ಒಮ್ಮೆ ಕುಳಿತು ನೋಡಿ, ಮದುವೆಯಲ್ಲಿ ಆಫೀಸ್ ಕೆಲಸ ಮಾಡಿ ಟೀಕೆ ಗುರಿಯಾಗಿದ್ದ ವಧುವಿನ ಬೆಂಕಿ ಉತ್ತರ ನೀಡಿದ್ದಾರೆ. ಹನಿಮೂನ್‌ನಲ್ಲೂ ಕಚೇರಿ ಮೀಟಿಂಗ್ ಮಾಡುತ್ತಿದ್ದ ನವ ವಧು ಭಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ವಧು ತಿರುಗೇಟು ನೀಡಿದ್ದಾರೆ.

ಭಾರತೀಯ ಮೂಲದ ನವ ವಧು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದರು. ಕಾರಣ ಮದುವೆ ಆರತಕ್ಷತೆಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕಚೇರಿ ಕೆಲಸದಲ್ಲಿ ಮಗ್ನರಾಗಿದ್ದರು. ಇಷ್ಟೇ ಅಲ್ಲ ಮದುವೆ ಮುಗಿಸಿ ಹನಿಮೂನ್ ತೆರಳಿದರೂ ಪ್ರತಿ ದಿನ 3 ಗಂಟೆ ಕಚೇರಿ ಮೀಟಿಂಗ್‌ಗಾಗಿ ಸಮಯ ಮೀಸಲಿಟ್ಟಿದ್ದರು. ನವ ವಧುವಿನ ನಡೆಯನ್ನು ಹಲವರು ಪ್ರಶಂಸಿಸಿದ್ದರೆ, ಮತ್ತೆ ಕೆಲವರು ಭಾರಿ ಟೀಕಿಸಿದ್ದರು. ಮದುವೆ ಸೇರಿದಂತೆ ಅತ್ಯಮ್ಯೂಲ ಕ್ಷಣದಲ್ಲಿ ಕಚೇರಿ ಕೆಲಸ ಎಂದು ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವುದಕ್ಕಿಂತೆ, ಇದೇ ಕೆಲಸವನ್ನು ಬೇರೆ ಯಾರಿಗಾದರೂ ಸೂಚಿಸಬಹುದಿತ್ತು. ಈ ಶೋಫ್ಆಫ್ ಬೇಕಿತ್ತಾ ಎಂದು ಪ್ರಶ್ನಿಸಿದ್ದರು. ಹಲವು ಟೀಕೆಗಳಿಗೆ ಇದೀಗ ವೈರಲ್ ವಧು ಪ್ರತಿಕ್ರಿಯಿಸಿದ್ದಾರೆ.

ಕುಳಿತು ನೋಡಿ, ತಿರುಗೇಟು ಕೊಟ್ಟ ವಧು

ಟೀಕೆಗಳು ಹೆಚ್ಚಾಗುತ್ತಿದ್ದಂತೆ ವೈರಲ್ ವಧು ತಿರುಗೇಟು ನೀಡಿದ್ದಾರೆ. ಒಮ್ಮೆ ಭಾರತೀಯ ಮದುವೆಯ ರೆಸೆಪ್ಶನ್‌ನಲ್ಲಿ ಸುದೀರ್ಘ ಸಮಯ ಕುಳಿತು ನೋಡಿ. ಆವಾಗ ನಿಮಗೆ ಹಿಂದೆಂದಿಗಿಂತಲೂ ಹೆಚ್ಚು ಕೆಲಸ (ಕೋಡಿಂಗ್) ಮಾಡಬೇಕು ಎನಿಸುತ್ತದೆ ಎಂದು ವಧು ಪ್ರತಿಕ್ರಿಯಿಸಿದ್ದಾರೆ. ವಧುವಿನ ಉತ್ತರಕ್ಕೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

ಅಷ್ಟಕ್ಕೂ ವಧು ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡಿದ್ದೇಕೆ?

