ಇನ್ನೂ ಸರಿಯಾಗಿ ನಡೆಯಲೂ ಕಲಿಯದ ಪುಟ್ಟ ಬಾಲಕಿಯೊಬ್ಬಳು ಹರಿಯುತ್ತಿರೋ ನೀರಲ್ಲಿ ಮುಂದೆ ನಡೆಯುತ್ತಿದ್ದರೆ, ಅವಳನ್ನು ದೊಡ್ಡ ಆನೆಯೊಂದು ಹಿಂಬಾಲಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಅದೇನೂ ಉಕ್ಕಿ ಹರಿಯುವ ಹೊಳೆಯಲ್ಲ, ಹಿತವಾಗಿ ನಿಧಾನವಾಗಿ ಮನೆಯ ಪಕ್ಕದಲ್ಲೇ ಪಾದವಷ್ಟೇ ನೆನೆಯುವಷ್ಟು ಸಣ್ಣಗೆ ಹರಿಯುವ ತೊರೆ. ಅರೆ ಯಾರಾದ್ರೂ ಪುಟ್ಟ ಮಗುವನ್ನು ಈ ರೀತಿ ಆನೆ ಹತ್ರ ಬಿಡ್ತಾರಾ ಎಂದು ಅಚ್ಚರಿಯಾಗುವಂತಿದೆ ವಿಡಿಯೋ. 

ಕೊಡಲಿಯಿಂದ ಕಾರಿನ ಕನ್ನಡಿ ಒಡೆದು ನಾಯಿ ರಕ್ಷಿಸಿದ..!

ಇದೀಗ ಕೇರಳದ ಅದೇ ಪುಟ್ಟ ಹುಡುಗಿ ಆನೆ ಮೇಲೆ ಕೂತು ಸವಾರಿ ಮಾಡೋದು, ಆನೆಗೆ ಆಹಾರ ಹೊಡೋದು, ಆನೆ ಆಕೆಯ ಪುಟ್ಟ ಕೈ ತನ್ನ ಸೊಂಡಿಲಿಗೆ ಬರುವಾಗ ತಾಳ್ಮೆಯಿಂದ ಕಾಯೋದೆಲ್ಲ ವಿಡಿಯೋ ಮೂಲಕ ವೈರಲ್ ಆಗಿದೆ.

ಮೊಟ್ಟೆ ಒಡೆದು ಗಿಣಿಮರಿಯ ಹೊರತೆಗೆದು ತುತ್ತು ಕೊಟ್ಟು ಸಾಕಿದ..! ವಿಡಿಯೋ ವೈರಲ್

ಟ್ವೀಟರ್, ಫೇಸ್‌ಬುಕ್‌ ಇನ್‌ಸ್ಟಾಗಳಲ್ಲಿ ಈ ವಿಡಿಯೋ ಭಾರೀ ಮೆಚ್ಚುಗೆ ಪಡೆದಿದೆ. ವೃದ್ಧ ಹೆಣ್ಣಾನೆ ಮತ್ತು ಪುಟ್ಟ ಹುಡಗಿಯ ಪ್ರೆಂಡ್‌ಶಿಪ್‌ಗೆ ಭೇಷ್ ಅಂದಿದ್ದಾರೆ ನೆಟ್ಟಿಗರು.ಅನಿತ್ ಘೋಷ್ ಎಂಬರು ವಿಡಿಯೋ ಶೇರ್ ಮಾಡಿದ್ದು, ಭಾರತದ ದಕ್ಷಿಣ ರಾಜ್ಯ ಕೇರಳದ ಈ ಪುಟ್ಟ ಹುಡುಗಿಗೆ ಆನೆಯೇ ಬೆಸ್ಟ್ ಫ್ರೆಂಡ್ ಎಂದು ಬರೆದಿದ್ದಾರೆ.