Smriti Mandhana Social Media Post: ಸ್ಮೃತಿ ಮಂಧಾನ ತಮ್ಮ ಮದುವೆ ಮುಂದೂಡಿಕೆ ಆದ 12 ದಿನಗಳ ನಂತರ ಮೊದಲ ಬಾರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಸ್ಮೃತಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡ ಮಾಹಿತಿ ಇಲ್ಲಿದೆ. 

ಬೆಂಗಳೂರು (ಡಿ.5):ಮಹಿಳಾ ವಿಶ್ವಕಪ್ ಗೆಲ್ಲುವಲ್ಲಿ ಉಪನಾಯಕಿ ಸ್ಮೃತಿ ಮಂಧಾನ ಅವರ ಪಾತ್ರ ಪ್ರಮುಖವಾದದ್ದು. ಈ ಐತಿಹಾಸಿಕ ಗೆಲುವಿನ ನಂತರ, ಸ್ಮೃತಿ ಮಂಧಾನ ತಮ್ಮ ದೀರ್ಘಕಾಲದ ಗೆಳೆಯ ಪಲಾಶ್ ಮುಚ್ಚಲ್ ಜೊತೆಗೆ ಹೊಸ ಇನ್ನಿಂಗ್ಸ್‌ಗೆ ಸಿದ್ದರಾಗಿದ್ದರು. ವಿಶ್ವಕಪ್‌ ಗೆದ್ದ ಕೆಲವು ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಟೀಮ್‌ ಇಂಡಿಯಾ ಅಹ ಆಟಗಾರ್ತಿಯರೊಂದಿಗೆ 'ಸಮ್ಜೋ ಹೋ ಹಿ ಗಯಾ' ಹಾಡಿಗೆ ನೃತ್ಯ ಮಾಡುವ ಮೂಲಕ ಪಲಾಶ್‌ ಮುಚ್ಚಾಲ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವುದನ್ನು ಘೋಷಿಸಿದ್ದರು.

ಅದಾದ ಬಳಿಕ ನ.23ರ ಭಾನುವಾರ ಸಾಂಗ್ಲಿಯಲ್ಲಿ ಸ್ಮೃತಿ ಹಾಗೂ ಪಲಾಶ್‌ ಮುಚ್ಚಾಲ್‌ ಅವರ ಮದುವೆ ನಿಶ್ಚಿತವಾಗಿತ್ತು. ಮದುವೆಗಾಗಿ ಇಡೀ ಮನೆಯನ್ನು ಅದ್ದೂರಿಯಾಗಿ ಅಲಂಕರಿಸಲಾಗಿತ್ತು. ಮದುವೆಯ ಮಂಟಪವನ್ನು ಕೂಡ ನಿರ್ಮಾಣ ಮಾಡಲಾಗಿತ್ತು. ಸ್ಮೃತಿ ಅವರ ವಿವಾಹದ ಮುನ್ನಾದಿನದಂದು ಮಹಿಳಾ ತಂಡದ ಆಟಗಾರ್ತಿಯರು ಸಾಂಗ್ಲಿಯನ್ನು ತಲುಪಿದ್ದರು. ಮದುವೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದವು. ಆದರೆ, ಹಸೆಮಣೆ ಏರಲು ಕೆಲವು ಗಂಟೆಗಳು ಬಾಕಿ ಇರುವಾಗ, ಸ್ಮೃತಿ ಅವರ ವಿವಾಹಕ್ಕೆ ಅಡ್ಡಿ ಎದುರಾಗಿತ್ತು.

ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತವಾಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೆಲವು ದಿನಗಳ ನಂತರ ಪಲಾಶ್ ಅವರ ಆರೋಗ್ಯ ಕೂಡ ಹದಗೆಟ್ಟಿತು. ಒಂದರ ನಂತರ ಒಂದರಂತೆ ಬಿಕ್ಕಟ್ಟು ಎದುರಿಸಿದ್ದರಿಂದ ಸ್ಮೃತಿ ಮಂಧನಾ ಮದುವೆಯನ್ನು ಮುಂದೂಡುವ ತೀರ್ಮಾನ ಮಾಡಿದ್ದರು. ಈ ವಿಚಾರ ಹೊರಬಿದ್ದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಅಂದು ಆಗಿದ್ದೇನು ಅನ್ನೋದರ ಬಗಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ರೂಮರ್‌ಗಳು ಹಬ್ಬಿವೆ. . ಹಾಗಾದರೆ, ಯಾವುದು ನಿಜ ಮತ್ತು ಯಾವುದು ಸುಳ್ಳು? ಅಭಿಮಾನಿಗಳು ಇದನ್ನು ಸ್ಮೃತಿಯಿಂದಲೇ ತಿಳಿದುಕೊಳ್ಳಲು ಬಯಸಿದ್ದರು. ಕೊನೆಗೆ, ಮದುವೆಯನ್ನು ಹಲವು ದಿನಗಳ ಕಾಲ ವಿಳಂಬ ಮಾಡಿದ ನಂತರ ಸ್ಮೃತಿ ಸೋಶಿಯಲ್‌ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಸ್ಮೃತಿ ವಿಡಿಯೋದಲ್ಲಿ ಏನಿದೆ?

ಸುಮಾರು 12 ದಿನಗಳ ನಂತರ ಸ್ಮೃತಿ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ಮೃತಿ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಸ್ಮೃತಿ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ತಮ್ಮ ಅನುಭವಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನವೆಂಬರ್ 2 ರಂದು ಹರ್ಮನ್ ಪ್ರೀತ್ ಕೌರ್ ನೇತೃತ್ವದಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.

