Asianet Suvarna News Asianet Suvarna News

Relationship Tips : ನಿಮ್ಮ ಹುಡುಗ ವರ್ಜಿನ್ನಾ? ಹೀಗೆ ಪರೀಕ್ಷೆ ಮಾಡಿ

ಪೋರ್ನ್ ಚಿತ್ರಗಳನ್ನು ನೋಡೋದು ಬೇರೆ, ಅನುಭವ ಬೇರೆ. ಎಷ್ಟೇ ಚಿತ್ರಗಳನ್ನು ನೋಡಿದ್ರೂ ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸುವ ವೇಳೆ ಹುಡುಗ್ರಲ್ಲಿ ಕೆಲ ಬದಲಾವಣೆ ಕಾಣಿಸುತ್ತದೆ. ವೈದ್ಯಕೀಯ ಪರೀಕ್ಷೆ ಇಲ್ಲವೆಂದ್ರೂ ನೀವು ಕೆಲ ಟ್ರಿಕ್ಸ್ ಮೂಲಕ ನಿಮ್ಮ ಹುಡುಗನ ಅಸಲಿಯತ್ತು ಪತ್ತೆ ಮಾಡ್ಬಹುದು. 
 

Did The Boy Have Sex Before Marriage Or Not?
Author
Bangalore, First Published Jun 30, 2022, 3:46 PM IST

ಮದುವೆ (Marriage) ಗೂ ಮುನ್ನ ಸಂಗಾತಿ (Partner) ಸೆಕ್ಸ್ (Sex) ಅನುಭವ ಪಡೆದಿದ್ದಾರಾ? ಈ ಪ್ರಶ್ನೆಗೆ ಉತ್ತರ ಪಡೆಯಲು ಅನೇಕರು ಪ್ರಯತ್ನ ನಡೆಸ್ತಾರೆ. ಮದುವೆಗೂ ಮೊದಲು ಸಂಗಾತಿ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂಬ ವಿಷ್ಯ ಗೊತ್ತಾದ್ರೆ ಕೆಲವರ ದಾಂಪತ್ಯ ಹಾಳಾಗುತ್ತದೆ ಎಂಬುದೂ ಅಷ್ಟೇ ಸತ್ಯ. ಆದ್ರೆ ಇದನ್ನು ತಿಳಿಯಲೇಬೇಕು ಎನ್ನುವವರು ವೈದ್ಯರ ಬಳಿ ಹೋಗಲು ಸಾಧ್ಯವಿಲ್ಲ. ಯಾಕೆಂದ್ರೆ  ಹುಡುಗ ಅಥವಾ ಹುಡುಗಿ ಯಾರೊಂದಿಗಾದರೂ ಲೈಂಗಿಕ ಕ್ರಿಯೆ ನಡೆಸಿದ್ದಾರೆಯೇ ಎಂಬುದನ್ನು ಪರೀಕ್ಷೆಯಿಂದ ಕಂಡುಹಿಡಿಯಲಾಗುವುದಿಲ್ಲ. ಆದ್ರೆ ಸಂಗಾತಿ ಮೊದಲ ಬಾರಿ ನಿಮ್ಮ ಜೊತೆ ಸಂಭೋಗ ಬೆಳೆಸುವ ವೇಳೆಯೇ ನೀವು ಇದನ್ನು ಸುಲಭವಾಗಿ ಪತ್ತೆ ಮಾಡ್ಬಹುದು. 

ಹುಡುಗಿಯರ ವಿಷ್ಯಕ್ಕೆ ಬಂದ್ರೆ ಕನ್ಯತ್ವವು ಸಾಮಾನ್ಯವಾಗಿ  ಕನ್ಯಾಪೊರೆಗೆ ಸಂಬಂಧಿಸಿದೆ. ಕನ್ಯಾಪೊರೆ ಹರಿದ್ರೆ ಆಕೆ ಕನ್ಯೆಯಲ್ಲ ಎಂದು ನಂಬಲಾಗಿದೆ. ಆದ್ರೆ ವೈದ್ಯರು ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕನ್ಯಾಪೊರೆಯು ಯೋನಿಯ ಗೋಡೆಯ ಮೇಲಿರುವ ತೆಳುವಾದ ಅಂಗಾಂಶ ಎಂದು ವೈದ್ಯರು ನಂಬುತ್ತಾರೆ. ಇದು ಸಾಮಾನ್ಯವಾಗಿ ಯೋನಿಯ ಬಳಿ ರಂಧ್ರವಾಗಿ ಕಂಡುಬರುತ್ತದೆ. ಸುಮಾರು ಶೇಕಡಾ 10-15  ಹುಡುಗಿಯರು ಹುಟ್ಟುವಾಗ್ಲೇ ಕನ್ಯಾಪೊರೆ ಹೊಂದಿರುವುದಿಲ್ಲ. ಎರಡನೆಯದಾಗಿ, ಸಂಭೋಗವಿಲ್ಲದೆ ಕನ್ಯಾಪೊರೆ ಛಿದ್ರವಾಗಬಹುದು. ಹಸ್ತಮೈಥುನದ ಸಮಯದಲ್ಲಿ, ಟ್ಯಾಂಪೂನ್ಗಳನ್ನು ಬದಲಾಯಿಸುವಾಗ ಅಥವಾ ಕ್ರೀಡೆಯ ಸಂದರ್ಭದಲ್ಲಿ ಇದು ಸಂಭವಿಸುತ್ತದೆ.

