ಪ್ರಾಣಿಯೋ ಮನುಷ್ಯನೋ ಅಮ್ಮ ಎಂದಿಗೂ ಅಮ್ಮನೇ... ಹುಲಿ ಬಾಯಿಂದ ಕರುವ ರಕ್ಷಿಸಿದ ರೋಚಕ ವೀಡಿಯೋ
ಕರುವೊಂದು ಹುಲಿಯ ಬಾಯಿಗೆ ಸಿಕ್ಕಿದ್ದು, ಹುಲಿ ಅದರ ಮೇಲೆ ಮುಗಿಬಿದ್ದಿದೆ. ಇದನ್ನು ಗಮನಿಸಿದ ತಾಯಿ ಹಸು ಕೂಡಲೇ ಆ ಸ್ಥಳಕ್ಕೆ ಓಡಿ ಬಂದು ತನ್ನ ಕರುವಿನ ರಕ್ಷಣೆಗೆ ಮುಂದಾಗಿದೆ. ತನ್ನ ಕರುವಿನ ಮೇಲೆ ದಾಳಿಗೆ ಮುಂದಾದ ಹುಲಿಯನ್ನು ತಿವಿದು ಓಡಿಸಿ ತನ್ನ ಕಂದನ ರಕ್ಷಿಸಿದೆ.
ಕಾಡಂಚಿನ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಆಗಾಗ ಜನರನ್ನು ಕಾಡುತ್ತಲೇ ಇರುತ್ತದೆ. ಆಹಾರ ಅರಸಿ ಕಾಡಂಚಿನ ಗ್ರಾಮಗಳಿಗೆ ಬರುವ ಕಾಡು ಪ್ರಾಣಿಗಳು ಜನರ ಸಾಕು ಪ್ರಾಣಿಗಳಾದ ಹಸು ಕೋಳಿ, ಕುರಿ, ನಾಯಿ ಮುಂತಾದ ಪ್ರಾಣಿಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಕಾಡಂಚಿನ ಗ್ರಾಮವೊಂದಕ್ಕೆ ಬಂದ ಹುಲಿಯೊಂದು, ಜನರು ಕಾಡಿಗೆ ಮೇಯಲು ಬಿಟ್ಟ ಹಸುಗಳ ಗುಂಪೊಂದನ್ನು ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ಹಸು ಹೋರಿಗಳೆಲ್ಲಾ ಓಡಿ ಹೋಗಿ ವ್ಯಾಘ್ರನ ಹಿಡಿತದಿಂದ ಪಾರಾಗಿವೆ. ಆದರೆ ಕರುವೊಂದು ಹುಲಿ ಬಾಯಿಗೆ ಸಿಕ್ಕಿಹಾಕಿಕೊಂಡಿದೆ. ಇದನ್ನು ಗಮನಿಸಿದ ತಾಯಿ ಹಸು ಕೂಡಲೇ ಓಡಿ ಬಂದು ತನ್ನ ಜೀವದ ಹಂಗು ತೊರೆದು ಹುಲಿಯನ್ನು ಕೊಂಬಿನಿಂದ ತಿವಿದು ದೂರ ಅಟ್ಟಿದ್ದು, ಈ ರೋಚಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಾಣಿಗಳೇ ಇರಬಹುದು ಮನುಷ್ಯರೇ ಇರಬಹುದು ತಾಯಿ ಎಂದಿಗೂ ತಾಯಿಯೇ. ಈ ವಿಚಾರವಂತೂ ಹಲವು ಬಾರಿ ಸಾಬೀತಾಗಿದೆ. ತನ್ನ ಕರುಳ ಕುಡಿಯ ಜೀವಕ್ಕೆ ಅಪಾಯವಾದರೆ ಯಾವ ತಾಯಿಯೂ ಸುಮ್ಮನಿರಳು. ಅದು ಪ್ರಾಣಿಯಾದರೂ ಸರಿ ಮನುಷ್ಯನಾದರೂ ಸರಿ. ತನ್ನ ಜೀವವವನ್ನು ಪಣಕ್ಕಿಟ್ಟಾದರೂ ತಾಯಿ ತನ್ನ ಕಂದನನ್ನು ರಕ್ಷಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾಳೆ. ಅದೇ ರೀತಿ ಇಲ್ಲಿ ಹಸು ಹುಲಿಯ ಬಾಯಿಗೆ ಸಿಕ್ಕಿ ಒದ್ದಾಡಿದ ತನ್ನ ಕಂದನನ್ನು ರಕ್ಷಿಸಲು ತನ್ನ ಜೀವವನ್ನು ಪಣಕ್ಕಿಟ್ಟಿದೆ. ತಾಯಿ ಹಸುವಿನ ಆಕ್ರೋಶಕ್ಕೆ ಅದೃಷ್ಟವಶಾತ್ ಹುಲಿ ಕರುವನ್ನು ಬಿಟ್ಟು ಓಡಿ ಹೋಗಿದ್ದು, ಹಸು ಕರು ಎರಡು ಜೀವ ಉಳಿಸಿಕೊಂಡಿವೆ.
ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಕಳೆದ 50 ವರ್ಷದಲ್ಲಿ ಶೇ. 75 ರಷ್ಟು ಹೆಚ್ಚಳ
ವಿಡಿಯೋದಲ್ಲಿ ಕಾಣಿಸುವಂತೆ ಕಾಡಂಚಿನ ಗ್ರಾಮವೊಂದಕ್ಕೆ ಹುಲಿ ಆಹಾರ ಅರಸಿ ಬಂದಿದ್ದು, ಬಯಲಿನಲ್ಲಿ ಮೇಯಲು ಬಿಟ್ಟಿದ್ದ ಹಸುಗಳ ಹಿಂಡಿನ ಮೇಲೆ ವ್ಯಾಘ್ರನ ಕಣ್ಣು ಬಿದ್ದಿದೆ. ಕೂಡಲೇ ಹಸುಗಳೆಲ್ಲಾ ಜೀವ ಉಳಿಸಿಕೊಳ್ಳುವ ಸಲುವಾಗಿ ದಿಕ್ಕು ಪಾಲಾಗಿ ಓಡಿವೆ. ಈ ವೇಳೆ ಹಸುಗಳ ಗುಂಪಿನಲ್ಲಿದ್ದ ಕರುವೊಂದು ಹುಲಿಯ ಬಾಯಿಗೆ ಸಿಕ್ಕಿದ್ದು, ಹುಲಿ ಅದರ ಮೇಲೆ ಮುಗಿಬಿದ್ದಿದೆ. ಇದನ್ನು ಗಮನಿಸಿದ ತಾಯಿ ಹಸು ಕೂಡಲೇ ಆ ಸ್ಥಳಕ್ಕೆ ಓಡಿ ಬಂದು ತನ್ನ ಕರುವಿನ ರಕ್ಷಣೆಗೆ ಮುಂದಾಗಿದೆ. ತನ್ನ ಕರುವಿನ ಮೇಲೆ ದಾಳಿಗೆ ಮುಂದಾದ ಹುಲಿಯನ್ನು ತಿವಿದು ಓಡಿಸಿ ತನ್ನ ಕಂದನ ರಕ್ಷಿಸಿದೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತ್ ನಂದಾ (sushant Nanda) ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಜಗತ್ತಿನ ಶೇಕಡಾ 75ರಷ್ಟು ಹುಲಿಗಳು ಭಾರತದಲ್ಲೇ ಇವೆ (ಸುಮಾರು 3200) ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಇದು ಯಾವ ಪ್ರದೇಶದಲ್ಲಿ ನಡೆದಿರುವುದು ಎಂಬ ಬಗ್ಗೆ ಉಲ್ಲೇಖವಿಲ್ಲ. ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದಾಗಿನಿಂದ ಸಂಚಲನ ಸೃಷ್ಟಿಸಿದೆ. ಒಂದು ಲಕ್ಷಕ್ಕೂ ಅಧಿಕ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ನಮ್ಮ ದೇಶದಲ್ಲಿ ಹುಲಿ ಸುರಕ್ಷಿತ ಪ್ರದೇಶವನ್ನು ವಿಸ್ತರಿಸುವುದಕ್ಕೆ ಇದು ಸಶಕ್ತ ಸಮಯ ಎಂದು ಒಬ್ಬರು ನೋಡುಗರು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು ಹುಲಿಗಳ (Tiger) ಹಾಗೂ ಕಾಡುಪ್ರಾಣಿಗಳ (Wild Animal) ಸಂಖ್ಯೆ ಕ್ಷೀಣಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಮನುಷ್ಯರು ಪ್ರಂಪಂಚದಲ್ಲಿರುವ ಅತ್ಯಂಕ ಕೆಟ್ಟ ಹಾಗೂ ಅಪಾಯಕಾರಿ ಪ್ರಾಣಿ ಎಂದು ಅವರು ಮಾನವರನ್ನು ಟೀಕಿಸಿದ್ದಾರೆ. ದೇಶದಲ್ಲಿ ಈಗ 3000 ಕ್ಕೂ ಹೆಚ್ಚು ಹುಲಿಗಳಿದ್ದು, ಹುಲಿ ಸಂರಕ್ಷಣಾ ಪ್ರಯತ್ನಗಳ ಫಲವಾಗಿ ಅವುಗಳ ಸಂಖ್ಯೆ ಹೆಚ್ಚುತ್ತಲೇ ಇದೆ.
ಪ್ರಧಾನಿ ಮೋದಿ ಕ್ಯಾಮರಾದಲ್ಲಿ ಬಂಡೀಪುರ ಹುಲಿ ಸೆರೆ: ಸಫಾರಿ ವಿವರ ಇಲ್ಲಿದೆ ನೋಡಿ