ಈ ಅಜ್ಜಿ ತಮ್ಮ ಜೀವನೋತ್ಸಾಹದಿಂದಲೇ ಹವಾ ಎಬ್ಬಿಸಿದ್ದಾರೆ/ ಅಜ್ಜಿಯ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್/  ಅಜ್ಜಿಗೆ  93 ನೇ ಜನ್ಮದಿನದ ಶುಭಾಶಯ/ ಜೀವನೋತ್ಸಾಹಕ್ಕೆ ಶರಣು

ಕೋಲ್ಕತ್ತಾ(ಆ. 15) ಸೋಶಿಯಲ್ ಮೀಡಿಯಾದಲ್ಲಿ ಈ ಅಜ್ಜಿ ಹವಾ ಎಬ್ಬಿಸಿದ್ದಾರೆ. 'ಆಂಖ್ ಮಾರೆ' ಎಂದು ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ಅಜ್ಜಿಯ ಸಂಭ್ರಮಕ್ಕೆ ಕಾರಣ ಆಕೆ 93 ವರ್ಷ ಪೂರೈಸಿದ್ದಾರೆ. ಅಜ್ಜಿಯ ವಿಡಿಯೋವನ್ನು ಮೊಮ್ಮಗ ಗೌರವ್ ಸಾಹಾ ಶೇರ್ ಮಾಡಿಕೊಂಡಿದ್ದು ವೈರಲ್ ಆಗಿದೆ.

ವೇದಿಕಾ ಬೋಲ್ಡ್ ಡ್ಯಾನ್ಸ್ ಗೆ ಪಡ್ಡೆ ಹುಡುಗರ ಎದೆಯಲ್ಲಿ ಚಿಟ್ಟೆ ಹಾರಾಟ!

ಅಜ್ಜಿಯ ಜನ್ಮದಿನ ಆಚರಣೆ ಮಾಡಿದ ಪೋಟೋವನ್ನು ಸಹಾ ಹಂಚಿಕೊಂಡಿದ್ದಾರೆ. ಬರ್ತಡೆ ಸಂಭ್ರಮದಲ್ಲಿ ಅಜ್ಜಿ ರಣವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ 'ಸಿಂಬಾ' ಸಿನಿಮಾದ ಆಂಖ್ ಮಾರೆ ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಬಿಳಿ ಮತ್ತು ಬಂಗಾರದ ಬಣ್ಣದ ಮಿಕ್ಸ್ ಸಾರಿಯಲ್ಲಿ ಕಂಗೋಳಿಸಿದ ಅಜ್ಜಿಯ ಜೀವನೋತ್ಸಾಹ ಒಮ್ಮೆ ನೋಡಲೇಬೇಕು. ಅಜ್ಜಿಯ ವಿಡಿಯೋಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.