Asianet Suvarna News Asianet Suvarna News
breaking news image

ಮಾತಿನ‌ ಮೂಲಕವೇ ಅಭಿಷೇಕ್‌ಗೆ ಏಟು ನೀಡಿದ್ದ ಐಶ್ವರ್ಯ ರೈ! ಎಲ್ಲರಿಗೂ ಸಿಗ್ಬೇಕು ಇಂಥದ್ದೇ ಹೆಂಡ್ತಿ

ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಆಗಾಗ ಚರ್ಚೆಯಲ್ಲಿರ್ತಾರೆ. ಅವರ ಬಗ್ಗೆ ಅದೆಷ್ಟೇ ಸುದ್ದಿಯಾದ್ರೂ ತಲೆಕೆಡಿಸಿಕೊಳ್ಳದ ಜೋಡಿ ಮಧ್ಯೆ ಒಳ್ಳೆ  ಅಂಡರ್ಸ್ಟ್ಯಾಂಡಿಂಗ್ ಇದೆ. ಅಭಿಷೇಕ್ ನೋವು, ದುಃಖದಲ್ಲಿದ್ದಾಗ ಅವರನ್ನು ಮತ್ತೆ ಎದ್ದು ನಿಲ್ಲಿಸುವ ಶಕ್ತಿ ಐಶ್ ಗಿದೆ. 
 

Aishwarya Rais Wise Words Reshape Abhishek's Outlook on Life  roo
Author
First Published Jun 21, 2024, 1:36 PM IST

ಐಶ್ವರ್ಯ ರೈ ಬಚ್ಚನ್.. ಸೌಂದರ್ಯದಲ್ಲಿ ಮಾತ್ರವಲ್ಲ ತಮ್ಮ ಪ್ರತಿಭೆ, ಮಾತಿನಲ್ಲೂ ಅವರು ಎಲ್ಲರನ್ನು ಮೀರಿಸಬಲ್ಲರು. ಐಶ್ವರ್ಯ ರೈ ಮಾತಿನ ಮೂಲಕವೇ ಜನರನ್ನು ಹಿಡಿದಿಡುವ ಶಕ್ತಿ ಹೊಂದಿದ್ದಾರೆ. ಅತಿ ಎನ್ನುವಷ್ಟು ಮಾತನಾಡದ ಐಶ್ವರ್ಯ, ಮಾತನಾಡಿದ್ರೆ ಮುತ್ತು ಉದುರಿದಂತಿರುತ್ತೆ. ಎಲ್ಲವನ್ನೂ ಅಳೆದು ತೂಗಿ ಮಾತನಾಡುವ ಅವರ ಮಾತಿಗೆ ತೂಕವಿರುತ್ತೆ. ಸ್ಪಷ್ಟತೆ ಇರುತ್ತೆ. ಅನೇಕ ಸಂದರ್ಶನದಲ್ಲಿ ಐಶ್ ಮಾತನಾಡಿದ್ದನ್ನು ನೀವು ನೋಡ್ಬಹುದು. ಮಾತಿನ ಕೌಶಲ್ಯದ ಮೂಲಕವೇ ಅವರು ದಿಗ್ಗಜ ನಿರೂಪಕರನ್ನು ಬೆರಗುಗೊಳಿಸಿದ್ದಿದೆ. ಇನ್ನು ಮನೆ ವಿಷ್ಯ ಬಂದ್ರೆ ಐಶ್ ಒಂದು ಕೈ ಮುಂದೆ. ತಮ್ಮ ಸಂಸಾರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗ್ತಿರುವ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ಇದನ್ನು ಅವರ ಪತಿ, ನಟ ಅಭಿಷೇಕ್ ಬಚ್ಚನ್ ಕೂಡ ಒಪ್ಪಿಕೊಂಡಿದ್ದಾರೆ. ಎಷ್ಟೋ ಸಂದರ್ಭದಲ್ಲಿ ತಮ್ಮ ಪತ್ನಿ ಐಶ್ವರ್ಯ ರೈ ಹೊಗಳಿರುವ ಅಭಿಷೇಕ್, ಐಶ್ವರ್ಯ ಮಾತಿನ ಮೂಲಕವೇ ಹೇಗೆ ತಮ್ಮನ್ನು ಬದಲಿಸಿದ್ರು ಎಂಬುದನ್ನು ಹೇಳಿದ್ದಾರೆ.

