man rejected for refusing dowry: ಉತ್ತಮವಾಗಿ ಸ್ಥಿತಿವಂತರಾಗಿದ್ದ ಯುವಕನೊಬ್ಬ ಅರೇಂಜ್ಡ್ ಮ್ಯಾರೇಜ್‌ಗಾಗಿ ವರದಕ್ಷಿಣೆ ನಿರಾಕರಿಸಿದ್ದಕ್ಕೆ, ಹುಡುಗಿಯ ಆತನ ಮದುವೆ ಸಂಬಂಧವನ್ನೆ ರಿಜೆಕ್ಟ್ ಮಾಡಿದ್ದು, ಈ ವಿಚಾರವೀಗ ಭಾರಿ ವೈರಲ್ ಆಗಿದೆ. 

ವರದಕ್ಷಿಣೆ ಬೇಡ ಎಂದಿದ್ದಕ್ಕೆ ವಧುವಿನ ತಂದೆ ಮಾಡಿದ್ದೇನು?

ವರದಕ್ಷಿಣೆ ಪದ್ಧತಿಯನ್ನು ಭಾರತವೂ 1961ರಲ್ಲಿಯೇ ನಿಷೇಧಿಸಿದ್ದು, ವರದಕ್ಷಿಣೆ ತೆಗದುಕೊಳ್ಳುವುದು ದೇಶದಲ್ಲಿ ಅಪರಾಧವಾಗಿದೆ. ಆದರೂ ಭಾರತದಲ್ಲಿ ವರದಕ್ಷಿಣೆ ಪಡೆಯುವುದು ಕೊಡುವುದು ನಡೆಯುತ್ತಲೇ ಇದೆ. ಕೆಲವರಿಗೆ ಇದು ಪ್ರತಿಷವರದಕ್ಷಿಣೆ ಬೇಡ ಎಂದಿದ್ದಕ್ಕೆ ವಧುವಿನ ತಂದೆ ಮಾಡಿದ್ದೇನು?್ಠೆ ಎನಿಸಿರುವುದು ಕೂಡ ವಿಪರ್ಯಾಸದ ಸಂಗತಿ. 2025ರಲ್ಲೇ ವರದಕ್ಷಿಣೆ ಕಿರುಕುಳದಿಂದ ಸಾವು ಸಂಭವಿಸಿದೆ ಹಲವು ಪ್ರಕರಣಗಳು ದೇಶದಲ್ಲಿ ಬೆಳಕಿಗೆ ಬಂದಿವೆ. ಇದೊಂದು ಪಿಡುಗು ಅನ್ನುವುದಕ್ಕಿಂತ ಪ್ರತಿಷ್ಠೆ ಎಂದು ನೊಡುವವರೇ ಹೆಚ್ಚು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಸಾಮಾಜಿಕ ಜಾಲತಾಣವೊಂದರಲ್ಲಿ ಪೋಸ್ಟೊಂದು ಭಾರಿ ವೈರಲ್ ಆಗಿದೆ. ಆ ಪೋಸ್ಟ್‌ನಲ್ಲಿ ಏನಿದೆ ಎಂಬ ಮಾಹಿತಿ ಇಲ್ಲಿದೆ.

ಅರೆಂಜ್ಡ್ ಮ್ಯಾರೇಜ್‌ ಆಗಲು ಹೊರಟವನಿಗೆ ಶಾಕ್:

