ಗೆಳತಿಯ ಬ್ಲ್ಯಾಕ್‌ಮೇಲ್, ಬೆಂಗಳೂರು ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿಹೋದ ವರ!

ಬೆಂಗಳೂರು ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಇಲ್ಲಿನ ಟ್ರಾಫಿಕ್‌. ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲೋ ವಾಹನಗಳ ಸಾಲು. ಸಿಗ್ನಲ್‌ನಲ್ಲೇ ಅರ್ಧ ಬದುಕು ಕಳೆದುಹೋಗುತ್ತದೆ. ಸದ್ಯ ಬೆಂಗಳೂರಿನ ಇಂಥಾ ಟ್ರಾಫಿಕ್‌ ನೋಡೀನೆ ಇಲ್ಲೊಬ್ಬ ವರ, ಮದುಮಗಳನ್ನು ಬಿಟ್ಟು ಓಡಿಹೋಗಿದ್ದಾನೆ. ಅರೆ ಏನ್‌ ಹೇಳ್ತಿದ್ದೀರಾ ಅನ್ಬೇಡಿ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.

Bengaluru traffic prompts groom to run away from bride. She chased him on road Vin

ಯಪ್ಪಾ..ಬೆಂಗಳೂರು ಟ್ರಾಫಿಕ್ ಬಗ್ಗೆ ಹೇಳ್ಬೇಕಾ, ಎಲ್ಲರಿಗೂ ಗೊತ್ತೇ ಇದೆ. ಗಂಟಗಟ್ಟಲೆ ವಾಹನಗಳು ಸಾಲು ಸಾಲಾಗಿ ನಿಲ್ಲುತ್ತವೆ. ಆಫೀಸ್‌ಗೆ ಹತ್ತು ಗಂಟೆಗೆ ತಲುಪಬೇಕಾದರೆ ದೂರದ ಏರಿಯಾದಲ್ಲಿ ಉಳ್ಕೊಂಡಿರೋರು ಎಂಟು ಗಂಟೆಗೇ ಹೊರಡ್ಬೇಕು. ಇಂಟರ್‌ವ್ಯೂ. ಮದ್ವೆ, ಮೀಟೀಂಗ್, ಫಂಕ್ಷನ್‌ ಎಲ್ಲವೂ ಟ್ರಾಫಿಕ್‌ನಿಂದ ಮಿಸ್ಸಾಗಿ ಬಿಡುತ್ತದೆ. ಬೆಂಗಳೂರು ಟ್ರಾಫಿಕ್ ಅನ್ನೋದು ಅಷ್ಟು ಹಾರಿಬಲ್. ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲೋ ವಾಹನಗಳ ಸಾಲು. ಸಿಗ್ನಲ್‌ನಲ್ಲೇ ಅರ್ಧ ಬದುಕು ಕಳೆದುಹೋಗುತ್ತದೆ. ಸದ್ಯ ಬೆಂಗಳೂರಿನ ಇಂಥಾ ಟ್ರಾಫಿಕ್‌ ನೋಡೀನೆ ಇಲ್ಲೊಬ್ಬ ವರ, ಮದುಮಗಳನ್ನು ಬಿಟ್ಟು ಓಡಿಹೋಗಿದ್ದಾನೆ.  ಬೆಂಗಳೂರು ರಸ್ತೆಯ ವಾಹನ ದಟ್ಟಣೆಯ ಮಧ್ಯೆ ವರ, ವಧುವನ್ನು ಬಿಟ್ಟು ಓಡಿಹೋಗಿದ್ದಾನೆ. ವಧು ರಸ್ತೆಯಲ್ಲೇ ಅವನ ಬೆನ್ನಟ್ಟಿದ್ದಾಳೆ.

ಮಹಿಳೆ (Woman) ದೂರು ದಾಖಲಿಸಿದ್ದು, ಬೆಂಗಳೂರು ಪೊಲೀಸರು ಓಡಿಹೋದ ವರನನ್ನು (Groom) ಹುಡುಕುತ್ತಿದ್ದಾರೆ. ಮದುವೆಯ ನಂತರ ವ್ಯಕ್ತಿ ತನ್ನ ಮಾಜಿ ಗೆಳತಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಹೆಂಡತಿಗೆ (Wife) ಹೇಳಿದ್ದನು. ಹೀಗಿರುವಾಗ ಟ್ರಾಫಿಕ್‌ನಲ್ಲಿ ಕಾರು ನಿಂತಿತ್ತು. ಹೀಗಿರುವಾಗ ವ್ಯಕ್ತಿ ರಸ್ತೆಯ ಮಧ್ಯದಲ್ಲಿ ಕಾರಿನ ಬಾಗಿಲು ತೆರೆದು ಓಡಿಹೋದನು. ಅವನ ವಧು ಕಾರಿನಿಂದ ಇಳಿದು ಬೆನ್ನಟ್ಟಲು ಪ್ರಯತ್ನಿಸಿದಳು. ಆದರೆ ಅದು ಸಾಧ್ಯವಾಗಲಿಲ್ಲ.

10KM ಪ್ರಯಾಣಕ್ಕೆ 29 ನಿಮಿಷ, ಜಗತ್ತಿನ ಕಿಕ್ಕಿರಿದ ನಗರಗಳ ಪಟ್ಟಿಯಲ್ಲಿ ಇದು ಬೆಂಗಳೂರಿನ ಸ್ಥಾನ!