ಹಲವು ಟೀಕೆಗಳಲ್ಲಿ ಹೇಳುವಂತೆ, ಕೆಲಸವನ್ನು ಬೇರೆ ಯಾರಿಗಾದರೂ ಸೂಚಿಸಬಹುದಿತ್ತು. ಆದರೆ ವಧು ತನ್ನ ಪ್ರಮುಖ ಘಳಿಗೆಯಲ್ಲಿ ಲ್ಯಾಪ್‌ಟಾಪ್ ಹಿಡಿದು ಕುಳಿತಿದ್ದೇಕೆ, ಕೆಲ ಹೊತ್ತಿನಲ್ಲಿ ಕಚೇರಿ ಸಂಬಂಧಿತ ತಾಂತ್ರಿಕ ಸಮಸ್ಯೆ ಬಗೆಹರಿಸಿದ್ದರೂ ಈ ಫೋಟೋ ಶೋಆಫ್ ಯಾಕೆ ಅನ್ನೋ ಪ್ರಶ್ನೆಯನ್ನು ಹಲವರು ಎತ್ತಿದ್ದರು. ಇದಕ್ಕೆ ಉತ್ತರವಿದೆ. ಈಕೆ ಗೌರಿ ಅಗರ್ವಾಲ್, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೋಯಲ್ ಎಐ ಅನ್ನೋ ಸ್ಟಾರ್ಟ್ ಕಂಪನಿಯ ಸಹ ಸಂಸ್ಥಾಪಕಿ. ಈಕೆಯ ಸಹೋದರ ಮೆಹುಲ್ ಅಗರ್ವಾಲ್ ಹಾಗೂ ಗೌರಿ ಅಗರ್ವಾಲ್ ಜೊತೆಯಾಗಿ ಆರಂಭಿಸಿದ ಕಂಪನಿ ಇದು. ಗೌರಿ ಅಗರ್ವಾಲ್ ಕಂಪನಿ ಸಿಟಿಒ ಆಗಿದ್ದರೆ, ಮೆಹುಲ್ ಅಗರ್ವಾಲ್ ಸಿಇಒ. ಕೆಲ ವರ್ಷಗಳಾಗಿರುವ ಈ ಕಂಪನಿ ಹಂತ ಹಂತವಾಗಿ ಬೆಳೆಯುತ್ತಿದೆ. ಮದುವೆ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ತಮ್ಮದೇ ಕಂಪನಿ, ಜೊತೆಗೆ ಕೆಲವೇ ನಿಮಿಷಗಳಲ್ಲಿ ಈ ಸಮಸ್ಯೆ ಬಗೆ ಹರಿಸಿವುದು ಗೌರಿ ಅಗರ್ವಾಲ್‌ಗೆ ತಿಳಿದಿತ್ತು. ಇದನ್ನು ಕಂಪನಿ ಇತರ ಸಿಬ್ಬಂದಿಗಳಿಗೆ ಸೂಚಿಸಿದರೆ ಕೆಲ ಹೊತ್ತು ತೆಗೆದುಕೊಳ್ಳುತ್ತಾರೆ. ಇಷ್ಟೇ ಅಲ್ಲ ನಿರಂತರವಾಗಿ ಸೂಚನೆಗಳನ್ನು ನೀಡುತ್ತಲೇ ಇರಬೇಕು. ತಮ್ಮದೇ ಕಂಪನಿಯಾಗಿರುವ ಕಾರಣ ಗೌರಿ ಅಗರ್ವಾಲ್ ಹೆಚ್ಚು ಮತುವರ್ಜಿ ವಹಿಸಿ ಕೆಲಸ ಮಾಡಿ ಮುಗಿಸಿದ್ದಾರೆ.

Scroll to load tweet…

ಹನಿಮೂನ್‌ನಲ್ಲಿ ಮೂರು ಗಂಟೆ ಮೀಟಿಂಗ್

ವಧು ವರರು ಮದುವೆ ಮುಗಿಸಿ ಹನಿಮೂನ್ ತೆರಳಿದ್ದಾರೆ. ಆದರೆ ಹನಿಮೂನ್‌ನಲ್ಲಿ ಪ್ರತಿ ದಿನ ಮೂರು ಗಂಟೆ ಕಚೇರಿ ಸಿಬ್ಬಂದಿಗಳ ಜೊತೆ ಮೀಟಿಂಗ್ ಮಾಡುತ್ತಿದ್ದರು. ಮುಂದಿನ ಕೆಲಸ,ಪ್ರಾಜೆಕ್ಟ್, ತಾಂತ್ರಿಕ ಸವಾಲು ಸೇರಿದಂತೆ ಪ್ರತಿ ವಿಚಾರದ ಕುರಿತು ಸಲಹೆ ಸೂಚನೆ ನೀಡುತ್ತಿದ್ದರು. ಒಂದು ಕಂಪನಿ ಬೆಳೆಯುವ ಹಂತದಲ್ಲಿ ಮಾತ್ರವಲ್ಲ, ಬೆಳೆದ ಮೇಲೂ ಕೆಲಸ ಅಷ್ಟೇ ಇರುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದರು.