- Home
- Entertainment
- Toxic ಹವಾದ ಬೆನ್ನಲ್ಲೇ ಯಶ್ ಕಾರಿನ ನಂಬರ್ ಪ್ಲೇಟ್ ಭಾರಿ ಸದ್ದು: ಏನಿದೆ ಅಂಥ ವಿಶೇಷತೆ- ಕುತೂಹಲ ಇಲ್ಲಿದೆ
Toxic ಹವಾದ ಬೆನ್ನಲ್ಲೇ ಯಶ್ ಕಾರಿನ ನಂಬರ್ ಪ್ಲೇಟ್ ಭಾರಿ ಸದ್ದು: ಏನಿದೆ ಅಂಥ ವಿಶೇಷತೆ- ಕುತೂಹಲ ಇಲ್ಲಿದೆ
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರವು ಜಾಗತಿಕವಾಗಿ ಸದ್ದು ಮಾಡುತ್ತಿದ್ದು, ಅಡ್ವಾನ್ಸ್ ಬುಕಿಂಗ್ ಉತ್ತಮ ಪ್ರತಿಕ್ರಿಯೆ ಗಳಿಸಿದೆ. ಇದರ ನಡುವೆ, ಚಿತ್ರದ ಮುಹೂರ್ತದ ವೇಳೆ ಯಶ್ ಬಳಸಿದ್ದ 'BOSS' ಎಂದು ವ್ಯಾಖ್ಯಾನಿಸಲಾದ 8055 ನಂಬರಿನ ರೇಂಜ್ ರೋವರ್ ಕಾರು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗಿದೆ.

ಟಾಕ್ಸಿಕ್ ಹವಾ
ನಟ ಯಶ್ ಅವರು ಇದೀಗ ಟಾಕ್ಸಿಕ್ ಚಿತ್ರದ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಹಾಡುಗಳು, ಟ್ರೈಲರ್ಗಳು ಸಕತ್ ಸೌಂಡ್ ಮಾಡುತ್ತಿದ್ದು, ಈ ಚಿತ್ರದ ಬಿಡುಗಡೆಯಾಗಿ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಶ್ವದಾದ್ಯಂತ ಯಶ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಸಿನಿಮಾ ಆಗಸ್ಟ್ 26ರಂದು ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ.
ವಿದೇಶಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್
ಈಗಾಗಲೇ ವಿದೇಶಗಳಲ್ಲಿ ಚಿತ್ರದ ಅಡ್ವಾನ್ಸ್ ಬುಕಿಂಗ್ ಕೌಂಟರ್‌ಗಳು ತೆರೆದಿದ್ದು, ಆರಂಭಿಕ ಪ್ರತಿಕ್ರಿಯೆ ಗಮನ ಸೆಳೆಯುತ್ತಿದೆ. ಯಶ್ ಅವರ ಹಿಂದಿನ ಚಿತ್ರಗಳ ಯಶಸ್ಸಿನ ಬಳಿಕ ‘ಟಾಕ್ಸಿಕ್’ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಯಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಆಕ್ಷನ್ ಮತ್ತು ಗ್ಯಾಂಗ್‌ಸ್ಟರ್ ಕಥಾಹಂದರದ ಕಾರಣದಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸಿನಿಮಾ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಜಾಗತಿಕ ಮಟ್ಟದಲ್ಲಿ ಇದರ ಕ್ರೇಜ್ ಕೂಡ ಹೆಚ್ಚಾಗುತ್ತಿದೆ.
ಸಿನಿಮಾ ಮುಹೂರ್ತದ ಕಾರು
ಇದರ ನಡುವೆಯೇ, ಯಶ್ ಅವರು ಟಾಕ್ಸಿಕ್ ಸಿನಿಮಾದ ಮುಹೂರ್ತದ ಸಮಯದಲ್ಲಿ ಬಂದಿದ್ದ ಕಾರಿನ ನಂಬರ್ ಇದೀಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಕಳೆದ ವರ್ಷ ಈ ಸಿನಿಮಾ ಸೆಟ್ಟೇರುವ ಸಮಯದಲ್ಲಿ, ಯಶ್ ಅವರು, ಶೂಟಿಂಗ್‌ಗೆ ತೆರಳುವಾಗ ತಮ್ಮ ಕಪ್ಪು ಬಣ್ಣದ ಐಷಾರಾಮಿ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ಅದೀತ ಮತ್ತೆ ವೈರಲ್ ಆಗಿದೆ.
