ಹೆಸರೇ ತಿಳಿಯದೆ ಲೈಂಗಿಕ ಕ್ರಿಯೆ, ಸಂಗಾತಿ ಎಕ್ಸ್‌ಚೇಂಜ್ ಈ ದೇಶದಲ್ಲಿ ಮಾಮೂಲು
ಸೆಕ್ಸ್ ವಿಷ್ಯಕ್ಕೆ ಸಂಬಂಧಿಸಿದಂತೆ ಅನೇಕ ಸರ್ವೆಗಳು ನಡೆಯುತ್ತಿರುತ್ತವೆ. ಕೆಲ ಸಮೀಕ್ಷೆಗಳ ಫಲಿತಾಂಶ ಆಘಾತಕಾರಿಯಾಗಿರುತ್ತದೆ. ಪ್ಯಾರಿಸ್ ನಲ್ಲಿ ನಡೆದ ಸಮೀಕ್ಷೆಯೊಂದರ ವರದಿ ಶಾಕಿಂಗ್ ಆಗಿದೆ. ಅಪರಿಚಿತರ ಜೊತೆ ಸಂಭೋಗ ಬೆಳೆಸುವ ಜನರು ಒಂದೇ ಬಾರಿ ಒಂದಕ್ಕಿಂತ ಹೆಚ್ಚು ಜನರ ಜೊತೆ ಲೈಂಗಿಕ ಸಂಬಂಧ ಬೆಳೆಸ್ತಾರೆ.
ಜನರ ಲೈಂಗಿಕ (Sex) ಆಲೋಚನೆಗಳು ಬದಲಾಗ್ತಿವೆ. ಇಂಟರ್ನೆಟ್ (Internet) ವ್ಯವಸ್ಥೆ, ಸೆಕ್ಸ್ ಫ್ಯಾಂಟಸಿ (Sex fantasy) ಹೆಸರಿನಲ್ಲಿ ಜನರು ಹೊಸ ಹೊಸ ಪ್ರಯೋಗ (Experiment) ಗಳನ್ನು ಮಾಡಲು ಮುಂದಾಗ್ತಿದ್ದಾರೆ. ಭಾರತ (India) ದಲ್ಲಿ ಅಕ್ರಮ ಸಂಬಂಧಗಳ ಸಂಖ್ಯೆ ಕಡಿಮೆ. ಒಬ್ಬ ಸಂಗಾತಿಗೆ ತಮ್ಮನ್ನು ಸಮರ್ಪಿಸಿಕೊಂಡಿರ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲೂ ವಿದೇಶದ ಗಾಳಿ ಬೀಸುತ್ತಿದೆ. ಜನರು ಲೈಂಗಿಕ ಸುಖಕ್ಕೆ ಆದ್ಯತೆ ನೀಡ್ತಿದ್ದಾರೆಯೇ ಹೊರತು ಭಾವನೆಗಳಿಗಲ್ಲ. ಆದ್ರೆ ಪ್ಯಾರಿಸ್ (Paris) ನಲ್ಲಿ ಲೈಂಗಿಕ ಸಂಗಾತಿಗಳ ಬಗ್ಗೆ ಆಘಾತಕಾರಿ ವಿಷ್ಯವೊಂದು ಬಹಿರಂಗವಾಗಿದೆ. ಮೊದಲೇ ಹೇಳಿದಂತೆ ಒಬ್ಬ ಸಂಗಾತಿ (Partner) ಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ಜನರು, ಇನ್ನೊಬ್ಬರನ್ನು ಕನಸಿನಲ್ಲೂ ನೆನಪು ಮಾಡಿಕೊಳ್ಳೋದಿಲ್ಲ. ಹಾಗಿರುವಾಗ ಸಂಗಾತಿ ಬದಲಾಯಿಸೋದು ಅಂದ್ರೆ ಆಘಾತವಾಗದೆ ಇರೋದಿಲ್ಲ. ಆದ್ರೆ ಪ್ಯಾರೀಸ್ ನಲ್ಲಿ ಇದು ಸಾಮಾನ್ಯ ಎನ್ನುವಂತಾಗ್ತಿದೆ. ಇಲ್ಲಿ ಸಂಗಾತಿಯನ್ನು ಬದಲಾಯಿಸಿಕೊಳ್ತೇವೆ ಎಂಬ ಸತ್ಯವನ್ನು ಅನೇಕರು ಒಪ್ಪಿಕೊಂಡಿದ್ದಾರೆ.
ಸಮೀಕ್ಷೆ (Survey) ಯಲ್ಲಿ ಬಹಿರಂಗವಾಯ್ತು ಆಘಾತಕಾರಿ ವಿಷ್ಯ: ಐಎಫ್‌ಪಿ ಪೋಲಿಂಗ್ ಇನ್‌ಸ್ಟಿಟ್ಯೂಟ್ (IFP Polling Institute) ಈ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ಪ್ರಕಾರ, ಪ್ಯಾರಿಸ್‌ನ ಸುಮಾರು ಕಾಲು ಭಾಗದಷ್ಟು ಜನರು ಗುಂಪು ಲೈಂಗಿಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪ್ರತಿ ಆರರಲ್ಲಿ ಒಬ್ಬರು ಸೆಕ್ಸ್ ಕ್ಲಬ್‌ಗಳ ಮೂಲಕ ತಮ್ಮ ಪಾಲುದಾರರನ್ನು ಬದಲಾಯಿಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ಈ ಸಮೀಕ್ಷೆಯಲ್ಲಿ ಎರಡು ಸಾವಿರ ಪ್ಯಾರಿಸ್ ನಿವಾಸಿಗಳು ಪಾಲ್ಗೊಂಡಿದ್ದರು ಎನ್ನಲಾಗಿದೆ. ಅವರಿಗೆ ಗ್ರೂಪ್ ಸೆಕ್ಸ್ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಅದರ ಪ್ರಕಾರ ಸರಾಸರಿ ಪ್ರತಿ ಪ್ಯಾರಿಸ್ ನಿವಾಸಿ 19 ಲೈಂಗಿಕ ಪಾಲುದಾರರನ್ನು ಹೊಂದಿದ್ದಾರೆ.
