ಇದು ನಾರ್ತ್‌ ಕೆರೊಲಿನಾದಲ್ಲಿ ನಡೆದ ಘಟನೆ. ಇಲ್ಲಿನ ಓರಿಯೆಂಟಲ್ ಎಂಬಲ್ಲಿ ರುಡಿ ಆರ್ಮ್‌ಸ್ಟ್ರಾಂಗ್ ಎಂಬಾತ ವಾಸಿಸುತ್ತಾರೆ. ಇವರು ನೌಕಾಪಡೆಯ ನಿವೃತ್ತ ಯೋಧ. ಇವರಿಗೆ ಹೆಂಡತಿಯಾಗಲೀ, ಮಕ್ಕಳಾಗಲೀ ಇಲ್ಲ. ಆದರೆ ಜೊತೆಗೊಂದು ನಾಯಿಯಿದೆ. ಚಿಹುಹುವಾ ಜಾತಿಯ ಈ ನಾಯಿ, ಈ ವೃದ್ಧ ಎಲ್ಲೇ ಹೋದರೂ, ಏನೇ ಮಾಡಿದರೂ ಅವರ ಜೊತೆಗಿರುತ್ತದೆ. ಆತ ಊಟ ಮಾಡುವಾಗಲೂ ಪಕ್ಕದಲ್ಲಿ, ಮಲಗುವಾಗಲೂ ಜೊತೆಯಲ್ಲಿ ಇರುತ್ತದೆ. ಬುಬು ಎಂದು ಅದರ ಹೆಸರು. ಬುಬು ಜೊತೆಗಿಲ್ಲದೆ ರುಡಿ ವಾಕಿಂಗ್ ಕೂಡ ಮಾಡುವುದಿಲ್ಲ. ಇವರು ವಾಸಿಸುವುದು ಮೂರು ಕೋಣೆಗಳು ಒಂದು ತೇಲುವ ಮನೆಯಲ್ಲಿ. ಕೆರೋಲಿನಾದಲ್ಲಿ ಹೀಗೆ ನದಿಯ ಮೇಲೆ ತೇಲುವ ತೆಪ್ಪಗಳ ಮೇಲೆ ಕೋಣೆಗಳನ್ನು ಕಟ್ಟಿಕೊಂಡು ಜೀವಿಸುವುದು ಉಂಟು. 

ಇತ್ತೀಚೆಗೆ ರುಡಿಗೆ ಪಾರ್ಶ್ವವಾಯು ಉಂಟಾಯಿತು. ತಲೆ ಅಲುಗಾಡಿಸಲಿಕ್ಕೆ ಸಾಧ್ಯವೇ ಆಗಲಿಲ್ಲ. ದೇಹವೂ ಅಲುಗಾಡಿಸಲು ಸಾಧ್ಯವಾಗಲಿಲ್ಲ. ತನಗೇನೋ ಆಗುತ್ತಿದೆ ಎಂಬುದು ರುಡಿಗೆ ಗೊತ್ತಾಯಿತು. ಆದರೆ ಅದೇನು ಅಂತ ತಿಳಿಯಲಿಲ್ಲ. ಆಗ ಮನೆಯಲ್ಲಿ ಯಾರೂ ಇರಲಿಲ್ಲ. ಫೋನ್ ಕೂಡ ರುಡಿ ಬಳಿ ಇರಲಿಲ್ಲ. ಕೂಡಲೃ ರುಡಿ, ಬುಬುವನ್ನು ಕರೆದು, ಡೆಕ್‌ಮಾಸ್ಟರ್ ಕಿನ್‌ಗೆ ಸುದ್ದಿ ಮುಟ್ಟಿಸುವಂತೆ ಹೇಳಿದರು. ಅದು ಏನು, ಹೇಗೆ ಅದನ್ನು ಅರ್ಥ ಮಾಡಿಕೊಂಡಿತೋ, ನೇರವಾಗಿ ಡೆಕ್‌ಮಾಸ್ಟರ್ ಕಿನ್ ಬಳಿಯೇ ಓಡಿತು. ಡೆಕ್‌ಮಾಸ್ಟರ್‌ ಎಂಬುದು ಈ ಬಾಡಿಗೆ ಮನೆಗಳ ಒಡೆಯನ ಹೆಸರು. ಬುಬು ಆತನ ಬಳಿಗೆ ಹೋಗಿ ಜೋರಾಗಿ ಬೊಗಳತೊಡಗಿತು. ಅದು ಯಾಕೆ ಹೀಗೆ ಹಿಸ್ಟೀರಿಕ್‌ ಆಗಿ ಬೊಗಳುತ್ತಿದೆ ಎಂಬುದು ಕಿನ್‌ಗೆ ಗೊತ್ತಾಗಲಿಲ್ಲ. ನಂತರ, ಅದು ಒಂಟಿಯಾಗಿ ಬಂದಿರುವುದರಿಂದ, ರುಡಿಗೆ ಏನೋ ಆಗಿರಬೇಕು ಎಂಬುದು ಹೊಳೆಯಿತು, ಕೂಡಲೇ ಕಿನ್‌ ರುಡಿಯ ಮನೆಗೆ ಧಾವಿಸಿದ. ಅಲ್ಲಿ ರುಡಿ ಸ್ಟ್ರೋಕ್ ಆಗಿ ಬಿದ್ದಿದ್ದ. ಕೂಡಲೇ ಕಿನ್‌ ಆತನನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ. 