ಹೆಸರೇ ತಿಳಿಯದೆ ಲೈಂಗಿಕ ಕ್ರಿಯೆ, ಸಂಗಾತಿ ಎಕ್ಸ್‌ಚೇಂಜ್‌ ಈ ದೇಶದಲ್ಲಿ ಮಾಮೂಲು

ಇನ್ನು ಮದುವೆಗೆ ಮೊದಲು ಹುಡುಗ ಲೈಂಗಿಕ ಸಂಬಂಧ ಹೊಂದಿದ್ದಾನೆಯೇ ಎಂದು ತಿಳಿಯಲು ಯಾವುದೇ ದೈಹಿಕ ಮತ್ತು ಲೈಂಗಿಕ ಮಾರ್ಗಗಳಿಲ್ಲ. ಆದರೆ ನೀವು ಕೆಲವು ವಿಧಾನಗಳಲ್ಲಿ ಕಂಡುಹಿಡಿಯಬಹುದು. ನಿಮ್ಮ ಪತಿ ಮದುವೆಗೆ ಮೊದಲು ಲೈಂಗಿಕ ಸಂಬಂಧ ಹೊಂದಿದ್ದಾರೋ ಇಲ್ಲವೋ ಎಂಬುದನ್ನು ಹೇಗೆ ಪತ್ತೆ ಮಾಡ್ಬಹುದು ಎಂಬುದನ್ನು ನಾವು ಹೇಳ್ತೇವೆ.

ಸೆಕ್ಸ್ ವೇಳೆ ನಾಚಿಕೆ : ಒಬ್ಬ ವ್ಯಕ್ತಿ ಈವರೆಗೆ ಶಾರೀರಿಕ ಸಂಬಂಧ ಬೆಳಸದೆ ಇದ್ದಲ್ಲಿ ಅದ್ರ ಆರಂಭ ಹೇಗೆ ಎಂಬುದು ಅವನಿಗೆ ತಿಳಿದಿರುವುದಿಲ್ಲ. ಸ್ಪರ್ಶಿಸುವ ಅಥವಾ ಚುಂಬಿಸುವ ಮೊದಲು ಪತ್ನಿಯ ಒಪ್ಪಿಗೆ ಕೇಳಬಹುದು. ಅದೇ ಮೊದಲೇ ಅನುಭವವಿದ್ದರೆ ಆತ ಯಾವುದೇ ನಾಚಿಕೆಯಿಲ್ಲದೆ, ಭಯವಿಲ್ಲದೆ ನಿಮ್ಮ ಮುಂದೆ ಬರ್ತಾರೆ.

ಕಾಂಡೋಮ್ ಬಳಕೆ ಬಗ್ಗೆ ಕಡಿಮೆ ತಿಳುವಳಿಕೆ : ಮದುವೆಗೆ ಮುಂಚೆ ಲೈಂಗಿಕ ಕ್ರಿಯೆ ನಡೆಸದ ಪುರುಷರಿಗೆ ಕಾಂಡೋಮ್ ಬಳಕೆ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಎಷ್ಟೇ ಪೋರ್ನ್ ಚಿತ್ರಗಳನ್ನು ನೋಡಿದ್ದರೂ ಬಳಕೆ ವೇಳೆ ಗೊಂದಲಕ್ಕೊಳಗಾಗ್ತಾರೆ. 