ಪೋಸ್ಟ್ ಮಾಡಿದವರ ಸೋದರ ಸಂಬಂಧಿಯೊಬ್ಬರು ಬಾಳ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದರು. ವೆಲ್ ಸೆಟಲ್ಡ್ ಆಗಿದ್ದ ಅವರಿಗೆ ಹಲವು ಹುಡುಕಾಟದ ನಂತರ ಕೊನೆಗೂ ಹುಡುಗಿಯೊಬ್ಬಳು ಸಿಕ್ಕಳು. ಹುಡುಗನು ಆರ್ಥಿಕವಾಗಿ ಚೆನ್ನಾಗಿಯೇ ದುಡಿಯುತ್ತಿದ್ದ. ಆತನ ಪೋಷಕರು ರಿಯಲ್ ಎಸ್ಟೇಟ್ ಉದ್ಯಮವನ್ನು ನಡೆಸುತ್ತಿದ್ದಿದ್ದರಿಂದ ಪಬ್ ಉದ್ಮ, ಹಿರಿಯರಿಂದ ಬಳುವಳಿಯಾಗಿ ಬಂದ ಆಸ್ತಿ ಹೀಗೆ ಎಲ್ಲವೂ ಇದ್ದಿದ್ದರಿಂದ ಚೆನ್ನಾಗಿಯೇ ಇದ್ದರು. ಆ ಕಡೆ ಹುಡುಗಿಯು ಬುದ್ಧಿವಂತ, ಉದ್ಯೋಗದಲ್ಲಿ ಆಸಕ್ತಿ ಹೊಂದಿದ್ದ, ಉತ್ತಮ ಕುಟುಂಬ ಮೌಲ್ಯಗಳನ್ನು ಹೊಂದಿದ್ದ ಹುಡುಗಿ ಆಗಿದ್ದಳು. ಇಬ್ಬರಿಗೂ ಇಬ್ಬರೂ ಇಷ್ಟವಾಗಿ ಮದುವೆ ಸಂಬಂಧ ಮುಂದುವರೆಯಲು ಓಕೆ ಎಂದಿದ್ದರು.

ಆದರೆ ಇದಾಗಿ ಸ್ವಲ್ಪ ಸಮಯದಲ್ಲಿ ಹುಡುಗಿಯ ತಂದೆ ಹುಡುಗನಿಗೆ ಡೌರಿಯಾಗಿ ಏನೆಲ್ಲಾ ಬೇಕು ಎಂದು ಕೇಳುವ ಜೊತೆಗೆ ಹಲವು ಗಿಫ್ಟ್‌ಗಳ ಆಫರ್ ಮಾಡಿದ್ದಾರೆ. ಆದರೆ ಆರ್ಥಿಕವಾಗಿ ಚೆನ್ನಾಗಿಯೇ ಇದ್ದ ಹುಡುಗ ಮಾತ್ರ ಎಲ್ಲವನ್ನು ಬೇಡ ಎಂದು ನಿರಾಕರಿಸಿದ್ದಾರೆ. ಇದರಿಂದ ಯುವತಿಯ ಪೋಷಕರಿಗೆ ಹುಡುಗನ ಬಗ್ಗೆಯೇ ಅನುಮಾನ ಶುರುವಾಗಿ ಆ ಹುಡುಗನೇ ಬೇಡ ಎಂದು ರಿಜೆಕ್ಟ್ ಮಾಡಿದ್ದಾರೆ. ಈತ ಎಲ್ಲವನ್ನು ರಿಜೆಕ್ಟ್ ಮಾಡ್ತಿದ್ದಾನೆ ಎಂದ್ರೆ ಆತನಲ್ಲೇನೋ ಸಮಸ್ಯೆ ಇರಬೇಕು ಹೀಗಾಗಿಯೇ ಆತ ತಮ್ಮ ಈ ಆಫರ್‌ಗಳನ್ನು ನಿರಾಕರಿಸುತ್ತಿದ್ದಾನೆ ಎಂದು ಅವರು ಭಾವಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಇದೆ. ಈ ಪೋಸ್ಟ್ ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ.

