ಪ್ರಧಾನಿ ಮೋದಿ ಕ್ಯಾಮರಾದಲ್ಲಿ ಬಂಡೀಪುರ ಹುಲಿ ಸೆರೆ: ಸಫಾರಿ ವಿವರ ಇಲ್ಲಿದೆ ನೋಡಿ
ಬಂಡೀಪುರ ಹುಲಿ ಯೋಜನೆ 50 ನೇ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಬಂಡೀಪುರದಲ್ಲಿ ಪ್ರಧಾನಿ ಸಫಾರಿ ಮಾಡಲಿದ್ದಾರೆ.
ಚಾಮರಾಜನಗರ (ಏ.08): ಬಂಡೀಪುರ ಹುಲಿ ಯೋಜನೆ 50 ನೇ ವರ್ಷಾಚರಣೆ ಸಂಭ್ರಮದ ಹಿನ್ನೆಲೆಯಲ್ಲಿ ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಬಂಡೀಪುರದಲ್ಲಿ ಪ್ರಧಾನಿ ಸಫಾರಿ ಮಾಡಲಿದ್ದಾರೆ. ಉಳಿದಂತೆ ಅವರ ಕಾರ್ಯಕ್ರಮದ ಪಟ್ಟಿ ಹೀಗಿದೆ.
ಮೈಸೂರಿನಿಂದ ನಾಳೆ ಬೆಳಿಗ್ಗೆ 7 ಗಂಟೆಗೆ ಬಂಡೀಪುರ ಹೊರವಲಯದ ಮೇಲುಕಾಮನಹಳ್ಳಿಗೆ ಮೋದಿ ಆಗಮಿಸಲಿದ್ದಾರೆ. ಬೆಳಿಗ್ಗೆ 7.15 ಕ್ಕೆ ಬಂಡೀಪುರ ಕ್ಯಾಂಪ್‌ಗೆ ಆಗಮಿಸಿ ಅರಣ್ಯ ಹುತ್ಮಾತರ ಸ್ಮಾರಕಕ್ಕೆ ಪುಷ್ಪಗುಚ್ಚವಿರಿಸಿ ಗೌರವ ನಮನ ಸಲ್ಲಿಸಲಿದ್ದಾರೆ. ಬಳಿಕ ಹುಲಿ ಯೋಜನೆ 50 ನೇ ವರ್ಷಾಚರಣೆ ಅಂಗವಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಬಳಿಕ ಮೋದಿ ಸೇರಿದಂತೆ ಕೆಲವರು ಬಂಡೀಪುರ ಅರಣ್ಯದಲ್ಲಿ ಸಫಾರಿ ಮಾಡಲಿದ್ದಾರೆ.
ಬಂಡೀಪುರ ಟೈಗರ್ ಸಫಾರಿ ಬಂದ್: ಹೋಮ್‌ಸ್ಟೇ, ರೆಸಾರ್ಟ್‌ಗಳಿಗೂ ಹೋಗುವಂತಿಲ್ಲ
ಬಂಡೀಪುರದಲ್ಲಿ 2 ಗಂಟೆಗಳ ಕಾಲ ಸಫಾರಿ: ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 2 ಘಂಟಗಳ ಕಾಲ ಸಫಾರಿ ಮಾಡಲಿದ್ದಾರೆ. ಈ ವೇಳೆ ಅವರ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿರುವ ನೈಸರ್ಗಿಕ ಮತ್ತು ಕಾಡು ಪ್ರಾಣಿಗಳ ಫೋಟೋಗ್ರಫಿಯಂತೆ ಫೊಟೋಗಳನ್ನು ಸೆರೆ ಹಿಡಿಯಲಿದ್ದಾರೆ. ಈಗಾಗಲೇ ಹಲವು ರಾಷ್ಟ್ರೀಯ ಉದ್ಯಾನಗಳಲ್ಲಿ ಚಿರತೆ, ಹುಲಿ, ಆನೆ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಜೊತೆಗೆ ಈಗಾಗಲೇ ಮ್ಯಾನ್ ವರ್ಸಸ್ ವೈಲ್ಡ್ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅರಣ್ಯದಲ್ಲಿ ತಮ್ಮ ಸಂಚಾರ ಮಾಡಿದ್ದಾರೆ. ಈ ವೇಳೆ ಹಲವು ಪ್ರಾಣಿಗಳ ಚಿತ್ರಗಳನ್ನು ಸ್ವತಃ ಸರೆ ಹಿಡಿದಿದ್ದರು.
ಬೊಮ್ಮನ್, ಬೆಳ್ಳಿ ದಂಪತಿ ಭೇಟಿ: ಇನ್ನು ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿರುವ ತಮಿಳುನಾಡಿನ ಮಧುಮಲೈ ಅರಣ್ಯಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ತೆರಳಲಿದ್ದಾರೆ. ರಾಜ್ಯದ ಬಂಡೀಪುರದ ಬಳಿಯಿಂದ ಕೆಕ್ಕನಹಳ್ಳ ಚೆಕ್‌ಪೋಸ್ಟ್ ಮೂಲಕ ತಮಿಳುನಾಡಿನ ತೆಪ್ಪಕಾಡು ಆನೆ ಶಿಬಿರಕ್ಕೆ ಹೋಗಲಿದ್ದಾರೆ. ಬೆಳಗ್ಗೆ 9.35ಕ್ಕೆ ಆನೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪ್ರಸಿದ್ಧ ಸಾಕ್ಷ್ಯಚಿತ್ರ "ದಿ ಎಲಿಫೆಂಟ್ ವಿಸ್ಪರರ್ಸ್" ಖ್ಯಾತಿಯ ಚಿತ್ರದಲ್ಲಿ ಪಾತ್ರಗಳಾದ ಬೊಮ್ಮ ಮತ್ತು ಬೆಳ್ಳಿ ದಂಪತಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
ಇಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ: ನಾಳೆ ಟೈಗರ್ ಸಫಾರಿ
ಕರ್ನಾಟಕ ಮುಕ್ತ ವಿವಿ ಕಾರ್ಯಕ್ರಮದಲ್ಲಿ ಭಾಗಿ: ಇಲ್ಲಿನ ಕಾರ್ಯಕ್ರಮದ ನಂತರ ಬೆಳಗ್ಗೆ ತೆಪ್ಪಕಾಡಿನಿಂದ ನಂತರ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಪಯಣ ಮಾಡಲಿದ್ದಾರೆ. ಅಲ್ಲಿಂದ 10.20ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ನಂತರ, 11 ಗಂಟೆಗೆ ಕರ್ನಾಟಕ ಮುಕ್ತ ವಿವಿ ಆವರಣದಲ್ಲಿ ಹುಲಿ ಯೋಜನೆ 50ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳು ಹಾಗೂ ಹುಲಿ ಸಂರಕ್ಷಣೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾತನಾಡಲಿದ್ದಾರೆ.