ಕಳೆದ 2 ದಶಕಗಳಿಂದ ನಡೆಸುತ್ತಿದ್ದ ಡಿವೋರ್ಸ್ ಹೋರಾಟದಲ್ಲಿ ಕೊನೆಗೂ ಭಾರತೀಯ ಮಹಿಳೆ ಗೆದ್ದಿದ್ದಾರೆ. ಪರಿಣಾಮ ಇದೀಗ ಜೀವನಾಂಶವಾಗಿ ಬರೋಬ್ಬರಿ 85 ಕೋಟಿ ರೂಪಾಯಿ ಪಡೆದಿದ್ದಾರೆ. ಆರಂಭದಲ್ಲಿ ಕೋರ್ಟ್ 3.5 ಕೋಟಿ ರೂ ಪಡೆದಿದ್ದರು. ಏನಿದು ಪ್ರಕರಣ?

ಲಂಡನ್ (ಜೂನ್.05) ಡಿವೋರ್ಸ್ ಪ್ರಕರಣಗಳು ಸುದಿರ್ಘ ವಿಚಾರಣೆ, ಕೌನ್ಸಿಲಿಂಗ್ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಮ್ಯೂಚ್ಯೂವಲ್ ಡಿವೋರ್ಸ್ ಕೇಸ್ ಬಿಟ್ಟು ಇತರ ಡಿವೋರ್ಸ್ ಕೇಸ್‌ಗಳು ಸಾಮಾನ್ಯವಾಗಿ ವಿಳಂಬವಾಗುವುದೇ ಹೆಚ್ಚು. ಇಲ್ಲೊಂದು ಡಿವೋರ್ಸ್ ಪ್ರಕರಣ ಹಲವರ ಗಮನಸೆಳೆದಿದೆ. ಭಾರತೀಯ ಮಹಿಳೆ ವರ್ಷಾ ಗೊಹಿಲ್ ಕಳೆದ 2 ದಶಕಗಳಿಂದ ಸತತವಾಗಿ ಡಿವೋರ್ಸ್ ಪ್ರಕರಣದಲ್ಲಿ ಹೋರಾಟ ನಡೆಸಿ ಕೊನೆಗೂ ಗೆದ್ದಿದ್ದಾಳೆ. ಇದೀಗ ಜೀವನಾಂಶ ರೂಪದಲ್ಲಿ ಬರೋಬ್ಬರಿ 85 ಕೋಟಿ ರೂಪಾಯಿ ಪಡೆದ ಘಟನೆ ಯುನೈಟೆಡ್ ಕಿಂಗ್ಡಮ್‌ನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2002ರ ಡಿವೋರ್ಸ್ ಕೇಸ್

ಯುಕೆಯಲ್ಲಿ ನಡೆದ ಡಿವೋರ್ಸ್ ಪ್ರಕರಣಗಳಲ್ಲಿ ಈ ಕೇಸ್ ಅತ್ಯಂತ ವಿಶೇಷ ಎಂದು ಪರಿಗಣಿಸಲಾಗಿದೆ. ಇದಕ್ಕೆ ಕೇವಲ ಜೀವನಾಂಶ ಕಾರಣವಲ್ಲ. ಈ ಡಿವೋರ್ಸ್ ಕೇಸ್ ಆರಂಭಗೊಳ್ಳುವುದು 2002ರಿಂದ. ಗಂಡ ಭದ್ರೇಶ್ ಗೋಹಿಲ್ ಅನುಚಿತ ವರ್ತನೆ, ಹಿಂಸೆ ಸೇರಿದಂತೆ ಹಲವು ಕಾರಣಗಳಿಂದ ವರ್ಷಾ ಗೋಹಿಲ್ ಡಿವೋರ್ಸ್‌ಗೆ ಅರ್ಜಿ ಹಾಕಿದ್ದಾರೆ. ಮೂವರು ಮಕ್ಕಳ ಈ ಸಂಸಾರದಲ್ಲಿ ಡಿವೋರ್ಸ್ ಪ್ರಕರಣ ಆರಂಭಗೊಂಡಿತ್ತು.

