Asianet Suvarna News Asianet Suvarna News

ದಾಂಪತ್ಯ ಅಂದ್ರೆ ನಾವಂದುಕೊಂಡಂತೆ ಅಲ್ಲ, ಡಿವೋರ್ಸ್ ಆದ ಮಹಿಳೆಯರ ಕಥೆ ಕೇಳಿ

ಮದುವೆಯೆಂಬುದು ಏಳೇಳು ಜನ್ಮದ ಬಂಧನ ಎಂದು ಹೇಳುತ್ತಾರೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಏಳೇಳು ಜನ್ಮ ಬಿಟ್ಟು ಒಂದು ವರ್ಷಗಳ ಕಾಲವೂ ದಾಂಪತ್ಯ ಜೀವನ ಉಳಿಯುತ್ತಿಲ್ಲ. ಇದಕ್ಕೆ ಕಾರಣವಾಗ್ತಿರೋದೇನು. ಡಿವೋರ್ಸ್ ಪಡೆದ ಮಹಿಳೆಯರು ಏನ್ ಹೇಳ್ತಾರೆ ತಿಳಿಯೋಣ. 

Relationship Tips: Best Marriage Advice From Divorced Women Vin
Author
First Published Nov 30, 2022, 6:04 PM IST

ಮದುವೆ (Marriage)ಯೆಂಬುದು ತುಂಬಾ ಸೂಕ್ಷ್ಮವಾಗಿ ನಿಭಾಯಿಸಬೇಕಾದ ಸಂಬಂಧ. ಅಲ್ಲಿ ಸಾಕಷ್ಟು ನಿಷ್ಠೆ, ಉತ್ಸಾಹ, ನಂಬಿಕೆ, ಸಂವಹನ, ತಿಳುವಳಿಕೆ ಮತ್ತು ಸಹಾನುಭೂತಿ ಅಗತ್ಯವಿರುತ್ತದೆ. ಇದರಲ್ಲಿ ಯಾವುದೇ ಒಂದು ಅಂಶ ಇಲ್ಲದಿದ್ರೂ ಮದುವೆಯು ವಿಚ್ಛೇದನದಲ್ಲಿ ಕೊನೆಗೊಳ್ಳಬಹುದು. ವೈವಾಹಿಕ ಜೀವನ ಎಲ್ಲರೂ ಅಂದುಕೊಂಡಂತೆ, ನೋಡಿದಂತೆ ಇರುವುದಿಲ್ಲ. ಹೀಗಾಗಿಯೇ ಹೆಚ್ಚಿನವರು ವೈವಾಹಿಕ ಸಂಬಂಧದಲ್ಲಿ (Relationship) ಇರಲಾಗದೆ, ಮಾನಸಿಕವಾಗಿ ಒತ್ತಡ (Pressure)ಕ್ಕೊಳಗಾಗಿ ಸಂಬಂಧದಿಂದ ಹೊರಬರುತ್ತಾರೆ. ಹಾಗಿದ್ರೆ ವೈವಾಹಿಕ ಜೀವನ ಹೇಗಿರುತ್ತದೆ? ಯಾವ ರೀತಿಯಿದ್ದರೆ ಸಮಸ್ಯೆಯಾಗುತ್ತದೆ. ಡಿವೋರ್ಸ್ ಪಡೆದುಕೊಂಡ ಮಹಿಳೆಯರು (Women) ಏನ್ ಹೇಳ್ತಾರೆ ತಿಳಿಯೋಣ.

