ಮದುವೆ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಬಂದ ಬುರ್ಖಾಧಾರಿಯೊಬ್ಬರು ವರನಿಗೆ ಮುತ್ತಿಕ್ಕಲು ಆರಂಭಿಸಿ ವಧುವಿಗೆ ಆಘಾತ ನೀಡುತ್ತಾರೆ. ಕೊನೆಗೆ ಆ ಬುರ್ಖಾದೊಳಗಿದ್ದಿದ್ದು ವರನ ಪ್ರೇಯಸಿಯಲ್ಲ, ಬದಲಿಗೆ ಯಾರು ಎಂದು ತಿಳಿದಾಗ ವಧು ನಿಟ್ಟುಸಿರು ಬಿಟ್ಟರು.

ಮದುವೆ ಇನ್ನೇನು ನಡೆಯುತ್ತಿದೆ ಎನ್ನುವಾಗ 'ನಿಲ್ಲಿಸಿ' ಎಂದು ಯಾರೋ ಬಂದು ಮದುವೆ ನಿಲ್ಲಿಸುವುದು ಸೀರಿಯಲ್​, ಸಿನಿಮಾಗಳಲ್ಲಿ ನೋಡಬಹುದು. ಅದು ಒಂದೋ ವಧು ಇಲ್ಲವೇ ವರನ ಲವರ್​ ಆಗಿರ್ತಾರೆ. ಇಲ್ಲವೇ ವಧು ಅಥವಾ ವರ ಯಾರಿಗೋ ಮೋಸ ಮಾಡಿದಾಗ ಅವರು ಬಂದು ನಿಲ್ಲಿಸುತ್ತಾರೆ ಅಥವಾ ಪೊಲೀಸರು ಮದುವೆ ತಡೆಯುತ್ತಾರೆ. ಇವೆಲ್ಲಾ ಕಾಮನ್​. ಆದರೆ ಇಲ್ಲೊಂದು ವೈರಲ್​ ವಿಡಿಯೋದಲ್ಲಿ ಆಗಿದ್ದೇ ಬೇರೆ. ಮದುವೆಯ ದಿನ ವೇದಿಕೆ ಮೇಲೆ ಮದುಮಕ್ಕಳು ಇರುವಾಗಲೇ ಬುರ್ಖಾಧಾರಿಯೊಬ್ಬರು ಬಂದು ವರನಿಗೆ ಲೊಚಲೊಚ ಎಂದು ಮುತ್ತು ಕೊಡಲು ಶುರು ಮಾಡಿಯೇ ಬಿಟ್ಟರು. ಇದನ್ನು ನೋಡಿ ವಧು ಕಕ್ಕಾಬಿಕ್ಕಿಯಾಗಿ ಹೋದಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್ಲರ ನೆನಪು ಮಾಡಿಕೊಂಡ ವರ!

ವರನಿಗೂ ಶಾಕ್​ ಆಯಿತು. ಯಾರು ಈ ಮುಸ್ಲಿಮ್​ ಮಹಿಳೆ ಎಂದು. ತನ್ನ ಲವರ್​ ಯಾರೂ ಮುಸ್ಲಿಂ ಲೇಡಿ ಇಲ್ವಲ್ಲಾ ಎಂದು ಎನ್ನಿಸಿದರೂ ವರನಿಗೆ ಯಾರು ಇರಬಹುದು ಎಂದು ಡೌಟ್​ ಬರಲು ಶುರುವಾಯಿತು. ಬಹುಶಃ ಪ್ರೈಮರಿ, ಹೈಸ್ಕೂಲ್​, ಕಾಲೇಜಿನ ಎಲ್ಲಾ ದಿನಗಳನ್ನು ನೆನಪು ಮಾಡಿಕೊಂಡಿರಬಹುದು. ಇದು ಯಾರೋ ತಮಾಷೆಗೆ ಬಂದಿರೋರು ಎಂದು ಒಂದು ಕ್ಷಣ ಎನ್ನಿಸಿದರೂ ಎಲ್ಲರ ಎದುರೇ ವೇದಿಕೆ ಮೇಲೆ ಹೀಗೆ ಮಾಡಿದ್ರೆ ಪಾಪ ಏನಾಗಬೇಡ ಆತನ ಸ್ಥಿತಿ?

ಕೊನೆಗೆ ಬುರ್ಖಾ ತೆಗೆದರೆ?

ಆ ಬುರ್ಖಾಧಾರಿಯ ಮುಸುಕನ್ನು ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಅದು ಸಾಧ್ಯವಾಗಲಿಲ್ಲ. ಆ ಬುರ್ಖಾಧಾರಿ ಮಾತ್ರ ಅಪ್ಪಿಕೊಂಡು ಮುತ್ತಿನ ಸುರಿಮಳೆ ಕೊಡುತ್ತಲೇ ಇದ್ದಳು. ಕೊನೆಗೂ ಬುರ್ಖಾ ತೆಗೆಯುವಲ್ಲಿ ವರ ಯಶಸ್ವಿಯಾದರು.

ಉಸ್ಸಪ್ಪಾ ಎಂದ ವಧು

ಆಮೇಲೆ ನೋಡಿದ್ದರೆ, ಅದು ವರನ ಸ್ನೇಹಿತನೇ! ಬುರ್ಖಾ ಧರಿಸಿ ಬಂದು ಪಾಪ ಸ್ನೇಹಿತನನ್ನು ಪೇಚಿಗೆ ಸಿಲುಕಿಸಿದ್ದ ಈ ಗೆಳೆಯ. ಅದು ಹುಡುಗಿ ಅಲ್ಲ ಹುಡುಗ ಎಂದು ತಿಳಿಯುತ್ತಲೇ ವಧು ಅಬ್ಬಾ ಎಂದು ದೀರ್ಘ ಉಸಿರು ಬಿಟ್ಟಳು. ಹೋದ ಜೀವ ಬಂದಂತಾಯಿತು ಎನ್ನಿಸುತ್ತದೆ. ಒಟ್ಟಿನಲ್ಲಿ ಈ ಮದುವೆ ಮಾತ್ರ ನೋಡುಗರು ಹಾಗೂ ವಧು-ವರರು ಕೊನೆಯವರೆಗೂ ಮರೆಯಲಿಕ್ಕಿಲ್ಲ.

View post on Instagram