ಕೆಲವೇ ವರ್ಷಗಳಲ್ಲಿ ವರ್ಷಾ ಗೋಹಿಲ್ ಡಿವೋರ್ಸ್ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ಇತ್ತ ಭದ್ರೇಶ್ ಹೋಹಿಲ್ ಕೂಡ ಡಿವೋರ್ಸ್‌ಗೆ ಒಪ್ಪಿದ್ದು ಮಾತ್ರವಲ್ಲ, 270,000 ಪೌಂಡ್ಸ್ ಅಂದರೆ 3.5 ಕೋಟಿ ರೂಪಾಯಿ ಜೀವನಾಂಶ ನೀಡಲು ಒಪ್ಪಿದ್ದರು. ಹೀಗಾಗಿ ಪ್ರಕರಣ ಅಂತ್ಯಗೊಂಡಿತ್ತು. ಜೀವನಾಂಶವನ್ನು ಕೋರ್ಟ್ ಮೂಲಕ ನೀಡಲಾಗಿತ್ತು. ಇಲ್ಲಿದೆ ಈ ಕೇಸ್ ಕ್ಲೋಸ್ ಆಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ವರ್ಷಾ ಗೋಹಿಲ್ ಮತ್ತೆ ಹೋರಾಟ ಆರಂಭಿಸಿದ್ದರು.

ಕೆಲ ವರ್ಷಗಳ ಬಳಿಕ ಮಾಜಿ ನೈಜಿರೀಯನ್ ಗವರ್ನರ್ ಜೇಮ್ಸ್ ಇಬೋರಿ ಜೊತೆ ಅಕ್ರಮ ಹಣ ವರ್ಗಾವಣೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಯುಕೆ ಅಧಿಕಾರಿಗಳು ತನಿಖೆ ನಡೆಸಿದ್ದರು. 2011ರಲ್ಲಿ ಈ ಪ್ರಕರಣ ಯುಕೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತ್ತು. ಅದೇ ವರ್ಷ ಭದ್ರೇಶ್ ಗೋಹಿಲ್ ವಿರುದ್ದ ತೀರ್ಪು ಬಂದಿತ್ತು. 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು. ಈ ವಿಚಾರಣೆ ವೇಳೆ ಅಧಿಕಾರಿಗಳು ಭದ್ರೇಶ್ ಗೋಹಿಲ್ ಭಾರಿ ಆಸ್ತಿ ಮಾಡಿರುವುದು ಪತ್ತೆಯಾಗಿತ್ತು. ಈ ವಿಚಾರ ಪತ್ನಿಗೆ ಗೊತ್ತೇ ಇರಲಿಲ್ಲ. ಬರೋಬ್ಬರಿ 28 ಮಿಲಿಯನ್ ಪೌಂಡ್‌ಗೂ ಹೆಚ್ಚಿನ ಆಸ್ತಿ,ಹಲವು ಖಾತೆಗಳಲ್ಲಿ ಹಣ ಪತ್ತೆಯಾಗಿತ್ತು.

2015ರಲ್ಲಿ ಡಿವೋರ್ಸ್ ಕೇಸ್ ಕುರಿತು ಮತ್ತೊಂದು ಅರ್ಜಿ

ವರ್ಷಾ ಗೋಹಿಲ್ 2015ರಲ್ಲಿ ತಮ್ಮ ಡಿವೋರ್ಸ್ ಕೇಸ್ ವೇಳೆ ಗಂಡನ ಆಸ್ತಿ, ಗೌಪ್ಯವಾಗಿಟ್ಟಿದ್ದ ಹಣದ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ತನ್ನ ಡಿವೋರ್ಸ್ ಕೇಸ್ ಮರು ಪರಿಗಣಿಸಿ, ಜೀವನಾಂಶ ನ್ಯಾಯ ಸಮ್ಮತವಾಗಿ ನೀಡಬೇಕು ಎಂದು ಮನವಿ ಮಾಡಿದ್ದರು. ಯುಕೆ ಸುಪ್ರೀಂ ಕೋರ್ಟ್ ಈ ಅರ್ಜಿ ಪರಿಗಣಿಸಿ ಕೇಸ್ ರಿಓಪನ್ ಮಾಡಿತ್ತು. ಬಳಿಕ ಸತತವಾಗಿ ವಿಚಾರಣೆ ಆರಂಭಗೊಂಡಿತ್ತು.

23 ವರ್ಷಗಳ ಬಳಿಕ ಹೋರಾಟ ಗೆದ್ದ ವರ್ಷಾ

ವರ್ಷಾ ಗೋಹಿಲ್ ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದೆ. ಯುಕೆ ನಿಯಮದ ಪ್ರಕಾರ, ವರ್ಷಾ ಗೋಹಿಲ್‌ಗೆ 85 ಕೋಟಿ ರೂಪಾಯಿ ಪರಿಹಾರ ನೀಡಲು ಕೋರ್ಟ್ ಸೂಚಿಸಿದೆ. ಬರೋಬ್ಬರಿ 23 ವರ್ಷಗಳ ಸತತ ಹೋರಾಟದ ಬಳಿಕ ವರ್ಷಾ ಗೋಹಿಲ್ ಭಾರಿ ಮೊತ್ತವನ್ನು ಪರಿಹಾರ ರೂಪದಲ್ಲಿ ಪಡೆಯುತ್ತಿದ್ದಾರೆ.