ಸೆಕ್ಸ್ ನಂತರ ಮಹಿಳೆ ಇವಿಷ್ಟನ್ನು ಮಾಡದಿದ್ರೆ ತೊಂದ್ರೆ ತಪ್ಪಿದ್ದಲ್ಲ
ಹೆಣ್ಣು (Woman) ತನ್ನ ಜೀವನದ ಪ್ರತಿ ಹಂತದಲ್ಲಿಯೂ ಹಲವಾರು ಬದಲಾವಣೆಗಳನ್ನು ಎದುರಿಸುತ್ತಾಳೆ. ಋತುಮತಿಯಾಗುವ ಸಂದರ್ಭ, ಮದುವೆ, ಮಕ್ಕಳು, ಹೆರಿಗೆ ಈ ಎಲ್ಲಾ ಸಂದರ್ಭದಲ್ಲಿಯೂ ಅವಳ ದೇಹ (Body) ಸ್ಥಿತಿ ಬದಲಾಗುತ್ತದೆ. ಹೀಗಾಗಿ ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ (Care) ವಹಿಸಬೇಕಾದುದು ಅಗತ್ಯ.
ಹೆಣ್ಣು-ಗಂಡು ಲೈಂಗಿಕಕ್ರಿಯೆ (Sex)ಯಲ್ಲಿ ತೊಡಗಿಕೊಳ್ಳುವುದು ಪ್ರಕೃತಿ ಸಹಜವಾದ ಸಾಮಾನ್ಯ ಪ್ರಕ್ರಿಯೆ. ಇದು ಜೀವಗಳು ಸುಖವನ್ನು ಅನುಭವಿಸುವುದರ ಜೊತೆಗೆ ಹೊಸ ಜೀವದ ಹುಟ್ಟಿಗೆ ಕಾರಣವಾಗುತ್ತದೆ. ಹೆಣ್ಣು-ಗಂಡು ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ, ಲೈಂಗಿಕ ತೃಪ್ತಿ ಕಂಡುಕೊಳ್ಳುವುದರತ್ತ ಗಮನಹರಿಸುತ್ತಾರೆ. ಲೈಂಗಿಕ ಕ್ರಿಯೆ ಮುಗಿದ ತಕ್ಷಣ ಖುಷಿಯಿಂದ ನಿದ್ದೆ ಮಾಡಬಹುದು ಎಂದು ಅಂದುಕೊಳ್ಳುತ್ತಾರೆ. ಆದರೆ ಲೈಂಗಿಕ ಕ್ರಿಯೆಯ ಮೊದಲು ಮಾಡಬೇಕಾಗಿರುವಂತೆಯೇ ಲೈಂಗಿಕ ಕ್ರಿಯೆಯ ನಂತರ ಮಾಡಬೇಕಾದ ಹಲವು ಕೆಲಸಗಳಿವೆ. ಲೈಂಗಿಕತೆಗೆ ಮೊದಲು ಏನು ಮಾಡಬೇಕೆಂದು ನಿಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿರುತ್ತದೆ. ಆದರೆ ಲೈಂಗಿಕತೆಯ ನಂತರ ಏನು ಮಾಡಬೇಕೆಂಬುದರ ಬಗ್ಗೆ ಹೆಚ್ಚಿನವರು ತಿಳಿದಿಲ್ಲ ಮತ್ತು ತಿಳಿದುಕೊಳ್ಳಲು ಆಸಕ್ತಿಯನ್ನು ಸಹ ತೋರುವುದಿಲ್ಲ. ಆದರೆ ಲೈಂಗಿಕ ಕ್ರಿಯೆಯ ನಂತರ ಮಹಿಳೆ (Woman) ಮಾಡಲೇಬೇಕಾದ ಕೆಲವೊಂದು ಕೆಲಸಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ಮೂತ್ರ ವಿಸರ್ಜಿಸುವುದು: ಸಂಭೋಗದ ನಂತರ ತಕ್ಷಣವೇ ಬಾತ್‌ರೂಮ್‌ಗೆ ಹೋಗಿ. ಮೂತ್ರ ವಿಸರ್ಜನೆ ಮಾಡುವುದರಿಂದ ಎಲ್ಲಾ ದ್ರವಗಳು ಸರಿಯಾಗಿ ಹೊರಹೋಗುತ್ತವೆ. ಇದರಿಂದ ಮೂತ್ರನಾಳದ ಸೋಂಕು ಬರುವ ಸಾಧ್ಯತೆ ಕಡಿಮೆ. ಇದು ಅಕಸ್ಮಾತ್ ವೀರ್ಯ ದೇಹದ ಒಳ ಸೇರಿದ್ದರೂ ಹೊರಹಾಕುತ್ತದೆ. ಗರ್ಭಧಾರಣೆಯನ್ನು