ಬಂಗಾರದ ನಾಗಾಲೋಟಕ್ಕೆ ಬ್ರೇಕ್ ಹೇಗಿದೆ ಇಂದು ಚಿನ್ನದ ದರ
Gold Price Today: ನಿರಂತರ ಏರಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಇಂದು ತುಸು ಇಳಿಕೆಯಾಗಿದೆ. ಇಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಬೆಲೆಗಳ ಬಗ್ಗೆ ಮಾಹಿತಿ ಇದೆ.

ಬಂಗಾರದ ದರ
ಕೆಲ ದಿನಗಳಿಂದ ಚಿನ್ನದ ದರ ಏರಿಕೆಯಾಗುತ್ತಲೇ ಇದೆ. ತುಸುವೇ ಇಳಿದು ಒಮ್ಮಿಂದೊಮ್ಮೆಲೆ ಭಾರಿ ಏರಿಕೆ ಆಗುವ ಚಿನ್ನದ ದರದಿಂದ ಜನಸಾಮಾನ್ಯರ ಚಿನ್ನ ಕೊಳ್ಳುವ ಆಸೆಗೆ ತಣ್ಣೀರೆರಚಿದಂತಾಗಿದೆ. ಬಹುತೇಕರು ಚಿನ್ನವನ್ನು ಆಭರಣಕ್ಕಿಂತ ಹೆಚ್ಚು ಆಸ್ತಿ ಎಂದು ಪರಿಗಣಿಸಿರುವುದರಿಂದ ಚಿನ್ನದ ಮೇಲೆ ಹೆಚ್ಚು ಹೆಚ್ಚು ಹೂಡಿಕೆ ಮಾಡುತ್ತಿದ್ದು, ಇದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ. ಇದರ ಜೊತೆಗೆ ಚಿನ್ನದ ಬೆಲೆ ಬಹುತೇಕ ಭಾರತೀಯ ಷೇರು ಮಾರುಕಟ್ಟೆ ಮೇಲೆ ಅವಲಂಬಿತವಾಗಿದೆ. ಈ ನಡುವೆ ಅಮೆರಿಕಾದ ತೆರಿಗೆ ನೀತಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಬಹಳ ಏರಿಳಿತವಾಗುತ್ತಿದ್ದು, ಮಾರುಕಟ್ಟೆ ಕುಸಿತ ಕಾಣುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಲೇ ಹೋಗುತ್ತದೆ. ಹಾಗಿದ್ದರೆ ಇಂದಿನ ಚಿನ್ನಾಭರಣಗಳ ದರ ವಿವಿಧ ನಗರಗಳಲ್ಲಿ ಹೇಗಿದೆ ಅಂತ ನೋಡೋಣ.
ಚಿನ್ನದ ದರ ಇಂದು ಹೇಗಿದೆ
ವಿವಿಧ ಮಹಾನಗರಗಳಲ್ಲಿ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಿರುತ್ತದೆ. ಹೀಗಾಗಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮಹಾನಗರಗಳಲ್ಲಿ 24 ಹಾಗೂ 22 ಕ್ಯಾರೆಟ್ ಚಿನ್ನದ ದರ ಇಂದು ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇಂದು ಚಿನ್ನದ ದರದಲ್ಲಿ ನಿನ್ನೆಗಿಂತ ತುಸು ಇಳಿಕೆ ಆಗಿದೆ. 24 ಕ್ಯಾರೆಟ್ ಚಿನ್ನದ ದರ ಗ್ರಾಂಗೆ ಇಂದು 11,804 ರೂಪಾಯಿ ಇದೆ. ಹಾಗೆಯೇ 22 ಕ್ಯಾರೆಟ್ ಚಿನ್ನದ 10,820 ಹಾಗೆಯೇ 18 ಕ್ಯಾರೆಟ್ ಚಿನ್ನದ ದರ 8,853 ಇದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 11,804 ರೂಪಾಯಿ (ನಿನ್ನೆಗಿಂತ 65 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 94,432 ರೂಪಾಯಿ ( ನಿನ್ನೆಗಿಂತ 520 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,18,040 ರೂಪಾಯಿ (ನಿನ್ನೆಗಿಂತ 650 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 11,80,400 ರೂಪಾಯಿ (ನಿನ್ನೆಗಿಂತ 6,500 ರೂಪಾಯಿ ಇಳಿಕೆ)
22 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 10,820 ರೂಪಾಯಿ (ನಿನ್ನೆಗಿಂತ 60 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 86,560 ರೂಪಾಯಿ (ನಿನ್ನೆಗಿಂತ 480 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 1,08,200 ರೂಪಾಯಿ (ನಿನ್ನೆಗಿಂತ 600 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 10,82,000 ರೂಪಾಯಿ (ನಿನ್ನೆಗಿಂತ 6,000 ರೂಪಾಯಿ ಇಳಿಕೆ)
18 ಕ್ಯಾರೆಟ್ ಚಿನ್ನದ ದರ
1 ಗ್ರಾಂ ಚಿನ್ನದ ದರ 8,853 ರೂಪಾಯಿ (ನಿನ್ನೆಗಿಂತ 49 ರೂಪಾಯಿ ಇಳಿಕೆ)
8 ಗ್ರಾಂ ಚಿನ್ನದ ದರ 70,824 ರೂಪಾಯಿ (ನಿನ್ನೆಗಿಂತ 392 ರೂಪಾಯಿ ಇಳಿಕೆ)
10 ಗ್ರಾಂ ಚಿನ್ನದ ದರ 88,530 ರೂಪಾಯಿ (ನಿನ್ನೆಗಿಂತ 490 ರೂಪಾಯಿ ಇಳಿಕೆ)
100 ಗ್ರಾಂ ಚಿನ್ನದ ದರ 8,85,300 ರೂಪಾಯಿ (ನಿನ್ನೆಗಿಂತ 4,900 ರೂಪಾಯಿ ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 108400 ರೂಪಾಯಿ, ಮುಂಬೈ: 10,8200 ರೂಪಾಯಿ, ದೆಹಲಿ: 10,8350 ರೂಪಾಯಿ, ಬೆಂಗಳೂರು: 10,8200 ರೂಪಾಯಿ, ಅಹಮದಾಬಾದ್: 10,8250 ರೂಪಾಯಿ, ಕೋಲ್ಕತ್ತಾ: 108200 ರೂಪಾಯಿ, ಹೈದರಾಬಾದ್: 108200 ರೂಪಾಯಿ, ವಡೋದರಾ: 108250 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ದರದಲ್ಲೂ ಇಂದು ತುಸುವೇ ತುಸು ಇಳಿಕೆ ಆಗಿದೆ. ಇಂದಿನ ದರ ಎಷ್ಟಿದೆ ಎಂದು ನೋಡೋಣ ಬನ್ನಿ
10 ಗ್ರಾಂ: 1510 ರೂಪಾಯಿ
100 ಗ್ರಾಂ: 15,100 ರೂಪಾಯಿ
1000 ಗ್ರಾಂ: 1,51,000 ರೂಪಾಯಿ