ಇದನ್ನೂ ಓದಿ: ಬ್ರೇಕಪ್ ನಂತರ ಪ್ಯಾಚಪ್ ಮಾಡ್ಕೊಳ್ಳಲು ಸಿಂಪಲ್ ಟಿಪ್ಸ್ ಇಲ್ಲಿದೆ
ಹೆಸರು ತಿಳಿಯದ ವ್ಯಕ್ತಿ ಜೊತೆ ಸಂಬಂಧ: ಸಮೀಕ್ಷೆಯಲ್ಲಿ ಶೇಕಡಾ 44 ರಷ್ಟು ಪುರುಷರು ತಮಗೆ ಹೆಸರೇ ತಿಳಿದಿಲ್ಲದ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಶೇಕಡಾ 14 ರಷ್ಟು ಮಹಿಳೆಯರು ತಾವೂ ಹೆಸರು ತಿಳಿಯದ ವ್ಯಕ್ತಿ ಜೊತೆ ಸಂಭೋಗ ನಡೆಸಿರುವುದಾಗಿ ಹೇಳಿದ್ದಾರೆ.
ಒಂದೇ ಸಮಯದಲ್ಲಿ ಇಬ್ಬರ ಜೊತೆ ಸೆಕ್ಸ್: ಸಂಗಾತಿ ಬದಲಿಸಿಕೊಳ್ಳುವುದು ಮಾತ್ರವಲ್ಲ ಒಂದೇ ಬಾರಿ ಇಬ್ಬರ ಜೊತೆ ಇಂಟರ್ಕೋರ್ಸ್ ನಡೆಸಿರುವುದಾಗಿಯೂ ಜನರು ಒಪ್ಪಿಕೊಂಡಿದ್ದಾರೆ. ಸಮೀಕ್ಷೆಯ ಪ್ರಕಾರ, ಶೇಕಡಾ 43 ರಷ್ಟು ಪುರುಷರು ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಹೊಂದಿರುವುದಾಗಿ ತಿಳಿಸಿದ್ದಾರೆ. ಶೇಕಡಾ 17 ರಷ್ಟು ಮಹಿಳೆಯರು ಒಂದೇ ಬಾರಿ ಇಬ್ಬರು ಪುರುಷರ ಜೊತೆ ಸಂಬಂಧ ಬೆಳೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಮೂರಕ್ಕಿಂತ ಹೆಚ್ಚು ಪಾಲುದಾರರು: ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 35 ರಷ್ಟು ಪುರುಷರು ಮತ್ತು 10 ಪ್ರತಿಶತ ಮಹಿಳೆಯರು ತಾವು 3 ಅಥವಾ ಹೆಚ್ಚಿನ ಪಾಲುದಾರರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇವೆ ಮತ್ತು ಅವರ ಜೊತೆ ಸೆಕ್ಸ್ ಆನಂದ ಪಡೆದಿದ್ದೇವೆ ಎಂಬುದನ್ನು ಹೇಳಿದ್ದಾರೆ.
ಪ್ಯಾರಿಸ್ ನಲ್ಲಿ ಸೆಕ್ಸ್ ಕ್ಲಬ್: ಪ್ಯಾರಿಸ್‌ನಲ್ಲಿ ಶೇಕಡಾ 23 ರಷ್ಟು ಪುರುಷರು ಸೆಕ್ಸ್ ಕ್ಲಬ್‌ಗಳಲ್ಲಿ ತಮ್ಮ ಸಂಗಾತಿಯನ್ನು ವಿನಿಮಯ ಮಾಡಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಈ ವಿಷಯದಲ್ಲಿ ಮಹಿಳೆಯರು ಪುರುಷರಿಗಿಂತ ಹಿಂದೆ ಉಳಿದಿಲ್ಲ. ಶೇಕಡಾ 7 ರಷ್ಟು ಮಹಿಳೆಯರು ತಮ್ಮ ಪಾಲುದಾರರನ್ನು ಲೈಂಗಿಕತೆಗಾಗಿ ವಿನಿಮಯ ಮಾಡಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: EXTRA MARITAL AFFAIRS : ಲವ್ವರ್ ಪತ್ನಿಗೆ ಗೊತ್ತಾಗಿದೆ ಅನೈತಿಕ ಸಂಬಂಧ.. ಮುಂದೇನ್ ಮಾಡ್ಲಿ..?
ಸಂಗಾತಿಗೆ ಮೋಸ: ಸಂಗಾತಿಯನ್ನು ವಿನಿಮಯ ಮಾಡಿಕೊಳ್ಳುವುದು ಮಾತ್ರವಲ್ಲ ಅನೇಕರು ಸೆಕ್ಸ್ ವಿಷ್ಯದಲ್ಲಿ ಸಂಗಾತಿಗೆ ಮೋಸ ಮಾಡಿದ್ದಾರೆ. ಸಮೀಕ್ಷೆಯಲ್ಲಿ ಜನರು ಇದನ್ನೂ ಒಪ್ಪಿಕೊಂಡಿದ್ದಾರೆ. ಶೇಕಡಾ 58 ರಷ್ಟು ಪ್ಯಾರಿಸ್ ಜನರು ತಮ್ಮ ಪಾಲುದಾರರಿಗೆ ಮೋಸ ಮಾಡಿರೋದಾಗಿ ಹೇಳಿದ್ದಾರೆ.