ಹೃದಯಾಘಾತದಿಂದ ಮತ್ತೆ ಮೂಡಿತು ಒಲವು; ಡಿವೋರ್ಸ್ ಆಗಿ ಐದು ವರ್ಷದ ನಂತ್ರ ಒಂದಾದ ಜೋಡಿ
ಲಕ್ನೋ: ದಾಂಪತ್ಯ ಅಂದ್ರೆ ಕಷ್ಟ-ಸುಖ ಎರಡರಲ್ಲೂ ಗಂಡ-ಹೆಂಡತಿ ಜೊತೆಯಾಗಿದ್ದು ಜೀವನ ನಡೆಸುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾರೂ ಅದನ್ನು ಪಾಲಿಸುತ್ತಿಲ್ಲ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹೀಗೆ ಯಾವುದಾದರೂ ತೊಂದರೆ ಎದುರಾದಾಗ ಗಂಡನನ್ನು ಬಿಟ್ಟು ಹೊರಟು ಹೋಗುತ್ತಾರೆ. ಆದ್ರೆ ಈ ದಂಪತಿ ಮಾತ್ರ ಆರೋಗ್ಯ ಸಮಸ್ಯೆಯಿಂದ ದೂರವಾಗುವ ಬದಲು ಮತ್ತೆ ಒಂದಾಗಿದ್ದಾರೆ.
ಲಕ್ನೋ: ದಾಂಪತ್ಯ ಅಂದ್ರೆ ಕಷ್ಟ-ಸುಖ ಎರಡರಲ್ಲೂ ಗಂಡ-ಹೆಂಡತಿ ಜೊತೆಯಾಗಿದ್ದು ಜೀವನ ನಡೆಸುವುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಯಾರೂ ಅದನ್ನು ಪಾಲಿಸುತ್ತಿಲ್ಲ. ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆ ಹೀಗೆ ಯಾವುದಾದರೂ ತೊಂದರೆ ಎದುರಾದಾಗ ಗಂಡನನ್ನು ಬಿಟ್ಟು ಹೊರಟು ಹೋಗುತ್ತಾರೆ. ಆದ್ರೆ ಈ ದಂಪತಿ ಮಾತ್ರ ಆರೋಗ್ಯ ಸಮಸ್ಯೆಯಿಂದ ದೂರವಾಗುವ ಬದಲು ಮತ್ತೆ ಒಂದಾಗಿದ್ದಾರೆ. ಹೌದು, ವಿಚ್ಛೇದನ ಪಡೆದು ದೂರವಾದ ಬಳಿಕ ದಂಪತಿಗಳು ಮತ್ತೆ ಒಂದಾಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ. ಗಂಡನಿಗೆ ಹಾರ್ಟ್ ಅಟ್ಯಾಕ್ ಆದ ಸುದ್ದಿ ತಿಳಿದು ಪತ್ನಿ ಮರಳಿ ಬಂದಿದ್ದಾಳೆ. ಇಬ್ಬರೂ ಮದುವೆಯಾಗಿದ್ದಾರೆ.
ಸಣ್ಣಪುಟ್ಟ ವೈಮನಸ್ಸು ಉಂಟಾದಾಗ ವಿಚ್ಛೇದನ (Divorce) ಪಡೆದುಕೊಳ್ಳುವ ಪ್ರತಿಯೊಬ್ಬರೂ ಆ ನಂತರ ಆ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಅವರ ಕಷ್ಟಸುಖದಲ್ಲಿ ಜೊತೆಯಾಗಿರಬೇಕಿತ್ತು ಎಂದು ಅಂದುಕೊಳ್ಳುತ್ತಾರೆ. ಅದೇ ರೀತಿ ಇದೀಗ ಘಟನೆಯೊಂದರಲ್ಲಿ ಐದು ವರ್ಷಗಳ ಹಿಂದೆ ಪತ್ನಿಗೆ (Wife) ವಿಚ್ಛೇದನ ನೀಡಿದ್ದ ವ್ಯಕ್ತಿಯೋರ್ವ ಆಕೆಯನ್ನು ಪುನಃ ವಿವಾಹವಾಗಿರುವ ಘಟನೆ ಉತ್ತರಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದಿದೆ.
