ಟ್ರೆಡ್ ಮಿಲ್ ನಲ್ಲಿ ಗರ್ಬಾ ನೃತ್ಯ, ವೈರಲ್ ವಿಡಿಯೋ ನೋಡಿ ಇದು ಅಪಾಯಕಾರಿ ಅಂದ್ರು ನೆಟಿಜೆನ್ಸ್!

ಸರಿಯಾಗಿ ಗೊತ್ತಿಲ್ಲದೆ ಇದ್ದರೆ, ಒಮ್ಮೊಮ್ಮೆ ಟ್ರೆಡ್ ಮಿಲ್ ನಲ್ಲಿ ನಡಿಯೋದೇ ಕಷ್ಟ. ಹಾಗಿರುವಾಗ, ಇಲ್ಲೊಂದೆಡೆ ಕೆಲ ಮಹಿಳೆಯರು ಟ್ರಡ್ ಮಿಲ್ ಮೇಲೆ ಗರ್ಬಾ ಡಾನ್ಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
 

Some Womens do garba on a treadmill people watching viral Video says it can be dangerous san

ಬೆಂಗಳೂರು (ಮೇ. 31): ಮಹಿಳೆಯರ ಗುಂಪೊಂದು ಗಾರ್ಬಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿದೆ. ಇದನ್ನು ಬಹಳ ಆಸಕ್ತಿಯಿಂದ ನೋಡುತ್ತಿರುವ ಜನರು ಈ ವೀಡಿಯೋದಲ್ಲಿ ಹೊಸದೇನಿದೆ ಎಂದು ನೀವು ಯೋಚನೆ ಮಾಡುತ್ತಿರಬಹುದು.

ಈ ವೈರಲ್ ಕ್ಲಿಪ್ ನಲ್ಲಿ ಸಾಮಾನ್ಯವಾಗಿ ತೆರೆದ ಮೈದಾನದಲ್ಲಿ ಮಾಡುವ ಗರ್ಬಾ ನೃತ್ಯವನ್ನು ಕೆಲ ಮಹಿಳೆಯರು ಟ್ರೆಡ್ ಮಿಲ್ ನಲ್ಲಿ ಮಾಡುತ್ತಿದ್ದರು. ಇದು ಅಚ್ಚರಿಗೆ ಕಾರಣವಾಗಿದೆ. ಗಾರ್ಬಾ ಮಾಡುವ ಈ ಶೈಲಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಇಷ್ಟಪಡುವುದರೊಂದಿಗೆ ಅದನ್ನು ಶೇರ್ ಹಾಗೂ ಕಾಮೆಂಟ್ ಮಾಡುವ ಮೂಲಕ ಆನಂದಿಸುತ್ತಿದ್ದಾರೆ. ಈ ವಿಡಿಯೋವನ್ನು ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಆದಾಗ್ಯೂ, ವೀಡಿಯೊವನ್ನು ನೋಡಿದ ನಂತರ, ಕೆಲವರು ಇದು ಅಪಾಯಕಾರಿ ಎಂದೂ ಎಚ್ಚರಿಸಿದ್ದಾರೆ. ಒಂದು ಕ್ಷಣ ನೃತ್ಯದ ಸಮನ್ವಯ ತಪ್ಪಿ ಹೋದರೆ, ಏನಾದರೂ ಸಂಭವಿಸಬಹುದು ಎನ್ನುವ ಎಚ್ಚರಿಕೆಯನ್ನು ಕೆಲವರು ಪೋಸ್ಟ್ ಮಾಡಿದ್ದಾರೆ.

ಇಲ್ಲಿಯವರೆಗೆ ನೀವು ಅನೇಕ ಗಾರ್ಬಾ ಪ್ರದರ್ಶನಗಳನ್ನು ನೋಡಿರಬಹುದು. ಆದರೆ ವೈರಲ್ ಆಗುತ್ತಿರುವ ಈ ವೀಡಿಯೊ ಸ್ವಲ್ಪ ವಿಭಿನ್ನವಾಗಿದೆ. ವೀಡಿಯೊದಲ್ಲಿ, ಗಾರ್ಬಾ ನೃತ್ಯಗಾರರು ಟ್ರೆಡ್‌ಮಿಲ್‌ನಲ್ಲಿ ನೃತ್ಯದ ಮೂವ್ ಮೆಂಟ್ ಗಳನ್ನು ಮಾಡುತ್ತಿರುವುದನ್ನು ಕಾಣಬಹುದು. ಇದು ಅಚ್ಚರಿ ಮೂಡಿಸಲು ಇನ್ನೊಂದು ಕಾರಣವೇನೆಂದರೆ, ಯಾವುದೇ ಸಮನ್ವಯವಿಲ್ಲದೆ ಈ ಪ್ರದರ್ಶನವನ್ನು ಟ್ರೆಡ್ ಮಿಲ್ ನಲ್ಲಿ ಮಾಡುವುದು ಬಹಳ ಅಪಾಯಕಾರಿ.
 