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..! 

ಆತ ಆಸ್ಪತ್ರೆಗೆ ತೆರಳಿದರೂ ಬುಬು ಮನೆಯಲ್ಲೇ ಇತ್ತು. ರುಡಿಗೆ ಕೆರೊಲಿನಾ ಈಸ್ಟ್ ಮೆಡಿಕಲ್ ಸೆಂಟರ್‌ನಲ್ಲಿ ಕೇರ್‌ ನೀಡಲಾಯಿತು. ರುಡಿಯ ಅನಾರೋಗ್ಯ ಹಾಗೂ ಆತನನ್ನು ಬುಬು ಉಳಿಸಿದ ಕತೆ ಕೇಳಿದ ಆಸ್ಪತ್ರೆಯ ವೈದ್ಯರು ಹಾಗೂ ಸಿಇಒ, ಇಬ್ಬರನ್ನೂ ಆಸ್ಪತ್ರೆಯಲ್ಲೇ ಒಂದುಗೂಡಿಸುವ ಬಗ್ಗೆ ಯೋಚಿಸಿದರು. ಹಾಗೆ ಬುಬುವನ್ನು ಆಸ್ಪತ್ರೆಗೆ ಕರೆತರಲಾಯಿತು. ಯಜಮಾನ ರುಡಿಯನ್ನು ನೋಡಿದ ಕೂಡಲೇ ಬುಬು ಚಂಗನೆ ಎಗರಿ ಆತನ ಮಡಿಲಲ್ಲಿ ಕುಳಿತ. ಆತನ ಮುಖ ನೆಕ್ಕಿ ನೆಕ್ಕಿ ಆರೋಗ್ಯ ವಿಚಾರಿಸಿಕೊಂಡ. ವೃದ್ಧ ರುಡಿಗೆ ಕೃತಜ್ಞತೆಯಿಂದ ಕಣ್ಣೀರು ಬಂತು. ಇದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಆಸ್ಪತ್ರೆಯವರು ಸೋಶಿಯಲ್‌ ಸೈಟ್‌ನಲ್ಲಿ ಅದನ್ನು ಹಾಕಿದ್ದಾರೆ. ಈ ವಿಡಿಯೋ ವೈರಲ್‌ ಆಗಿದ್ದು, ಲಕ್ಷಾಂತರ ಮಂದಿ ಅದನ್ನು ನೋಡಿದ್ದಾರೆ. ನಾಯಿಯ ಸ್ವಾಮಿಭಕ್ತಿ, ಪ್ರೀತಿಯನ್ನು ಶ್ಲಾಘಿಸಿದ್ದಾರೆ. 

ಎರಡು ವರ್ಷದ ಈ ಪುಟ್ಟ ಬಾಲೆಗೆ ಆನೆಯೇ ಬೆಸ್ಟ್ ಫ್ರೆಂಡ್..! 

ನಾಯಿಗಳು ಸ್ವಾಮಿಭಕ್ತಿಗೆ ಎಷ್ಟೊಂದು ಹೆಸರಾಗಿವೆ ಎಂದರೆ, ಇಂಥ ಘಟನೆಗಳನ್ನು ಜಗತ್ತಿನಾದ್ಯಂತ ಅನೇಕ ಸಂಖ್ಯೆಯಲ್ಲಿ ಕಾಣಹುಹದು. ಯಜಮಾನ ಸತ್ತುಹೋದಾಗ ಊಟ ತಿಂಡಿ ಬಿಟ್ಟು ದಿನಗಟ್ಟಲೆ ಹಾಗೇ ಇದ್ದು ಸತ್ತುಹೋದ ನಾಯಿಗಳಿವೆ. ಅದು ಹೇಗೋ ನಾಯಿಗಳಿಗೆ ತನ್ನ ಯಜಮಾನನ, ಮನೆಯವರ ಪ್ರೀತಿ ಸಿಟ್ಟು ನಗು ಅಳು ದುಃಖ ಕೋಪ ಅನಾರೋಗ್ಯ ಉಲ್ಲಾಸಗಳೆಲ್ಲ ಗೊತ್ತಾಗಿಬಿಡುತ್ತವೆ. ಅದಕ್ಕೆ ಸರಿಯಾಗಿ ಸ್ಪಂದಿಸುತ್ತವೆ ಕೂಡ. ಕೆಲವು ನಾಯಿಗಳು ಬುದ್ಧಿ ಉಪಯೋಗಿಸಿ, ಏನು ಮಾಡಬೇಕೋ ಅದನ್ನು ಮಾಡುತ್ತವೆ ಕೂಡ. ಅದಕ್ಕೆ ಈ ಘಟನೆಯೇ ಲೇಟೆಸ್ಟ್ ಉದಾಹರಣೆ. 

'ಆಂಖ್ ಮಾರೇ...' 93 ನೇ ಬರ್ತಡೆ ಸಂಭ್ರಮದಲ್ಲಿ ಅಜ್ಜಿಯ ಸಖತ್ ಸ್ಟೆಪ್ಟ್ .