ಯೋಚಿಸದಿದ್ದಲ್ಲಿ ಆ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸಂಭೋಗದ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಮೂತ್ರನಾಳವನ್ನು ಏರುವ ಸಾಧ್ಯತೆಯಿರುವುದರಿಂದ ಮೂತ್ರನಾಳದ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ಮೂತ್ರ ವಿಸರ್ಜಿಸಿದರೆ ಈ ಭಯವಿರುವುದಿಲ್ಲ. ಮೂತ್ರ ವಿಸರ್ಜನೆಗೆ ಮನಸ್ಸಾಗದಿದ್ದರೆ ಒಂದು ಲೋಟ ನೀರು ಕುಡಿಯಿರಿ. ಇದು ಸೂಕ್ಷ್ಮಜೀವಿಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
Relationship Tips : ನಿಮ್ಮ ಹುಡುಗ ವರ್ಜಿನ್ನಾ? ಹೀಗೆ ಪರೀಕ್ಷೆ ಮಾಡಿ
ಯೋನಿಯ ಸ್ವಚ್ಛತೆ ಕಾಪಾಡಿಕೊಳ್ಳಿ: ಸಂಗಾತಿಯ ಲೈಂಗಿಕ ಪ್ರಕ್ರಿಯೆ ಸಂಪೂರ್ಣವಾದ ನಂತರ ನಿಮ್ಮ ಇಡೀ ದೇಹ ಬೆವರಿನಿಂದ ತುಂಬಿರುತ್ತದೆ. ನಿಮ್ಮ ಯೋನಿಯ ಭಾಗ ಕೂಡ ನಿಮ್ಮ ಸಂಗಾತಿಯ ವೀರ್ಯ ಹಾಗೂ ಬೆವರಿನಿಂದ ಆವೃತವಾಗಿರುತ್ತದೆ. ಬ್ಯಾಕ್ಟೀರಿಯಗಳ ಸೋಂಕು ತಗಲುವ ಸಾಧ್ಯತೆ ಕೂಡ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಒಂದು ಒಣ ಬಟ್ಟೆಯಿಂದ ಅಥವಾ ಟಿಶ್ಯೂ ಪೇಪರ್ ಮೂಲಕ ನಿಮ್ಮ ಯೋನಿಯ ಭಾಗವನ್ನು ಸ್ವಚ್ಛ ಪಡಿಸಿಕೊಳ್ಳಿ.
ಜನನಾಂಗ ನಿಧಾನವಾಗಿ ತೊಳೆಯಿರಿ: ನಿಮ್ಮ ಖಾಸಗಿ ಭಾಗಗಳನ್ನು ತೊಳೆಯುವುದು ಮತ್ತು ಸ್ವಚ್ಛಗೊಳಿಸುವುದು ಲೈಂಗಿಕ ನಂತರದ ಪ್ರಮುಖ ಅಭ್ಯಾಸಗಳಲ್ಲಿ ಒಂದಾಗಿದೆ. ಸಂಭೋಗದ ನಂತರ ಬೆಚ್ಚಗಿನ ನೀರು, ಸೌಮ್ಯವಾದ ಸಾಬೂನು ಬಳಸಿ ಆ ಭಾಗವನ್ನು ತೊಳೆಯಿರಿ. ಈ ಸಂದರ್ಭದಲ್ಲಿ ಒದ್ದೆ ತೆಗೆಯಲು ಮೃದುವಾದ ಟವೆಲ್ ಬಳಸಿ. ಯಾವಾಗಲೂ ನಿಮ್ಮ ಖಾಸಗಿ ಭಾಗಗಳನ್ನು ಮುಂಭಾಗದಿಂದ ಹಿಂದಕ್ಕೆ ತೊಳೆಯಿರಿ, ಹಿಂದೆಯಿಂದ ಮುಂದಕ್ಕೆ ತೊಳೆಯುವ ತಪ್ಪನ್ನು ಮಾಡಬೇಡಿ. ಯೋನಿಯು ತನ್ನದೇ ಆದ ಸ್ವಯಂ-ಶುದ್ಧೀಕರಣ ಕಾರ್ಯವಿಧಾನವನ್ನು ಹೊಂದಿದೆ, ಇದು ಪಿಹೆಚ್ ಮಟ್ಟವನ್ನು ಆರೋಗ್ಯಕರವಾಗಿ ಮತ್ತು ಸಮತೋಲನದಲ್ಲಿಡಲು ಸಹಾಯ ಮಾಡುವ ಉತ್ತಮ ಬ್ಯಾಕ್ಟೀರಿಯಾವನ್ನು ಒಳಗೊಂಡಿರುತ್ತದೆ.