ಟ್ರಾಫಿಕ್‌ನಲ್ಲೇ ವಧುವನ್ನು ಬಿಟ್ಟು ಓಡಿ ಹೋದ ವರ
ಕಳೆದ ತಿಂಗಳು ದಂಪತಿಗಳು (Couple) ಚರ್ಚ್‌ನಿಂದ ಹಿಂದಿರುಗುತ್ತಿದ್ದಾಗ, ಅವರ ಕಾರು ಮಹಾದೇವಪುರದಲ್ಲಿ ಸಿಲುಕಿಕೊಂಡಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. 'ಕುಖ್ಯಾತ ಬೆಂಗಳೂರು ಸಂಚಾರಕ್ಕೆ ಧನ್ಯವಾದಗಳು, ಹೊಸದಾಗಿ ಮದುವೆ (Marriage)ಯಾದ ವ್ಯಕ್ತಿಯೊಬ್ಬರು ತಮ್ಮ ವಿವಾಹದ ಒಂದು ದಿನದ ನಂತರ ತಮ್ಮ ವಧುವನ್ನು ಬಿಟ್ಟು ಓಡಿಹೋದರು' ಎಂದು ಸುದ್ದಿಯನ್ನು ತಿಳಿದವರು ಮಾತನಾಡಿಕೊಳ್ಳುತ್ತಾರೆ. ಮಹಿಳೆ ದೂರು ದಾಖಲಿಸಿದ್ದು, ಬೆಂಗಳೂರು ಪೊಲೀಸರು ಓಡಿಹೋದ ವರನನ್ನು ಹುಡುಕುತ್ತಿದ್ದಾರೆ.

ವಧುವಿಗೆ, ವ್ಯಕ್ತಿ ತನ್ನ ಮಾಜಿ ಗೆಳತಿಯ (Ex girlfriend) ಬಗ್ಗೆ ಮೊದಲೇ ತಿಳಿಸಿದ್ದನು ಮತ್ತು ಗೆಳತಿಯನ್ನು ಬಿಟ್ಟು ಮದುವೆಯ ಸಂಬಂಧವನ್ನು ನಿಭಾಯಿಸುವುದಾಗಿ ಹೇಳಿದ್ದನು ಎಂದು ವರದಿಯಾಗಿದೆ. 'ಗಂಡನ ಮಾಜಿ ಗೆಳತಿ ತಮ್ಮ ಖಾಸಗಿ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಹೀಗಾಗಿ ಅವರು ಹೆದರಿ ಓಡಿಹೋದರು' ಎಂದು ಮಹಿಳೆ ತಿಳಿಸಿದ್ದಾಳೆ. 

'ಬೆಂಗಳೂರಿನ ಟ್ರಾಫಿಕ್‌ ಸುಧಾರಣೆಗೆ ಒಂದೇ ವ್ಯವಸ್ಥೆ'

ಟ್ರಾಫಿಕ್ ಕಿರಿಕಿರಿಗೆ ಕಾರು ಬಿಟ್ಟು ಮೆಟ್ರೋ ಏರಿದ ಮದುಮಗಳು
ಬೆಂಗಳೂರಿನ ಭಾರೀ ಟ್ರಾಫಿಕ್ ನಡುವೆ ಸಿಕ್ಕಿ ಹಾಕಿಕೊಂಡ ವಧು ಒಬ್ಬಳು ನಿಗದಿತ ಸಮಯಕ್ಕೆ  ಮದುವೆ ಮಂಟಪವನ್ನು ತಲುಪಲು ತನ್ನ ಕಾರನ್ನು ಬಿಟ್ಟು ಮೆಟ್ರೋವನ್ನು ಹತ್ತಿ ದಿಬ್ಬಣ ಹೋದ ಘಟನೆ ಈ ಹಿಂದೆ ನಡೆದಿತ್ತು. ವಧು ಆಭರಣಗಳನ್ನು ಧರಿಸಿ ಮೆಟ್ರೊ ಸವಾರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ದಟ್ಟಣೆಯು ವಧು ತನ್ನ ಸ್ವಂತ ಮದುವೆಗೆ ತಡವಾಗಿ ಬರಲು ಕಾರಣವಾಯಿತು, ಆದರೆ ಅವಳು ನಗುವಿನೊಂದಿಗೆ ಮೆಟ್ರೋ ಸವಾರಿ ಮಾಡಿದ್ದಳು.

ಮದುಮಗಳು ಪರಿಸ್ಥಿತಿಯನ್ನು ನಿಭಾಯಿಸಿದ್ದಕ್ಕಾಗಿ ಇಂಟರ್ನೆಟ್ ಬಳಕೆದಾರರು ಆಕೆಯನ್ನು ಪ್ರಶಂಸಿದ್ದರು. "ಮಾಟ್‌ ಎ ಬ್ರೈಡ್" ಎಂದು ಕರೆದು ವೀಡಿಯೊವನ್ನು ಹಂಚಿಕೊಂಡಿದ್ದರು, ಟ್ವಿಟರ್ ಬಳಕೆದಾರರೊಬ್ಬರು, ವಾಟ್ ಸ್ಟಾರ್ ಎಂದಿದ್ದಾಳೆ. ವೀಡಿಯೊವು 8000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತ್ತು.

Latest Videos
Follow Us:
Download App:
  • android
  • ios