Asianet Suvarna News Asianet Suvarna News

Indian Laws: ವಿಚ್ಛೇದನಕ್ಕೆ ಮೊದಲೇ ಇದನ್ನು ತಿಳಿದಿಟ್ಟುಕೊಳ್ಳಿ

ಚಿಕ್ಕ ವಿಷ್ಯಕ್ಕೂ ಈಗ ದಾಂಪತ್ಯ ಮುರಿದು ಬೀಳ್ತಿದೆ. ವಿಚ್ಛೇದನ ಪ್ರಕರಣಗಳು ಕೋರ್ಟ್ ನಲ್ಲಿ ಹೆಚ್ಚಾಗ್ತಿವೆ. ಬೇರೆಯಾಗುವ ನಿರ್ಧಾರ ತೆಗೆದುಕೊಂಡ ತಕ್ಷಣ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಬದಲು ಡೈವರ್ಸ್ ಬಗ್ಗೆ ನಮ್ಮ ಕಾನೂನು ಏನು ಹೇಳುತ್ತದೆ ಎಂಬುದನ್ನು ತಿಳಿದಿರಿ. 
 

Indian Laws For Divorce
Author
First Published Nov 18, 2022, 4:23 PM IST

ಒಮ್ಮೆ ಸಪ್ತಪದಿ ತುಳಿದ್ರೆ ಇಡೀ ಜೀವನ ಜೊತೆಗಿರಬೇಕು ಎಂಬ ಬೇಲಿ ಈಗಿಲ್ಲ. ಮದುವೆಯಾದ ತಿಂಗಳಿನಲ್ಲೇ ವಿಚ್ಛೇದನ ಪಡೆದ ದಂಪತಿಯಿದ್ದಾರೆ. ದಾಂಪತ್ಯದಲ್ಲಿ ಸಣ್ಣ ಸಮಸ್ಯೆ ಬಂದ್ರೂ ಜನರು ಕೋರ್ಟ್ ಮುಂದೆ ಹೋಗ್ತಾರೆ. ಹಿಂದೆ ವಿದೇಶಗಳಲ್ಲಿ ಸಾಮಾನ್ಯ ಎನ್ನುವಂತಿದ್ದ ವಿಚ್ಛೇದನ ಈಗ ಭಾರತದಲ್ಲೂ ಕಾಮನ್ ಆಗಿದೆ. ಪತಿ – ಪತ್ನಿ ಮಧ್ಯೆ ಹೊಂದಾಣಿಕೆಯಾಗ್ತಿಲ್ಲ, ನಾವಿಬ್ಬರೂ ದೂರವಾಗ್ತೆವೆ ಎಂದು ನೀವು ಆಲೋಚನೆ ಮಾಡಿದ್ದರೆ ಅದಕ್ಕೆ ಸಂಬಂಧಿಸಿದ ಕೆಲ ಕಾನೂನಿನ ಬಗ್ಗೆ ತಿಳಿದುಕೊಳ್ಳಿ. ನಮ್ಮ ದೇಶದಲ್ಲಿ ಕಾನೂನಿಗೆ ಮಾನ್ಯತೆ ನೀಡಲಾಗುತ್ತದೆ. ವಿಚ್ಛೇದನಕ್ಕೆ ಸಂಬಂಧಿಸಿದಂತೆ ನಮ್ಮ ದೇಶದಲ್ಲಿ ಹಲವು ಕಾನೂನುಗಳಿವೆ. ನಾವಿಂದು ವಿಚ್ಛೇದನಕ್ಕೆ ಸಂಬಂಧಿಸಿದ ಕೆಲ ಕಾನೂನಿನ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ.

ಭಾರತ (India) ದಲ್ಲಿ ವಿಚ್ಛೇದನ (Divorce) ಕಾನೂನು ? : ಭಾರತದಲ್ಲಿ ಒಂದೇ ವಿಚ್ಛೇದನ ಕಾನೂನಿ (Law) ಲ್ಲ. ವಿಚ್ಛೇದನ ವೈಯಕ್ತಿಕ ವಿಷ್ಯ. ಹಾಗಾಗಿ ಅದನ್ನು ಧರ್ಮ (Religion) ದ ಪ್ರಕಾರ ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ, ಪಾರ್ಸಿ ಧರ್ಮವಿದೆ. ಇದ್ರಲ್ಲಿ ಹಿಂದೂ, ಬೌದ್ಧ, ಸಿಖ್ ಹಾಗೂ ಜೈನ ಧರ್ಮದವರು ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ಅರ್ಹರಾಗಿರುತ್ತದೆ. ಮುಸ್ಲಿಂ, ಕ್ರೈಸ್ತ ಮತ್ತು ಪಾರ್ಸಿ ಧರ್ಮದವರು ಮದುವೆ ಹಾಗೂ ವಿಚ್ಛೇದನಕ್ಕೆ ಅವರದೆ ಆದ ಕಾನೂನು ಪಾಲನೆ ಮಾಡ್ತಾರೆ.  

ಗಂಡನ ಮನೆಯವರ ಮುಂದೆ ಮಾತ್ರ ಡ್ರಿಂಕ್ಸ್ ಮಾಡ್ಬೇಡಿ!