ಟ್ರೆಡ್‌ಮಿಲ್‌ನಲ್ಲಿ ಮಹಿಳೆಯರು ಯಾವ ರೀತಿಯಲ್ಲಿ ಗರ್ಬಾ ಸ್ಟೆಪ್‌ಗಳನ್ನು ಮಾಡಿದ್ದಾರೆ ಎನ್ನುವುದನ್ನುವೀಡಿಯೊದಲ್ಲಿ ನೀವು ನೋಡಬಹುದು. ಎಲ್ಲ ಮಹಿಳೆಯರು ಗುಜರಾತ್ ನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೆಡ್ ಮಿಲ್ ಮೇಲೆ ಮಹಿಳೆಯರು ಗಾರ್ಬಾ ಸ್ಟೆಪ್ ಹಾಕುತ್ತಿರುವ ರೀತಿ ನೆಟಿಜನ್ ಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ಈ ವಿಡಿಯೋ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳಲಾಗುತ್ತಿದೆ. ಇದನ್ನು garba__worldandgujju_._chhokri ಹೆಸರಿನ ಪುಟದಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಕೊನೆಯವರೆಗೂ ವಿಡಿಯೋವನ್ನ ವೀಕ್ಷಣೆ ಮಾಡಿ ಎಂದು ಇದನ್ನು ಪೋಸ್ಟ್ ಮಾಡಿದವರೂ ಕೂಡ ಬರೆದುಕೊಂಡಿದ್ದಾರೆ.  ಮೇ 6 ರಂದು ಅಪ್‌ಲೋಡ್ ಮಾಡಲಾದ ಈ ವೀಡಿಯೊವನ್ನು 1 ಲಕ್ಷಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ, ಆದರೆ ವೀಡಿಯೊ 2 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದೆ. ಈ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಅದೇ ಸಮಯದಲ್ಲಿ, ವೀಡಿಯೊವನ್ನು ವೀಕ್ಷಿಸಿದ ನಂತರ, ಜನರು ನಿರಂತರವಾಗಿ ತಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡುತ್ತಿದ್ದಾರೆ.

ಅಮೆರಿಕ ರೋಡ್ ಮೇಲೆ ಕುಣಿದು ಧೂಳ್ ಎಬ್ಬಿಸಿದ ಸುರ ಸುಂದರಿ..!

ವಿಡಿಯೋ ನೋಡಿದ ನಂತರ ಕೆಲವರು ಮಹಿಳೆಯರ ಸಮನ್ವಯತೆಯನ್ನು ಶ್ಲಾಘಿಸಿದ್ದರೆ,  ಟ್ರೆಡ್‌ಮಿಲ್‌ನಲ್ಲಿ ಹೀಗೆ ಮಾಡುವುದು ಅವರಿಗೆ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಹಲವರು ಎಚ್ಚರಿಸಿದ್ದಾರೆ. ಟ್ರೆಡ್‌ಮಿಲ್‌ನಲ್ಲಿ ಸ್ಕರ್ಟ್ ಧರಿಸಿ ನಡೆಯುವುದು ಅಸುರಕ್ಷಿತ ಎಂದೂ ಕೆಲವರು ಹೇಳಿದ್ದಾರೆ. ಆದರೆ ಮಹಿಳೆಯರು ಅದರ ಮೇಲೆ ಟ್ರೆಡ್ ಮಿಲ್ ಮೇಲೆ ಗರ್ಬಾ ಮಾಡಿ ಅಚ್ಚರಿ ಮೂಡಿಸಿದ್ದಾರೆ. ಹಾಗೇನಾದರೂ ಬಟ್ಟೆ ಸಿಲುಕಿಕೊಂಡಿದ್ದರೆ, ದೊಡ್ಡ ಅಪಘಾತ ಸಂಭವಿಸಬಹುದಿತ್ತು ಎಂದು ಕೆಲವರು ಬರೆದುಕೊಂಡಿದ್ದಾರೆ.

ತುಂಡು ಬಟ್ಟೆ ತೊಟ್ಟು ಕಪಾಳಕ್ಕೆ ಹೊಡೆದುಕೊಂಡ ಹುಡುಗಿಯರು..!

ಏಕಾಗ್ರತೆ ಇದ್ದರೆ ಎಂತಹ ಕಠಿಣ ಕೆಲಸವನ್ನೂ ಮಾಡಬಹುದು ಎಂಬುದಕ್ಕೂ ಇದು ಸಾಕ್ಷಿಯಾಗಿದೆ. ಲ್ಲರೂ ಇವರ ನೃತ್ಯವನ್ನು ಕೊಂಡಾಡಿದ್ದಾರೆ. ಆದರೆ, ಇನ್ನೊಂದಷ್ಟು ಮಂದಿ ಈ ನೃತ್ಯವನ್ನು ನೋಡಿ ಖುಷಿಪಟ್ಟರೂ ಬ್ಯಾಲೆನ್ಸ್‌ ತಪ್ಪಿದರೆ ಇದು ಅಪಾಯಕಾರಿಯಾಗಬಹುದು ಎಂದೂ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದಷ್ಟು ಮಂದಿ ಎಮೋಜಿಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Latest Videos
Follow Us:
Download App:
  • android
  • ios