ಅಪ್ಪ ಮಗಳ ಯರ್ರಾಬಿರ್ರಿ ಕುಣಿತಕ್ಕೆ ಚಿಂದಿ ಆಯ್ತು ಡಾನ್ಸ್‌ ಫ್ಲೋರ್

ಮದುವೆ ದಿನ ಡಾನ್ಸ್ ಮಾಡ್ಬೇಕು ಅನ್ನೋದು ಒಂದು ಅಲಿಖಿತ ನಿಯಮ. ಅದರಂತೆ ವಧುವಿನ ತಂದೆ ಮಗಳೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು ಅಪ್ಪ ಮಗಳ ಡಾನ್ಸ್ ನೋಡಿ ಮದುವೆಗೆ ಬಂದವರೇ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. 

Bride and her father show savage dance moves Watch viral video akb

ಮದುವೆ ದಿನದ ಡಾನ್ಸ್‌ ಮೋಜು ಮಸ್ತಿಯ ಹಲವು ವಿಡಿಯೋಗಳನ್ನು ನಾವು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಮದುವೆ ದಿನ ಅಪ್ಪ ಮಗಳು ಸ್ನೇಹಿತರು ಮೋಜು ಮಾಡುತ್ತಾರೆ. ಹಾಗೆಯೇ ಇಲ್ಲಿ ವಧು ಮತ್ತು ಆಕೆಯ ತಂದೆ ಮದುವೆ ದಿನ ಮಾಡಿರುವ ಸಖತ್ ಡಾನ್ಸ್ ವೇದಿಕೆಯನ್ನೇ ಚಿಂದಿ ಮಾಡಿದೆ. 

ಮದುವೆ ದಿನ ಡಾನ್ಸ್ ಮಾಡ್ಬೇಕು ಅನ್ನೋದು ಒಂದು ಅಲಿಖಿತ ನಿಯಮ. ಅದರಂತೆ ವಧುವಿನ ತಂದೆ ಮಗಳೊಂದಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು ಅಪ್ಪ ಮಗಳ ಡಾನ್ಸ್ ನೋಡಿ ಮದುವೆಗೆ ಬಂದವರೇ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋವನ್ನು ಅನಿಶಾ ಎಂಬ ಹುಡುಗಿ ಹಂಚಿಕೊಂಡಿದ್ದಾಳೆ. ಜಸ್ಟಿನ್ ಬೈಬರ್‌ನ ಬೇಬಿ ಮತ್ತು ನೋರಾ ಫತೇಹಿಯ ಓ ಸಾಕಿ ಸಾಕಿಯನ್ನು ಒಳಗೊಂಡಿರುವ ಈ ಮ್ಯಾಶ್‌ಅಪ್‌ನಲ್ಲಿ ವಧು ಮತ್ತು ಅವಳ ತಂದೆ ತಮ್ಮ ಎರ್ರಾಬಿರ್ರಿ ಡಾನ್ಸ್‌ ಸ್ಟೆಪ್‌ನಿಂದ ವೇದಿಕೆಗೆ ಕಿಚ್ಚು ಹಚ್ಚಿದ್ದಾರೆ. 

 

ಮದುವೆಗಳಲ್ಲಿ ವಧು ವರರು ಡಾನ್ಸ್ ಮಾಡುವುದು ಸಾಮಾನ್ಯ. ಸ್ನೇಹಿತರೂ ಕುಣಿಯುವುದು ಕೂಡ ಸಾಮಾನ್ಯವೇ. ಆದರೆ ಅಪ್ಪ ಡಾನ್ಸ್‌ ಮಾಡುವುದು ತೀರಾ ವಿರಳ. ಮದುವೆಯ ಜವಾಬ್ದಾರಿಯನ್ನು ಹೊತ್ತು ಸಮಾರಂಭಕ್ಕೆ ಬಂದ ಅತಿಥಿಗಳನ್ನು ಸತ್ಕರಿಸಬೇಕು. ಎಲ್ಲರನ್ನು ಚೆನ್ನಾಗಿ ಮಾತನಾಡಿ ಉಪಚರಿಸಬೇಕು. ಎಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾರೂ ಎನ್ನನ್ನುತ್ತಾರೋ ಯಾರೂ ಬೇಸರಿಸಿಕೊಳ್ಳತ್ತಾರೋ ಎಂಬ ಚಿಂತೆಯಲ್ಲಿ ಸಾಮಾನ್ಯವಾಗಿ ತಂದೆ ತಾಯಿಯರು ಮದುವೆಯ ಮೋಜು ಮಸ್ತಿಯಲ್ಲಿ ಪಾಲ್ಗೊಳ್ಳುವುದು ಕಡಿಮೆಯೇ. ಕ್ಯಾಮರಾ ಹಿಂದೆ ಅವರು ಪುತ್ರ ಅಥವಾ ಪುತ್ರಿಯ ಮದುವೆಯ ಜವಾಬ್ದಾರಿಗಳನ್ನು ಬೆವರು ಸುರಿಸಿಕೊಂಡು ನಿಭಾಯಿಸುತ್ತಿರುತ್ತಾರೆ.