ಆರಂಭಿಕ ವಿಸರ್ಜನೆ : ತುಂಬಾ ಬೇಗ ಪರಾಕಾಷ್ಠೆ ತಲುಪುವುದು ಆರೋಗ್ಯ ಸಮಸ್ಯೆಯೂ ಆಗಿರಬಹುದು. ಆದ್ರೆ ಮೊದಲ ಬಾರಿ ದೈಹಿಕ ಸಂಬಂಧ ಬೆಳೆಸುವ ಹುಡುಗ್ರು ಬೇಗನೆ ಪರಾಕಾಷ್ಠೆ ಹೊಂದುತ್ತಾರೆ ಎಂದು ತಜ್ಞರು ಹೇಳ್ತಾರೆ.   

ಹೆಂಡ್ತಿ ಪರಪುರುಷನ ಹಿಂದೆ ಹೋಗೋದು ಇದೇ ಕಾರಣಕ್ಕಂತೆ !

ಲೈಂಗಿಕ ಸಮಯದಲ್ಲಿ ಹೆದರಿಕೆ : ಇದರ ಬಗ್ಗೆ ಯಾವುದೇ ಸಂದೇಹವಿಲ್ಲ. ಹೆಚ್ಚಿನ ಹುಡುಗರು ಮತ್ತು ಹುಡುಗಿಯರು ಮೊದಲ ಬಾರಿ ಸಂಬಂಧ ಬೆಳೆಸುವಾಗ ಭಯಕ್ಕೊಳಗಾಗ್ತಾರೆ. ಇದಕ್ಕೆ ಕಾರಣ ಅತಿಯಾದ ಉತ್ಸಾಹ.    

ಫೋರ್‌ಪ್ಲೇ ಬಗ್ಗೆ ಕಡಿಮೆ ತಿಳುವಳಿಕೆ : ಫೋರ್ಪ್ಲೇ ಸೆಕ್ಸ್ ಅನ್ನು ತೀವ್ರತೆಗೆ ಕೊಂಡೊಯ್ಯಲು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.  ಆದರೆ ಮದುವೆಗೆ ಮುಂಚೆ ಸಂಬಂಧ ಬೆಳೆಸದ ವರ್ಜಿನ್ ಹುಡುಗ  ಮೊದಲ ಬಾರಿ ಸಂಬಂಧ ಬೆಳೆಸುವ ವೇಳೆ ಫೋರ್‌ಪ್ಲೇ ಎಂದರೇನು ಎಂಬುದನ್ನು ತಿಳಿದಿರುವುದಿಲ್ಲ.  

ಚುಂಬಿಸಲು ನಾಚಿಕೆ : ಈಗಾಗಲೇ ಇದ್ರಲ್ಲಿ ಅನುಭವ ಹೊಂದಿರುವ ವ್ಯಕ್ತಿ ಹಾಗೂ ಅನುಭವ ಹೊಂದಿರದ ವ್ಯಕ್ತಿ ಮುತ್ತಿನ ವಿಧಾನ ಭಿನ್ನವಾಗಿರುತ್ತದೆ. ಅನುಭವ ಹೊಂದಿರುವ ವ್ಯಕ್ತಿ ಹುಡುಗಿಯನ್ನು ಬಿಗಿಯಾಗಿ ಹಿಡಿದುಕೊಳ್ಳುವ ಮೂಲಕ ಅಥವಾ ಲಿಪ್ ಲಾಕ್ ಮಾಡುವ ಮೂಲಕ ಸಂಬಂಧ ಶುರು ಮಾಡ್ತಾರೆ. ಆದ್ರೆ ವರ್ಜಿನ್ ಹುಡುಗ್ರು ಹುಡುಗಿಯನ್ನು ಬಿಗಿಯಾಗಿ ಹಿಡಿಯೋದಿಲ್ಲ. ಹಾಗೇ ಲಿಪ್ ಲಾಕ್ ಕಿಸ್ ಮಾಡಲು ಹೆದರುತ್ತಾರೆ.  

ಯೋನಿ  ಬಗ್ಗೆ ಗೊಂದಲ : ಎಲ್ಲಾ ಹುಡುಗರು ಪೋರ್ನ್ ವೀಡಿಯೋಗಳನ್ನು ನೋಡುತ್ತಾರೆ, ಆದರೆ ಮೊದಲ ಬಾರಿಗೆ ಸಂಬಂಧ ಬೆಳೆಸುವ ವೇಳೆ ಯೋನಿ ಬಗ್ಗೆ ಗೊಂದಲವಿರುತ್ತದೆ.  
 

Follow Us:
Download App:
  • android
  • ios