ಅಭಿಷೇಕ್ (Abhishek) ಮುಂದೆ ಐಶ್ವರ್ಯ ರೈ (Aishwarya Rai) ಹೇಳಿದ್ದ ಮಾತು ಸಂಪೂರ್ಣ ಸತ್ಯ ಮತ್ತು ಪ್ರಾಮಾಣಿಕವಾಗಿತ್ತು. ನಿಜ ಹೇಳ್ಬೇಕೆಂದ್ರೆ ಪ್ರತಿಯೊಬ್ಬ ಪತಿಗೂ ಇಂಥ ಪತ್ನಿ ಸಿಕ್ಕಿದ್ರೆ ಸಮಸ್ಯೆಯಿಂದ ಹೊರಗೆ ಬರೋದು ಸುಲಭ.

ಐಶ್ವರ್ಯಳನ್ನು ಕಂಡ್ರೆ ಅಮಿತಾಭ್​ಗೆ ಆಗೋದಿಲ್ಲ ಅನ್ನೋದು ನಿಜವಾಗೋಯ್ತಾ? ಸತ್ಯ ಒಪ್ಪಿಕೊಂಡ್ರಾ ಬಿಗ್​-ಬಿ?

ಒಳಗೊಳಗೆ ಆತಂಕಗೊಂಡಿದ್ದ ಅಭಿಷೇಕ್ : ಸಂದರ್ಶನ (Interview) ವೊಂದರಲ್ಲಿ ಅಭಿಷೇಕ್ ಬಚ್ಚನ್, ಕೊರೊನಾ ಸಂದರ್ಭದ ಬಗ್ಗೆ ಮಾತನಾಡಿದ್ದಾರೆ. ಕೊರೊನಾದಿಂದ ಬಳಲಿದ್ದ ಅಭಿಷೇಕ್ ಅದ್ರಿಂದ ಹೊರಗೆ ಬರಲು ಒಂದು ತಿಂಗಳು ತೆಗೆದುಕೊಂಡಿದ್ದರು. ಕೊರೊನಾದಿಂದ ಚೇತರಿಸಿಕೊಳ್ತಿದ್ದಂತೆ ಭವಿಷ್ಯದ ಚಿಂತೆ ಅವರನ್ನು ಕಾಡಿತ್ತು. ಎಲ್ಲ ಪ್ರಾಜೆಕ್ಟ್ ಕೆಲಸ ಬಂದ್ ಆಗಿದ್ದ ಕಾರಣ ಮುಂದಿನ ದಾರಿ ಕಂಡಿರಲಿಲ್ಲ. ಇದು ಒಳಗಿನಿಂದಲೇ ಅವರನ್ನು ಕಂಗೆಡಿಸಿತ್ತು. ಅವರ ಕೆಲಸ, ನಡವಳಿಕೆಯಲ್ಲೂ ಇದು ಕಾಣಲು ಶುರುವಾಗಿತ್ತು.

ಪತಿಗೆ ಮಾತಿನ ಏಟು ನೀಡಿದ ಐಶ್ವರ್ಯ : ಅಭಿಷೇಕ್ ಸ್ಥಿತಿಯನ್ನು ಅರಿತ ಐಶ್ವರ್ಯ, ಮಾತಿನ ಏಟು ನೀಡಿ ಅವರನ್ನು ಸರಿಪಡಿಸಿದ್ದರು. ಇಷ್ಟೊಂದು ಚಿಂತಿಸುವ ಅಗತ್ಯವಿಲ್ಲ. ಈ ಸಂದರ್ಭದಲ್ಲೂ ಕುಟುಂಬದ ಎಲ್ಲರೂ ಸಂತೋಷ, ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾರೆ. ಎಲ್ಲರೂ ನಮ್ಮ ಜೊತೆಗಿರುವಾಗ ಪರಿಸ್ಥಿತಿಗೆ ನಾವು ಕೃತಜ್ಞರಾಗಬೇಕು. ಬೇರೆಯವರು ಎಷ್ಟು ಕಷ್ಟವನ್ನು ಅನುಭವಿಸ್ತಿದ್ದಾರೆ, ಅವರ ಸ್ಥಿತಿ ಹೇಗಿದೆ, ನಮ್ಮ ಸ್ಥಿತಿ ಹೇಗಿದೆ ಎಲ್ಲವನ್ನೂ ಐಶ್ವರ್ಯ, ಅಭಿಷೇಕ್ ಗೆ ಹೇಳಿದ್ದರಂತೆ. ಪತ್ನಿಯ ಈ ಮಾತು ಕೇಳಿದ ಅಭಿಷೇಕ್ ಬದಲಾದ್ರು. ಪತ್ನಿ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬುದು ನಾನು ಅರಿತುಕೊಂಡೆ ಎಂದು ಸಂದರ್ಶನದಲ್ಲಿ ಅಭಿಷೇಕ್ ಹೇಳಿದ್ದರು.   