ಅಮೆರಿಕ ರೋಡ್ ಮೇಲೆ ಕುಣಿದು ಧೂಳ್ ಎಬ್ಬಿಸಿದ ಸುರ ಸುಂದರಿ..!

ಆದರೆ ಹೈ ಕ್ಲಾಸ್ ಸೊಸೈಟಿಯಲ್ಲಿ ಬಹುತೇಕ ನಗರಗಳಲ್ಲಿ ಈ ಸಂಸ್ಕೃತಿ ಬದಲಾಗಿದೆ. ಅಡುಗೆ, ಅಲಂಕಾರ, ಅತಿಥಿ ಸತ್ಕಾರ ಎಲ್ಲವನ್ನೂ ಕೂಡ ಕಂಟ್ರಾಕ್ಟ್‌ ನೀಡಿರುತ್ತಾರೆ. ಇಷ್ಟು ಹಣ ಎಂದು ನೀಡಿದರೆ ಸಾಕು ವಧುವಿನ ಅಲಂಕಾರದಿಂದ ಅಡುಗೆಯವರೆಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಅವರೇ ನಿಭಾಯಿಸುತ್ತಾರೆ. ಹೀಗಾಗಿ ಇಲ್ಲಿ ಅಪ್ಪನಿಗೆ ಮದುವೆ ದಿನ ಮಗಳೊಂದಿಗೆ ಸಖತ್ ಆಗಿ ಡಾನ್ಸ್‌ ಮಾಡುವ ಅವಕಾಶ ಸಿಕ್ಕಿದೆ.

ಅನಿಶಾ, ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ ನನ್ನ ತಂದೆ ಹಾಗೂ ನಾನು ಬಾಲಿವುಡ್ ಐಟಂ ಸಾಂಗ್‌ ಗೆ ಡಾನ್ಸ್ ಮಾಡಿದೆವು ಡಾನ್ಸ್‌ನಲ್ಲಿ ನಮ್ಮ ತಂದೆ ನಿಮ್ಮ ಸ್ಥಾನಕ್ಕೆ ಬರುತ್ತಿದ್ದಾರೆ ಎಂದು ಡಾನ್ಸರ್‌ ಹಾಗೂ ನಟಿ ನೋರಾ ಫತೇಹಿಗೆ ಈ ವಿಡಿಯೋವನ್ನು ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.

ಟ್ರೆಡ್ ಮಿಲ್ ನಲ್ಲಿ ಗರ್ಬಾ ನೃತ್ಯ, ವೈರಲ್ ವಿಡಿಯೋ ನೋಡಿ ಇದು ಅಪಾಯಕಾರಿ ಅಂದ್ರು ನೆಟಿಜೆನ್ಸ್!

ವಿಡಿಯೋದಲ್ಲಿ ವಧು ಬಿಳಿ ಬಣ್ಣದ ಕಸೂತಿ ಲೆಹೆಂಗಾವನ್ನು ಧರಿಸಿದ್ದರೆ ಆಕೆಯ ತಂದೆ ಕಪ್ಪು ಟುಕ್ಸೆಡೊವನ್ನು ಧರಿಸಿದ್ದರು ಅವರಿಬ್ಬರು ಮೊದಲು ಜಸ್ಟಿನ್ ಬೈಬರ್ಸ್ ಅವರ ಬೇಬಿ ಹಾಡಿಗೆ ನೃತ್ಯ ಮಾಡಿದರು. ಈ ವಿಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇದು ಇದುವರೆಗಿನ ತಂದೆ ಮಗಳ ಅತ್ಯಂತ ಉತ್ತಮ ಡಾನ್ಸ್ ಎಂದು ನೋಡುಗರು ಕಾಮೆಂಟ್ ಮಾಡಿದ್ದಾರೆ. ಬ್ರಾವೋ ಡ್ಯಾಡ್  ಅಮಿತಾಭ್ ಬಚ್ಚನ್ ಅವರಂತೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ವಧುವಿನ ಅಪ್ಪನ ಡಾನ್ಸ್‌ಗೆ ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

Latest Videos
Follow Us:
Download App:
  • android
  • ios