ಹುಲಿ ಗಣತಿ ವರದಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ: ಕಳೆದ 50 ವರ್ಷದಲ್ಲಿ ಶೇ. 75 ರಷ್ಟು ಹೆಚ್ಚಳ

4 ವರ್ಷದಲ್ಲಿ 200 ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು, 2022 ರ ಹೊತ್ತಿಗೆ, ಭಾರತವು 3,167 ಹುಲಿಗಳನ್ನು ಹೊಂದಿದೆ. ಇದು 2018 ರಲ್ಲಿ 2,967 ರಿಂದ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. 2018 ರಿಂದ 4 ವರ್ಷಗಳ ಕಾಲ ನಡೆದ ಹುಲಿ ಗಣತಿಯ ವರದಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

pm modi releases tiger census data participates in 50th anniversary of project tiger in mysuru on sunday ash

ಮೈಸೂರು (ಏಪ್ರಿಲ್ 9, 2023): ಹುಲಿ ಸಂರಕ್ಷಣಾ ಯೋಜನೆಯ 50ನೇ ವರ್ಷದ ಸುವರ್ಣ ಸಂಭ್ರಮೋತ್ಸವ ಹಿನ್ನೆಲೆ ರಾಜ್ಯದ ಸಾಂಸ್ಕೃತಿಕ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ  ಅರಣ್ಯ ಇಲಾಖೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಿದ್ದು, ಈ ವೇಳೆ ಹುಲಿ ಗಣತಿ ವರದಿಯನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ. 

ಬೆಳಗ್ಗೆ 10. 30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದವರಿಗೆ ಕ್ಷಮೆ ಕೋರಿದ್ದಾರೆ. ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಹುಲಿ ವರದಿಯನ್ನು ಮೋದಿ ಬಿಡುಗಡೆ ಮಾಡಿದ್ದಾರೆ. 

ಇದನ್ನು ಓದಿ: ಸಫಾರಿ ಡ್ರೆಸ್‌ನಲ್ಲಿ ಮಿಂಚಿದ ಪ್ರಧಾನಿ ಮೋದಿ: ಹೀರೋ ಥರ ಕಾಣುತ್ತಿದ್ದಾರೆ ಎಂದ ನೆಟ್ಟಿಗರು

4 ವರ್ಷದಲ್ಲಿ 200 ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು, 2022 ರ ಹೊತ್ತಿಗೆ, ಭಾರತವು 3,167 ಹುಲಿಗಳನ್ನು ಹೊಂದಿದೆ. ಇದು 2018 ರಲ್ಲಿ 2,967 ರಿಂದ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. 2018 ರಿಂದ 4 ವರ್ಷಗಳ ಕಾಲ ನಡೆದ ಹುಲಿ ಗಣತಿಯ ವರದಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

ಹುಲಿ ಯೋಜನೆಗೆ 50 ವರ್ಷಗಳು ಪೂರ್ಣಗೊಂಡಿದ್ದು, ಇದರ ಯಶಸ್ಸು ಕೇವಲ ಭಾರತಕಕ್ಕಲ್ಲ, ಇಡೀ ಜಗತ್ತಿಗೆ ಅಗತ್ಯವಿದೆ. ಹುಲಿ ಜನ್ಮ ತಾಳಲು ಜೀವಿಸಲು ಅಗತ್ಯ ವಾತಾವರಣ ಭಾರತದಲ್ಲಿದ್ದು, ಇದನ್ನು ರೂಪಿಸಿರುವ ಹೆಮ್ಮೆ ಇದೆ. ಹುಲಿ ಜನಸಂಖ್ಯೆಯಲ್ಲಿ ಶೇಕಡ 75 ರಷ್ಟು ಭಾರತದಲ್ಲಿ ಇದೆ. ಕಳೆದ 50 ವರ್ಷದಲ್ಲಿ ಹುಲಿಗಳ ಸಂಖ್ಯೆ ಶೇ. 75 ರಷ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: 8ನೇ ಬಾರಿ ಪ್ರಧಾನಿ ಮೋದಿ ಮೈಸೂರಿಗೆ: ಬಂಡೀಪುರದಲ್ಲಿಂದು ಟೈಗರ್ ಸಫಾರಿ