"ಕಳೆದ 12 ವರ್ಷಗಳಲ್ಲಿ ವಿಶ್ವಕಪ್ ಗೆಲ್ಲಲು ವಿಫಲವಾದ ನಂತರ, ನಾವು ಎಂದಾದರೂ ಅದನ್ನು ಗೆಲ್ಲಲು ಸಾಧ್ಯವೇ? ಅನ್ನೂ ಪ್ರಶ್ನೆ ಎದುರಾಗಿತ್ತು" ಎಂದು ಸ್ಮೃತಿ ಹೇಳಿದರು. ವಿಶ್ವಕಪ್ ಗೆದ್ದ ನಂತರ ನಾನೀಗ ಚಿಕ್ಕ ಮಗುವಿನಂತೆ ಸಂತಸ ಪಡುತ್ತಿದ್ದೇನೆ ಎಂದಿದ್ದಾರೆ.

ಸ್ಮೃತಿ ಹೇಳಿದ್ದೇನು?

ಸ್ಮೃತಿ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಅಂತಿಮ ಪಂದ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ತಂಡದಲ್ಲಿನ ಆಟಗಾರರು ಅವಶ್ಯಕತೆಗೆ ಅನುಗುಣವಾಗಿ ಪ್ರದರ್ಶನ ನೀಡುತ್ತಿದ್ದರು. ಆದ್ದರಿಂದ ಬ್ಯಾಟಿಂಗ್ ಮಾಡುವಾಗ ಯೋಚಿಸುವ ಅಗತ್ಯವಿಲ್ಲ. ಆದರೆ, ನಾನು ಫೀಲ್ಡಿಂಗ್ ಮಾಡುವಾಗ ದೇವರ ಹೆಸರನ್ನು ಜಪಿಸುತ್ತಿದ್ದೆ ಎಂದು ಸ್ಮೃತಿ ಹೇಳಿದರು."ನಾನು ಫೀಲ್ಡಿಂಗ್ ಮಾಡುವಾಗ ಎಲ್ಲಾ ದೇವರುಗಳ ಹೆಸರನ್ನು ಜಪಿಸಿದೆ. ಈ ವಿಕೆಟ್‌ಗಳನ್ನು ಪಡೆಯಲು ನಾನು ಸಂಪೂರ್ಣ 300 ಎಸೆತಗಳನ್ನು ಜಪಿಸುತ್ತಾ ಪ್ರಾರ್ಥಿಸುತ್ತಿದ್ದೆ" ಎಂದು ಸ್ಮೃತಿ ಮಂಧಾನ ಹೇಳಿದರು.

ಮಾಯವಾದ ನಿಶ್ಚಿತಾರ್ಥದ ಉಂಗುರ

ಇದಕ್ಕೆ ಹಲವು ಕಾಮೆಂಟ್‌ಗಳು ಬಂದಿದ್ದು, 'ಅವಳು ದುಃಖಿತಳಾಗಿದ್ದಾಳೆ ಅನ್ನೋ ಭಾವನೆ ನನಗೆ ಯಾಕೆ ಬರುತ್ತಿದೆ. ಆಕೆ ನಗುತ್ತಿರಬಹುದು. ಆದರೆ, ಆಕೆಯ ಧ್ವನಿ, ಆಕೆಯ ಕಣ್ಣುಗಳು ಆಕೆ ದುಃಖದಲ್ಲಿ ಇದ್ದಾಳೆ ಅನ್ನೋದನ್ನು ತೋರಿಸುತ್ತಿದೆ. ಆಕೆಯ ನಿಶ್ಚಿತಾರ್ಥದ ಉಂಗುರವನ್ನೂ ಕೂಡ ತನ್ನ ಕೈಗಳಲ್ಲಿ ಧರಿಸಿಲ್ಲ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ.

ಆಕೆಯ ಮುಖದ ಮೇಲೆ ನಗು ವಾಪಾಸಾಗಿದೆ, ಆದರೆ ಉಂಗುರ ವಾಪಾಸಾಗಿದೆ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಈ ವಿಡಿಯೋಗಳು ಆಕೆಯ ನಿಶ್ಚಿತಾರ್ಥಕ್ಕೂ ಮುನ್ನವೇ ಮಾಡಿದ್ದಾಗಿರಬಹುದು ಎಂದೂ ಮಾತನಾಡಿಕೊಂಡಿದ್ದಾರೆ.

ಆಕೆಯ ಕೈಗಳನ್ನು ನೋಡಿ, ಮೆಹಂದಿ ಬಣ್ಣಗಳೂ ಕೂಡ ಇಲ್ಲ. ಹಾಗಾಗಿ ಇದು ನಿಶ್ಚಿತಾರ್ಥಕ್ಕೂ ಮುನ್ನ ಮಾಡಿರುವ ವಿಡಿಯೋ ಆಗಿರಬಹುದು ಎಂದು ಅಭಿಮಾನಿಯೊಬ್ಬರು ಕಾರಣ ನೀಡಿದ್ದಾರೆ. ಇದು ಪಲಾಶ್‌ ಮುಚ್ಚಾಲ್‌ ಆಕೆಗೆ ಪ್ರಪೋಸ್‌ ಮಾಡುವುದಕ್ಕೂ ಮುನ್ನ ಮಾಡಿರುವ ವಿಡಿಯೋ ಆಗಿರಬಹುದು ಎಂದು ಅಂದಾಜಿಸಿದ್ದಾರೆ.

View post on Instagram