕಷ್ಟು ಸಾವು-ನೋವಿಗೆ ಕಾರಣವಾಗಿದೆ. ಯುದ್ಧ ಬಾಧಿತ ಉಕ್ರೇನ್ ರಾಜಧಾನಿ ಕೀವ್‍ನಲ್ಲಿ ಎರಡು ಬಾರಿ ಸ್ಫೋಟ ಸಂಭವಿಸಿದೆ. ಅದೆಷ್ಟೋ ಮಂದಿ ಮನೆ, ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದಾರೆ. ಪುಟ್ಟ ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿ ಬೀದಿ ಪಾಲಾಗಿದ್ದಾರೆ. ರಸ್ತೆ ಬದಿಗಳಲ್ಲಿ ನಿಂತು ರಕ್ಷಿಸುವಂತೆ ಮೊರೆಯಿಡುತ್ತಿದ್ದಾರೆ. ರಷ್ಯಾ (Russia) ವಿರುದ್ಧ ಹೋರಾಡಲು ಉಕ್ರೇನ್‌ನ (Ukraine) ಪ್ರಜೆಗಳೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. \
ಇತ್ತೀಚೆಗೆ ಉಕ್ರೇನ್‌ನ ವೃದ್ಧೆಯೊಬ್ಬರು ಎಕೆ 47 (AK 47) ಕೈಯಲ್ಲಿ ಹಿಡಿದು ಬಳಸಲು ಕಲಿಯುತ್ತಿದ್ದ ದೃಶ್ಯ ಪೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಾಜಿ ಮಿಸ್ ಉಕ್ರೇನ್ ಕೂಡಾ ತಮ್ಮ ದೇಶಕ್ಕಾಗಿ ಆಯುಧ (Weapon) ಹಿಡಿಯೋಕೆ ರೆಡಿ ಎಂದು ಸಿದ್ಧರಾಗಿದ್ದರು. ಉಕ್ರೇನ್ ಮಾಜಿ ಸುಂದರಿ ತನ್ನ ದೇಶವನ್ನು ರಷ್ಯಾದ ಆಕ್ರಮಣಕಾರರಿಂದ ರಕ್ಷಿಸಲು ಪ್ರತಿಜ್ಞೆ ಮಾಡಿದ್ದರು. 2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ (Miss Grand international)ಸೌಂದರ್ಯ ಸ್ಪರ್ಧೆಯಲ್ಲಿ ಉಕ್ರೇನ್ ಅನ್ನು ಪ್ರತಿನಿಧಿಸಿದ್ದ ಅನಸ್ತಾಸಿಯಾ ಲೆನ್ನಾ ಈಗ ರಷ್ಯಾದ ಪಡೆಗಳೊಂದಿಗೆ ಹೋರಾಡುತ್ತಿರುವಾಗ ಉಕ್ರೇನಿಯನ್ ಮಿಲಿಟರಿಗೆ (Military) ಸೇರುತ್ತಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
Russia Ukraine Crisis: ಹಿಂಸಾಚಾರವನ್ನು ತಕ್ಷಣವೇ ಕೊನೆ ಮಾಡಿ, ಪುಟಿನ್ ಗೆ ಮೋದಿ ಮನವಿ!
ಉಕ್ರೇನ್‌ನ ಸ್ಥಿತಿಗಾಗಿ ಎಲ್ಲರೂ ಮರುಗುತ್ತಿದ್ದಾರೆ. ರಷ್ಯಾದ ಪಡೆಗಳು ಕೈವ್ ಅನ್ನು ಸುತ್ತುವರಿದಿರುವಾಗ ಉಕ್ರೇನಿಯನ್ ಅಧ್ಯಕ್ಷರ ಪತ್ನಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಭಾವನಾತ್ಮಕ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಉಕ್ರೇನ್‌ನ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ರಷ್ಯಾದ ಆಕ್ರಮಣದ ಪ್ರತಿಯಾಗಿ ಬಲವಾದ ಪ್ರತಿರೋಧವನ್ನು ಒಡ್ಡಿದ್ದಕ್ಕಾಗಿ ಉಕ್ರೇನಿಯನ್ನರನ್ನು ಹೊಗಳಿದ್ದಾರೆ. ಉಕ್ರೇನ್ನಿಯನ್ನರ ಧೈರ್ಯ, ಸಾಹಸಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರೇನಿಯನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಅವರು ತಮ್ಮ ಕುಟುಂಬದೊಂದಿಗೆ ರಾಜಧಾನಿ ಕೈವ್‌ನಲ್ಲಿ ಉಳಿಯಲು ನಿರ್ಧರಿಸಿದ್ದಾರೆ. ಝೆಲೆನ್ಸ್ಕಿ ವೀಡಿಯೋವೊಂದರಲ್ಲಿ ರಷ್ಯಾ ಅವರನ್ನು ಟಾರ್ಗೆಟ್ ನಂಬರ್ ಒನ್ ಮತ್ತು ಅವರ ಕುಟುಂಬವನ್ನು ಟಾರ್ಗೆಟ್ ನಂಬರ್ ಟು ಎಂದು ಗುರುತಿಸಿದೆ ಎಂದು ಹೇಳಿದ್ದಾರೆ. ‘ರಷ್ಯಾ, ಉಕ್ರೇನ್ ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತಿದೆ. ಆದರೆ ನಾನು ರಾಜಧಾನಿಯಲ್ಲಿ ಉಳಿಯುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’ ಎಂದಿದ್ದಾರೆ.