ಪ್ರತಿಯೊಬ್ಬರು ತಿಳಿದಿರಬೇಕು ಈ ವಿಷ್ಯ : ಐಶ್ವರ್ಯ ರೈ ಅಭಿಷೇಕ್ ಗೆ ನೋವಾಗುವ ಮಾತನ್ನಾಡಿಲ್ಲ. ಅವರು ಪತಿಗೆ ಪರಿಸ್ಥಿತಿಯ ಅರಿವು ಮೂಡಿಸಿದ್ದಾರೆ. ಪತ್ನಿಯಾದವಳು ಕೆಲವು ಬಾರಿ ಕಟುವಾದ ಸತ್ಯವನ್ನು ಗಂಡನಿಗೆ ಹೇಳಬೇಕಾಗುತ್ತದೆ. ಆಗ ಮಾತ್ರ ಮನುಷ್ಯ ನಕಾರಾತ್ಮಕ ಚಿಂತನೆಯಿಂದ ಹೊರಗೆ ಬರ್ತಾನೆ. ಐಶ್ವರ್ಯ ಕೂಡ ಅಭಿಷೇಕ್ ಬಳಿ ಇಲ್ಲದಿರುವುದರ ಬಗ್ಗೆ ಚಿಂತಿಸುವ ಬದಲು ಇರುವುದನ್ನು ನೋಡಿ ಖುಷಿಪಡುವಂತೆ ಹೇಳಿದ್ದಾರೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನಲ್ಲಿ  ಇಲ್ಲ ಎಂದು ಕೊರಗುವ ಬದಲು ಇದ್ದಿದ್ದರಲ್ಲೇ ಸಂತೋಷ ಪಡಬೇಕು. 

ನಸುಕಿನ 3 ಗಂಟೆಗೆ ಗೆಳೆಯರ ಜೊತೆ.... ಮಿಡ್​ನೈಟ್​ ಸೀಕ್ರೇಟ್​ ಹೇಳಿದ ನಟಿ ಶ್ರುತಿ ಹಾಸನ್​!

ಸಾಮಾನ್ಯವಾಗಿ ಪುರುಷರು ತಮ್ಮ ಭಾವನೆಯನ್ನು ಹಂಚಿಕೊಳ್ಳುವುದಿಲ್ಲ. ನಿಮ್ಮ ಭಾವನೆಗೆ ಸ್ಪಂದಿಸುವ, ಅರ್ಥ ಮಾಡಿಕೊಳ್ಳುವ ಪತ್ನಿ ಸಿಕ್ಕಾಗ ನಿಮ್ಮ ಭಾವನೆಯನ್ನು ಅವರ ಮುಂದೆ ಹಂಚಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ. ಇದ್ರಿಂದ ನಿಮಗೆ ನೆಮ್ಮದಿ ಸಿಗುವ ಜೊತೆಗೆ ನಿಮ್ಮ ಸಮಸ್ಯೆಗೆ ಅವರಿಂದ ಪರಿಹಾರ ಸಿಗುತ್ತದೆ. ಪತ್ನಿಗಿಂತ ಒಳ್ಳೆ ಸ್ನೇಹಿತೆ ಸಿಗಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. 

Latest Videos
Follow Us:
Download App:
  • android
  • ios