ಹೆಸರೇ ತಿಳಿಯದೆ ಲೈಂಗಿಕ ಕ್ರಿಯೆ, ಸಂಗಾತಿ ಎಕ್ಸ್‌ಚೇಂಜ್ ಈ ದೇಶದಲ್ಲಿ ಮಾಮೂಲು
ತಾಜಾ ಬಟ್ಟೆಗಳನ್ನು ಧರಿಸಿ: ಸಂಭೋಗದ ಸಂದರ್ಭದಲ್ಲಿ ಬಳಸುವ ಒಳ ಉಡುಪುಗಳು ಮತ್ತು ಬಟ್ಟೆಗಳು ಸೋಂಕಿಗೆ ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ತಾಜಾ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು. ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಧರಿಸಿದ ಬಟ್ಟೆಯನ್ನೇ ಬಳಸಿದರೆ ಖಾಸಗಿ ಭಾಗಗಳ ಸುತ್ತ ಯಾವುದೇ ಗಾಯಗಳು, ತುರಿಕೆ ಸಂವೇದನೆ, ಜ್ವರ, ಕಾಲಾನಂತರದಲ್ಲಿ ಕೆಲ ಸಮಸ್ಯೆಗಳು ಕಂಡುಬರಬಹುದು.
ಹೆಚ್ಚು ನೀರು ಕುಡಿಯಿರಿ: ದೇಹಕ್ಕೆ ಯಾವುದೇ ಕಾರಣಕ್ಕೂ ನಿರ್ಜಲೀಕರಣ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಲೈಂಗಿಕ ಪ್ರಕ್ರಿಯೆಯ ಸಂದರ್ಭದಲ್ಲಿ ಮಹಿಳೆಯರ ಹಾಗೂ ಪುರುಷರು ದೇಹದಿಂದ ಸಾಕಷ್ಟು ಬೆವರು ಹರಿದು ಹೋಗಿರುತ್ತದೆ. ಈ ರೀತಿ ಮಾಡುವುದರಿಂದ ಗುಪ್ತಾಂಗದ ಆರೋಗ್ಯ ಕಾಪಾಡಿಕೊಳ್ಳಬಹುದು.
ಲೈಂಗಿಕ ನೈರ್ಮಲ್ಯದ ಬಗ್ಗೆ ಮುಕ್ತವಾಗಿ ಮಾತನಾಡಿ: ಹೆಚ್ಚುವರಿಯಾಗಿ, ನೀವು ಮತ್ತು ನಿಮ್ಮ ಸಂಗಾತಿ ಲೈಂಗಿಕ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಮುಕ್ತ ಚರ್ಚೆಯನ್ನು ಹೊಂದಿರಬೇಕು. ಧನಾತ್ಮಕ ಪರೀಕ್ಷಾ ವರದಿಗಳು ನಿಮ್ಮ ಆರೋಗ್ಯ ಹಾಗೂ ನಿಮ್ಮ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರುವುದರಿಂದ ನೀವಿಬ್ಬರೂ ಲೈಂಗಿಕವಾಗಿ ಹರಡುವ ಸೋಂಕುಗಳ ಪರೀಕ್ಷೆಗೆ ಒಳಗಾಗಬೇಕು.