ಇದೆಲ್ಲದರ ಮಧ್ಯೆ ಉಕ್ರೇನಿಯನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿಅವರ ಪತ್ನಿ ಒಲೆನಾ ಝೆಲೆನ್ಸ್ಕಾ ಕೈವ್‌ನ ಬಾಂಬ್ ಆಶ್ರಯದಲ್ಲಿ ಜನಿಸಿದ ಮಗುವಿನ ಚಿತ್ರವನ್ನು ಹಂಚಿಕೊಂಡು ಇನ್ ಸ್ಟಾಗ್ರಾಂನಲ್ಲಿ ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.
Russia Ukraine Crisis: 40ಕ್ಕೂ ಅಧಿಕ ಸೈನಿಕರು, ಪ್ರಜೆಗಳ ಸಾವು ಎಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
'ಇದು ಕೈವ್‌ನ ಬಾಂಬ್ ಶೆಲ್ಟರ್‌ನಲ್ಲಿ ಜನಿಸಿದ ಮಗು. ಸಂಪೂರ್ಣ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಗುವಿನ ಜನನವಾಯಿತು. ಯುದ್ಧದ ಹೊರತಾಗಿಯೂ, ಪಕ್ಕದಲ್ಲಿ ನಮ್ಮ ಬೀದಿಗಳಲ್ಲಿ ವೈದ್ಯರು ಮತ್ತು ಕಾಳಜಿಯುಳ್ಳ ಜನರೂ ಇದ್ದರು. ಮಗುವನ್ನು ರಕ್ಷಿಸಲಾಗಿದೆ. ಬಾಂಬ್ ಆಶ್ರಯದಲ್ಲಿ ಜನಿಸಿದ ಮಕ್ಕಳು ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಾಂತಿಯುತ ದೇಶದಲ್ಲಿ ವಾಸಿಸುತ್ತಾರೆ’ ಎಂದಿದ್ದಾರೆ. ಉಕ್ರೇನಿಯನ್ ನಾಗರಿಕರು ಕೇವಲ ಎರಡು ದಿನಗಳಲ್ಲಿ ಸಶಸ್ತ್ರ ಪ್ರತಿರೋಧವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು ಎಂದು ಒಲೆನಾ ಝೆಲೆನ್ಸ್ಕಾ ಹೇಳಿದರು. ಉಕ್ರೇನಿಯನ್ನರುನಿಮ್ಮ ಕೆಲಸವನ್ನು ಮಾಡಿದ್ದೀರಿ ಮತ್ತು ಪರಸ್ಪರ ಸಹಾಯ ಮಾಡಲು ಸಮಯವನ್ನು ತೆಗೆದುಕೊಂಡಿದ್ದೀರಿ’ ಎಂದು ಉಕ್ರೇನ್‌ನ ಪ್ರಥಮ ಮಹಿಳೆ ಒಲೆನಾ ಝೆಲೆನ್ಸ್ಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಉಕ್ರೇನಿಯನ್ನರು ತಮ್ಮ ನೆರೆಹೊರೆಯವರಿಗೆ ಸಹಾಯ ಮಾಡಿದರು, ಅಗತ್ಯವಿರುವವರಿಗೆ ಆಶ್ರಯ ನೀಡಿದರು, ಸೈನಿಕರು ಮತ್ತು ಗಾಯಾಳುಗಳಿಗೆ ರಕ್ತದಾನ ಮಾಡಿದರು. ಶತ್ರು ವಾಹನಗಳ ಚಲನೆಯನ್ನು ವರದಿ ಮಾಡಿದರು. ಉಕ್ರೇನ್ ಒಗ್ಗಟ್ಟಾಗಿದೆ. ಒಗ್ಗಟ್ಟಾಗಿ ಪರಿಸ್ಥಿತಿಯನ್ನು ಎದುರಿಸುತ್ತದೆ’ ಎಂದು ಒಲೆನಾ ಝೆಲೆನ್ಸ್ಕಾ ಭರವಸೆ ವ್ಯಕ್ತಪಡಿಸಿದ್ದಾರೆ. ಝೆಲೆನ್ಸ್ಕಾ 2003 ರಲ್ಲಿ ವೊಲೊಡಿಮಿರ್ ಝೆಲೆನ್ಸ್ಕಿಯನ್ನು ವಿವಾಹವಾದರು ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಅವರು ಲಿಂಗ ಸಮಾನತೆಯಂತಹ ಸಾಮಾಜಿಕ ಕಾರಣಗಳಿಗಾಗಿ ಧ್ವನಿ ಎತ್ತುವವರಾಗಿದ್ದಾರೆ. ರಾಜತಾಂತ್ರಿಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.