15ನೇ ವಯಸ್ಸಿನಲ್ಲಿ ವಿವಾಹವಾಗಿ 4 ಮಕ್ಕಳ ತಾಯಿ, ವಿಚ್ಛೇದನದ ನಂತರ ಬಣ್ಣ ಹಚ್ಚಿ ಸೂಪರ್ ಸ್ಟಾರ್ ಆದ ನಟಿ!
ಆಸ್ಪತ್ರೆಯಲ್ಲಿದ್ದಾಗ ವಿನಯ್ ಆರೈಕೆ ಮಾಡಿದ ಪೂಜಾ
2012ರಲ್ಲಿ ವಿನಯ್ ಜೈಸ್ವಾಲ್ ಎಂಬುವವರು ಪೂಜಾ ಚೌಧರಿ ಎಂಬವರನ್ನು ಮದುವೆಯಾಗಿದ್ದರು. ಆರು ವರ್ಷಗಳ ದಾಂಪತ್ಯದ ಬಳಿಕ ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಶುರುವಾಗಿತ್ತು. 2018ರಲ್ಲಿ ವಿಚ್ಛೇದನ ಪಡೆದು ಇಬ್ಬರೂ ದೂರಾಗಿದ್ದರು. ಐದು ವರ್ಷಗಳ ನಂತರ ಮತ್ತೆ ಒಂದಾಗಿ ಮರುಮದುವೆಯಾಗಲು ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ವಿನಯ್‌ಗಿದ್ದ ಆರೋಗ್ಯ ಸಮಸ್ಯೆ.
ಡಿವೋರ್ಸ್ ಆದ ಬಳಿಕ ವಿನಯ್ ಹಾಗೂ ಪೂಜಾ ಇಬ್ಬರೂ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇದೇ ವರ್ಷದ ಆಗಸ್ಟ್ ನಲ್ಲಿ ವಿನಯ್ ಅವರಿಗೆ ಹೃದಯಾಘಾತ(Heartattack) ವಾಗಿದೆ. ಇದರಿಂದ ವಿನಯ್ ಓಪನ್ ಸರ್ಜರಿಗೆ ಒಳಪಟ್ಟಿದ್ದರು. ಈ ಸುದ್ದಿ ಕೇಳಿ ಪೂಜಾ ಅವರಿಗೆ ಆತಂಕವಾಗಿದ್ದು, ಆಸ್ಪತ್ರೆಗೆ ತೆರಳಿ ಮಾಜಿ ಪತಿಯ ಜೊತೆ ಸಮಯವನ್ನು ಕಳೆದಿದ್ದಾರೆ. ವಿನಯ್ ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಅವರ ಜತೆಗಿದ್ದು, ಆರೈಕೆಯನ್ನು ಮಾಡಿದ್ದಾರೆ ದಿನ ಕಳೆದಂತೆ ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿದ್ದು ಮತ್ತೆ ಮದುವೆಯಾಗುವ ನಿರ್ಧಾರ ಮಾಡಿದ್ದಾರೆ.
ಗಂಡಂಗೆ ಪಾರ್ಟಿ ಮಾಡ್ಬೇಕು, ಹೆಂಡ್ತಿಗೆ ಮನೇಲಿರಬೇಕು, ಇವರಿಬ್ಬರಿಗೆ ಡಿವೋರ್ಸ್ ಬಿಟ್ರೆ ಬೇರೆ ದಾರಿ ಉಂಟಾ?
ಕುಟುಂಬದ ಸಮ್ಮುಖದಲ್ಲಿ ಮತ್ತೆ ಮದುವೆಯಾದ ಜೋಡಿ
ನವೆಂಬರ್ 23ರಂದು ವಿನಯ್ ಮತ್ತು ಪೂಜಾ ಪರಸ್ಪರರ ಕುಟುಂಬದ ಸಮ್ಮುಖದಲ್ಲಿ ಮತ್ತೆ ವಿವಾಹ (Marriage)ವಾಗಿದ್ದಾರೆ. ಗಾಜಿಯಾಬಾದ್‌ನ ಕವಿನಗರದಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ಮದುವೆ ನಡೀತು. ವಿನಯ್ ಜೈಸ್ವಾಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಪೂಜಾ ಚೌಧರಿ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.