ನಾನು ನಾನಾಗಿರಬೇಕು ಎಂದಿದ್ಯಾಕೆ ನಟಿ ಶುಭಾ ಪೂಂಜಾ? ಡಿವೋರ್ಸ್ಗೆ ಏನಿದು ಲಿಂಕ್? ವಿಡಿಯೋ ವೈರಲ್
ನಟಿ ಶುಭಾ ಪೂಂಜಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರ ವಿಚ್ಛೇದನದ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳಿಗೆ ಆಘಾತ ಉಂಟುಮಾಡಿದೆ. ಈ ನಡುವೆ, ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಮಾತನಾಡುತ್ತಾ 'ನಾನು ನಾನಾಗಿರಬೇಕು' ಎಂದು ಅವರು ನೀಡಿದ್ದ ಹಳೆಯ ಸಂದರ್ಶನವೊಂದು ವೈರಲ್ ಆಗಿದೆ.

ಬೆಳ್ಳಂಬೆಳಗ್ಗೆ ಶುಭಾ ಪೂಂಜಾ ಶಾಕ್
ಇಂದು ಬೆಳ್ಳಂಬೆಳಗ್ಗೆ ನಟಿ ಶುಭಾ ಪೂಂಜಾ ಅವರ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ಎಲ್ಲರಿಗೂ ಶಾಕ್ ಉಂಟಾಗಿದೆ. ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಅಂತಲೇ ಗುರುತಿಸಿಕೊಂಡಿದ್ದ ನಟಿ ಶುಭ ಪೂಂಜಾ ಮತ್ತು ಸುಮಂತ್ ಮಹಾಬಲ ಜೋಡಿಯ ಡಿವೋರ್ಸ್ ಸುದ್ದಿ ಇದಾಗಿದ್ದು, ಇದರ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಲವ್ ಮ್ಯಾರೇಜ್
ನಟಿ ಶುಭಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರದ್ದು ಲವ್ ಮ್ಯಾರೇಜ್. ಇದಾಗಲೇ ಒಟ್ಟಿಗೇ ಹಲವು ಬಾರಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹಲವು ಪ್ರದೇಶಗಳಿಗೆ ಸುತ್ತಾಡಿ ಬಂದಿದ್ದಾರೆ. ಆದರೆ ಈಗ ಏಕಾಏಕಿ ಏನಾಯ್ತು ಎನ್ನುವುದು ಅಭಿಮಾನಿಗಳಿಗೆ ತಿಳಿಯುತ್ತಿಲ್ಲ. ಆದರೆ ಡಿವೋರ್ಸ್ಗೆ ಜೋಡಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ ಎನ್ನುವ ಸುದ್ದಿ ಮಾತ್ರ ಹರಿದಾಡುತ್ತಿದ್ದು, ಇದು ಸುಳ್ಳಾಗಲಿ ಎನ್ನುತ್ತಿದ್ದಾರೆ ಅಭಿಮಾನಿಗಳು.
ಮಹಿಳಾ ಕೇಂದ್ರಿತ ಸಿನಿಮಾ
ಇದರ ನಡುವೆಯೇ, ಈ ಹಿಂದೆ ಮಹಿಳಾ ಕೇಂದ್ರಿತ ಸಿನಿಮಾ ಕುರಿತು ನಡೆಸಿದ ಸಂದರ್ಶನವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ಎಲ್ಲವೂ ನಾನು ನಾನಾಗಿರಬೇಕು ಎಂದು ಹೇಳಿರುವ ಮಾತು ದಾಂಪತ್ಯ ಜೀವನಕ್ಕೂ ಅನ್ವಯ ಮಾಡಲಾಗುತ್ತಿದೆ.
ಮೊಗ್ಗಿನ ಮನಸ್ಸು ಚಿತ್ರದ ಬಳಿಕ...
ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನಟಿ, ತಮ್ಮ ತೂಕ ಇಳಿಸಿಕೊಂಡಿದ್ದರ ಬಗ್ಗೆ ಮಾತನಾಡಿದ್ದರು. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಸ್ಲಿಮ್ ಆಗಿದ್ದ ನಟಿ ಆ ಬಳಿಕ ಏಕಾಏಕಿ ತೂಕ ಏರಿಸಿಕೊಂಡರು. ನಂತರ ತ್ರಿದೇವ್ ಸಿನಿಮಾ ಮಾಡುವ ಸಮಯದಲ್ಲಿ ಸಿಕ್ಕಾಪಟ್ಟೆ ಸ್ಲಿಮ್ ಆಗಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
ನಾನು ನಾನಾಗಿರಬೇಕು ಎನ್ನೋದು ಇಷ್ಟ
ಈ ಬಗ್ಗೆ ಮಾತನಾಡಿದ್ದ ನಟಿ, ತ್ರಿದೇವ್ ಸಿನಿಮಾ ಮಹಿಳಾ ಪ್ರಧಾನವಾದದ್ದು. ಮೊಗ್ಗಿನ ಮನಸ್ಸು ಚಿತ್ರದ ಬಳಿಕ ಮಹಿಳಾ ಪ್ರಧಾನವಾಗಿರುವ ಮೀನಾಕ್ಷಿ ಸಿನಿಮಾದಲ್ಲಿ ನಟಿಸಿದ್ದರೂ, ಇನ್ನೂ ಹೆಚ್ಚು ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತು. ನನಗೆ ನಾನು ನಾನಾಗಿರಬೇಕು ಎನ್ನುವ ಹಂಬಲ ಸದಾ ಇರುತ್ತದೆ. ಅದಕ್ಕಾಗಿಯೇ ಮಹಿಳೆಯರು ಮುಂದೆ ಬಂದು, ನಾಯಕಿ ಪ್ರಧಾನ ಸಿನಿಮಾ ಮಾಡಲು ಆಸೆಯಿಂದ ತೂಕ ಇಳಿಸಿಕೊಂಡೆ ಎಂದಿದ್ದರು.
ತೂಕ ಇಳಿಸಿಕೊಂಡಿರೋ ಗುಟ್ಟು
ತೂಕ ಇಳಿಸುವುದಕ್ಕಾಗಿ ಕಳಲಿಪಟ್ಟು ಕಲಿತೆ, ಸಾಕಷ್ಟು ಯೋಗಾಭ್ಯಾಸ ಮಾಡಿದೆ. ಇದರಿಂದ 10 ಕೆಜಿ ತೂಕ ಇಳಿಸಿಕೊಂಡೆ. ಇನ್ನೂ ಇಳಿಯಬೇಕು ಎನ್ನುವ ಟಾರ್ಗೆಟ್ ಇದೆ ಎಂದು ನಟಿ ಹೇಳಿದ್ದರು. ಹುಡುಗಿಯರಿಗೋಸ್ಕರ ಕೆಲಸ ಮಾಡುವುದು ನನಗೆ ಇಷ್ಟ. ನಾಯಕ ಪ್ರಧಾನಕ್ಕಿಂತ ನಾಯಕಿ ಪ್ರಧಾನವಾಗಿರುವುದೇ ನನಗೆ ತುಂಬಾಇಷ್ಟ ಎಂದಿದ್ದರು. ಇದೀಗ ಕುಟುಂಬದಲ್ಲಿಯೂ ನಟಿ ಇದನ್ನೇ ಅಳವಡಿಸಿಕೊಂಡ್ರಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