ನನ್ನ ಸೋದರ ಸಂಬಂಧಿ 10 ವರ್ಷ, ಸರ್‌ಚಾರ್ಜ್ ಪಾವತಿಸುವಷ್ಟು ಚೆನ್ನಾಗಿ ಸಂಪಾದಿಸುತ್ತಾನೆ. ಆತನ ಹೆತ್ತವರಿಗೆ ರಿಯಲ್ ಎಸ್ಟೇಟ್, ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳ ವ್ಯವಹಾರವಿದೆ, ಪೂರ್ವಜರ ಆಸ್ತಿ ಇದೆ, M340i ಅದನ್ನು ಹಾಗೂ ಆತ ಸಭ್ಯ ವ್ಯಕ್ತಿ, ಅರೇಂಜ್ಡ್ ಮ್ಯಾರೇಜ್‌ಗಾಗಿ ಆತ ಹುಡುಗಿ ಹುಡುಕುತ್ತಿದ್ದ. ಒಳ್ಳೆಯ ಹುಡುಗಿಯೂ ಸಿಕ್ಕಳು. ಎರಡೂ ಕಡೆಯವರು ಓಕೆ ಎಂದರು. ಇದೇ ಸಮಯದಲ್ಲಿ ಹುಡುಗಿ ಪೋಷಕರು ಮಾಡಿದ ಡೌರಿ ಅಫರ್‌ ಎಲ್ಲವನ್ನು ಅವನು ತಿರಸ್ಕರಿಸಿದ. ನನಗೆ ಯಾವುದು ಬೇಡ ಎಂದ ಇದಾಗಿ ಸ್ವಲ್ಪ ಸಮಯದಲ್ಲಿ ಹುಡುಗಿ ತಂದೆ ಆತನನ್ನು ತಿರಸ್ಕರಿಸಿದರು. ಒಬ್ಬ ಹೆಚ್ಚಿನ ಮೌಲ್ಯದ ವ್ಯಕ್ತಿಗೆ ಅವನ ಮೌಲ್ಯ ತಿಳಿದಿದೆ. ಅವನು ವರದಕ್ಷಿಣೆಯನ್ನು ನಿರಾಕರಿಸುತ್ತಿದ್ದರೆ, ಅವನಲ್ಲಿ ಏನಾದರೂ ದೋಷವಿರಬೇಕು ಎಂದರು. ಈ ಘಟನೆಯ ಬಗ್ಗೆ ಎಲ್ಲರ ಅಭಿಪ್ರಾಯ ಏನು ನನಗೆ ನಿಜವಾಗಿಯೂ ಕುತೂಹಲವಿದೆ. ನಾನು ಉದ್ದೇಶಪೂರ್ವಕವಾಗಿ ಯಾರಿಗಾದರೂ ನೋವುಂಟು ಮಾಡಿದ್ದರೆ ಕ್ಷಮಿಸಿ ಎಂದು ಆ ಪೋಸ್ಟ್‌ನಲ್ಲಿ ಬರೆಯಲಾಗಿದೆ.

ನೆಟ್ಟಿಗರಿಂದ ಹಲವು ಕಾಮೆಂಟ್:

ಪೋಸ್ಟ್ ವೈರಲ್ ಆಗ್ತಿದ್ದಂತೆ ಜನ ಹಲವು ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ದೋಷ ಆತನ ಪುತ್ರಿಗೆ ಇರಬಹುದು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟೊಂದು ವರದಕ್ಷಿಣೆ ನೀಡಿ ನಿಮ್ಮ ಮಗಳನ್ನು ಕೊಡ್ತಿದ್ದೀರಾ ನಿಮ್ಮ ಮಗಳಿಗೇನಾದರು ದೋಷವಿದೆಯೇ ಎಂದು ಕೇಳಬೇಕಿತ್ತು ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇಂತಹ ಘಟನೆಗಳು ಈಗ ಸಾಮಾನ್ಯ ಎನಿಸಿವೆ. ಅನೇಕ ಕಡೆ ಈ ರೀತಿ ಘಟನೆ ನಡೆದ ಬಗ್ಗೆ ನಾನು ಈ ಹಿಂದೆಯೂ ಕೇಳಿದ್ದೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..

ಇದನ್ನೂ ಓದಿ: ಬಂಗಾರದ ನಾಗಾಲೋಟಕ್ಕೆ ಬ್ರೇಕ್ ಹೇಗಿದೆ ಇಂದು ಚಿನ್ನದ ದರ
ಇದನ್ನೂ ಓದಿ: ಪ್ರಧಾನಿ ಮೋದಿ ತನ್ನ ದೇಶದ ಬಗ್ಗೆ ಮೊದಲು ಯೋಚಿಸುವ ಅತ್ಯಂತ ಬುದ್ಧಿವಂತ ನಾಯಕ: ಪುಟಿನ್
ಇದನ್ನೂ ಓದಿ: ಅಸ್ಸಾಂ ಗಾಯಕ ಜುಬೀನ್ ಗಾರ್ಗ್ ಸಾವಿಗೆ ರೋಚಕ ಟ್ವಿಸ್ಟ್‌: ಬ್ಯಾಂಡ್‌ಮೇಟ್, ಸಹ ಗಾಯಕಿಯೂ ಅರೆಸ್ಟ್