ಮಾತನಾಡುವಾಗ ಪದಗಳನ್ನು ಎಚ್ಚರಿಕೆಯಿಂದ ಆರಿಸಿ: ಮಾತು ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದು. ಹಾಗೆಯೇ ಯಾವುದೇ ಹೊಸ ಸಮಸ್ಯೆಯನ್ನು (Problem) ಹುಟ್ಟು ಹಾಕಬಹುದು. ಹೀಗಾಗಿ ಯಾವಾಗಲೂ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಮಾತನಾಡುವಾಗ ಪದಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ನಿಮ್ಮ ಸಂಗಾತಿಯು ಏನನ್ನು ಅರ್ಥೈಸಬಹುದು ಎಂದು ನಿಮಗೆ ತಿಳಿದಿಲ್ಲವಾದ್ದರಿಂದ ನೀವು ತಮಾಷೆ ಮಾಡುತ್ತಿದ್ದೀರಿ ಎಂದು ನೀವು ಭಾವಿಸಿದರೂ ಸಹ ನಿಮ್ಮ ಪದಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವುದು ಮುಖ್ಯ. ಜಗಳದ ನಡುವೆ ಅಚಾನಕ್ಕಾಗಿ ಬಳಸುವ ಕಠೋರವಾದ ಮಾತುಗಳು ಮದುವೆ ಸಂಬಂಧವನ್ನು ಹಾಳುಮಾಡಬಹುದು.

Women Right : ಮನೆಯಲ್ಲಿ ಜಗಳವಾದ್ರೆ ಹೆದರ್ಬೇಡಿ, ಪತ್ನಿಗಿದೆ ಈ ಹಕ್ಕು

ಭಾವನೆಗಳನ್ನು ಹಂಚಿಕೊಳ್ಳಿ: ಅನೇಕ ಪುರುಷರು ಮತ್ತು ಕೆಲವು ಮಹಿಳೆಯರು ಮದುವೆಯ ನಂತತ ಸಹ ತಮ್ಮ ಪಾಲುದಾರರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ. ಪರಸ್ಪರ ಭಾವನೆಗಳನ್ನು (Feelings) ಹಂಚಿಕೊಳ್ಳುವುದಿಲ್ಲ. ಇದು ಮತ್ತಷ್ಟು ಭಿನ್ನಾಭಿಪ್ರಾಯಗಳಿಗೆ ಕಾರಣವಾಗುತ್ತದೆ. ತಪ್ಪು  ಅಭಪ್ರಾಯಗಳು ಮುಂದುವರಿದರೆ ಇದು ವಿಚ್ಚೇದನದಲ್ಲಿ ಕೊನೆಗೊಳ್ಳಬಹುದು. ಸಂವಹನವು ದಾಂಪತ್ಯ ಜೀವನದಲ್ಲಿ ಪ್ರಮುಖವಾಗಿದೆ. ಜೊತೆಯಾಗಿ ಜೀವನ (Life) ನಡೆಸಲು ನೀವು ಮದುವೆಯಾಗಿದ್ದೀರಿ. ಹೀಗಾಗಿ ಭಾವನೆಗಳನ್ನು ಸಹ ಪರಸ್ಪರ ಹಂಚಿಕೊಳ್ಳಿ. 

ಗ್ಯಾಡ್ಜೆಟ್ಸ್‌ ಅತಿಯಾಗಿ ಬಳಸಬೇಡಿ: ಇತ್ತೀಚಿನ ಕೆಲ ವರ್ಷಗಳಿಂದ ದಾಂಪತ್ಯವನ್ನು ಹಾಳು ಮಾಡುತ್ತಿರುವುದು ಮೊಬೈಲ್. ಜನರು ತಮ್ಮ ಸಂಗಾತಿಗೆ ನೀಡುವುದಕ್ಕಿಂತ ಹೆಚ್ಚು ಸಮಯವನ್ನು ಮೊಬೈಲ್‌ಗೆ ನೀಡುತ್ತಾರೆ. ಅದರಲ್ಲೇ ಹೆಚ್ಚು ಸಮಯ ಕಳೆಯುತ್ತುತ್ತಾರೆ. ಹೆಚ್ಚು ಹೊತ್ತು ಕಾಲ್‌ನಲ್ಲಿ ಇರುವುದರಿಂದ, ಸೋಷಿಯಲ್ ಮೀಡಿಯಾಗಳನ್ನು ಬಳಸುವುದರಿಂದಲೂ ಭಿನ್ನಾಭಿಪ್ರಾಯ ಮೂಡುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