ಕಪ್ಪು ಬಣ್ಣದ ರೇಂಜ್ ರೋವರ್
ಅಂದಹಾಗೆ, ಯಶ್ ಶೂಟಿಂಗ್‌ಗೆ ಕಾರು ಕಪ್ಪು ಬಣ್ಣದ ರೇಂಜ್ ರೋವರ್ ಕಾರು ತಂದಿದ್ದರು. ಈ ಕಾರಿನ ಸಂಖ್ಯೆ KA 01 NA 8055. KA ಕರ್ನಾಟಕವನ್ನು ಪ್ರತಿನಿಧಿಸುವ ಈ ಕಾರು ಬೆಂಗಳೂರು ಕೇಂದ್ರ ಆರ್‌ಟಿಒನಲ್ಲಿ ನೊಂದಣಿಯಾಗಿದೆ ಹೀಗಾಗಿ NA 01 ಪಡೆದಿದೆ. 8055 ಸಂಖ್ಯೆಯನ್ನು BOSS ಸಾಮ್ಯತೆ ಇರುವುದರಿಂದ ನಮ್ಮ ಯಶ್ ಬಾಸ್ ಕರ್ನಾಟಕಕ್ಕೆ ನಂಬರ್ 1 ಎನ್ನುತ್ತಾರೆ ಫ್ಯಾನ್ಸ್. ಈ ಕಾರನ್ನು 2023ರ ಜನವರಿಯಲ್ಲಿ ಖರೀದಿಸಿದ್ದರು. ಇದರ ಬೆಲೆ ಸುಮಾರು 5 ಕೋಟಿ ರೂಪಾಯಿ ಎನ್ನಲಾಗಿದೆ.
BOSS
ಯಶ್ ಬಳಿ ಎಷ್ಟೇ ಕಾರುಗಳು ಇದ್ದರೂ ಅವರ ಸಂಪೂರ್ಣ ಆಸೆ ಇರುವುದು ಆರ್‌ಎಕ್ಸ್ 100 ಬೈಕ್ ಮೇಲೆ. ಏಕೆಂದರೆ ಹೈಸ್ಕೂಲ್‌ನಲ್ಲಿ ಇರುವಾಗಲೇ ಬೈಕ್ ಬೇಕು ಎಂದು ತಂದೆ ಬಳಿ ಕೇಳಿದ್ದರಂತೆ ಹೀಗಾಗಿ ಕಾಲೇಜ್‌ಗೆ ಕಾಲಿಡುತ್ತಿದ್ದಂತೆ ಆರ್‌ಎಕ್ಸ್ 100 ಬೈಕನ್ನು ತಂದೆ ಗಿಫ್ಟ್ ನೀಡಿದ್ದರು. ಓದಿನ ಕಡೆ ಗಮನ ಕಡಿಮೆಯಾಗಿದೆ ಅದಕ್ಕೆ ಈ ಬೈಕ್ ಕಾರಣ ಎಂದು ಯಶ್ ತಂದೆ ಈ ಬೈಕನ್ನು ಮಾರಿಬಿಟ್ಟರಂತೆ. ಇನ್ನು ಕಾರುಗಳನ್ನು ಯಶ್ ಖರೀದಿಸಿದ ಮೊದಲ ಕಾರು ಮಹೀಂದ್ರಾ ಸ್ಕಾರ್ಪಿಯೋ ಇದರ ಬೇಲೆ ಆಗ ಇದ್ದಿದ್ದು 9 ಲಕ್ಷದಿಂದ 16 ಲಕ್ಷ. ಇದಾದ ಮೇಲೆ ಬಂದಿದ್ದೆಲ್ಲವೂ ಐಷಾರಾಮಿ ಕಾರುಗಳೇ...
38 ಸಾವಿರ ಡಾಲರ್‌ಗಳ ಗಡಿ ದಾಟಿದೆ
ಇನ್ನು ಸಿನಿಮಾದ ವಿಷಯಕ್ಕೆ ಬರುವುದಾದರೆ, ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್‌ನಲ್ಲಿ ಉತ್ತರ ಅಮೆರಿಕಾದ ಮಾರುಕಟ್ಟೆಗಳು ಮುಂಚೂಣಿಯಲ್ಲಿವೆ. ಅಲ್ಲಿನ ಪ್ರೀಮಿಯರ್ ಶೋಗಳ ಮುಂಗಡ ಟಿಕೆಟ್ ಮಾರಾಟ ಈಗಾಗಲೇ 38 ಸಾವಿರ ಡಾಲರ್‌ಗಳ ಗಡಿ ದಾಟಿದೆ ಎಂದು ವರದಿಯಾಗಿದೆ. ಸಿನಿಮಾ ಇನ್ನೂ ಬಿಡುಗಡೆಯಾಗುವ ಮುನ್ನವೇ ಈ ರೀತಿಯ ಪ್ರತಿಕ್ರಿಯೆ ಸಿಗುತ್ತಿರುವುದು ಯಶ್ ಅವರ ಜಾಗತಿಕ ಅಭಿಮಾನಿ ಬಳಗದ ಸಾಮರ್ಥ್ಯವನ್ನು ತೋರಿಸುತ್ತಿದೆ. ವಿದೇಶಗಳಲ್ಲಿ ಆಗಸ್ಟ್ 25ರಂದು ಪ್ರೀಮಿಯರ್ ಪ್ರದರ್ಶನಗಳು ಆರಂಭವಾಗಲಿವೆ. ಹೀಗಾಗಿ ಭಾರತಕ್ಕಿಂತ ಮುಂಚೆಯೇ ವಿದೇಶಿ ಅಭಿಮಾನಿಗಳಿಗೆ ‘ಟಾಕ್ಸಿಕ್’ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಅವಕಾಶ ಸಿಗಲಿದೆ. ಈ ಆರಂಭಿಕ ಬುಕಿಂಗ್ ಟ್ರೆಂಡ್ ಭಾರತೀಯ ಮಾರುಕಟ್ಟೆಯ ಮೇಲೂ ದೊಡ್ಡ ನಿರೀಕ್ಷೆ ಮೂಡಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