ಅಲ್ಲದೆ, ಘೇಂಡಾಮೃಗ, ಆನೆಗಳ ವಿಷಯದಲ್ಲೂ ದಾಖಲೆ ಬರೆಯುತ್ತಿದ್ದೇವೆ. 4 ವರ್ಷಗಳಲ್ಲಿ ಚಿರತೆಗಳ ಸಂಖ್ಯೆಯೂ ಬಹಳಷ್ಟು ಹೆಚ್ಚಿದೆ. ಈ ಎಲ್ಲ ದಾಖಲೆಗಳು ಸಾರ್ವಜನಿಕರ ಸಹಭಾಗಿತ್ವದಿಂದ ಸಾಧ್ಯವಾಗಿದೆ. ಗುಜರಾತ್‌ನಲ್ಲಿ ಅರಣ್ಯ ಮಿತ್ರ ಯೋಜನೆ ಜಾರಿಯಲ್ಲಿದೆ. ಇದರಿಂದ ವನ್ಯಜೀವಿ - ಮಾನವರ ನಡುವಿನ ಸಂಘರ್ಷ ಕಡಿಮೆಯಾಗಿದೆ ಹಾಗೂ ಗಿರ್‌ ಅರಣ್ಯ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದೂ ಪ್ರಧಾನಿ ಹೇಳಿದರು. ಅಲ್ಲದೆ, ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದ್ದು, ದಶಕಗಳ ನಂತರ ಭಾರತದಲ್ಲೂ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ವನ್ಯಜೀವಿಗಳ ಸಂರಕ್ಷಣೆ ಜಗತ್ತಿನ ಜವಾಬ್ದಾರಿ ಎಂದೂ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಹೇಳಿದರು. 

ಇಂದಿರಾಗಾಂಧಿ ಸರ್ಕಾರವು 1973 ರಲ್ಲಿ ಪ್ರಾರಂಭಿಸಿದ ಪ್ರಾಜೆಕ್ಟ್ ಟೈಗರ್ ಅಥವಾ ಹುಲಿ ಯೋಜನೆ ಏಪ್ರಿಲ್ 1 ರಂದು ತನ್ನ ಸುವರ್ಣ ಮಹೋತ್ಸವವನ್ನು ಪೂರ್ಣಗೊಳಿಸಿದೆ. ಈ ಸಂದರ್ಭವನ್ನು ಗುರುತಿಸಲು, ಹುಲಿ ಯೋಜನೆಯ 50 ವರ್ಷಗಳ ಸ್ಮರಣಾರ್ಥ' ಕಾರ್ಯಕ್ರಮದಲ್ಲಿ, ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ (ಐಬಿಸಿಎ) ಅನ್ನು ಪ್ರಾರಂಭಿಸಿದರು. ಇದು ಹುಲಿ, ಸಿಂಹ, ಚಿರತೆ, ಹಿಮ ಚಿರತೆ, ಪೂಮಾ, ಜಾಗ್ವಾರ್ ಮತ್ತು ಚೀತಾ ಸೇರಿ ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ರಕ್ಷಣೆ ಮತ್ತು ಸಂರಕ್ಷಣೆಯ ಮೇಲೆ ಕೇಂದ್ರೀಕರಿಸುತ್ತದೆ.

ಹುಲಿ ಸಂರಕ್ಷಣಾ ಯೋಜನೆ ಅಧಿಕಾರಿ ಶ್ರೀಮತಿ ಮಾಲತಿ ಪ್ರಿಯಾ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕರ್ನಾಟಕ ರಾಜ್ಯ ಮುಕ್ತ‌ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನದ ಸಭಾಂಗಣದಲ್ಲಿ ಸಂವಾದ ನಡೆದಿದೆ. ಪ್ರಧಾನಿ ಕಾರ್ಯಕ್ರಮ ಉದ್ಘಾಟಿಸಿದ್ದು, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೆ, ಮುಖ್ಯ ಅತಿಥಿಗಳಾಗಿ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಉಪಸ್ಥಿತಿ ಇದ್ದರು. 

ಈ ಕಾರ್ಯಕ್ರಮದಲ್ಲಿ ಮಂಗೋಲಿಯ, ತಾಂಜಾನಿಯಾ, ಇಥಿಯೋಪಿಯ, ನೇಪಾಳ, ಭೂತಾನ್, ನೈಜೀರಿಯಾ, ಕೀನ್ಯಾ, ಬಾಂಗ್ಲಾದೇಶ, ವಿಯೆಟ್ನಾಂ, ಅಮೇರಿಕಾ ಹಾಗೂ ಭಾರತದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೂ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ 1200 ಜನರು ಭಾಗಿಯಾಗಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.  
 

Latest Videos
Follow Us:
Download App:
  • android
  • ios