ಹಿಂದೂ ವಿಚ್ಛೇದನ ಕಾಯ್ದೆಯಡಿ ಬರುತ್ತೆ ಈ ಎಲ್ಲ ವಿಷ್ಯ :
ಹಿಂದೂ ವಿವಾಹ ಕಾಯ್ದೆ (Hindu Marriage Act) ಹೇಳೋದೇನು ? :
ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ರ ಪ್ರಕಾರ, ಪ್ರಕಾರ, ಯಾವುದೇ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ವಿಚ್ಛೇದನವಿಲ್ಲದೆ ಮದುವೆಯಾಗುವಂತಿಲ್ಲ. ಮೊದಲ ಹೆಂಡತಿ ಬದುಕಿರುವಾಗ್ಲೆ, ಆಕೆಗೆ ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾದ್ರೆ, ಎರಡನೇ ಪತ್ನಿ ಕೂಡ ಬದುಕಿದ್ದರೆ ಅದು ಅಪರಾಧವಾಗುತ್ತದೆ. ಈ ಬಗ್ಗೆ ಮೊದಲ ಪತ್ನಿ ದೂರು ಸಲ್ಲಿಸಬಹುದು. ಪತ್ನಿಯಾದವಳು ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕು.

ಆಸ್ತಿ ಹಂಚಿಕೆ (Asset Division) : ಗಂಡ- ಹೆಂಡತಿ ಬೇರೆಯಾದ್ಮೇಲೆ ಅಂದ್ರೆ ಕಾನೂನಿನ ಪ್ರಕಾರ ಇಬ್ಬರಿಗೂ ವಿಚ್ಛೇದನ ಸಿಕ್ಕ ಮೇಲೆ ಆಸ್ತಿ ವಿಭಜನೆ ನಡೆಯುತ್ತದೆ. ಪತ್ನಿ ಯಾವುದೇ ಕೆಲಸ ಮಾಡದಿದ್ದರೆ ಗಂಡನ ಆಸ್ತಿಯಲ್ಲಿ ಅವಳಿಗೆ ಪಾಲು ಸಿಗುತ್ತದೆ. ಆದರೆ ಹೆಂಡತಿ ಕೆಲಸ ಮಾಡುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಇತರ ನಿಯಮಗಳಿವೆ. ಅದಕ್ಕಾಗಿ ಕಾನೂನಿನ ಸಹಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಪತಿಯಾದವನು ಮಕ್ಕಳು ಹಾಗೂ ಪತ್ನಿ ಜೀವನ ನಿರ್ವಹಣೆಗೆ ಒಂದಿಷ್ಟು ಹಣವನ್ನು ಪ್ರತಿ ತಿಂಗಳು ನೀಡಬೇಕಾಗುತ್ತದೆ. 

ಅವಿವಾಹಿತ ಮಹಿಳೆಯರೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಮಕ್ಕಳ ಬಗ್ಗೆ ನಿರ್ಧಾರ : ಪತಿ – ಪತ್ನಿಯಲ್ಲಿ ಯಾರು ಮಕ್ಕಳ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂಬುದನ್ನು ವಿಚ್ಛೇದನದ ನಂತ್ರ ನಿರ್ಧರಿಸಬೇಕಾಗುತ್ತದೆ. ಪರಸ್ಪರ ಒಪ್ಪಿಗೆ ಇದಕ್ಕೆ ಮುಖ್ಯವಾಗುತ್ತದೆ. ಇಬ್ಬರ ಮಧ್ಯೆ ಈ ವಿಷ್ಯದಲ್ಲಿ ಹೊಂದಾಣಿಕೆಯಾಗಿಲ್ಲವೆಂದ್ರೆ ಕೋರ್ಟ್ ಮಧ್ಯ ಪ್ರವೇಶ ಮಾಡುತ್ತದೆ. ಮಕ್ಕಳನ್ನು ಯಾರು ಬೆಳೆಸಬೇಕೆಂದು ಕೋರ್ಟ್ ತೀರ್ಮಾನ ತೆಗೆದುಕೊಳ್ಳುತ್ತದೆ. ಇದಕ್ಕೆ ಮಕ್ಕಳ ಒಪ್ಪಿಗೆ ಕೂಡ ಅಗತ್ಯ. 

ಈ ಕಾರಣಕ್ಕೆ ನೀವು ವಿಚ್ಛೇದನ ಪಡೆಯಬಹುದು :  ಹಿಂದೂ ವಿಚ್ಛೇದನ ಕಾನೂನಿನ ಪ್ರಕಾರ, ಅನೇಕ ಕಾರಣಕ್ಕೆ ನೀವು ವಿಚ್ಛೇದನ ಪಡೆಯಬಹುದು. ಅದ್ರಲ್ಲಿ ಸಾಂಕ್ರಾಮಿಕ ರೋಗ ಕೂಡ ಸೇರಿದೆ. ಗಂಡ ಅಥವಾ ಹೆಂಡತಿ ಏಡ್ಸ್ ರೋಗಿಯಾಗಿದ್ದರೆ, ಸಿಫಿಲಿಸ್, ಗೊನೊರಿಯಾ, ಕುಷ್ಠರೋಗ ಸೇರಿದಂತೆ ಪ್ರಮುಖ ಕಾಯಿಲೆಯಿಂದ ಬಳಲುತ್ತಿದ್ದರೆ ಅವರು ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಪತಿ ಅಥವಾ ಪತ್ನಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ, ಅವರವರ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದರೆ ಕೂಡ ವಿಚ್ಛೇದನ ಪಡೆಯಬಹುದಾಗಿದೆ.
 

Follow Us:
Download App:
  • android
  • ios