Indian Laws: ವಿಚ್ಛೇದನಕ್ಕೆ ಮೊದಲೇ ಇದನ್ನು ತಿಳಿದಿಟ್ಟುಕೊಳ್ಳಿ

ಪಾಲುದಾರನಿಗೆ ಆದ್ಯತೆ ನೀಡದಿರುವುದು: ಮದುವೆಯಲ್ಲಿ ಗಂಡ-ಹೆಂಡತಿ ಪರಸ್ಪರ ಸಮಯ ನೀಡುವುದು ಮುಖ್ಯ. ಉಳಿದೆಲ್ಲಾ ಕೆಲಸಕ್ಕೆ ನಂತರದ ಪ್ರಾಧಾನ್ಯತೆಯನ್ನು ನೀಡಬೇಕು. ನೀವು ಕೆಲಸಕ್ಕೆ ಆದ್ಯತೆ ನೀಡಿದಾಗ, ಉಳಿದೆಲ್ಲವನ್ನೂ ತಡೆಹಿಡಿಯುವಾಗ, ನಿಮ್ಮ ಸಂಗಾತಿ (Partner)ಯನ್ನು ನೀವು ನಿಧಾನವಾಗಿ ಮತ್ತು ಸ್ಥಿರವಾಗಿ ಕಳೆದುಕೊಳ್ಳುತ್ತೀರಿ. ಪತಿ ಅಥವಾ ಪತ್ನಿ ಸಮಯ ನೀಡದ ಕಾರಣವೇ ಒಂಟಿತನವನ್ನು ಅನುಭವಿಸಿ ದಾಂಪತ್ಯ ಜೀವನದಿಂದ ಹೊರ ಬಂದವರಿದ್ದಾರೆ.

ಸರಿಯಾದ ರೀತಿಯಲ್ಲಿ ವಾದಿಸಿ: ದಾಂಪತ್ಯವೆಂದಾಗ ಅಲ್ಲಿ ಜಗಳ, ವಾಗ್ವಾದಗಳು ನಡೆಯುತ್ತಲೇ ಇರುತ್ತವೆ. ಇವುಗಳನ್ನು ಸಮರ್ಥವಾಗಿ ನಿಭಾಯಿಸುವುದನ್ನು ಕಲಿಯಬೇಕು. ಎಲ್ಲಾ ವಾದವಿವಾದಗಳು ಬಂದಾಗ ನೀವು ಯಾವಾಗಲೂ ಸರಿಯಾಗಿರಬೇಕಾಗಿಲ್ಲ. ಹೀಗಾಗಿ ಕೆಲವೊಮ್ಮೆ ಮೌನವಾಗಿರುವುದು ಒಳ್ಳೆಯದು. ಸ್ವಲ್ಪ ಸಮಯದ ನಂತರ ನಿಮ್ಮ ಸಂಗಾತಿಯ ಮನಸ್ಸು ತಿಳಿಯಾದ ನಂತರ ಮಾತುಕತೆಯನ್ನು ಮುಂದುವರಿಸುವುದು ಸೂಕ್ತ.

ಅಬ್ಬಬ್ಬಾ..88ನೇ ಬಾರಿ ಮದ್ವೆಯಾಗ್ತಿರೋ ವ್ಯಕ್ತಿ, ವಧು ಮತ್ಯಾರೂ ಅಲ್ಲ ಮಾಜಿ ಪತ್ನಿ!

ಮದುವೆಯ ಮೊದಲೇ ಸಂಬಂಧದೊಳಗಿನ ಸೂಕ್ಷ್ಮತೆಯನ್ನು ತಿಳಿದುಕೊಳ್ಳುವ ಮೂಲಕ ಸಣ್ಣಪುಟ್ಟ ಕಾರಣಗಳಿಗೆ ಡಿವೋರ್ಸ್ ಆಗುವುದನ್ನು ತಪ್ಪಿಸಬಹುದು. ಗಂಡ-ಹೆಂಡತಿ ಮನಸ್ತಾಪವಿಲ್ಲದೆ ಖುಷಿ ಖುಷಿಯಾಗಿ ಇರಬಹುದು.

Follow Us:
Download App:
  • android
  • ios